
ಮೈಸೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಮೇ.10 ರಂದು ನಡೆದಿದೆ. ಬರೊಬ್ಬರಿ 73.19 ಪ್ರತಿಶತ ರಾಜ್ಯದಲ್ಲಿ ಮತದಾನ ಮಾಡಿದ್ದಾರೆ. ಈಗಾಗಲೇ ಕ್ಷೇತ್ರಗಳಲ್ಲಿ ಸೋಲು ಗೆಲುವಿನ ಮಾತು ಕೇಳಿ ಬರುತ್ತಿದೆ. ಅದರಂತೆ ಇದೀಗ ಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್ ಛಾಪಾಕಾಗದದಲ್ಲಿ 5ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿರುವ ಕುರಿತು ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಜಯರಾಮ ನಾಯಕ, ಪ್ರಕಾಶ್ ಹಾಗೂ ಶಿವರಾಜ್ ನಡುವೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದ್ದು, ಪ್ರಕಾಶ್ ಹಾಗೂ ಶಿವರಾಜ್ ಜೆಡಿಎಸ್ ಅಭ್ಯರ್ಥಿ ಪರ ಮತ್ತು ಜಯರಾಮ ನಾಯ್ಕ ಕಾಂಗ್ರೆಸ್ ಅಭ್ಯರ್ಥಿ ಪರ ತಲಾ 5 ಲಕ್ಷ ಬೆಟ್ಟಿಂಗ್ ಕಟ್ಟಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಹೌದು ಇಬ್ಬರ 10 ಲಕ್ಷ ಹಣವನ್ನ ಪೂಜಾ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ ನೇಮಿಚಂದ್ ಬಳಿ ನೀಡಲಾಗಿರುವ ಬಗ್ಗೆ ಉಲ್ಲೇಖವಾಗಿದ್ದು, ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ಹಣ ವಾಪಸ್ಸು ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮುಂದುವರಿದ ಬೆಟ್ಟಿಂಗ್ ಭರಾಟೆ; ಕಾಂಗ್ರೆಸ್ ಮುಖಂಡನಿಂದ 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್
ಮೈಸೂರು: ನಗರದಲ್ಲಿ ಬೆಟ್ಟಿಂಗ್ ಭರಾಟೆ ಮುಂದುವರೆದಿದೆ. ಕಾಂಗ್ರೆಸ್ ಮುಖಂಡ ಜಮೀನು ಬೆಟ್ಟಿಂಗ್ ಸವಾಲು ಹಾಕಿದ್ದಾನೆ. ಹೌದು ಪಿರಿಯಾಪಟ್ಟಣ ತಾಲ್ಲೂಕು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ ಎಂಬಾತ ಪಿರಿಯಾಪಟ್ಟಣ ಕೈ ಅಭ್ಯರ್ಥಿ ಕೆ ವೆಂಕಟೇಶ್ ಗೆಲ್ಲುತ್ತಾರೆ ಎಂದು ಬರೊಬ್ಬರಿ 1 ಎಕರೆ 37 ಗುಂಟೆ ಜಮೀನು ಕಟ್ಟುತ್ತೇನೆ ಯಾರು ಬೇಕಾದರೂ ಬರಬಹುದು. ಜೊತೆಗೆ ನನ್ನ ಹೆಂಡತಿ ಮಕ್ಕಳ ಸಹಿ ಹಾಕಿಸಿಕೊಟ್ಟು ಅಗ್ರಿಮೆಂಟ್ ಕೂಡ ಮಾಡಿಕೊಡುತ್ತೇನೆ ಎಂದು ಕೈ ಮುಖಂಡ ವಿಡಿಯೋ ಮೂಲಕ ಸವಾಲು ಹಾಕಿದ್ದಾರೆ.
ಇದನ್ನೂ ಓದಿ:Karnataka Assembly Election: ಕಳೆದ ಚುನಾವಣೆಗಳಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು
ಚುನಾವಣಾ ಬೆಟ್ಟಿಂಗ್‌ನಲ್ಲಿ ನಗದು, ಕೃಷಿ ಭೂಮಿ, ಕುರಿ, ಮೇಕೆ, ಟ್ರ್ಯಾಕ್ಟರ್, ಬೈಕ್‌ಗಳು
ಹೌದು ರಾಜಕೀಯ ಬೆಟ್ಟಿಂಗ್ ದಂಧೆ ಈ ಬಾರಿ ಚುರುಕುಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಹೇಳಲು ಗ್ರಾಮಸ್ಥರು ವ್ಯಾಪಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ. ಚುನಾವಣೆಯ ಫಲಿತಾಂಶದ ಮೇಲೆ ಜನರು ನಗದು, ಅಮೂಲ್ಯ ಕೃಷಿ ಭೂಮಿ, ಕುರಿ, ಮೇಕೆ, ಹಸು, ಎತ್ತು ಸೇರಿದಂತೆ ಜಾನುವಾರುಗಳು, ಟ್ರ್ಯಾಕ್ಟರ್‌ಗಳು ಮತ್ತು ಬೈಕ್‌ಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ. ಬೆಟ್ಟಿಂಗ್ ದಂಧೆಯಲ್ಲಿ ಶ್ರೀರಂಗಪಟ್ಟಣದ ಅರಕೆರೆ ಹೋಬಳಿ ಪ್ರಮುಖವಾಗಿದೆ. ಕಳೆದ 30 ರಿಂದ 40 ವರ್ಷಗಳಿಂದ, ಅರಕೆರೆ ಗ್ರಾಮವು ಚುನಾವಣಾ ಬೆಟ್ಟಿಂಗ್‌ನಲ್ಲಿ ಮುಂಚೂಣಿಯಲ್ಲಿದೆ ಮತಎಣಿಕೆಗೆ ಮುಂಚಿತವಾಗಿಯೇ ಗೆಲ್ಲುವ ಕುದುರೆಗಳನ್ನು ಗ್ರಾಮಸ್ಥರು ಊಹಿಸುತ್ತಾರೆ. ಇನ್ನು ಈ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು,. ಅರಕೆರೆಯಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ನಗದು, ಬೈಕ್, ಬಂಗಾರದ ಬೆಟ್ಟಿಂಗ್ ಸಾಮಾನ್ಯವಾಗಿದ್ದರೆ, ಈ ಬಾರಿ ಗ್ರಾಮಸ್ಥರು ಆಡು, ಕುರಿಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 am, Fri, 12 May 23