Karnataka Assembly Election: ಕಳೆದ ಚುನಾವಣೆಗಳಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು

ಕಳೆದ ಎರಡು ಚುನಾವಣೆಗಳಲ್ಲಿ ಯಾವ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ವಿಜಯಶಾಲಿಗಳಾಗಿದ್ದಾರೆ ಮತ್ತು ಅಭ್ಯರ್ಥಿ ಪರಭಾವಗೊಂಡಿದ್ದಾರೆ ಎಂಬುವುದರ ಕುರಿತಾದ ಅಂಕಿ ಅಂಶ ಇಲ್ಲಿದೆ.

Karnataka Assembly Election: ಕಳೆದ ಚುನಾವಣೆಗಳಲ್ಲಿ 50 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು
ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​​
Follow us
ವಿವೇಕ ಬಿರಾದಾರ
|

Updated on:May 12, 2023 | 4:13 PM

ಕರ್ನಾಕಟ ವಿಧಾನಸಭೆ ಚುನಾವಣೆಯತ್ತ ದೇಶದ ಚಿತ್ತ ನೆಟ್ಟಿದೆ. ಈ ಬಾರಿಯ ಚುನಾವಣೆ ಬಹಳಷ್ಟು ರೋಚಕತೆಯಿಂದ ಕೂಡಿದ್ದು, ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುತ್ತೆ ಕಾದು ನೋಡಬೇಕಾಗಿದೆ. ಪ್ರಬಲ ಮೂರು ಪಕ್ಷಗಳ ಮದ್ಯೆ ಜಾಟಾಪಟಿ ಏರ್ಪಟ್ಟಿದೆ. ಬುಧವಾರ ಮೇ.10 ರಂದು ಮತದಾನ ನಡೆದಿದೆ. ಶನಿವಾರ ಮೇ.13ರಂದು ಮತ ಎಣಿಕೆ ನಡೆಯಲಿದ್ದು, ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಇನ್ನು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಬಲದಿಂದ ಅಥವಾ ಪಕ್ಷದ ವರ್ಚಸ್ಸಿನಿಂದ ಗೆದ್ದು ಬರುತ್ತಾರೆ. ಹೀಗೆ ಕಳೆದ ಎರಡು ಚುನಾವಣೆಗಳಲ್ಲಿ ಅತಿಹೆಚ್ಚು ಮತಗಳ ಅಂತರಿಂದ ಗೆದ್ದು ಬೀಗಿದ ಮತ್ತು ಸೋತು ಸುಣ್ಣಾದ  ಅಭ್ಯರ್ಥಿಗಳ ಯಾರು ಅಂತ ತಿಳಿಯೋಣ. ಅದರಲ್ಲೂ ಯಾವ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ವಿಜಯಶಾಲಿಗಳಾಗಿದ್ದಾರೆ ಮತ್ತು ಪರಭಾವಗೊಂಡಿದ್ದಾರೆ ಎಂಬುವುದರ ಕುರಿತಾದ ಅಂಕಿ ಅಂಶ ಇಲ್ಲಿದೆ.

2013ರ ವಿಧಾನಸಭೆ ಚುನಾವಣೆ

  1. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು 76,588 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಸವಣ್ಣಿ ಸಂಗಪ್ಪಾಗೋಳ ಅವರ ಎದರು ಗೆಲವು ಸಾಧಿಸಿದ್ದರು.
  2. ಹುಕ್ಕೇರಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ದಿ. ಉಮೇಶ ಕತ್ತಿ ಅವರು 57,326 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ರವಿ ಬಸವರಾಜ್ ಕರಾಳೆ ಅವರ ವಿರುದ್ಧ ವಿಜಯಶಾಲಿಯಾಗಿದ್ದರು.
  3. ಅರಭಾವಿ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರು 75,221 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಉಟಗಿ ರಾಮಪ್ಪ ಕರೆಪ್ಪ ಅವರ ಎದರು ಜಯಸಾಧಿಸಿದ್ದರು.
  4. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥೀ ಎಸ್​ಎಸ್​ ಮಲ್ಲಿಕಾರ್ಜುನ್ ಅವರು​​ 57, 280 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಎಸ್​​.ಎ ರವಿದ್ರನಾಥ್​ ಅವರ ವಿರುದ್ಧ ಜಯಭೇರಿ ಭಾರಿಸಿದ್ದರು.

ಇದನ್ನೂ ಓದಿ: ಐಪಿಎಲ್ ಸೈಡಿಗಾಕಿ ರಾಜ್ಯದಲ್ಲಿ ಹೆಚ್ಚಾದ ರಾಜಕೀಯದ ಬೆಟ್ಟಿಂಗ್, ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಕೋಟಿ ಕೋಟಿಗಳ ಆಟ

2018 ವಿಧಾನಸಭೆ ಚುನಾವಣೆ

  1. ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಅವರು 58, 692 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಎಂಡಿ ಲಕ್ಷ್ಮೀನಾರಾಯಣ ಅವರ ವಿರುದ್ಧ ಜಯಘೋಷ ಮೊಳಗಿಸಿದ್ದರು.
  2. ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು 51,724 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ್​ ಅವರ ವಿರುದ್ಧ ವಿಜಯಪತಾಕೆ ಹಾರಿಸಿದ್ದರು.
  3. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್​ ಅಶ್ವತ್​ ನಾರಾಯಣ ಅವರು 54,000 ಮತಗಳ ಅಂತರಿಂದ ಕಾಂಗ್ರೆಸ್​ ಅಭ್ಯರ್ಥಿ ಕೆಂಗಲ್​ ಶ್ರೀಪಾದರೇಣು ಅವರ ವಿರುದ್ಧ ಗೆದಿದ್ದರು.
  4. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಕೆಜೆ ಜಾರ್ಜ್​​ ಅವರು 53,304 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಎಮ್​.ಎನ್​,ರೆಡ್ಡಿ ಅವರ ವಿರುದ್ಧ ಗೆಲವು ಸಾಧಿಸಿದ್ದರು.
  5. ಪುಲಕೇಶಿನಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ಅವರು 81,626 ಮತಗಗಳ ಅಂತರದಿಂದ ಜೆಡಿಎಸ್​ ಅಭ್ಯರ್ಥಿ ಬಿ. ಪ್ರಸನ್ನ ಕುಮಾರ್ ಅವರ​ ವಿರುದ್ಧ ವಿಜಯರಾಗಿದ್ದರು.
  6. ಮಾಗಡಿ ವಿಧಾನಸಭಾ ಕ್ಷೇತ್ರ: ಜೆಡಿಎಸ್​ ಅಭ್ಯರ್ಥಿ ಎ. ಮಂಜುನಾಥ್ ಅವರು 51, 425 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಹೆಚ್​.ಸಿ ಬಾಲಕೃಷ್ಣ ಅವರ ವಿರುದ್ಧ ಗೆದ್ದಿದ್ದರು.
  7. ಕನಕಪುರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರು 79, 909 ಮತಗಳ ಅಂತರದಿಂದ ಜೆಡಿಎಸ್​ ಅಭ್ಯರ್ಥಿ ನಯನಾಗೌಡ ಅವರ ವಿರುದ್ಧ ಜಯಶಾಲಾಗಿದ್ದರು.
  8. ಮದ್ದೂರು ವಿಧಾನಸಭಾ ಕ್ಷೇತ್ರ: ಜೆಡಿಎಸ್​ ಅಭ್ಯರ್ಥಿ ಡಿಸಿ ತಮ್ಮಣ್ಣ ಅವರು 54,30 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರ ವಿರುದ್ಧ ಗೆಲವು ಸಾಧಿಸಿದರು.
  9. ಶ್ರವಣಬೆಳಗೋಳ ವಿಧಾನಸಭಾ ಕ್ಷೇತ್ರ: ಜೆಡಿಎಸ್​ ಅಭ್ಯರ್ಥಿ ಸಿ.ಎನ್ ಬಾಲಕೃಷ್ಣ ಅವರು 53,012 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ಸಿಎಸ್​ ಪುಟ್ಟೇಗೌಡ ಅವರ ವಿರುದ್ಧ ಗೆದ್ದಿದ್ದರು.
  10. ವರುಣಾ ವಿಧಾನಸಭಾ ಕ್ಷೇತ್ರ: ಯತೀಂದ್ರ ಸಿದ್ದರಾಮಯ್ಯ ಅವರು 58,616 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಟಿ ಬಸವರಾಜು ಅವರ ವಿರುದ್ಧ ವಿಜಯಪತಾಕೆ ಹಾರಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:48 am, Fri, 12 May 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ