Assembly Elections: ಠೇವಣಿ ಉಳಿಯಬೇಕಾದರೆ ಅಭ್ಯರ್ಥಿ ಎಷ್ಟು ಮತ ಪಡೆಯಬೇಕು?

Karnataka Assembly Elections 2023: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯು ಎಷ್ಟು ಮೊತ್ತದ ಠೇವಣಿ ಇಡಬೇಕಾಗುತ್ತದೆ? ಅದನ್ನು ಉಳಿಸಿಕೊಳ್ಳಲು ಒಬ್ಬ ಅಭ್ಯರ್ಥಿಗೆ ಎಷ್ಟು ಮತ ದೊರೆಯಬೇಕು? ಮಾಹಿತಿ ಇಲ್ಲಿದೆ.

Assembly Elections: ಠೇವಣಿ ಉಳಿಯಬೇಕಾದರೆ ಅಭ್ಯರ್ಥಿ ಎಷ್ಟು ಮತ ಪಡೆಯಬೇಕು?
ಸಾಂದರ್ಭಿಕ ಚಿತ್ರ
Follow us
Ganapathi Sharma
| Updated By: Digi Tech Desk

Updated on:May 12, 2023 | 9:44 AM

ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ಶನಿವಾರ ಫಲಿತಾಂಶವೂ ಪ್ರಕಟಗೊಳ್ಳಲಿದೆ. ಕೆಲವು ಎಕ್ಸಿಟ್​ ಪೋಲ್​ಗಳು ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತದ ಸನಿಹದ ಸ್ಥಾನಗಳು ದೊರೆಯಲಿವೆ ಎಂದಿದ್ದರೆ ಇನ್ನು ಕೆಲವು ಅತಂತ್ರ ವಿಧಾನಸಭೆ ನಿರ್ಮಣವಾಗುವ ಸುಳಿವು ನೀಡಿವೆ. ಕೆಲವು ಮತಗಟ್ಟೆ ಸಮೀಕ್ಷೆಗಳು ಬಿಜೆಪಿಗೆ ಸರಳ ಬಹುಮತ ದೊರೆಯಲಿವೆ ಎಂದಿವೆ. ಈ ಮಧ್ಯೆ ಕೆಲವು ಅಭ್ಯರ್ಥಿಗಳಿಗೆ ಠೇವಣಿ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ. ಹಾಗಾದರೆ, ಠೇವಣಿ ಎಂದರೇನು? ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯು ಎಷ್ಟು ಮೊತ್ತದ ಠೇವಣಿ ಇಡಬೇಕಾಗುತ್ತದೆ? ಅದನ್ನು ಉಳಿಸಿಕೊಳ್ಳಲು ಒಬ್ಬ ಅಭ್ಯರ್ಥಿಗೆ ಎಷ್ಟು ಮತ ದೊರೆಯಬೇಕು? ಮಾಹಿತಿ ಇಲ್ಲಿದೆ.

1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 158 ರ ಪ್ರಕಾರ ಒಂದು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕಾದರೆ ಅಭ್ಯರ್ಥಿಯು 10,000 ರೂ. ಮೊತ್ತವನ್ನು ಚುನಾವಣಾ ಆಯೋಗದಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯಾದರೆ 5,000 ರೂ. ಠೇವಣಿ ಇಡಬೇಕು. ಇದನ್ನು ಚುನಾವಣಾ ಆಯೋಗವು ಭದ್ರತಾ ಠೇವಣಿಯಾಗಿ ಪಡೆದುಕೊಳ್ಳುತ್ತದೆ.

ಇದನ್ನೂ ಓದಿ: Karnataka Election Results 2023: ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ

1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 158 ರ ಪ್ರಕಾರ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಆರನೇ ಒಂದಕ್ಕಿಂತ ಕಡಿಮೆ ಮತಗಳನ್ನು ಪಡೆದರೆ ಅಂಥ ಅಭ್ಯರ್ಥಿಯ ಠೇವಣಿಯನ್ನು ಚುನಾವಣಾ ಆಯೋಗವು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಇದನ್ನೂ ಓದಿ: Exit Polls: 2018ರ ಎಕ್ಸಿಟ್​ ಪೋಲ್​ಗಳು ಏನು ಭವಿಷ್ಯ ನುಡಿದಿದ್ದವು, ಫಲಿತಾಂಶ ಏನಾಗಿತ್ತು? ಇಲ್ಲಿದೆ ನೋಡಿ

ಅಭ್ಯರ್ಥಿಯು ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಪಡೆದ ಒಟ್ಟು ಮಾನ್ಯವಾದ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪಡೆದಿದ್ದರೆ ಆಯೋಗವು ಠೇವಣಿಯನ್ನು ವಾಪಸ್ ಮಾಡುತ್ತದೆ. ಹಾಗೆಂದು, ಅಭ್ಯರ್ಥಿಯು ಚಲಾವಣೆಯಾದ ಮಾನ್ಯವಾದ ಮತಗಳ ಸಂಖ್ಯೆಯಲ್ಲಿ ನಿಖರವಾಗಿ ಆರನೇ ಒಂದು ಭಾಗವನ್ನಷ್ಟೇ ಪಡೆದಿದ್ದರೆ ಕೂಡ ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

ಲೋಕಸಭೆ ಚುನಾವಣೆಗೆ ಹೇಗೆ?

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಅಭ್ಯರ್ಥಿಯು 25,000 ರೂ. ಠೇವಣಿ ಇಡಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯಾದರೆ 12,500 ರೂ. ಠೇವಣಿ ಇಡಬೇಕು. ಈ ಚುನಾವಣೆಯಲ್ಲಿಯೂ ಅಷ್ಟೆ, ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದಕ್ಕಿಂತ ಹೆಚ್ಚು ಪಡೆದಿದ್ದರೆ ಮಾತ್ರ ಠೇವಣಿ ವಾಪಸ್ ನೀಡಲಾಗುತ್ತದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 pm, Thu, 11 May 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ