Exit Polls: 2018ರ ಎಕ್ಸಿಟ್​ ಪೋಲ್​ಗಳು ಏನು ಭವಿಷ್ಯ ನುಡಿದಿದ್ದವು, ಫಲಿತಾಂಶ ಏನಾಗಿತ್ತು? ಇಲ್ಲಿದೆ ನೋಡಿ

2018ರ ವಿಧಾನಸಭೆ ಚುನಾವಣೆಯ ನಂತರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು? ಫಲಿತಾಂಶ ಏನಾಯಿತು ಎಂಬ ಮಾಹಿತಿ ಇಲ್ಲಿದೆ.

Exit Polls: 2018ರ ಎಕ್ಸಿಟ್​ ಪೋಲ್​ಗಳು ಏನು ಭವಿಷ್ಯ ನುಡಿದಿದ್ದವು, ಫಲಿತಾಂಶ ಏನಾಗಿತ್ತು? ಇಲ್ಲಿದೆ ನೋಡಿ
2023ರ ಎಕ್ಸಿಟ್ ಪೋಲ್
Follow us
|

Updated on: May 11, 2023 | 7:04 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಮುಕ್ತಾಯಗೊಂಡಿದ್ದು, ದಾಖಲೆಯ ಶೇ 73.19ರಷ್ಟು ಮತದಾನವಾಗಿದೆ. ಶನಿವಾರ ಫಲಿತಾಂಶವೂ ಪ್ರಕಟಗೊಳ್ಳಲಿದೆ. ಈ ಮಧ್ಯೆ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಹೆಚ್ಚಿನ ವರದಿಗಳು ಕಾಂಗ್ರೆಸ್​ ಪರ ಒಲವು ವ್ಯಕ್ತಪಡಿಸಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್​ಗೆ ಸರಳ ಬಹುಮತ ದೊರೆತಿದ್ದರೆ ಇನ್ನು ಕೆಲವು ಕಾಂಗ್ರೆಸ್ ಸರಳ ಬಹುಮತದ ಸನಿಹ ತಲುಪಲಿದೆ ಎಂದು ಭವಿಷ್ಯ ನುಡಿದಿವೆ. ಇನ್ನು ಕೆಲವು ಅತಂತ್ರ ವಿಧಾನಸಭೆಯ ಮುನ್ಸೂಚನೆ ನೀಡಿವೆ. ಕೆಲವೇ ಕೆಲವು ಸಮೀಕ್ಷೆಗಳು ಬಿಜೆಪಿ ಸರಳ ಬಹುಮತದ ಸನಿಹ ತಲುಪಲಿವೆ ಎಂದು ಹೇಳಿವೆ. 2018ರ ವಿಧಾನಸಭೆ ಚುನಾವಣೆಯ ನಂತರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು? ಫಲಿತಾಂಶ ಏನಾಯಿತು ಎಂಬ ಮಾಹಿತಿ ಇಲ್ಲಿದೆ.

2018ರ ಎಕ್ಸಿಟ್​ ಪೋಲ್​ಗಳು ಏನು ಹೇಳಿದ್ದವು?

2018ರ ಪಬ್ಲಿಕ್ ಟಿವಿ ಮತಗಟ್ಟೆ ಸಮೀಕ್ಷೆ ವರದಿ ಬಿಜೆಪಿಗೆ 85ರಿಂದ 90 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 90 -95 ಹಾಗೂ ಜೆಡಿಎಸ್​​​ಗೆ 40 – 45, ಇತರರಿಗೆ 0 – 6 ಸ್ಥಾನ ದೊರೆಯಬಹುದು ಎಂದು ಹೇಳಿತ್ತು. ಇಂಡಿಯಾ ಟುಡೇ ಸಮೀಕ್ಷೆಯು ಬಿಜೆಪಿಗೆ 78 ರಿಂದ 86 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 90 – 101 ಹಾಗೂ ಜೆಡಿಎಸ್​​​ಗೆ 34 – 43, ಇತರರಿಗೆ 2 – 12 ಸ್ಥಾನ ದೊರೆಯಬಹುದು ಎಂದು ಹೇಳಿತ್ತು.

ಬಿಜೆಪಿಗೆ 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 91 ಹಾಗೂ ಜೆಡಿಎಸ್​​​ಗೆ 40, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಟೈಮ್ಸ್​​ ನೌ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು.

ಇದನ್ನೂ ಓದಿ: TV9 CVoter Exit Poll: ಟಿವಿ9 ಸಿವೋಟರ್ ಎಕ್ಸಿಟ್​ ಪೋಲ್​ ಪ್ರಕಟ; ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ? ಇಲ್ಲಿದೆ ವಿವರ 

ಬಿಜೆಪಿಗೆ 79 – 89 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 92 – 102 ಹಾಗೂ ಜೆಡಿಎಸ್​​​ಗೆ 34 – 42, ಇತರರಿಗೆ 1 – 7 ಸ್ಥಾನ ದೊರೆಯಬಹುದು ಎಂದು ಎಬಿಪಿ ನ್ಯೂಸ್ ಮತಗಟ್ಟೆ ಸಮೀಕ್ಷೆ ವರದಿ ತಿಳಿಸಿತ್ತು. ಬಿಜೆಪಿಗೆ 85 ಸ್ಥಾನ ದೊರೆಯಬಹುದು ಎಂದೂ ಕಾಂಗ್ರೆಸ್​ಗೆ 96 ಹಾಗೂ ಜೆಡಿಎಸ್​​​ಗೆ 38, ಇತರರಿಗೆ 4 ಸ್ಥಾನ ದೊರೆಯಬಹುದು ಎಂದು ಇಂಡಿಯಾ ಟಿವಿ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿದಿತ್ತು.

ಫಲಿತಾಂಶ ಬೇರೆಯೇ ಆಗಿತ್ತು!

ಚುನಾವಣಾ ಫಲಿತಾಂಶ ಪ್ರಕಟವಾದಾಗ ಎಕ್ಸಿಟ್​ ಪೋಲ್​ಗಳ ಲೆಕ್ಕಾಚಾರ ಎಲ್ಲ ತಲೆಕೆಳಗಾಗಿತ್ತು. ಬಿಜೆಪಿಗೆ 104 ಸ್ಥಾನ ದೊರೆತರೆ ಕಾಂಗ್ರೆಸ್​​ಗೆ 80, ಜೆಡಿಎಸ್ 37 ಹಾಗೂ ಇತರರಿಗೆ 3 ಸ್ಥಾನ ದೊರೆತಿದ್ದವು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ