ಕಳೆದ ಒಂದೂವರೆ ತಿಂಗಳು ರಾಜ್ಯದ 224 ಕ್ಷೇತ್ರದ ದರ್ಶನ: ಟ್ರೆಂಡ್ ಹೇಗಿದೆ? ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು

ವಿಧಾನಸಭೆ ಚುನಾವಣೆಗೆ ಇನ್ನು ಎರಡು ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ‘ಕಳೆದ ಒಂದೂವರೆ ತಿಂಗಳು ರಾಜ್ಯದ 224 ಕ್ಷೇತ್ರದ ದರ್ಶನ ಮಾಡಿದ್ದು, ಪ್ರಧಾನ ಮಂತ್ರಿಗಳು ಘೋಷಣೆಗೂ ಮುನ್ನ 16 ಬಾರಿ, ಘೋಷಣೆ ಬಳಿಕ 20 ಬಾರಿ ಬಂದಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಬಹುಮತದ ಸರ್ಕಾರ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕಳೆದ ಒಂದೂವರೆ ತಿಂಗಳು ರಾಜ್ಯದ 224 ಕ್ಷೇತ್ರದ ದರ್ಶನ: ಟ್ರೆಂಡ್ ಹೇಗಿದೆ? ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು
ನಳೀನ ಕುಮಾರ್​ ಕಟೀಲ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 08, 2023 | 12:17 PM

ಮಂಗಳೂರು: ವಿಧಾನಸಭೆ ಚುನಾವಣೆ(Karnataka Assembly Election 2023)ಗೆ ಇನ್ನು ಎರಡು ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ‘ಕಳೆದ ಒಂದೂವರೆ ತಿಂಗಳು ರಾಜ್ಯದ 224 ಕ್ಷೇತ್ರದ ದರ್ಶನ ಮಾಡಿದ್ದು, ಬಿಜೆಪಿ ಒಂದೂವರೆ ವರ್ಷದಿಂದ ಚುನಾವಣಾ ತಯಾರಿ ಮಾಡಿತ್ತು. ಪ್ರಧಾನ ಮಂತ್ರಿಗಳು ಘೋಷಣೆಗೂ ಮುನ್ನ 16 ಬಾರಿ, ಘೋಷಣೆ ಬಳಿಕ 20 ಬಾರಿ ಬಂದಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಬಹುಮತದ ಸರ್ಕಾರ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel)  ಹೇಳಿದರು. ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಜನರಿಗೆ ತಲುಪಿದೆ. ಮೋದಿಯವರ ಕಾರ್ಯ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಯೋಜನೆಗಳು ಮನೆಮನೆಗೆ ತಲುಪಿದೆ ಎಂದರು.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ‘ಒಂದು ಕಾಲ ಘಟ್ಟದಲ್ಲಿ ಹಳೇ ಮೈಸೂರು ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಮೋದಿ ಮತ್ತು ಅಮಿತ್ ಶಾ ಪ್ರವಾಸದ ಕಾರಣಕ್ಕೆ ಅಲ್ಲೂ ನಮಗೆ ಜನ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಅಲ್ಲಿ ನಮಗೆ ಸ್ಥಾನಗಳು ಸಿಗಲಿವೆ. ಈ ಹಿಂದಿನ ಯಾವ ಪ್ರಧಾನಿಯೂ ಮಾಡದ ಕೆಲಸ ಮೋದಿ ಮಾಡಿದ್ದಾರೆ. ಅವರು ಪ್ರವಾಸ ಹೋದಲ್ಲಿ ಜನ ಸೇರಿದ್ದಾರೆ. ಮಂಡ್ಯದಂಥ ಜಿಲ್ಲೆಗಳಲ್ಲೂ ಬೆಂಬಲ ಸಿಕ್ಕಿದೆ. ಇವತ್ತು ಕಾಂಗ್ರೆಸ್​ನ ವಿರೋಧಿ ಅಲೆ ಇದೆ. ಫಲಾನುಭವಿಗಳು ಖುಷಿಯಿಂದ ಇದ್ದಾರೆ ಎಂದರು.

ಇದನ್ನೂ ಓದಿ:ಪಿಎಫ್​​ಐಗೆ ಬೆಂಬಲ ನೀಡುವವರನ್ನು ಚುನಾವಣೆಯಲ್ಲಿ ಸೋಲಿಸಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಕರೆ

ಇದೇ ಸಂದರ್ಭದಲ್ಲಿ ಮೀಸಲಾತಿ ಕುರಿತು ‘ಅಂಬೇಡ್ಕರ್ ಕಟ್ಟಿದ ಸಾಮಾಜಿಕ ನ್ಯಾಯದಡಿ ಕೊಟ್ಟ ಮೀಸಲಾತಿಗೆ‌ ನ್ಯಾಯ ಒದಗಿಸಿ ಕೊಟ್ಟಿದ್ದು ಬಿಜೆಪಿ ಸರ್ಕಾರ. ಎಸ್ಸಿ ಎಸ್ಟಿ ಸೇರಿ ಬೇರೆ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದೆ. ಎಲ್ಲಾ ಸಮುದಾಯಗಳು ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸ್ತಾ ಇದೆ. ಇವತ್ತು ಜನರಿಗೆ ಭರವಸೆ ಮತ್ತು ವಿಶ್ವಾಸ ನಮ್ಮ ಮೇಲೆ ಜಾಸ್ತಿಯಾಗಿದೆ. ಜೊತೆಗೆ ಟಿಕೆಟ್ ಘೋಷಣೆ ವೇಳೆಯೂ ಎಲ್ಲಾ ಸಮುದಾಯಗಳನ್ನ ಗುರುತಿಸಿ ಕೊಟ್ಟಿದ್ದೇವೆ. ಸಾಮಾನ್ಯ ಕಾರ್ಯಕರ್ತರನ್ನೂ ಕೂಡ ಗುರುತಿಸುವ ಕೆಲಸವನ್ನ ಬಿಜೆಪಿ ಮಾಡಿದ್ದು, ಪ್ರಧಾನಿಯವರು ಪ್ರವಾಸದ ವೇಳೆ ಹಲವರ ಜೊತೆ ಸಂವಾದ ಮಾಡಿದ್ದಾರೆ.

ಇಡೀ ರಾಜ್ಯದಲ್ಲಿ 10ರಿಂದ15 ದಿನಗಳಲ್ಲಿ ನಮ್ಮ ಪ್ರಚಾರ ವೇಗವಾಗಿತ್ತು. ಬೇರೆ ರಾಜ್ಯದ ಮುಖ್ಯಮಂತ್ರಿಗಳೂ ಬಂದು ಪ್ರಚಾರ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಪ್ರಧಾನಿ ಪ್ರವಾಸ, ರೋಡ್ ಶೋಗಳ ಬಗ್ಗೆ ಚರ್ಚೆಯಾಗಿದೆ. ನಾವು ಕಳೆದ ನಾಲ್ಕು ವರ್ಷದಲ್ಲಿ ಕೊಟ್ಟ ಯೋಜನೆಗಳು ಜನರಿಗೆ ಒಪ್ಪಿಗೆಯಾಗಿದ್ದು, ಇದೀಗ ಕಾಂಗ್ರೆಸ್​ನ್ನ ಜನ ತಿರಸ್ಕರಿಸ್ತಾ ಇದ್ದಾರೆ. ಅದರಂತೆ ವರುಣಾದಲ್ಲಿ ಸಿದ್ದರಾಮಯ್ಯರನ್ನ ಸೋಲಿಸುತ್ತಾರೆ. ಇತ್ತ ಡಿಕೆ ಶಿವಕುಮಾರ್​ ಕಾಂಗ್ರೆಸ್​ನಲ್ಲಿ ಯಾರನ್ನ ಯಾರು ಸೋಲಿಸೋದು ಅಂತ ಚಿಂತೆಯಲ್ಲಿ ಇದ್ದಾರೆ. ಇನ್ನು ಸಿಎಂ ಸೀಟ್ ವಿಚಾರದ ಅವರ ಜಗಳ ದೊಡ್ಡದಾಗಿದೆ. ವರುಣಾದಲ್ಲಿ‌ ಕಾಂಗ್ರೆಸ್​ನ ಇಡೀ ಟೀಂ ಬಂದರೂ ಸಿದ್ದರಾಮಯ್ಯ ಸೋಲ್ತಾರೆ. ಭಜರಂಗದಳ ನಿಷೇಧ ಮಾಡ್ತೀವಿ ಎನ್ನುವ ಅವರ ವಿರೋಧಿ ಹೇಳಿಕೆಗಳು ಅವರಿಗೆ ಮುಳುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟಕ್ಕೆ ಎಂಟು ಕ್ಷೇತ್ರವನ್ನೂ ಗೆಲ್ಲಲಿದೆ. ಜನಬೆಂಬಲ ಮತ್ತು ಬಿಜೆಪಿ ಬಿಡೋದಕ್ಕೆ ವ್ಯತ್ಯಾಸ ಇದೆ. ಕೆಲವರು ಅಧಿಕಾರ ಸಿಗದೇ ಇದ್ದಾಗ ಬಿಟ್ಟು ಹೋಗ್ತಾರೆ, ಆದರೆ ಜನರು ನಮ್ಮ ಜೊತೆಗೆ ಇದ್ದಾರೆ. ಪ್ರಧಾನಿ ಕಾರ್ಯಕ್ರಮದ ಬಳಿಕ 10 ರಿಂದ15 ಸೀಟ್​ಗಳು ಹೆಚ್ವಾಗುತ್ತೆ ಎಂದರು.

ಇದನ್ನೂ ಓದಿ:ಚುನಾವಣೆ ಕೊನೇ ಹಂತದಲ್ಲಿ ಅಭ್ಯರ್ಥಿಗಳ ಕಸರತ್ತು; ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ಬೆಳ್ಳಿ ಗಣಪ ಹಂಚುತ್ತಿದ್ದ ಯುವಕ ವಶ

ಸಿದ್ದರಾಮಯ್ಯ ಸರ್ಕಾರ, ಕೇಂದ್ರದ ಮೂರು ಯೋಜನೆಗಳನ್ನ ನಿಲ್ಲಿಸಿತ್ತು. ಆಯುಷ್ಮಾನ್, ಜನೌಷದ ಕೇಂದ್ರಗಳು ಪೂರ್ಣವಾಗಿ ಜಾರಿಯಾಗಲಿಲ್ಲ. ಹೀಗಾಗಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರು ಹೇಳಿದ್ದು ಸರಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಯೋಜನೆಗಳನ್ನು ‌ಜಾರಿ‌ ಮಾಡಲ್ಲ. ಈಗಲೇ ಅವರು ಅಧಿಕಾರಕ್ಕೆ ಬಂದ್ರೆ, ಹಲವು ವಿಚಾರ ಹೇಳಿದ್ದಾರೆ‌. ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ ಅತಂತ್ರ ಸರ್ಕಾರದ ಸಮೀಕ್ಷೆ ಇತ್ತು. ಆದರೆ ಈಗಿನ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಇನ್ನು ಪುತ್ತೂರಿನಲ್ಲಿಯೂ ಕೂಡ ಬಿಜೆಪಿ ಗೆಲ್ಲಲಿದ್ದು, ರಾಜ್ಯದಲ್ಲೂ ಗೆಲ್ಲಲಿದೆ. ನೂರಕ್ಕೆ ನೂರರಷ್ಟು ಬಹುಮತದ ಬಿಜೆಪಿ ಸರ್ಕಾರ ‌ಬರಲಿದೆ. ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ಅಪೇಕ್ಷಿತನೂ ಅಲ್ಲ, ರೇಸ್ ನಲ್ಲೂ ಇಲ್ಲ. ರಾಜ್ಯಾಧ್ಯಕ್ಷನ ಜವಾಬ್ದಾರಿಯನ್ನ ಒಳ್ಳೆಯ ರೀತಿಯಲ್ಲಿ ಮುಗಿಸ್ತೇನೆ ಅಷ್ಟೇ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಇಚ್ಚೇಯಿಲ್ಲ. ನಾನು ಸಂಘದ ಸ್ವಯಂ ಸೇವಕ, ಪಕ್ಷದ ಹಿರಿಯರು ಕೊಟ್ಟ ಜವಾಬ್ದಾರಿ, ತತ್ವ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡ್ತೇನೆ ಮತ್ತು ಜವಾಬ್ದಾರಿ ನಿಭಾಯಿಸುತ್ತೇನೆ. ಪಕ್ಷ ಪೂರ್ಣಾವಧಿ ಪಕ್ಷದಲ್ಲೇ ಇರಲು ಸೂಚಿಸಿದ್ರೆ ಖಂಡಿತ ಇರುತ್ತೇನೆ ಎಂದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ