Karnataka Assembly Election: ಪಕ್ಷೇತರ ಅಭ್ಯರ್ಥಿ ಮನೆಮುಂದೆ ವಾಮಾಚಾರ ಅಸ್ತ್ರ; ದುಷ್ಕರ್ಮಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

|

Updated on: May 10, 2023 | 7:08 AM

ಜಿಲ್ಲೆಯ ಚುನಾವಣಾ ಕಣ ರಂಗೇರಿದ್ದು, ಕೋಲಾರದ ಮಾಲೂರು ಪಕ್ಷೇತರ ಅಭ್ಯರ್ಥಿ ಮನೆ ಬಳಿ ದುಷ್ಕರ್ಮಿಗಳು ವಾಮಾಚಾರ ಮಾಡಿರುವ ಘಟನೆ ನಡೆದಿದೆ. ಮಾಲೂರಿನ ವೈಟ್ ಗಾರ್ಡನ್​ನಲ್ಲಿರುವ ಅಭ್ಯರ್ಥಿ ನಿವಾಸಕ್ಕೆ ಬೆಳಗಿನ ಜಾವ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ದುಷ್ಕರ್ಮಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Karnataka Assembly Election: ಪಕ್ಷೇತರ ಅಭ್ಯರ್ಥಿ ಮನೆಮುಂದೆ ವಾಮಾಚಾರ ಅಸ್ತ್ರ; ದುಷ್ಕರ್ಮಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ
ಮಾಲೂರು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್
Follow us on

ಕೋಲಾರ: ಹೀಗೆ ವಿಚಿತ್ರ ಗೊಂಬೆ, ನಿಂಬೆಹಣ್ಣು, ಅರಿಶಿನ ಕುಂಕುಮ ಮನೆ ಸುತ್ತ ಹಾಕಿ ವಾಮಾಚಾರ ಮಾಡಿರುವುದು, ಮತ್ತೊಂದೆಡೆ ಇದನ್ನ ನಿಬ್ಬೆರೆಗಾಗಿ ವೀಕ್ಷಣೆ ಮಾಡುತ್ತಾ ಕಣ್ಣಿರಾಕುತ್ತಿರುವ ಪಕ್ಷೇತರ ಅಭ್ಯರ್ಥಿ ಪತ್ನಿ. ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಕೋಲಾರ(kolar)ದ ಮಾಲೂರು ಪಟ್ಟಣದ ವೈಟ್ ಗಾರ್ಡನ್​ನಲ್ಲಿರುವ ಮಾಲೂರು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್(Hoodi Vijay Kumar) ಮನೆ ಬಳಿ. ಹೌದು ಬೆಳಗಿನ ಜಾವ ವಿಚಿತ್ರ ಗೊಂಬೆ ಮಾಡಿ ಮನೆಯ ಸುತ್ತ ನಿಂಬೆ ಹಣ್ಣು, ಅರಿಶಿನ ಕುಂಕುಮ ಹಾಕಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂದೆ ಮಾಟ ಮಾಡಿಸಿ ಬೊಂಬೆ ಇಟ್ಟು ವಾಮಾಚಾರ ಮಾಡಿರುವುದನ್ನ ಬೆಳೆಗೆದ್ದು ನೋಡಿದ ಹೂಡಿ ವಿಜಯ್ ಕುಮಾರ್ ದಂಪತಿಗಳು ಆತಂಕಕ್ಕೆ ಒಳಗಾಗಿದ್ದಾರೆ.  ಇದೆಲ್ಲ ನಮ್ಮ ಅಭಿವೃದ್ದಿ ಸಹಿಸದೆ ವಿರೋಧಿಗಳು ಇಂತಹ ವಾಮಾಚರಕ್ಕೆ ಮೊರೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆ ಕೂಡ ಹೀಗೆ ವಾಮಾಚಾರ ಮಾಡಿ ತನ್ನ ಎರಡುವರೆ ವರ್ಷದ ಮಗುವನ್ನ ಸಹ ಕಳೆದುಕೊಂಡಿದ್ದೆ ಎಂದು ಕಣ್ಣೀರಾಕಿದ್ದಾರೆ. ಇನ್ನೂ ನಾಳೆ ಚುನಾವಣೆ ನಿಗಧಿಯಾಗಿದ್ದು, ನನ್ನ ಪತಿಯನ್ನ ಮಣಿಸಲು ಸಂಚು ರೂಪಿಸಿದ್ದಾರೆ ಎಂದು ಅವರ ಪತ್ನಿ ಶ್ವೇತಾ ಆರೋಪಿಸಿದ್ದು, ಆದರೆ ನಾವು ದೇವರನ್ನು ನಂಬುತ್ತೇವೆ ದೇವರ ಆಶೀರ್ವಾದ ನಮ್ಮ ಮೇಲಿದೆ ಹಾಗಾಗಿ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಇಂದು(ಮೇ.10) ಚುನಾವಣಾ ಕಣ ರಂಗೇರಿದೆ. ಈಗಾಗಲೆ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದು, ರಾಜಕೀಯ ಮುಖಂಡರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಯಾರೋ ಒರ್ವ ಯುವಕ ಬಟ್ಟೆ ಸುತ್ತಿಕೊಂಡು ಬಂದು ಮನೆಯ ಸುತ್ತ ವಾಮಾಚಾರ ಮಾಡಿರುವ ದಶ್ಯಗಳು ಮನೆಗೆ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ವಾಮಾಚಾರದ ಕುರಿತು ಮಾಲೂರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರೋಧಿಗಳು ನನ್ನ ಮನೆ ಎದುರು ವಾಮಾಚಾರ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಆರೋಪಿಸಿದ್ದಾರೆ. ಮಾಲೂರಿನ ಜನ ಇಂತಹದಕ್ಕೆ ಭಯ ಪಡುವವರಲ್ಲ, ಅಲ್ಲದೆ ನಾನು ಇಂತಹ ಯಾವುದೆ ವಾಮಾಚರದಲ್ಲಿ ನಂಬಿಕೆ ಇಟ್ಟಿಲ್ಲ ಎಂದು ವಾಮಾಚಾರ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ. ಇದಕ್ಕೆ ಮಾಲೂರಿನ ಮಾರಿಕಾಂಭ ತಾಯಿಯೇ ಉತ್ತರ ನೀಡುತ್ತಾರೆ. ನಾನು ಇದ್ಯಾವುದಕ್ಕು ಭಯ ಪಡಲ್ಲ, ಆತಂಕವೂ ಇಲ್ಲ. ಚುನಾವಣೆಯಲ್ಲಿ ನನಗೆ ಮಾಲೂರಿನ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಜ್ಯದ ‘ಗದ್ದುಗೆ’ ಭವಿಷ್ಯ ನಿರ್ಧಾರಕ್ಕೆ ಕೌಂಟ್‌ಡೌನ್‌: ತಪ್ಪದೇ ಮತ ಚಲಾಯಿಸಿ ಉತ್ತಮರನ್ನು ಆಯ್ಕೆ ಮಾಡಿ

ಒಟ್ಟಾರೆ ಮಾಲೂರಿನಲ್ಲಿ ಚುನಾವಣಾ ಕಣ ರಂಗೇರಿದ್ದು, ಪ್ರಮುಖ ಪಕ್ಷದ ಮೂರು ಅಭ್ಯರ್ಥಿಗಳಿಗೆ ತಲೆನೋವಾಗಿರುವ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್ ಅವರನ್ನು ಕಟ್ಟಿಹಾಕಲು ಇದೆಲ್ಲಾ ವಿರೋಧಿಗಳು ಮಾಡಿದ ಸಂಚಾ? ಇಲ್ಲ ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳು ಮಾಡಿದ ಕೃತ್ಯವಾ ಅನ್ನೋದು ತನಿಖೆಯಿಂದ ತಿಳಿಯಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ