ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ಗಂಭೀರಾವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ (C0ngress) ಪ್ರಚಾರ ಸಮಿತಿಯ ವಿವಿಧ ಜವಾಬ್ದಾರಿ ಹಂಚಿಕೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಅಖಿಲ ಕರ್ನಾಟಕ ಸಂಘಟನಾ ಕೋ ಚೇರ್ ಮನ್ ಹಾಗೂ ವಿಭಾಗವಾರು ಕೋ ಚೇರ್ ಮನ್ಗಳನ್ನು ನೇಮಿಸಿದೆ.
ಕೆಪಿಸಿಸಿ ಸಂಘಟನಾ ಉಪಾಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವರನ್ನು ನೇಮಕ ಮಾಡಲಾಗಿದೆ. ಇದರ ಜೊತೆಗೆ ಕರ್ನಾಟಕದ ಕಲಬುರಗಿ, ಮೈಸೂರು, ಕರಾವಳಿ, ಬೆಳಗಾವಿ, ಮಧ್ಯ ಕರ್ನಾಟಕ, ಬೆಂಗಳೂರು ವಿಭಾಗಗಳಿಗೆ ಕೋ ಚೇರ್ ಮನ್ಗಳನ್ನು ನೇಮಿಸಿದೆ. ಅಲ್ಲದೇ 10 ಜನರ ಸಾಮಾಜಿಕ ಜಾಲತಾಣ ತಂಡ, 9 ಜನರ ಮಾಧ್ಯಮ ವಿಭಾಗ, 29 ಜಿಲ್ಲಾ ಚೇರ್ಮನ್ ಹಾಗೂ 32 ಜನರ ಮುಖ್ಯ ಸಂಯೋಜಕರು, 41 ಸಂಯೋಜಕರನ್ನು ಸಹ ನೇಮಕ ಮಾಡಿದೆ.
ವಿಭಾಗವಾರು ಕೋ ಚೇರ್ ಮನ್
ಅಖಿಲ ಕರ್ನಾಟಕ ಸಂಘಟನಾ ಕೋ ಚೇರ್ ಮನ್ ಬಿ.ಎಲ್ ಶಂಕರ್
ಕಲಬುರಗಿ- ಡಾ.ಶರಣಪ್ರಕಾಶ್ ಪಾಟೀಲ್
ಬೆಳಗಾವಿ ವಿಭಾಗ- ಸಂತೋಷ್ ಲಾಡ್
ಬೆಂಗಳೂರು ವಿಭಾಗ- ರಿಜ್ವಾನ್ ಅರ್ಷದ್
ಮೈಸೂರು ವಿಭಾಗ- ಡಾ.ಯತೀಂದ್ರ ಸಿದ್ದರಾಮಯ್ಯ
ಮಧ್ಯ ಕರ್ನಾಟಕ ವಿಭಾಗ- ಚಂದ್ರಪ್ಪ
ಕರಾಳಿ ಕರ್ನಾಟಕ- ಮಂಜುನಾಥ್ ಭಂಡಾರಿ
ಮುಖ್ಯ ಸಂಯೋಜರು
ಶಾಸಕರಾದ ನಾಗೇಂದ್ರ, ಆನಂದ್ ನ್ಯಾಮಗೌಡ, ಅಂಜಲಿ ಲಿಂಬಾಳ್ಕರ್, ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ರೂಪ ಶಶಿಧರ್, ಗಣೇಶ್ ಹುಕ್ಕೇರಿ, ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಗೋವಿಂದರಾಜು, ನಜೀರ್ ಅಹಮ್ಮದ್, ರಾಜೇಂದ್ರ, ಮಾಜಿ ಪರಿಷತ್ ಸದಸ್ಯ ವಿಆರ್ ಸುದರ್ಶನ್, ಮಾಜಿ ಸಚಿವರಾದ ಎ.ಬಿ ಪಾಟೀಲ್, ಕಿಮ್ಮನೆ ರತ್ನಾಕರ್, ರಾಣಿ ಸತೀಶ್ ಸೇರಿದಂತೆ ಒಟ್ಟು 32 ಜನರನ್ನು ಮುಖ್ಯ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
Published On - 10:46 pm, Sat, 14 January 23