Aland Election Results 2023: ಆಳಂದ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಪ್ರಬಲ ಪೈಪೋಟಿಯ ಕ್ಷೇತ್ರದಲ್ಲಿ ಸುಭಾಷ್ ಗುತ್ತೇದಾರ, ಬಿಆರ್‌ ಪಾಟೀಲ್‌ ಹಣಾಹಣಿ

Aland Assembly Election Result 2023 Live Counting Updates: ಆಳಂದ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯು ಹಾಲಿ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್​​ನಿಂದ ಬಿಆರ್‌ ಪಾಟೀಲ್‌ ಸ್ಪರ್ಧಿಸಿದ್ದಾರೆ.

Aland Election Results 2023: ಆಳಂದ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಪ್ರಬಲ ಪೈಪೋಟಿಯ ಕ್ಷೇತ್ರದಲ್ಲಿ ಸುಭಾಷ್ ಗುತ್ತೇದಾರ, ಬಿಆರ್‌ ಪಾಟೀಲ್‌ ಹಣಾಹಣಿ
ಸುಭಾಷ್ ಗುತ್ತೇದಾರ
Image Credit source: Facebook
Updated By: Digi Tech Desk

Updated on: May 13, 2023 | 1:21 AM

Aland Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಆಳಂದ ವಿಧಾನಸಭಾ ಕ್ಷೇತ್ರದಿಂದ (Aland Assembly constituency) ಬಿಜೆಪಿಯು ಹಾಲಿ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್​​ನಿಂದ ಬಿಆರ್‌ ಪಾಟೀಲ್‌ ಸ್ಪರ್ಧಿಸಿದ್ದಾರೆ. ಜೆಡಿಎಸ್​ನಿಂದ ಮಹೇಶ್ವರಿ ವಾಲೆ ಹಾಗೂ ಎಎಪಿಯಿಂದ ಶಿವಕುಮಾರ್ ಖೇಡ್ ಸ್ಪರ್ಧಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಸುಭಾಷ್ ಗುತ್ತೇದಾರ ಕೇವಲ 697 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿಯೂ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್​​ನ ಪ್ರಬಲ ಹಿಡಿತದಲ್ಲಿದ್ದ ಈ ವಿಧಾನಸಭೆ ಕ್ಷೇತ್ರದಲ್ಲಿ 2018ರಲ್ಲಿ ಬಿಜೆಪಿ ಮೊದಲ ಬಾರಿ ಗೆಲುವಿನ ನಗೆ ಬೀರಿತ್ತು. ಹೀಗಾಗಿ ಈ ಬಾರಿಯೂ ಹಾಲಿ ಶಾಸಕ ಸುಭಾಶ್ ಗುತ್ತೇದಾರ ಅವರನ್ನೇ ಕಣಕ್ಕಿಳಿಸಿ ಗೆಲ್ಲುವ ತಂತ್ರಗಾರಿಕೆ ಹೂಡಿತ್ತು. ಕಾಂಗ್ರೆಸ್ ಕೂಡ ಕಳೆದ ಬಾರಿ ಕಣಕ್ಕಿಳಿಸಿದ್ದ ಅಭ್ಯರ್ಥಿಗೇ ಈ ಬಾರಿಯೂ ಮಣೆ ಹಾಕಿತ್ತು.

ಈ ಕ್ಷೇತ್ರದಲ್ಲಿ 2004, 2008 ಹಾಗೂ 2013ರಲ್ಲಿ ಮಾತ್ರ ಮತದಾರರು ಕಾಂಗ್ರೆಸ್ಸೇತರ ಪಕ್ಷಕ್ಕೆ ಮಣೆ ಹಾಕಿದ್ದರು. 2004 ಹಾಗೂ 2008ರಲ್ಲಿ ಜೆಡಿಎಸ್​ಗೆ ಮತದಾರ ಪ್ರಭು ಆಶೀರ್ವಾದ ನೀಡಿದ್ದರೆ 2013ರಲ್ಲಿ ಕೆಜೆಪಿಗೆ ಮಣೆ ಹಾಕಿದ್ದರು. 2018ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕ ಆಯ್ಕೆಯಾಗಿದ್ದರು.

Published On - 12:18 am, Sat, 13 May 23