Karnataka Polls 2023: ಚುನಾವಣಾಧಿಕಾರಿಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್​ ಬುಕ್

|

Updated on: Apr 28, 2023 | 2:21 PM

ವಿಧಾನಸಭೆ ಚುನಾವಣೆ ಹಿನ್ನಲೆ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬನಿಂದ ಬೆದರಿಕೆ ಆರೋಪ ಕೇಳಿ ಬಂದಿದ್ದು, ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Karnataka Polls 2023: ಚುನಾವಣಾಧಿಕಾರಿಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್​ ಬುಕ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು ನಗರ: ವಿಧಾನಸಭೆ ಚುನಾವಣೆ(Karnataka Assembly Election)ಗೆ ದಿನಾಂಕ ನಿಗದಿಯಾಗಿದ್ದೆ ತಡ ರಾಜ್ಯಾದ್ಯಂತ ಚುನಾವಣಾ ಅಕ್ರಮ ತಡೆಯಲು ಚೆಕ್​ಪೋಸ್ಟ್​ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ರಾಜ್ಯದಲ್ಲಿ ಇಲ್ಲಿಯವರೆಗೂ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಚಿನ್ನಾಭರಣ ಇನ್ನೀತರ ವಸ್ತುಗಳನ್ನ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೀಗ ಚುನಾವಣಾಧಿಕಾರಿಗಳ ಮೇಲೆಯೇ ಪ್ರಾಣ ಬೆದರಿಕೆ ಆರೋಪ ಕೇಳಿ ಬಂದಿದ್ದು, ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು ಬಿಜೆಪಿ ಕಾರ್ಯಕರ್ತ ಗಣೇಶ್ ಎಂಬುವವನಿಂದ ಬೆದರಿಕೆ ಆರೋಪ ಕೇಳಿಬಂದಿದ್ದು, ‘ಚುನಾವಣೆ ಮುಗೀಲಿ ನಿನ್ನ ನೋಡಿಕೊಳ್ತೇನೆ ಎಂದು ಅವಾಜ್ ಹಾಕಿದ್ದನಂತೆ. ಈ ಕುರಿತು ಫ್ಲೈಯಿಂಗ್ ಸ್ಕ್ವಾಡ್ ಟೀಂ ಲೀಡರ್ ಮಹಾಂತೇಶ್​ ಎಂಬುವವರು ಗಣೇಶ್ ಎಂಬ ಯುವಕನ‌ ವಿರುದ್ಧ ದೂರು ನೀಡಿದ್ದಾರೆ. ಇನ್ನು ಈ ಘಟನೆ ಆನೇಕಲ್ ತಾಲೂಕಿನ‌ ಸೂರ್ಯಸಿಟಿ ವ್ಯಾಪ್ತಿಯ ನಾರಾಯಣ ಘಟ್ಟ ಬಳಿ ನಡೆದಿದೆ.

ಇದನ್ನೂ ಓದಿ:ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ಸ್ಟಡಿ ಸೆಂಟರ್​ ಮೇಲೆ ಸಿಸಿಬಿ ದಾಳಿ

ನಿನ್ನೆ(ಏ.27) ಸಂಜೆ ಹುಲ್ಲಳ್ಳಿ ಶ್ರೀನಿವಾಸ್ ಪರ ಪ್ರಚಾರ ಮಾಡುತ್ತಿದ್ದ ಗುಂಪಿಗೆ ರ್ಯಾಲಿಗೆ ಪರ್ಮಿಷನ್ ತೆಗೆದುಕೊಂಡಿದ್ದೀರಾ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಚಾರಕ್ಕೆ ಬಂದಿದ್ದ ಯುವಕನೊಬ್ಬ ‘ನೀನು ಯಾರು ಅದನ್ನು ಕೇಳೊಕೆ, ಚುನಾವಣೆ‌ ಮುಗೀಲಿ, ಕಚೇರಿಗೆ ಬಂದು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದೀಗ ಯುವಕನ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ನಿನ್ನೆಯಿಂದ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಧ್ಯ ಮಹಾಂತೇಶ್ ಜಿಲ್ಲಾಧಿಕಾರಿಗಳಿಗೂ ನಡೆದಿರುವ ಪ್ರಸಂಗ ವಿವರಿಸಿದ್ದು, ಮುಂದಿನ ಕ್ರಮಕ್ಕೆ ಆಗ್ರಹ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಬೆಳಿಗ್ಗೆಯಿಂದಲೂ ಮಹಾಂತೇಶ್ ಮೊಬೈಲ್ ನಂಬರ್ ನಾಟ್ ರೀಚಬಲ್ ಆಗಿದ್ದು, ನಡೆದ ಘಟನೆಯ ವಿಡಿಯೋಗಾಗಿ ಸೂರ್ಯಸಿಟಿ ಪೊಲೀಸರು ಕಾಯುತ್ತಿದ್ದು, ಗಲಾಟೆ ವಿಡಿಯೋ ಅಧಾರದ ಮೇಲೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ