ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರ ಸಭೆ ಅಂತ್ಯ: ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್, JDS ಜೊತೆ ಸಂಪರ್ಕ ಇಟ್ಟುಕೊಳ್ಳಲೇಬೇಡಿ ಎಂದ ಶಾ

ಹಳೇ ಮೈಸೂರು ಭಾಗದ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ಅಮಿತ್ ಶಾ ಅವರ ಭಾಷಣದಿಂದಲೇ ಆರಂಭಗೊಂಡಿದ್ದು, ಅವರ ಭಾಷಣದಿಂದಲೇ ಸಭೆ ಅಂತ್ಯವಾಗಿದೆ. ಈ ವೇಳೆ ಹಳೇ ಮೈಸೂರು ಭಾಗದ ನಾಯಕರಿಗೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಕೆಲ ಟಾಸ್ಕ್ ಕೊಟ್ಟಿದ್ದಾರೆ.

ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರ ಸಭೆ ಅಂತ್ಯ: ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್, JDS ಜೊತೆ ಸಂಪರ್ಕ ಇಟ್ಟುಕೊಳ್ಳಲೇಬೇಡಿ ಎಂದ ಶಾ
ಬಿಜೆಪಿ ನಾಯಕರೊಂದಿಗೆ ಅಮಿತ್ ಶಾ ಸಭೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 30, 2022 | 11:18 PM

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಕರ್ನಾಟಕ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಇಂದು(ಡಿಸೆಂಬರ್ 30) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿದರು, ಸುಮಾರು 2 ಗಂಟೆಗಳ ಕಾಲ ಸಭೆಯಲ್ಲಿ ಅಮಿತ್ ಶಾ, ನಾಯಕರಿಗೆ ಕೆಲ ಖಡಕ್​ ಸೂಚನೆಗಳೊಂದಿಗೆ ಕೆಲ ಟಾಸ್ಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ಗುಟ್ಟು ಬಿಚ್ಚಿಟ್ಟ ಸಿಪಿವೈ, ಸುಮಲತಾ ಅಂಬರೀಶ್ ಬಗ್ಗೆಯೂ ಸ್ಫೋಟಕ ಸುಳಿವು

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ಹೈಕಮಾಂಡ್​, ಹೋರಾಟಕ್ಕಿಳಿಯುವ ಮುಂಚೆ ಅಮಿತ್ ಶಾ, ಆ ಭಾಗದ ನಾಯಕರಗಳು ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್ ನೀಡಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.

ಸಂಘಟನೆಯ ಯಶಸ್ವಿಗೆ 1 ತಿಂಗಳ ಡೆಡ್ ಲೈನ್

ಸಭೆ ಅಮಿತ್ ಶಾ ಭಾಷಣದಿಂದಲೇ ಆರಂಭಗೊಂಡಿದ್ದು, ಅವರ ಭಾಷಣದ ಮೂಲಕವೇ ಸಭೆ ಅಂತ್ಯವಾಗಿದೆ. ಸಭೆಯ ಆರಂಭದಲ್ಲಿ ಮೊದಲ ಹತ್ತು ನಿಮಿಷ ಮಾತನಾಡಿದ ಅಮಿತ್ ಶಾ, ಬಳಿಕ ಐದೈದು ನಿಮಿಷಗಳ ಕಾಲ ಸಂಘಟನಾ ವ್ಯವಸ್ಥೆಗಳ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಹೇಳಿದರು. ನಂತರ ಜಿಲ್ಲಾ ಘಟಕಗಳ ಅಧ್ಯಕ್ಷರಿಂದ ಅವರ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ವರದಿ ಸಲ್ಲಿಸಿದರು. ಇದೇ ವೇಳೆ ಶಾ, ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪರಿಚಯ ಮಾಡಿಕೊಂಡರು.

ಇದನ್ನೂ ಓದಿ: ಕೇಸರಿ ಪಾಳಯದಲ್ಲಿ ಸುಮಲತಾ ಅಂಬರೀಶ್: ಸಂಚಲನ ಮೂಡಿಸಿದ ‘ಸ್ವಾಭಿಮಾನಿ’ ಸಂಸದೆಯ ರಾಜಕೀಯ ನಡೆ

ತದನಂತರ ಸಭೆಯ ಕೊನೆಯಲ್ಲಿ 10 ನಿಮಿಷಗಳ ಕಾಲ ಭಾಷಣ ಮಾಡಿದ ಅಮಿತ್ ಶಾ, ಹಳೇ ಮೈಸೂರು ಭಾಗದಲ್ಲಿ ಈಗಿರುವ ವ್ಯವಸ್ಥೆ ಸರಿಯಾಗಬೇಕು. ಮುಂದಿನ ಬಾರಿ ಬಂದಾಗ ಎಲ್ಲವೂ ಸರಿ ದಾರಿಯಲ್ಲಿರಬೇಕು ಎಂದು ಸಂಘಟನೆಯ ಯಶಸ್ವಿಗೆ ಒಂದು ತಿಂಗಳ ಡೆಡ್ ಲೈನ್ ನೀಡಿದ್ದಾರೆ. ಅಲ್ಲದೇ ಪಕ್ಷ ಸೇರ್ಪಡೆ ವೇಳೆ ಪರಿಶೀಲಿಸಿ ಸೇರ್ಪಡೆ ಮಾಡಿಕೊಳ್ಳುವಂತೆ ನಾಯಕರುಗಳಿಗೆ ಸಲಹೆ ಕೊಟ್ಟಿದ್ದಾರೆ.

ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇಲ್ಲ

ಇನ್ನು ಇದೇ ವೇಳೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಖಡಕ್ ಆಗಿ ಹೇಳಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನಮ್ಮ ಮೊದಲ ಎದುರಾಳಿ. ಕಾಂಗ್ರೆಸ್ ನಮ್ಮ ಎರಡನೇ ಎದುರಾಳಿ. ಜೆಡಿಎಸ್‌ಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಜೊತೆ ಇದ್ದೇವೆ ಎಂದು ಹೇಳಿ JDS ಲಾಭ ಪಡೆಯಬಹುದು. ಈ ಬಗ್ಗೆ ನಿಮ್ಮೆಲ್ಲರಿಗೂ ಸ್ಪಷ್ಟತೆ ಇರಲಿ ಶಾ ಸೂಚಿಸಿದ್ದಾರೆ.

ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಸಂಪರ್ಕ ಇಟ್ಟುಕೊಳ್ಳಲೇಬೇಡಿ. ಜೆಡಿಎಸ್ ನವರು ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ನಮ್ಮ ಕಾರ್ಯಕರ್ತರ ಜೊತೆ ನಿಮ್ಮ ಸಂಬಂಧ ಚೆನ್ನಾಗಿರಲಿ. ಹಳೇ ಮೈಸೂರು ಭಾಗದಲ್ಲಿ 35 ತಲುಪುವ ಕಡೆಗೆ ಗುರಿ ಇರಿಸಿ. ಪಾಸಿಟಿವ್ ಅಲೆ ಇದೆ ಅದನ್ನು ಉಪಯೋಗಿಸಿಕೊಳ್ಳಿ. ಮೊದಲು ನೀವು ಬೂತ್ ಗಳಿಗೆ ತಲುಪಿ ಎಂದು ಸಲಹೆ ಕೊಟ್ಟಿದ್ದಾರೆ.

ಒಕ್ಕಲಿಗರ ಜೊತೆ ಉಳಿದವರನ್ನೂ ಜೋಡಿಸಿ ಎಂದಿರುವ ಅಮಿತ್ ಶಾ, ಹಳೇ ಮೈಸೂರು ಭಾಗದಲ್ಲಿ ಬೆಂಗಳೂರು ಹೊರತುಪಡಿಸಿ 35 ಕ್ಷೇತ್ರ ಗೆಲ್ಲಲೇಬೇಕು. ಅದಕ್ಕೆ ಪ್ಲ್ಯಾನ್ ನಾವು ಮಾಡುತ್ತೇವೆ, ನೀವು ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದಿದ್ದಾರೆ.

ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್

ಸಭೆಯಲ್ಲಿ ಹಳೇ ಮೈಸೂರು ಭಾಗದ ಬಿಜೆಪಿ ಮುಖಂಡರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿರುವ ಅಮಿತ್ ಶಾ. ಜಿಲ್ಲಾವಾರು ಕ್ಷೇತ್ರ ಗೆಲ್ಲಲು ಟಾರ್ಗೆಟ್ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ರಾಮನಗರ ಜಿಲ್ಲೆಯಲ್ಲಿ 2 ಕ್ಷೇತ್ರ ಗೆಲುವಿಗೆ ಶ್ರಮಿಸುವಂತೆ ಟಾಸ್ಕ್ ಕೊಟ್ಟಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:17 pm, Fri, 30 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ