ರಾಣೆಬೆನ್ನೂರಿನಲ್ಲಿ ಅಮಿತ್ ಶಾ ರೋಡ್​ಶೋ: ಮೇ 10ರಂದು ಡಬಲ್ ಇಂಜಿನ್ ಸರ್ಕಾರ ಬಿಜೆಪಿ ಬೆಂಬಲಿಸುವಂತೆ ಮನವಿ

|

Updated on: May 01, 2023 | 6:14 PM

ಮೇ 10ರಂದು ಡಬಲ್ ಇಂಜಿನ್ ಸರ್ಕಾರ ಬಿಜೆಪಿ ಬೆಂಬಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದರು.

ರಾಣೆಬೆನ್ನೂರಿನಲ್ಲಿ ಅಮಿತ್ ಶಾ ರೋಡ್​ಶೋ: ಮೇ 10ರಂದು ಡಬಲ್ ಇಂಜಿನ್ ಸರ್ಕಾರ ಬಿಜೆಪಿ ಬೆಂಬಲಿಸುವಂತೆ ಮನವಿ
ರಾಣೆಬೆನ್ನೂರಿನಲ್ಲಿ ಅಮಿತ್ ಶಾ ರೋಡ್​ಶೋ
Follow us on

ಹಾವೇರಿ: ಮೇ 10ರಂದು ಡಬಲ್ ಇಂಜಿನ್ ಸರ್ಕಾರ ಬಿಜೆಪಿ ಬೆಂಬಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮನವಿ ಮಾಡಿದರು. ಜಿಲ್ಲೆಯ ರಾಣೆಬೆನ್ನೂರಿನಲ್ಲಿ ರೋಡ್​ಶೋ ವೇಳೆ ಮಾತನಾಡಿದ ಅವರು, ಕಾಂಗ್ರೆಸ್​ ಮುಸ್ಲಿಮರಿಗೆ ಪ್ರತ್ಯೇಕ 4% ಮೀಸಲಾತಿ ಕೊಟ್ಟಿದ್ದರು. ಬಿಜೆಪಿ ಸರ್ಕಾರ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ನೀಡಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ದರೆ ಮೀಸಲಾತಿ ತೆಗೆಯುವುದಾಗಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಲಿಂಗಾಯತರ ಮೀಸಲಾತಿ ತೆಗೆದುಹಾಕ್ತೀರಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಸರ್ಕಾರ ನಿಮಗೆ ಕೊಟ್ಟಿರುವ ಮೀಸಲಾತಿ ತೆಗೆದು ಹಾಕಲ್ಲ ಎಂದು ಭರವಸೆ ನೀಡಿದರು.

ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಗೆಲ್ಲಿಸುವಂತೆ ಶಾ ಮನವಿ

2024ರಲ್ಲಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಬೇಕಾ ಬೇಡವಾ? ಅದಕ್ಕಾಗಿ ಈ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಅರುಣ್ ಕುಮಾರ್ ಅವರಿಗೆ ಮತ ನೀಡಿ. ಶಿವಕುಮಾರ್ ಉದಾಸಿಯವರನ್ನು ಸಂಸದರನ್ನಾಗಿ ಮತ್ತೊಮ್ಮೆ ಆಯ್ಕೆ ಮಾಡಿ. ಮೇ 10 ಕ್ಕೆ ಬಿಜೆಪಿಗೆ ಮತ್ತೊಮ್ಮೆ ಮತ ನೀಡುತ್ತೀರಲ್ವಾ? ಅರುಣ್ ಕುಮಾರ್ ಅವರನ್ನು ಮತ್ತೆ ಆಯ್ಕೆ ಮಾಡ್ತೀರಲ್ವಾ ಎಂದು ಮತದಾರರಿಗೆ ಅಮಿತ್ ಶಾ ಪ್ರಶ್ನಿಸಿದ್ದು, ಶಾ ಮಾತಿಗೆ ಮತದಾರರು ಜೈಕಾರ ಕೂಗಿದರು.

ಇದನ್ನೂ ಓದಿ: ಮತ್ತೆ ಮುಸ್ಲಿಂ ಮೀಸಲಾತಿ ಬೇಕಾ?: ಉಡುಪಿಯಲ್ಲಿ ಅಮಿತ್ ಶಾ ಪ್ರಶ್ನೆ

ರಾಣೇಬೆನ್ನೂರ ಪಟ್ಟಣದಲ್ಲಿ ಅಮಿತ ಶಾ ರೋಡ್ ಶೋ ಹಿನ್ನೆಲೆ ನಗರದ ಪ್ರಮುಖ ಬಿದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿತ್ತು. 500 ಕ್ಕೂ ಹೆಚ್ಚು ಪೋಲಿಸರ ನೇಮಕ ಮಾಡಲಾಗಿತ್ತು. ಅಮಿತ ಶಾ ರೋಡ್ ಶೋಗೆ ಜನಸಾಗರವೇ  ಹರಿದು ಬಂದಿತ್ತು. ರಾಣೇಬೆನ್ನೂರ ಪಟ್ಟಣ ಸಂಪೂರ್ಣ ಕೆಸರಿ ಮಯ ಆಗಿತ್ತು. ಸುಮಾರು ಒಂದು ಕಿ.ಮಿ ಕ್ಕೂ ಅಧಿಕ ರೋಡ ಶೋನಲ್ಲಿ ಶಾ ಭಾಗಿಯಾಗಿದ್ದರು.

ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ ಆರೋಪ: ಸಂಸದೆ ಸುಮಲತಾ ಆಪ್ತನ ವಿರುದ್ಧ FIR ದಾಖಲು

ತುಮಕೂರಿನಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ತುಮಕೂರು ಜಿಲ್ಲೆಯ ಗುಬ್ಬಿ ಹಾಗೂ ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಬ್ಬರದ ಪ್ರಚಾರ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಜನ ಅಮಿತ್ ಶಾ ಮತ್ತು ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ವಾಹನದಲ್ಲಿದ್ದ ಗೃಹ ಸಚಿವರು ಭಾರತ್ ಮಾತಾ ಕೀ ಅಂತ ಹೇಳಿದರೆ ನೆರೆದ ಜನ ಒಕ್ಕೊರಲಿಂದ ಜೈ ಅಂತ ಕೂಗುತ್ತಿದ್ದರು.

ಶಾ ಜೊತೆಗೆ ತಿಪಟೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸಿ ನಾಗೇಶ್​ ವಾಹನ ಮುಂದೆ ಸಾಗಲು ದಾರಿಬಿಡಿ ಎಂದು ಮೈಕ್ ಮುಖಾಂತರ ಮನವಿ ಮಾಡಿದ್ದರು. ಬಿಜೆಪಿ ಕಾರ್ಯಕರ್ತರ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪನವರ ಕಟೌಟ್​ಗಳು ರಾರಾಜಿಸುತ್ತಿದ್ದವು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Mon, 1 May 23