ಮತ್ತೆ ಮುಸ್ಲಿಂ ಮೀಸಲಾತಿ ಬೇಕಾ?: ಉಡುಪಿಯಲ್ಲಿ ಅಮಿತ್ ಶಾ ಪ್ರಶ್ನೆ

ಹಿಂದುತ್ವದ ಭದ್ರಕೋಟೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಿದ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್ ಸರ್ಕಾರ ಬಂದರೆ ಪಿಎಫ್​ಐ ಕಾರ್ಯಕರ್ತರು ಜೈಲಿನಿಂದ ಹೊರ ಬರುತ್ತಾರೆ ಅಂತಾ ಎಚ್ಚರಿಕೆ ನೀಡಿದರು.

ಮತ್ತೆ ಮುಸ್ಲಿಂ ಮೀಸಲಾತಿ ಬೇಕಾ?: ಉಡುಪಿಯಲ್ಲಿ ಅಮಿತ್ ಶಾ ಪ್ರಶ್ನೆ
ಅಮಿತ್ ಶಾ
Follow us
Rakesh Nayak Manchi
|

Updated on:Apr 29, 2023 | 6:50 PM

ಉಡುಪಿ: ಮೋದಿ ಮತ್ತೆ ಪ್ರಧಾನಿಯಾಗಲು ಕರ್ನಾಟಕದಲ್ಲಿ ಬಿಜೆಪಿ (BJP) ಸರ್ಕಾರಕ್ಕೆ ಬರಬೇಕು ಎಂದು ಬಿಜೆಪಿ ಚಾಣಕ್ಯ ಎಂದೇ ಹೆಸರಾದ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಹೇಳಿದರು. ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಬಂದರೆ ಪಿಎಫ್​ಐ ಕಾರ್ಯಕರ್ತರು ಜೈಲಿನಿಂದ ಹೊರ ಬರುತ್ತಾರೆ. ಪಿಎಫ್​ಐ (PFI) ಕಾರ್ಯಕರ್ತರ ಜೈಲಿನ ಬಿಡುಗಡೆ ಬೇಕಾ? ನೀವೇ ಯೋಚಿಸಿ ಎಂದು ಹೇಳುವ ಮೂಲಕ ಕಾಂಗ್ರೆಸ್​ಗೆ ವೋಟ್ ಹಾಕದಂತೆ, ಪಿಎಫ್​ಐ ಬ್ಯಾನ್ ಮಾಡಿದ ಬಿಜೆಪಿಗೆ ವೋಡ್ ಹಾಕುವಂತೆ ಮನವಿ ಮಾಡಿದರು.

ಬಿಜೆಪಿ ಸರ್ಕಾರ ಬಂದ ಮೇಲೆ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಕೊನೆಗೊಳಿಸಿದೆ. ಕಾಂಗ್ರೆಸ್ ಸರ್ಕಾರ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ಆರಂಭಿಸುತ್ತಾರೆ. ಮತ್ತೆ ಮುಸ್ಲಿಂ ರೆಸೆರ್ವಶನ್ ಬೇಕಾ? ಎಂದು ಪ್ರಶ್ನಿಸಿದರು. ಮುಂದುವರೆದು ಮಾತನಾಡಿದ ಅವರು, ಮೋದಿ ಅವರು ಮತ್ತೆ ಈ ದೇಶದ ಪ್ರಧಾನಿಯಾಗಬೇಕು ಎಂದು ಬಯಸುತ್ತೀರಿ ಎಂದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಬೇಕು ಎಂದು ಮನವಿ ಮಾಡಿದರು.

ಮತಾಂಧರು ನಮ್ಮ ಯುವನೇತಾರ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದರು, ಅವರ ಪ್ರಾಣ ವಾಪಾಸ್ ತರಲು ಆಗಲ್ಲ. ಆದರೆ ಅವರ ಹತ್ಯೆಗೆ ಕಾರಣವಾದ ಪಿಎಫ್ಐ ಸಂಘಟನೆಯನ್ನು ಮೋದಿ ಸರ್ಕಾರ ಬ್ಯಾನ್ ಮಾಡಿದೆ. ಕರ್ನಾಟಕದಲ್ಲಿ ಪಿಎಫ್ಐ ಸಂಘಟನೆಯ 92ಕ್ಕೂ ಅಧಿಕ ಜನರನ್ನ ಗಲ್ಲಿ ಗಲ್ಲಿಗಳಲ್ಲಿ ಹುಡುಕಿ ಬಂಧಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ನ ಕೇಸ್ ಗಳನ್ನ ವಾಪಾಸ್ ಪಡೆದಿತ್ತು. ಕಾಂಗ್ರೆಸ್ ವೋಟ್ ಬ್ಯಾಂಕ್​ಗಾಗಿ ದೇಶದ ಸುರಕ್ಷತೆಯನ್ನೇ ಕಡೆಗಣಿಸಿತ್ತು. ಆದರೆ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿ ದೇಶವನ್ನ ರಕ್ಷಿಸಿದೆ ಎಂದರು.

ಇದನ್ನೂ ಓದಿ: ಮೋದಿಗೆ ಧಮ್ಕಿ ಹಾಕಿದಷ್ಟು ಅವರ ಪರ ಅಲೆ ಏಳಲಿದೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಅಮಿತ್ ಶಾ

ಈ ಚುನಾವಣೆ ಅಭ್ಯರ್ಥಿಗಳನ್ನ ಶಾಸಕರನ್ನಾಗಿ ಅಥವಾ ಮಂತ್ರಿ ಮಾಡುವ ಚುನಾವಣೆ ಅಲ್ಲ. ರಾಜ್ಯದ ಭವಿಷ್ಯವನ್ನ ಸುರಕ್ಷಿತವಾಗಿ ಮಾಡುವ ಚುನಾವಣೆ ಇದು. ಮತ್ತೆ ಮೋದಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕು. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಮತ್ತೆ ಬರಬೇಕು. 2024ರಲ್ಲಿ ಮೋದಿಯನ್ನು ಮತ್ತೆ ಪ್ರಧಾನಿ ಮಾಡಬೇಕಿದೆ ಎಂದರು.

ಕಾರ್ಯಕರ್ತರು ಸಮೀಪಕ್ಕೆ ಬರಲು ಅವಕಾಶ ನೀಡಿದ ಅಮಿತ್ ಶಾ

ಅಮಿತ್ ಶಾ ಅವರ ಸುರಕ್ಷತೆಗಾಗಿ ಕಾರ್ಯಕರ್ತರು ಒಳಹೋಗದಂತೆ ಹಗ್ಗ ಕಟ್ಟಲಾಗಿತ್ತು. ಇದರಿಂದಾಗಿ ಕಾರ್ಯಕರ್ತರು ದೂರ ಉಳಿಯುವಂತಾಗಿತ್ತು. ಇದನ್ನು ಗಮನಿಸಿದ ಅಮಿತ್ ಶಾ, ಕಾರ್ಯಕರ್ತರು ಒಳ ಪ್ರವೇಶಿಸಲು ಅನುಕೂಲವಾಗುವಂತೆ ಮಾಡಲು ಹಗ್ಗ ತೆರವುಗೊಳಿಸುವಂತೆ ಪೊಲೀಸರಿಗೆ ಸೂಚಿಸಿದರು. ತಾನೇ ಸ್ವತಃ ಮೈಕ್ ಹಿಡಿದು ಕಾರ್ಯಕರ್ತರನ್ನು ಬಳಿಗೆ ಕರೆಸಿಕೊಂಡ ಹಿನ್ನೆಲೆ ಸಂತಸಗೊಂಡ ಕಾರ್ಯಕರ್ತರು ಜಯ ಘೋಷಗಳನ್ನು ಕೂಗಿದರು.

ಮಹಾನ್ ವ್ಯಕ್ತಿಗಳನ್ನು ನಮಿಸಿದ ಅಮಿತ್ ಶಾ

ಗೃಹ ಸಚಿವನಾಗಿ ಮೊದಲ ಬಾರಿ ಉಡುಪಿಯ ಭೂಮಿಗೆ ಬಂದಿದ್ದೇನೆ. ಉಡುಪಿ ಶ್ರೀಕೃಷ್ಣ ಮಂದಿರ, ಕೊಲ್ಲೂರು ಮೂಕಾಂಬಿಕೆ, ಲಕ್ಷ್ಮಿ ಜನಾರ್ದನ ದೇವರಿಗೆ ಪ್ರಣಾಮ ಸಲ್ಲಿಸುತ್ತೇನೆ. ದೇವಭೂಮಿಗೆ ಆಗಮಿಸಿದ್ದು ನನ್ನ ಸೌಭಾಗ್ಯ, ಪರಶುರಾಮ ಸೃಷ್ಟಿಯಾದ ಈ ಭೂಮಿಗೆ ಭಾರತದಲ್ಲೇ ಗೌರವ ಇದೆ. ಮಧ್ವಾಚಾರ್ಯರಿಂದ ಸ್ಥಾಪಿತ ಉಡುಪಿ ಕೃಷ್ಣ ಮಠ ಮತ್ತು ಉಡುಪಿಯ ಅಷ್ಠ ಮಠಗಳಿಗೂ ಪ್ರಣಾಮಗಳನ್ನ ಸಲ್ಲಿಸ್ತೇನೆ. ನಾರಾಯಣ ಗುರುಗಳಿಗೂ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಗುರುಗಳು. ಧರ್ಮದ ಬಹಳ ದೊಡ್ಡ ಸೇವೆಯನ್ನು ನಾರಾಯಣ ಗುರುಗಳು ಮಾಡಿದ್ದಾರೆ. ನಮ್ಮ ಪಕ್ಷದ ವರಿಷ್ಠರಾಗಿದ್ದ ಉಡುಪಿಯ ವಿ.ಎಸ್.ಆಚಾರ್ಯ ಅವರಿಗೂ ಪ್ರಣಾಮ ಸಲ್ಲಿಸುತ್ತೇನೆ ಎಂದರು.

ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Sat, 29 April 23

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು