ಟಿಕೆಟ್​ ನಿರೀಕ್ಷೆಯೊಂದಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಬಿಗ್ ಶಾಕ್

|

Updated on: Apr 12, 2023 | 9:48 AM

ಕಾಂಗ್ರೆಸ್​ ಟಿಕೆಟ್​ಗಾಗಿ ಜೆಡಿಎಸ್​ ತೊರೆದಿದ್ದ ವೈಎಸ್​ವಿ ದತ್ತಾ ಅವರಿಗೆ ಟಿಕೆಟ್​ ಕೈತಪ್ಪಿದೆ. ಇದೀಗ ಇದೇ ಪರಿಸ್ಥಿತಿ ಮತ್ತೋರ್ವ ಜೆಡಿಎಸ್​ ಮಾಜಿ ಶಾಸಕರೊಬ್ಬರಿಗೆ ಬಂದಿದೆ, ಟಿಕೆಟ್​ ನಿರೀಕ್ಷೆ ಇಟ್ಟುಕೊಂಡು ಜೆಡಿಎಸ್​ ತೊರೆದಿದ್ದ ರಾಮಸ್ವಾಮಿಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.

ಟಿಕೆಟ್​ ನಿರೀಕ್ಷೆಯೊಂದಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ ಬಿಗ್ ಶಾಕ್
ಎಟಿ ರಾಮಸ್ವಾಮಿ
Follow us on

ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿ ಕೊನೆಗೂ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ, ಜೆಡಿಎಸ್​(JDS) ತೊರೆದು ಕಮಲ ಮುಡಿದಿದ್ದ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎಟಿ ರಾಮಸ್ವಾಮಿಗೆ(AT Ramaswamy) ಹೈಕಮಾಂಡ್​ ಬಿಗ್ ಶಾಕ್ ಕೊಟ್ಟಿದೆ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಟಿಕೆಟ್​​ ಯೋಗ ರಮೇಶ್‌ ಅವರಿಗೆ ನೀಡಲಾಗಿದೆ. ಇದರಿಂದ ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಟಿ ರಾಮಸ್ವಾಮಿ ಟಿಕೆಟ್​ ಕೈತಪ್ಪಿದ್ದು, ಅಚ್ಚರಿಕೆ ಕಾರಣವಾಗಿದೆ. ಏಕೆಂದರೆ ರಾಮಸ್ವಾಮಿ ಅವರು ಬಿಜೆಪಿ ಟಿಕೆಟ್​ ನಿರೀಕ್ಷೆ ಮೇರೆಗೆ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ, ಇದೀಗ ಟಿಕೆಟ್​ ಮಿಸ್ ಆಗಿದ್ದರಿಂದ ಅವರ ಮುಂದಿನ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಟಿಕೆಟ್​ ಗೊಂದಲ: ಹೈಕಮಾಂಡ್​ ಬುಲಾವ್, ದೆಹಲಿಗೆ ಹೋಗುವ ಮುನ್ನ ಮಹತ್ವದ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್

ಬಿಜೆಪಿ ಸೇರಿದ್ದ ರಾಮಸ್ವಾಮಿಗೆ ನಿರಾಸೆಯಾಗಿದ್ದು, ಮೊದಲ ಪಟ್ಟಿಯಲ್ಲಿ ಅರಕಗೂಡು ಟಿಕೆಟ್​ ಯೋಗಾ ರಮೇಶ್ ಒಲಿದಿದೆ. ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದ ಯೋಗಾ ರಮೇಶ್ , ಕಳೆದ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಇದೀಗ ಹೈಕಮಾಂಡ್​ ವಲಸೆ ಬಂದ ರಾಮಸ್ವಾಮಿ ಅವರನ್ನು ಬಿಟ್ಟು ಮತ್ತೊಮ್ಮೆ ಯೋಗಾ ರಮೇಶ್​ ಅವಕಾಶ ನೀಡಿದೆ.

ಜೆಡಿಎಸ್ ನಿಂದ ಟಿಕೆಟ್ ಮಿಸ್ ಆದ ವೇಳೆ ಈ ಭಾರೀ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡ್ತೇನೆ ರಾಮಸ್ವಾಮಿ ಶಪಥ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಮಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ಈ ಭಾರಿ ಎ.ಟಿ.ರಾಮಸ್ವಾಮಿ ಅವರಿಗೆ ಟಿಕೆಟ್ ಸಿಗುತ್ತೆ ಎಂದೇ ಹೇಳಲಾಗಿತ್ತು. ಬಿಜೆಪಿ ಸೇರಿದ ಬಳಿಕ ನಾನು ಯಾವುದೇ ಷರತ್ತು‌ ಇಲ್ಲದೇ ಸೇರಿದ್ದೇನೆ ಎಂದಿದ್ದರು.

ಇನ್ನು ಇದೇ ಪರಿಸ್ಥಿತಿ ವೈಎಸ್​ವಿ ದತ್ತಾ ಅವರಿಗೆ ಬಂದಿದೆ. ಟಿಕೆಟ್​ ನಿರೀಕ್ಷೆ ಇಟ್ಟುಕೊಂಡು ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ದತ್ತಾ ಅವರಿಗೂ ಸಹ ಟಿಕೆಟ್​​ ಕೈತಪ್ಪಿದೆ. ಜೆಡಿಎಸ್​ನಿಂದ ಬಂದಿದ್ದ ದತ್ತಾ ಬದಲಿಗೆ ಆನಂದ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್​ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡಿರುವ ದತ್ತಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗ ಬಿಜೆಪಿ ಟಿಕೆಟ್ ಮಿಸ್ ಆಗಿದ್ದರಿಂದ ಎಟಿ ರಾಮಸ್ವಾಮಿ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ.

ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಲೈವ್​ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:22 am, Wed, 12 April 23