ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ, ನಾಳೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ದೆಹಲಿಗೆ

|

Updated on: Apr 06, 2023 | 1:37 PM

ಹೈಕಮಾಂಡ್​ ಸೂಚನೆಯಂತೆ ಪ್ರತಿ ಕ್ಷೇತ್ರಕ್ಕೆ 3 ಸಂಭಾವ್ಯ ಅಭ್ಯರ್ಥಿಗಳಿರುವ ಪಟ್ಟಿಯನ್ನ ರಾಜ್ಯ ಬಿಜೆಪಿ ರೆಡಿ ಮಾಡಿದೆ. ಈ ಪಟ್ಟಿಯೊಂದಿಗೆ ನಾಳೆ ಸಿಎಂ ಬೊಮ್ಮಾಯಿ ಹಾಗೂ ಬಿಎಸ್ ಯಡಿಯೂರಪ್ಪ ದಿಲ್ಲಿಗೆ ಪ್ರಯಾಣ ಬೆಳಸಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ, ನಾಳೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ದೆಹಲಿಗೆ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಈಗಾಗಲೇ ಕಾಂಗ್ರೆಸ್​​ ಅಭ್ಯರ್ಥಿಗಳ ಎರಡು ಪಟ್ಟಿ (Congress Candidates List) ಬಿಡುಗಡೆಯಾಗಿದೆ. ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ ಇಂದು 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಬಿಜೆಪಿ (BJP) ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಎರಡು ದಿನಗಳ ರಾಜ್ಯ ಚುನಾವಣಾ ಸಮಿತಿ ಸಭೆ ನಿನ್ನೆ(ಏಪ್ರಿಲ್ 5) ರಾತ್ರಿ ಮುಕ್ತಾಯವಾಗಿದೆ‌. ಪ್ರತಿ ಕ್ಷೇತ್ರಕ್ಕೆ ತಲಾ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಅಂತಿಮ ಮಾಡಲಾಗಿದ್ದು, ನಾಳೆ(ಏಪ್ರಿಲ್ 07) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂಭಾವ್ಯ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್​? ಇಲ್ಲಿದೆ ಅಚ್ಚರಿ ಸಂಗತಿಗಳು

ಹೈಕಮಾಂಡ್​ ಸೂಚನೆಯಂತೆ ಪ್ರತಿ ಕ್ಷೇತ್ರಕ್ಕೆ 3 ಸಂಭಾವ್ಯ ಅಭ್ಯರ್ಥಿಗಳಿರುವ ಪಟ್ಟಿಯನ್ನ ರಾಜ್ಯ ಬಿಜೆಪಿ ರೆಡಿ ಮಾಡಿದೆ. ಇದರಲ್ಲಿ ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿ ಕ್ಷೇತ್ರಕ್ಕೂ 3 ಸಂಭಾವ್ಯ ಅಭ್ಯರ್ಥಿಗಳ ಹೆಸರು ಇವೆ, ವಿಜಯೇಂದ್ರ ಸ್ಪರ್ಧಿಸುವ ಶಿಕಾರಿಪುರ ಕ್ಷೇತ್ರಕ್ಕೂ 3 ಸಂಭಾವ್ಯ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಿದೆ. ನಾಳೆ  ನಾಳೆ ಮಧ್ಯಾಹ್ನ 2.30ಕ್ಕೆ ಸಿಎಂ ಬೊಮ್ಮಾಯಿ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಿಇಸಿ ಸಭೆ ನಡೆಯಲಿದೆ. ಬಳಿಕ ಸರ್ವೆ ರಿಪೋರ್ಟ್, ಬ್ಯಾಲೆಟ್ ವೋಟ್ ಅಭಿಪ್ರಾಯ ಆಧರಿಸಿ ಟಿಕೆಟ್ ಫೈನಲ್ ಆಗಲಿದೆ.

ಏಪ್ರಿಲ್ 8 ರಂದು ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಿಗದಿಯಾಗಿದೆ. ಸಂಸದೀಯ ಮಂಡಳಿಯ ಸಭೆಯ ಬಳಿಕ, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ. ಇನ್ನು ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ವಾಪಾಸಾದ ಬಳಿಕವೇ ಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ಕರ್ನಾಟಕ ವಿಧಾನಸಭಾ ಚುನಾಚವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕೀಯದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ