AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Rural Election Result: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​​ನ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು

Belgaum Rural Assembly Election Results 2023 Live Counting Updates: ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಚುನಾವಣೆಗೆ ಮತದಾನದ ಪ್ರಮಾಣ ಏರುತ್ತಲೇ ಬಂದಿದೆ. 2008ರಲ್ಲಿ ಶೇಕಡ 71.1ರಷ್ಟಿದ್ದ ಮತದಾನ ಪ್ರಮಾಣ, 2013ರಲ್ಲಿ ಶೇಕಡ 73.97 ತಲುಪಿದೆ. ಇದು 2018ರಲ್ಲಿ ಶೇಕಡ 77.55ಕ್ಕೆ ಏರಿದೆ. ಈ ಬಾರಿ ಸಹಜವಾಗಿಯೇ ಇದು ಹೆಚ್ಚಾಗಲಿದೆ

Belagavi Rural Election Result: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​​ನ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು
ನಾಗೇಶ್ ಮನೋಲ್ಕರ್ - ಲಕ್ಷ್ಮಿ ಹೆಬ್ಬಾಳ್ಕರ್
ರಶ್ಮಿ ಕಲ್ಲಕಟ್ಟ
|

Updated on:May 13, 2023 | 12:59 PM

Share

Belagavi Rural Assembly Election Results 2023: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ  ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವು ಸಾಧಿಸಿದ್ದಾರೆ. ಈ 1967ರಿಂದ ಅಸ್ತಿತ್ವದಲ್ಲಿದ್ದು ಈವರೆಗಿನ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌, ಜನತಾ ಪರಿವಾರ, ಜನತಾ ದಳ ಹಾಗೂ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರಸ್ತುತ ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹಣಾಹಣಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್, ಬಿಜೆಪಿಯ ನಾಗೇಶ್ ಮನೋಲ್ಕರ್ ಮತ್ತು ಜೆಡಿಎಸ್ ಪಕ್ಷದ ಶಂಕರಗೌಡ ರುದ್ರಗೌಡ ಪಾಟೀಲ್ ಚುನಾವಣಾ ಕಣದಲ್ಲಿದ್ದಾರೆ.

2008ರಲ್ಲಿ ಸಂಜಯ್ ಬಿ ಪಾಟೀಲ್ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆದಿತ್ತು. 2013ರ ಚುನಾವಣೆಯಲ್ಲಿ ವರ್ಚಸ್ಸು ಕಡಿಮೆಯಾದರೂ ಸಂಜಯ್ ಮತ್ತೊಮ್ಮೆ ಗೆದ್ದು ಬಂದರು. 2018ರಲ್ಲಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಬರೋಬ್ಬರಿ 51,724 ಮತಗಳ ಅಂತರದಿಂದ ಸಂಜಯ್ ಬಿ ಪಾಟೀಲರನ್ನು ಸೋಲಿಸಿ, ಬಿಜೆಪಿ ಪ್ರಾಬಲ್ಯವಿರುವಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಿದರು

ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಚುನಾವಣೆಗೆ ಮತದಾನದ ಪ್ರಮಾಣ ಏರುತ್ತಲೇ ಬಂದಿದೆ. 2008ರಲ್ಲಿ ಶೇಕಡ 71.1ರಷ್ಟಿದ್ದ ಮತದಾನ ಪ್ರಮಾಣ, 2013ರಲ್ಲಿ ಶೇಕಡ 73.97 ತಲುಪಿದೆ. ಇದು 2018ರಲ್ಲಿ ಶೇಕಡ 77.55ಕ್ಕೆ ಏರಿದೆ. ಈ ಬಾರಿ ಸಹಜವಾಗಿಯೇ ಇದು ಹೆಚ್ಚಾಗಲಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:36 am, Sat, 13 May 23