Belagavi Rural Election 2023 Winner: ಗೆಲುವಿನ ನಗೆ ಬೀರಿದ ಲಕ್ಷ್ಮಿ ಹೆಬ್ಬಾಳ್ಕರ್

Lakshmi Hebbalkar: ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹಣಾಹಣಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದು ಬೀಗಿದ್ದಾರೆ.

Belagavi Rural Election 2023 Winner: ಗೆಲುವಿನ ನಗೆ ಬೀರಿದ ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್

Updated on: May 13, 2023 | 1:08 PM

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ (Belagavi Rural Assembly Election Results 2023) ಕಾಂಗ್ರೆಸ್ ಪಕ್ಷದ  ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗೆಲುವು ಸಾಧಿಸಿದ್ದಾರೆ.ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ನಡುವೆ ನೇರ ಹಣಾಹಣಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್, ಬಿಜೆಪಿಯ ನಾಗೇಶ್ ಮನೋಲ್ಕರ್ ಮತ್ತು ಜೆಡಿಎಸ್ ಪಕ್ಷದ ಶಂಕರಗೌಡ ರುದ್ರಗೌಡ ಪಾಟೀಲ್ ಚುನಾವಣಾ ಕಣದಲ್ಲಿದ್ದರು.

2008ರಲ್ಲಿ ಸಂಜಯ್ ಬಿ ಪಾಟೀಲ್ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆದಿತ್ತು. 2013ರ ಚುನಾವಣೆಯಲ್ಲಿ ವರ್ಚಸ್ಸು ಕಡಿಮೆಯಾದರೂ ಸಂಜಯ್ ಮತ್ತೊಮ್ಮೆ ಗೆದ್ದು ಬಂದರು. 2018ರಲ್ಲಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಬರೋಬ್ಬರಿ 51,724 ಮತಗಳ ಅಂತರದಿಂದ ಸಂಜಯ್ ಬಿ ಪಾಟೀಲರನ್ನು ಸೋಲಿಸಿ, ಬಿಜೆಪಿ ಪ್ರಾಬಲ್ಯವಿರುವಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಿದರು

ಈ ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಚುನಾವಣೆಗೆ ಮತದಾನದ ಪ್ರಮಾಣ ಏರುತ್ತಲೇ ಬಂದಿದೆ. 2008ರಲ್ಲಿ ಶೇಕಡ 71.1ರಷ್ಟಿದ್ದ ಮತದಾನ ಪ್ರಮಾಣ, 2013ರಲ್ಲಿ ಶೇಕಡ 73.97 ತಲುಪಿದೆ. ಇದು 2018ರಲ್ಲಿ ಶೇಕಡ 77.55ಕ್ಕೆ ಏರಿದೆ. ಈ ಬಾರಿ ಸಹಜವಾಗಿಯೇ ಇದು ಹೆಚ್ಚಾಗಲಿದೆ.

ಚುನಾವಣೆ ಫಲಿತಾಂಶ ಲೈವ್​ ಅಪ್ಡೇಟ್​ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ