ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ(Karnataka Assembly Elections 2o23) ವೇಳೆ ರೋಡ್ ಶೋ, ಪ್ರಚಾರ, ಸುತ್ತಾಟಗಳಲ್ಲಿ ಬ್ಯುಸಿಯಾದ ಅಭ್ಯರ್ಥಿಗಳು, ಕಾರ್ಯಕರ್ತರಿಗೆ ಟ್ರಾಫಿಕ್ ಪೊಲೀಸರು(Traffic Police) ಶಾಕ್ ಕೊಟ್ಟಿದ್ದಾರೆ. ಪ್ರಚಾರದ ಭರಾಟೆಯಲ್ಲಿ ಸುತ್ತಾಡಿದವರಿಗೆ ಭಾರಿ ಫೈನ್(Traffic Fine) ವಿಧಿಸಿದ್ದಾರೆ. ನೀತಿ ಸಂಹಿತೆ ಜಾರಿ( ಬಳಿಕ ಅಭ್ಯರ್ಥಿಗಳು, ಕಾರ್ಯಕರ್ತರು ಬಳಸಿದ ವಾಹನಗಳಿಂದ ಸಾಲು ಸಾಲು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದ್ದು ಬೆಂಗಳೂರು ನಗರದಲ್ಲಿ 25 ದಿನದಲ್ಲಿ 4.12 ಲಕ್ಷ ಪ್ರಕರಣ ದಾಖಲಾಗಿದೆ.
ರಾಜ್ಯ ರಾಜಕೀಯದ ಗದ್ದುಗೆ ಏರಲು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರಂತೆ ಸಂಚಾರ ನಡೆಸಿದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಭಾರೀ ಮೊತ್ತ ತೆತ್ತುವಂತಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ ಚುನಾವಣೆ ಪ್ರಚಾರದ ವಾಹನಗಳ ಮೇಲೆ ಬರೋಬ್ಬರಿ 22.89 ಕೋಟಿ ದಂಡ ಬಿದ್ದಿದೆ. 25 ದಿನದಲ್ಲಿ 4.12 ಲಕ್ಷ ಪ್ರಕರಣ ದಾಖಲಾಗಿವೆ. ಅತಿ ವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೇಡಿಂಗ್ ಸೇರಿದಂತೆ ಕೇಸ್ಗಳು ದಾಖಲಾಗಿವೆ.
ಇದನ್ನೂ ಓದಿ: ‘ಮೈತ್ರಿಗೆ ನಾವು ಸಿದ್ಧ’ ಆದ್ರೆ ಕೆಲವು ಷರತ್ತುಗಳಿಗೆ ಒಪ್ಪಬೇಕು; ನಿಲುವು ಸ್ಪಷ್ಟಪಡಿಸಿದ ಹೆಚ್ಡಿ ಕುಮಾರಸ್ವಾಮಿ
ಸಿಗ್ನಲ್ ಸಿಸಿ ಕ್ಯಾಮರಾ ಪರಿಶೀಲಿಸಿ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಗರಾದ್ಯಂತ 250 ಐಟಿಎಂಎಸ್ ಕ್ಯಾಮರಾಗಳಿಂದ ಫೈನ್ ಹಾಕಲಾಗಿದೆ. ಇದರ ಜೊತೆಗೆ ನಿರ್ಭಯಾ ಫಂಡ್ ಅಡಿ ಹಾಕಲಾದ ನೇತ್ರ ಕ್ಯಾಮೆರಾಗಳನ್ನು ದಂಡ ವಿಧಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮತದಾರರನ್ನ ಸೆಳೆಯೋಕೆ ರಾಜಕಾರಣಿಗಳು ಎಲ್ಲಾ ರೀತಿ ಪ್ರಯತ್ನ ಮಾಡಿದ್ದು ಸೀರೆ, ಕುಕ್ಕರ್, ತವಾ, ಹಣ ಸೇರಿ ಹಲವು ವಸ್ತುಗಳ ಹಂಚಿದ್ದಾರೆ. ಇನ್ನು ಪೊಲೀಸರು, ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ಚುನಾವಣೆ ಮುಗಿಯೋ ಹೊತ್ತಿಗೆ ಬರೋಬ್ಬರಿ 384.46 ಕೋಟಿ ವರೆಗಿನ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಎಲೆಕ್ಷನ್ ಗೆ ಅಂತಾ ರಾಜಕೀಯ ವ್ಯಕ್ತಿಗಳು, ಕಾರ್ಯಕರ್ತರು ಹಂಚ್ತಿದ್ದಂತಹ ಕೋಟಿ ಕೋಟಿ ವಸ್ತುಗಳನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಳೆದ ಎಲೆಕ್ಷನ್ ನಲ್ಲಿ ಅಂದ್ರೆ 2018ರಲ್ಲಿ ಸೀಜ್ ಮಾಡಿದ್ದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಸೀಜ್ ಮಾಡಲಾಗಿದೆ. ಕಳೆದ ಬಾರಿ ಕೋಡ್ ಆಫ್ ಕಂಡಕ್ಟ್ ವೇಳೆ ಹಣ, ವಸ್ತುಗಳು ಸೇರಿ ಸುಮಾರು 185.74 ಕೋಟಿಯಷ್ಟು ಆಗಿತ್ತು, ಆದ್ರೆ ಈ ಬಾರಿ ಕಳೆದ ಎಲಕ್ಷನ್ ಗಿಂತಲೂ ಮೂರು ಪಟ್ಟು ವಸ್ತುಗಳನ್ನ ಸೀಜ್ ಮಾಡಿದ್ದಾರೆ. ಅಂದ್ರೆ ಬರೋಬ್ಬರಿ 384.46ಕೋಟಿ ಮೌಲ್ಯದ ವಸ್ತು, ಹಣ ವಶಪಡೆದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:19 am, Fri, 12 May 23