ದಶಕಗಳ ಕಾಲ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಸಂಗಮೇಶ್ವರ್ ಹಾಗೂ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಗೌಡ ನಡುವಿನ ಹಣಾಹಣಿಗೆ ಭದ್ರಾವತಿ ಸಾಕ್ಷಿಯಾಗಿತ್ತು.
ಬಿಕೆ ಸಂಗಮೇಶ್ವರ್ ಶಾರದಾ ಅಪ್ಪಾಜಿಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈಗ ಅಪ್ಪಾಜಿಗೌಡ ನಿಧನದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅವರ ಪತ್ನಿ ಶಾರದಾ ಅಪ್ಪಾಜಿಗೌಡ ಕಣಕ್ಕಿಳಿದಿದ್ದಾರೆ. ಅತ್ತ ಕಾಂಗ್ರೆಸ್ನಿಂದ ಸಂಗಮೇಶ್ವರ್ ಐದನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಲ್ಲಿಯವರೆಗೆ ಸಂಗಮೇಶ್ವರ್ ಮೂರು ಬಾರಿ ಭದ್ರಾವತಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮೂರು ಬಾರಿ ಅಪ್ಪಾಜಿಗೌಡ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಮ್ಮೆಯೂ ಬಿಜೆಪಿ ಗೆಲುವು ಸಾಧಿಸಿಲ್ಲ, ಈ ಬಾರಿ ಬಿಜೆಪಿಯಿಂದ ಮುಂಗೋಟಿ ರುದ್ರೇಶ್ ಕಣಕ್ಕಿಳಿದಿದ್ದಾರೆ. ಎಎಪಿಯಿಂದ ಆನಂದ್ ಸ್ಪರ್ಧಿಸಿದ್ದಾರೆ.
ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ