Sullia Election 2023 Winner: ಸುಳ್ಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾಗೀರಥಿ ಮುರುಳ್ಯ​

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಟ್​ ನಡೆಯದಿದ್ದು, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ​ ಭಾರೀ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಭಾಗೀರಥಿ ಮುರುಳ್ಯ ಅವರು ಆದಿದ್ರಾವಿಡ ಸಮುದಾಯದವರು.

Sullia Election 2023 Winner: ಸುಳ್ಳದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾಗೀರಥಿ ಮುರುಳ್ಯ​
ಭಾಗೀರಥಿ ಮುರುಳ್ಯ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 13, 2023 | 5:00 PM

ಸುಳ್ಳ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ (Sullia Assembly Constituency) ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಟ್​ ನಡೆಯದಿದ್ದು, ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ​ ಭಾರೀ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಭಾಗೀರಥಿ ಮುರುಳ್ಯ ಅವರು ಆದಿದ್ರಾವಿಡ ಸಮುದಾಯದವರು. ಈ ಪ್ರದೇಶದಲ್ಲಿ ಆದಿದ್ರಾವಿಡ ಸಮುದಾಯದವರು ಹೆಚ್ಚು, ಜತೆಗೆ ಇಲ್ಲಿ ಬಿಜೆಪಿಯ ಮೇಲೆ ಹೆಚ್ಚು ಒಲವು ಇತ್ತು. ಈ ಕಾರಣಕ್ಕೆ ಈ ಭಾಗದಲ್ಲಿ ಹಿಂದುಳಿದ ಸಮುದಾಯ ಅಭ್ಯರ್ಥಿಗೆ ಗೆಲುವಾಗಿದೆ. ಈ ಹಿಂದೆ ಮಾಜಿ ಸಚಿವರಾಗಿದ್ದ ಎಸ್​​.ಅಂಗಾರ ಅವರು 6 ಬಾರಿ ಸುಳ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದರು, ಆದರೆ ಈ ಬಾರಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಂದ ಅವರು ವಿರುದ್ಧ ಅನೇಕ ವಿರೋಧಗಳು ವ್ಯಕ್ತವಾಗಿತ್ತು. ಆ ಕಾರಣಕ್ಕೆ ಈ ಬಾರಿ ಅವರಿಗೆ ಟಿಕೇಟ್​​ ಕೈತಪ್ಪಿತ್ತು. ಎಸ್​​, ಅಂಗಾರ ಅವರು ಕೂಡ ಬಿಜೆಪಿ ನಾಯಕರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು, ನಂತರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು, ಇದೀಗ ಬಿಜೆಪಿಯ ಅಭ್ಯರ್ಥಿ ಭಾಗೀರಥಿ ಮುರುಳ್ಯ​ ಗೆಲುವು ಸಾಧಿಸಿದ್ದಾರೆ. ಶಿಕ್ಷಕಿಯಾಗಿ, ಟೈಲರಿಂಗ್ ಮತ್ತು ಹೈನುಗಾರಿಕೆ ಉದ್ಯಮವನ್ನು ಮಾಡಿಕೊಂಡಿದ್ದ ಭಾಜಪದ ಸಾಮಾನ್ಯ ಕಾರ್ಯಕರ್ತೆಯಾಗಿ ದುಡಿದ ಭಾಗೀರಥಿ ಮುರುಳ್ಯಗೆ ಸುಳ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಇನ್ನೂ ಭಾಗೀರಥಿ ಮುರುಳ್ಯ ಅವರಿಗೆ ಪೈಪೋಟಿ ನೀಡಿದ್ದು, ಕಾಂಗ್ರೆಸ್​​ ಅಭ್ಯರ್ಥಿ ಜಿ.ಕೃಷ್ಣಪ್ಪ, ಇವರು ಭಾಗೀರಥಿ ಮುರುಳ್ಯ ಪ್ರಬಲ ಪೈಪೋಟಿ ಅಲ್ಲ, ಆದರೆ ಜಿ.ಕೃಷ್ಣಪ್ಪ ಅವರ ಬಗ್ಗೆ ಸುಳ್ಯದಲ್ಲಿ ಒಂದು ರೀತಿಯ ಒಲವು ಇತ್ತು. ಆದರೆ ಇಲ್ಲಿ ಅಭ್ಯರ್ಥಿ ಬದಲಾದರೂ ಬಿಜೆಪಿ ಪಕ್ಷಕ್ಕೆ ಹಿಂದಿನ ಬೆಂಬಲವೇ ಇದೆ. ಜಿ.ಕೃಷ್ಣಪ್ಪ ಅವರ ಬಗ್ಗೆ ಸ್ವಪಕ್ಷದ ಕಾರ್ಯಕರ್ತರಲ್ಲೇ ವಿರೋಧ ಇತ್ತು. ಇದೀಗ ಅವರು ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ: Bantwala Election 2023 Winner: ಮಾಜಿ ಸಚಿವನಿಗೆ ಮತ್ತೆ ಸೋಲಿನ ರುಚಿ ತೋರಿಸಿದ ರಾಜೇಶ್​​ ನಾಯಕ್​​

ಇನ್ನೂ ಸುಳ್ಯದಲ್ಲಿ ಜೆಡಿಎಸ್​ ಅಭ್ಯರ್ಥಿ ವೆಂಕಟೇಶ್ ಎಚ್​​.ಎನ್ ಅವರು ಸೋಲು ಅನುಭವಿಸಿದ್ದು. ಬಿಜೆಪಿ ಮತ್ತು ಕಾಂಗ್ರೆಸ್​ ಮತಗಳು ಹಂಚಿ ಹೋಗಬಹುದು. ಇನ್ನೂ ಎಎಪಿಯಿಂದ ಸುಮನ ಅವರು ಸ್ಪರ್ಧಿಸಿದ್ದು. ಇದರ ಜತೆಗೆ ಇತರೇ ಅಭ್ಯರ್ಥಿಗಳು ಪೈಪೋಟಿ ನೀಡಿದ್ದರು.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ