Byndoor Election 2023 Winner: ಬರಿಗಾಲ ಸಂತ ಬಿಜೆಪಿ ಗುರುರಾಜ್ ಗಂಟಿಹೊಳೆಗೆ ಭರ್ಜರಿ ವಿಜಯ
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (Byndoor Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು. ಮತ್ತೆ ಕಮಲ ಜಯವಾಗಿದೆ.
ಬೈಂದೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇಂದು ಪ್ರಕಟವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ (Byndoor Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು. ಮತ್ತೆ ಕಮಲ ಜಯವಾಗಿದೆ. ಕಳೆದ ಚುನಾವಣೆಯಲ್ಲಿ ಬೈಂದೂರಿನಲ್ಲಿ ಬಿ ಸುಕುಮಾರ್ ಶೆಟ್ಟಿ ಭಾರೀ ಬಹುಮತದಿಂದ ಗೆಲ್ಲುವು ಸಾಧಿಸಿದ್ದರು. ಆದರೆ ಬಿ ಸುಕುಮಾರ್ ಶೆಟ್ಟಿ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ನೀಡಿಲ್ಲ. ಬಿ ಸುಕುಮಾರ್ ಶೆಟ್ಟಿ ಅವರು ಸಂಘಟನೆ ಮೂಲಕ ಅನೇಕ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಬೈಂದೂರಿನಲ್ಲಿ ಜನಾಭಿಪ್ರಾಯ ವಿರುದ್ಧವಾಗಿದ್ದು, ಹೊಸ ಮುಖಕ್ಕೆ ಮಣೆ ಹಾಕಿದ್ದರು, ಈ ಬಾರಿ ಗುರುರಾಜ್ ಗಂಟಿಹೊಳೆ ಗೆಲುವು ಸಾಧಿಸಿದ್ದಾರೆ, ಇವರು ಬರಿಗಾಲ ಸಂತ ಎಂದು ಪ್ರಸಿದ್ಧಿ, ಸಂಘಟನೆಯ ಮೂಲಕ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬಾರಿ ಗುರುರಾಜ್ ಗಂಟಿಹೊಳೆ ಅವರಿಗೆ ಬಿಜೆಪಿ ಟಿಕೇಟ್ ನೀಡಿದ್ದು, ಚುನಾವಣಾ ಪ್ರಚಾರದ ಸಮಯದಲ್ಲಿ ಗುರುರಾಜ್ ಗಂಟಿಹೊಳೆ ಭಾರೀ ಟ್ರೆಂಡ್ ಆಗುತ್ತಿದ್ದರು. ಬೈಂದೂರಿನಲ್ಲಿ ಬಿಜೆಪಿ ಮೇಲೆ ಒಲವು ಇದ್ದು, ಬಿಜೆಪಿ ಈ ಬಾರಿಯೂ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹೆಚ್ಚು ಕೆಲಸ ಮಾಡಿದವರು, ಉಡುಪಿ ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಮತ್ತೆ 3 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಬಾರಿ ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿಯನ್ನು ನೀಡಿದ್ದಾರೆ. ಈ ಬಾರಿಯೂ ಬಿಜೆಪಿ ಗೆಲವು ಸಾಧಿಸಿದೆ.
ಇನ್ನೂ ಕಾಂಗ್ರೆಸ್ ಕೆ. ಗೋಪಾಲ ಪೂಜಾರಿ ಕೂಡ ಪ್ರಬಲ ಪೈಪೋಟಿ ನೀಡಿದ್ದು, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ. ಅವರು ರಾಜಕೀಯವಾಗಿ ಭಾರೀ ಅನುಭವ ಇರುವ ವ್ಯಕ್ತಿ ಹಾಗೂ 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಗೆಲುವು ತಂದುಕೊಟ್ಟವರು, ಕೆ. ಗೋಪಾಲ ಪೂಜಾರಿ ನಂತರ ಅಲ್ಲಿಂದ 1998ರಲ್ಲಿ ಲೋಕಸಭೆಗೂ ಕೂಡ ಸ್ಪರ್ಧಿಸಿದ್ದಾರೆ, ಈ ಬಾರಿ ಅವರು ಕಾಂಗ್ರೆಸ್ನಿಂದ ಸ್ವರ್ಧಿಸಿದ್ದು, ಸೋತಿದ್ದಾರೆ. ಈ ಬಾರಿ ಮತಪ್ರಭು ಬಿಜೆಪಿಗೆ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Sakleshpur Election 2023 Winner: ಸಕಲೇಶಪುರದಲ್ಲಿ ಜೆಡಿಎಸ್, ಕಾಂಗ್ರೆಸ್ಗೆ ಸೋಲಿನ ಆಘಾತ ಕೊಟ್ಟ ಬಿಜೆಪಿಯ ಸಿಮೆಂಟ್ ಮಂಜು
ಇನ್ನೂ ಜೆಡಿಎಸ್ನಿಂದ ಮುಸ್ಲಿಂ ಸಮುದಾಯದ ವ್ಯಕ್ತಿ ಮನ್ಸೂರು ಇಬ್ರಾಹಿಂ ಸ್ಪರ್ಧಿಸಿದ್ದು ಅವರು ಕಡಿಮೆ ಮತಗಳಿಂದ ಸೋತಿದ್ದಾರೆ. ಒಟ್ಟಾರೆ ಈ ಬಾರಿ ಬೈಂದೂರು ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂದಿದೆ.
ಚುನಾವಣೆ ಫಲಿತಾಂಶ ಲೈವ್ ಅಪ್ಡೇಟ್ಗೆ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ