ಬೆಂಗಳೂರು: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ (JDS Candidates List) ಪ್ರಕಟಿಸಿದೆ. JDS ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳ ಮೊಲದ ಪಟ್ಟಿಯನ್ನು ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಂದು (ಡಿಸೆಂಬರ್ 19) ಬೆಂಗಳೂರಿನಲ್ಲಿ ಪ್ರಕಟಿಸಿದರು.
ಇದನ್ನೂ ಓದಿ: ನಿಖಿಲ್‌ಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ, ತಾಯಿಯಿಂದಲೇ ಮಗನಿಗೆ ಪಟ್ಟಾಭಿಷೇಕ
ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿರುವ ಜೆಡಿಎಸ್, ಗೊಂದಲ ,ಅಸಮಾಧಾನಿತ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೇ ಕಾಯ್ದಿರಿಸಿದೆ. ಇನ್ನು ಜಿಟಿ ದೇವೇಗೌಡಗೆ ಚಾಮುಂಡೇಶ್ವರಿ ಹಾಗು ಅವರ ಮಗ ಹರೀಶ್ ಗೌಡಗೂ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದೆ. ಇನ್ನು ಮಂಡ್ಯ ಜಿಲ್ಲೆಯ ಹಾಲಿ ಎಲ್ಲಾ ಜೆಡಿಎಸ್ ಶಾಸಕರಿಗೂ ಟಿಕೆಟ್ ನೀಡಲಾಗಿದೆ. ಇನ್ನು ಮುಖ್ಯವಾಗಿ ರಾಮನಗರ ಟಿಕೆಟ್ ನಿಖಿಲ್ ಕುಮಾರಸ್ವಾಮಿಗೆ ಕೊಟ್ಟಿದೆ. ಚನ್ನಪಟ್ಟಣದಿಂದ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ.
ಆದ್ರೆ, ಮೊದಲ ಲಿಸ್ಟ್ನಲ್ಲಿ ಸಹೋದರ ಹೆಚ್ಡಿ ರೇವಣ್ಣ ಅವರ ಹೆಸರು ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೇ ಹಾಸನ ಜೆಡಿಎಸ್ನಲ್ಲಿ ಕೆಲ ಗೊಂದಲಗಳು ಏರ್ಪಟ್ಟಿದ್ದರಿಂದ ಜಿಲ್ಲೆಯ ಟಿಕೆಟ್ ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ. ಹೆಚ್ಡಿ ರೇವಣ್ಣ ಸ್ಪರ್ಧೆಯ ಜೊತೆಗೆ ಅವರ ಪತ್ನಿ ಭವಾನಿ ರೇವಣ್ಣ ಅವರನ್ನೂ ಸಹ ಅಖಾಡಕ್ಕಿಳಿಸಲು ಚಿಂತನೆಗಳು ನಡೆದಿವೆ. ಆದ್ರೆ, ಇದಕ್ಕೆ ಕುಮಾರಸ್ವಾಮಿ ಒಪ್ಪುತ್ತಿಲ್ಲ ಎನ್ನಲಾಗಿದೆ. ಇದರಿಂದ ಹಾಸನ ಜಿಲ್ಲೆಯ ಟಿಕೆಟ್ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿಲ್ಲ.
ಜೆಡಿಎಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದುಕೊಂಡು ಪಕ್ಷ ತೊರೆಯುವ ಚಿಂತನೆ ನಡೆಸಿರುವ ನಾಯಕರ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿಲ್ಲ. ಅರಸಿಕೆರೆ ಶಿವಲಿಂಗೇಗೌಡ, ಕಡೂರು ವೈಎಸ್‌ವಿ ದತ್ತಾ, ಅರಕಲಗೂಡು ಎಟಿ ರಾಮಸ್ವಾಮಿ ಅವರಿಗೆ ಫಸ್ಟ್ ಲಿಸ್ಟ್ನಲ್ಲಿ ಟಿಕೆಟ್ ನೀಡಿಲ್ಲ.
Published On - 2:29 pm, Mon, 19 December 22