Karnataka Assembly Election 2023: ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ, ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಶಾಮನೂರು ಶಿವಶಂಕರಪ್ಪ

|

Updated on: Apr 03, 2023 | 12:20 PM

ನನಗೆ ಯಾರು ಪ್ರತಿ ಸ್ಪರ್ಧಿಯೇ ಇಲ್ಲ. ಈ ಚುನಾವಣೆಯಲ್ಲಿ ನನಗೆ ಯಾರು ಪ್ರತಿ ಸ್ಪರ್ಧಿಗಳೇ ಇಲ್ಲ. ಹಿಂದೆ ಕೂಡಾ ನನ್ನ ಎದುರು ಸ್ಪರ್ಧೆ ಮಾಡಿ ಸೋತಿದ್ದಾರೆ. ಈಗಲೂ ನನ್ನ ವಿರುದ್ಧ ಸ್ಪರ್ಧೆ ಮಾಡಿ ಸೋಲಬೇಕು ಅಷ್ಟೇ ಎಂದು 90ರ ಗಡಿ ದಾಟಿದ 2023ರ ಚುನಾವಣಾ ಅಖಾಡದಕ್ಕೆ ಇಳಿದಿರುವ ಹಿರಿಯ ಅಭ್ಯರ್ಥಿ ಶಾಸಕ ಶಾಮನೂರು ಶಿವಕಂರಪ್ಪ ಹೇಳಿದ್ದಾರೆ.

Karnataka Assembly Election 2023: ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ, ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಶಾಮನೂರು ಶಿವಶಂಕರಪ್ಪ
ಶಾಸಕ ಶಾಮನೂರು ಶಿವಶಂಕರಪ್ಪ
Follow us on

ದಾವಣಾಗೆರೆ: ಕಾಂಗ್ರೆಸ್​ (Congress) ಪಕ್ಷದ ಹಿರಿಯ ನಾಯಕ ಶಾಮನೂರು ಶಿವಕಂರಪ್ಪ (Shamanur Shivashankarappa) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ (Davangere South Assembly Constituency) ಸತತ ಮೂರು ಬಾರಿಗೆ ಗೆಲ್ಲುವ ಮೂಲಕ ಹ್ಯಾಟ್ರಿಕ್​ ಬಾರಿಸಿದ್ದರು. ಅಲ್ಲದೆ ನಿರೀಕ್ಷೆಯಂತೆ ಕಾಂಗ್ರೆಸ್​ ಈ ಬಾರಿಯೂ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್​ ನೀಡಿದೆ. ಈ ಮೂಲಕ ಸತತ 6ನೇ ಸಲ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್​ ಟಿಕೆಟ್​ ನೀಡಲು ಕಾರಣವೂ ಇದೆ. 90ರ ಗಡಿ ದಾಟಿದ, ಶಾಸಕ ಶಾಮನೂರು ಶಿವಕಂರಪ್ಪ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದು ಪ್ರಬಲ ಲಿಂಗಾಯತ ಸಮುದಾಯ ಮುಖಂಡರಾಗಿದ್ದಾರೆ.

ಇಂದು (ಏ.03) ರಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ದಾವಣಗೆರೆ ನಗರದ ಅನೆಕೊಂಡದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಶಾಮನೂರು ಶಿವಶಂಕರಪ್ಪ 1994, 2004, 2008, 2013 ಹಾಗೂ 2018 ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಇವರು ಜಿಲ್ಲೆಯ ದಕ್ಷಿಣ ಭಾಗದಿಂದ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಪ್ರತಿನಿಧಿಸುತ್ತಿದ್ದಾರೆ.

2008ರಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ವೇಳೆ ಬೆಣ್ಣೆ ನಗರಿ ದಾವಣೆಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರವಾಗಿ ಮಾಡಲಾಯಿತು. ಅದಾದ ಬಳಿಕ 2008ರಲ್ಲಿ ಬಿಜೆಪಿಯ ಯಶವಂತ ರಾವ್ ಜಾಧವ್ ವಿರುದ್ಧ ಗೆಲ್ಲುವ ಮೂಲಕ ದಾವಣಗೆರೆ ದಕ್ಷಿಣದಲ್ಲಿ ಹ್ಯಾಟ್ರಿಕ್ ಭಾರಿಸಿದರು. ಈ ಬಾರಿ ಸ್ಪರ್ಧಿಸುವ ಮೂಲಕ 6ನೇ ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಮತಕ್ಕಾಗಿ ಮಕ್ಕಳ ಮೂಲಕ ಹಣ-ಹೆಂಡ ಹಂಚಿಕೆ

1997ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1999ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲುಂಡರು. ಲೋಕಸಭೆ ಚುನಾವಣೆಯಲ್ಲಿ ಒಂದು ಸಲ ಸೋಲು ಬಿಟ್ಟರೇ, ಶಾಮನೂರ ಶಿವಶಂಕರಪ್ಪ ಅವರು ಸೋಲಿಲ್ಲದ ಸರದಾರ. ಮೂರು ದಶಕಗಳ ಕಾಲ ಕೆಪಿಸಿಸಿ ಖಜಾಂಚಿ ಆಗಿ ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ ಸಿದ್ಧರಾಮಯ್ಯ ಸರ್ಕಾರದಲ್ಲಿ ತೋಟಗಾರಿಕಾ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಶಾಮನೂರ ಶಿವಶಂಕಪ್ಪ ಅಖಿಲ ಭಾರತ ವೀರಶೈವ ಮಹಾಸಭೆಯ ಹಾಲಿ ಅಂತರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ದಾವಣಗೆರೆ ಅಪ್ಪಾ-ಮಗಾ ಅಖಾಡಕ್ಕೆ

ಮಗ ಎಸ್​ಎಸ್ ಮಲ್ಲಿಕಾರ್ಜುನ, ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ದಕ್ಷಿಣದಿಂದ ಅಪ್ಪ ಸ್ಪರ್ಧಿಸಿದರೇ ಮಗ ಉತ್ತರದಿಂದ. ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ನನಗೆ ಯಾರು ಪ್ರತಿ ಸ್ಪರ್ಧಿಯೇ ಇಲ್ಲ. ಈ ಚುನಾವಣೆಯಲ್ಲಿ ನನಗೆ ಯಾರು ಪ್ರತಿ ಸ್ಪರ್ಧಿಗಳೇ ಇಲ್ಲ. ಹಿಂದೆ ಕೂಡಾ ನನ್ನ ಎದುರು ಸ್ಪರ್ಧೆ ಮಾಡಿ ಸೋತಿದ್ದಾರೆ. ಈಗಲೂ ನನ್ನ ವಿರುದ್ಧ ಸ್ಪರ್ಧೆ ಮಾಡಿ ಸೋಲಬೇಕು ಅಷ್ಟೇ ಎಂದರು.
ಅಲ್ಪಸಂಖ್ಯಾತರು ನಮ್ಮ ಜೊತೆ ಇದ್ದಾರೆ. ನೀವು (ಮಾಧ್ಯಮದವರು) ಕಿತಾಪತಿ ಮಾಡಬೇಡಿ. ಇಲ್ಲಿ ಸೇರಿರುವ ಜನ ನೋಡಿದರೆ ಸಾಕು. ನನ್ನ ಗೆಲುವು ನಿಶ್ಚಿತ. ಈ ಸಲ ಲಿಂಗಾಯತರು ಸೇರಿದಂತೆ ಎಲ್ಲ ಜನಾಂಗದವರು ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.

ಸೀರೆ ಕೊಟ್ಟು ಸುದ್ದಿಯಾಗಿದ್ದ ಶಾಮನೂರು

ಮತದಾರರನ್ನು ಸೆಳೆಯಲು ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಸೀರೆಗಳಿಗೆ ಬೆಂಕಿ ಇಟ್ಟು ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ನಿಮ್ಮ 60 ರೂಪಾಯಿ ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ ಎಂದು ರಸ್ತೆಯಲ್ಲಿ ಸೀರೆಗಳಿಗೆ ಬೆಂಕಿ ಇಟ್ಟು ಮಹಿಳೆಯರು ಆಕ್ರೋಶ ಹೊರ ಹಾಕಿದ್ದರು. ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ ಭಾವಚಿತ್ರ ವಿರುವ ಬ್ಯಾಗ್ ನಲ್ಲಿ ಸೀರೆಗಳನ್ನು ಹಂಚಲಾಗಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Mon, 3 April 23