ಸಂವಿಧಾನದ ಅನುಗುಣವಾಗಿ SC-ST ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ: ಸುರ್ಜೆವಾಲಗೆ ಬೊಮ್ಮಾಯಿ ತಿರುಗೇಟು
ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಿ ಸಮುದಾಯದ ಮೀಸಲಾತಿ(SC, ST Reservation) ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ(Ranadeep singh surjewala) ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ನಾವೂ ಕೊಟ್ಟಿರುವ ಮೀಸಲಾತಿ ಕಾನೂನು ಬಾಹಿರ, ಸಂವಿಧಾನ ವಿರೋಧಿ ಎಂದು ಕಾಂಗ್ರೆಸ್ ವಕ್ತಾರರು ಮತ್ತು ಸುರ್ಜೆವಾಲ ಟ್ವೀಟ್ ಮಾಡಿ ಕೆಲ ಕೆಳಮಟ್ಟದ ಶಬ್ದಗಳನ್ನ ಬಳಸಿದ್ದಾರೆ. ಕಾಂಗ್ರೆಸ್ ಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ. ಅಂಬೇಡ್ಕರ್ ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜನಸಂಖ್ಯೆ ಆಧಾರಿತವಾಗಿ ಕೊಡಬೇಕು ಎಂದು ಸಂವಿಧಾನವಿದಲ್ಲಿದೆ. ನಾವೂ ಅದರ ಅನುಗುಣವಾಗಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇವೆ. ಶೆಡ್ಯೂಲ್ 9 ಗೆ ಸೇರಿಸಲು ಶಿಫಾರಸ್ಸು ಮಾಡಿದ್ದೇವೆ. ಅವರ ಕಾಲದಲ್ಲಿ ಮಾಡಿಲ್ಲ, ಅವರನ್ನ ಬರೀ ವೋಟ್ ಬ್ಯಾಂಕ್ ಗಾಗಿ ಬಳಸಿಕೊಂಡಿದ್ದರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಾವು ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅಲ್ಲದೇ 9ನೇ ಶೆಡ್ಯೂಲ್ನಲ್ಲಿ ಸೇರಿಸಲು ಶಿಫಾರಸು ಸಹ ಮಾಡಿದ್ದೇವೆ. ಈ ಮೂಲಕ ಆ ಸಮುದಾಯಗಳ ಬೇಡಿಕೆ ಈಡೇರಿಸಿದ್ದೇವೆ. ನಾವು ಸಾಮಾಜಿಕ ನ್ಯಾಯ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ದಲಿತ, ಲಿಂಗಾಯುತ, ಒಕ್ಕಲಿಗರ ವಿರೋಧಿಯಾಗಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ಘೋಷಿಸಿರುವ ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ಗೆ ಮೀಸಲಾತಿ ಹಿಂಪಡೆಯುವ ಶಕ್ತಿ, ಅವಕಾಶನೂ ಇಲ್ಲ. ಮೀಸಲಾತಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ಸಿಗರು ತಳಮಳಗೊಂಡಿದ್ದಾರೆ ಟಾಂಗ್ ಕೊಟ್ಟರು.
Long pending constitutional rights to SC & ST have been given by the @BJP4Karnataka government. Congress has used the SC & ST community as a vote bank and never given justice. 1/2 https://t.co/pUjhIFGW5P pic.twitter.com/HhXdb6T2U2
— Basavaraj S Bommai (@BSBommai) April 2, 2023
ನಾಗಮೋಹನ್ ದಾಸ್ ವರದಿ ಬಂದು 4 ವರ್ಷ ಆಯ್ತು ಎಂದು ಸುಳ್ಳು ಹೇಳುತ್ತಿದ್ದಾರೆ. ಯಡಿಯೂರಪ್ಪನವರ ಅವಧಿಯಲ್ಲಿ ರೀಪೋರ್ಟ್ ಬಂದ ಕೂಡಲೇ 6 ತಿಂಗಳಿಗೆ ಸಚಿವ ಸಂಪುಟ ಸಭೆ ನಡೆಸಿದ್ದರು. ಕ್ಯಾಬಿನೇಟ್ ನಲ್ಲಿ ಅವರ ಪರ ನಿರ್ಣಯ ಮಾಡಿದ್ದೆವು. ಅವರ ಪರ ಆ್ಯಕ್ಟ ಮಾಡಿ ನಮ್ಮ ಸರ್ಕಾರ ಆದೇಶ ತಂದು ಶೆಡ್ಯೂಲ್ 9ಗೆ ಸೇರಿಸಿದ್ದೇವೆ. ನಾವೂ ಸಾಮಾಜಿಕ ನ್ಯಾಯ ಕೊಡುವುದನ್ನು ಟೀಕೆ ಮಾಡುತ್ತಿದೆ. ಕಾಂಗ್ರೆಸ್ ದಲಿತ, ಹಿಂದುಳಿದ ವರ್ಗದ, ಲಿಂಗಾಯುತ, ಒಕ್ಕಲಿಗರ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಬಂಜಾರ ಸಮುದಾಯ ವನ್ನು ನಾವು ಕರೆದು ಮಾತನಾಡಿದ್ದೇವೆ. ಬಂಜಾರ, ಭೋವಿ, ಕೊರಮ, ಕೊರಚ, ಈ ನಾಲ್ಕನ್ನು ಎಸ್ಸಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ. ಅವರಿಗೆ ಮೀಸಲಾತಿ ಪ್ರಮಾಣ ಕೂಡ ಹೆಚ್ಚಾಗಿದೆ. ಇದರ ಬಗ್ಗೆ ಬೇರೆ ಬೇರೆಯವರು ಅಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನೇತಾರರು ಎಲ್ಲೆಲ್ಲಿ ಸ್ಪರ್ಧೆ ಮಾಡುತ್ತಾರೆ ಅಲ್ಲಿ ಇದನ್ನು ರಾಜಕೀಯ ವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಆದರೆ ಇದನ್ನು ನಾವು ರಾಜಕೀಯ ವಾಗಿ ಫೈಟ್ ಮಾಡಲು ಸಿದ್ದರಿದ್ದೇವೆ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದ್ರೋಹ. ಬೊಮ್ಮಾಯಿ ಸರ್ಕಾರವು 90 ದಿನಗಳಲ್ಲಿ 3 ಬಾರಿ ಮೀಸಲಾತಿಯನ್ನು ಬದಲಾಯಿಸುವ ಮೂಲಕ ಸಂವಿಧಾನವನ್ನು ಅಣಕಿಸುತ್ತಿದೆ ಎಂದು ಸುರ್ಜೆವಾಲ ಟ್ವೀಟ್ ಮಾಡಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:24 am, Mon, 3 April 23