ಹಿಂದೆ ಕೆಲವರು ನನ್ನನ್ನು ಫುಟ್‌ಬಾಲ್‌ನಂತೆ ಬಳಸಿಕೊಂಡರು ಎಂದು ಹಳೆ ದಿನಗಳನ್ನು ಮೆಲಕು ಹಾಕಿದ ಜನಾರ್ದನ ರೆಡ್ಡಿ

ರಾಜ್ಯದ ಜನರೇ ಅವರನ್ನು ಪುಟ್ ಬಾಲ್ ಆಡಿ. ನನ್ನ ಪುಟ್ ಬಾಲ್ ಚಿಹ್ನೆಗೆ ಮತ ಹಾಕಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮವರೇ ಅಂತಲ್ಲ ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ, ನಾನು ಒಂದು ಕಡೆ ಆದರೆ, ಎಲ್ಲರೂ ಒಂದು ಕಡೆ ಆಗಿ ಪುಟ್ವಾಲ್ ತರಹ ಆಡಿದರು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಹಿಂದೆ ಕೆಲವರು ನನ್ನನ್ನು ಫುಟ್‌ಬಾಲ್‌ನಂತೆ ಬಳಸಿಕೊಂಡರು ಎಂದು ಹಳೆ ದಿನಗಳನ್ನು ಮೆಲಕು ಹಾಕಿದ ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
Follow us
ವಿವೇಕ ಬಿರಾದಾರ
|

Updated on:Apr 03, 2023 | 1:18 PM

ಬಾಗಲಕೋಟೆ: ಹಿಂದೆ ಕೆಲವರು ನನ್ನನ್ನು ಫುಟ್‌ಬಾಲ್‌​ನಂತೆ ಬಳಸಿಕೊಂಡರು. ನನ್ನವರು ಅಂತ ನಂಬಿ ನೇರ ನಡೆನುಡಿ ರಾಜಕಾರಣ ಮಾಡಿದ್ದೇನೆ. ಅದನ್ನೇ ಕೆಲವರು ದುರುಪಯೋಗ ಮಾಡಿಕೊಂಡರು ಎಂದು ಕೆಆರ್​ಪಿಪಿ ಪಕ್ಷದ ಸ್ಥಾಪಕ, ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ (Janardhan Reddy) ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸಮಸ್ಯೆಯಲ್ಲಿ ಸಿಲುಕಿಸಲು ಕೆಲ ನಾಯಕರು ಯತ್ನಿಸುತ್ತಿದ್ದಾರೆ. ನನ್ನನ್ನು ಸಮಸ್ಯೆಗೆ ಸಿಲುಕಿಸಲು ಬರುವವರಿಗೆ ಜನ ಪಾಠ ಕಲಿಸುತ್ತಾರೆ. ಫುಟ್ಬಾಲ್​ ಮಾದರಿಯಲ್ಲಿ ಆಡಿ ಮತದಾರರು ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಇಂದು (ಏ.3) ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಹೆರಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಭೇಟಿ ಹೇಮರೆಡ್ಡಿ ಮಲ್ಲಮ್ಮನ ದರ್ಶನ ಪಡೆದು ಬಳಿಕ ಮಾತನಾಡಿದ ಅವರು ರಾಜ್ಯದ ಜನರೇ ಅವರನ್ನು ಪುಟ್ ಬಾಲ್ ಆಡಿ. ನನ್ನ ಪುಟ್ ಬಾಲ್ ಚಿಹ್ನೆಗೆ ಮತ ಹಾಕಬೇಕು ಅಂತ ಕೇಳಿಕೊಳ್ಳುತ್ತೇನೆ. ನಮ್ಮವರೇ ಅಂತಲ್ಲ ಎಲ್ಲರೂ ಸೇರಿ ಇಡೀ ರಾಜ್ಯದಲ್ಲಿ, ನಾನು ಒಂದು ಕಡೆ ಆದರೆ, ಎಲ್ಲರೂ ಒಂದು ಕಡೆ ಆಗಿ ಪುಟ್ವಾಲ್ ತರಹ ಆಡಿದರು ಎಂದರು.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಪಟ್ಟಿ, ವಿಜಯೇಂದ್ರ ಸ್ಪರ್ಧಿಸುವ ಕ್ಷೇತ್ರದ ಗೊಂದಲಗಳಿಗೆ ತೆರೆ ಎಳೆದ ಯಡಿಯೂರಪ್ಪ

ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಮ್ಮ KRPP ಅನಿವಾರ್ಯ

ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಕೆಆರ್​ಪಿಪಿ ಅನಿವಾರ್ಯ. ಈ ಮಾತನ್ನು ಬಹಿರಂಗವಾಗಿಯೇ ಹೇಳಿದ್ದೇನೆ. ನನ್ನ ಬಿಟ್ಟು ಸರ್ಕಾರ ಮಾಡುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಖಂಡಿತವಾಗಿಯೂ ನಾನು ಇತರೆ ಪಕ್ಷಗಳಿಗೆ ಅನಿವಾರ್ಯ ಆಗುತ್ತೇನೆ. ರಾಜ್ಯದಲ್ಲಿ 50 ಕ್ಷೇತ್ರದಲ್ಲಿ ಕೆಆರ್​ಪಿಪಿ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ 30-35 ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ಈಗಾಗಲೇ 20 ಕ್ಷೇತ್ರದಲ್ಲಿ ಓಡಾಡಿದ್ದೇನೆ. ಇನ್ನು 30 ಕ್ಷೇತ್ರದಲ್ಲಿ 10 ದಿನಗಳಲ್ಲಿ ಸಂಚರಿಸಿ ಪೂರ್ತಿ ಮಾಡುತ್ತೇನೆ. ಸರ್ವೆ ಕೂಡ ಒಂದು ಕಡೆ ನಡೆಯುತ್ತಿದೆ ಎಂದರು.

ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯಲ್ಲಿ ಸಭೆಗಳನ್ನು ಮಾಡಿದ ಮೇಲೆ ನಿರ್ಣಯ ಮಾಡುತ್ತೇನೆ. ಸಾರ್ವಜನಿಕ ಸಭೆ, ಅಲ್ಲಿ ಗೆಲ್ಲುವ ಗ್ಯಾರಂಟಿ ವಾತಾವರಣ ನೋಡಿ, ಅಭ್ಯರ್ಥಿ ಹಾಕುತ್ತೇನೆ‌. ಉಳಿದಂತೆ ರಾಜ್ಯಾದ್ಯಂತ 14 ಕ್ಷೇತ್ರದಲ್ಲಿ ಈಗ ಅಭ್ಯರ್ಥಿ ಘೋಷಣೆ ಆಗಿದೆ ಎಂದು ತಿಳಿಸಿದರು.

ಬಸವಣ್ಣನ ಐಕ್ಯಮಂಟಪ, ಸಂಗಮನಾಥನ ದರ್ಶನ ಪೂಜೆ ಪ್ರಾರ್ಥನೆ ವಿಚಾರವಾಗಿ ಮಾತನಾಡಿ ನಾವು ಕಾಶಿ ಜಗದ್ಗುರುಗಳಿಂದ ಲಿಂಗಧೀಕ್ಷೆ ತೆಗೆದುಕೊಂಡಿದ್ದೇವೆ. ನಿತ್ಯ ಬಸವಣ್ಣನವರ ವಚನಗಳಾಗಲಿ ಪೂಜೆ ಆಗಲಿ ಮಾಡುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ಇರಬೇಕು ಅಂದರೆ ಅದೇ ಕಾರಣ. ಕೂಡಲಸಂಗಮಕ್ಕೆ ಚುನಾವಣೆ ಸಂದರ್ಭದಲ್ಲಿ ಬಂದಿದ್ದಕ್ಕೆ ತಮಗೆ ಗೊತ್ತಾಗಿರಬಹುದು. ಆದರೆ ಉಳಿದ ಸಮಯದಲ್ಲೂ 3-4 ತಿಂಗಳಿಗೊಮ್ಮೆ ಕೂಡಲಸಂಗಮಕ್ಕೆ ಬಂದು ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ನಿನ್ನೆ (ಏ.2) ಹಾಸನ ಜಿಲ್ಲೆ ಶ್ರವಣಬೆಳಗೋಳ, ದಾವಣಗೆರೆಯ ಮಾಯಿಕೊಂಡಕ್ಕೆ ಹೋಗಿದ್ದೆ. ಅಲ್ಲಿ ಪ್ರಚಾರ ಮಾಡಿಕೊಂಡು ಕೂಡಲಸಂಗಮಕ್ಕೆ ಬಂದಿದ್ದೇನೆ. ನಾಳೆ (ಏ.04) ಬೆಳಿಗ್ಗೆ ಕೂಡಲಸಂಗಮನಾಥನ ದರ್ಶನ ಮಾಡಿಕೊಂಡು, ಜಮಖಂಡಿ, ಕುಡಚಿ, ಅಥಣಿಗೆ ಪ್ರಚಾರಕ್ಕೆ ಹೋಗುತ್ತೇನೆ. ಬಾಗಲಕೋಟೆ ಜಿಲ್ಲೆಯಲ್ಲೂ ತುಂಬಾ ಚೆನ್ನಾಗಿ ಕೆಲಸ ನಡೆಯುತ್ತಿದೆ. ಇದೇ ಒಂಭತ್ತನೇ ತಾರೀಖು ಬೀಳಗಿ ಕ್ಷೇತ್ರದ ಕಲಾದಗಿಗೆ ಬರುತ್ತಿದ್ದೇನೆ. ಎಲ್ಲ ಕಡೆ ಕೆಲಸ ನಡೆಯುತ್ತಿದೆ. ನಾನು ಪಕ್ಷ ಘೋಷಣೆ ಮಾಡಿದ ಮೇಲೆ. ಎಲ್ಲರೂ ಬಿಜೆಪಿಗೆ ಎಫೆಕ್ಟ್ ಆಗಬಹುದು ಅಂತಾ ಮಾತನಾಡಿದರು. ಆ ಮೇಲೆ ಕಾಂಗ್ರೆಸ್ಸಿಗರು ಕಾಂಗ್ರೆಸ್ ವೋಟ್​ಗಳಿಗೆ ಹೊಡೆತ ಬೀಳುತ್ತವೆ ಅಂದರು. ಮುಸ್ಲಿಂ, ದಲಿತ ವೋಟ್​​ಗಳು ರೆಡ್ಡಿಯವರಿಗೆ ಆಕರ್ಷಣೆ ಆಗುತ್ತಿವೆ ಅಂದರು. ಜನಾರ್ದನ ರೆಡ್ಡಿ ಜಾತಿ, ಮತ ಮೀರಿ ರಾಜಕೀಯ ಮಾಡುತ್ತಿರೋದು ಎಂದು ಮಾತನಾಡಿದರು.

“ಮಾಜಿ ಸಚಿವ ಜನಾರ್ದಾನ ರೆಡ್ಡಿ ಕಲ್ಯಾಣ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳ ಕಣ್ಣಿಟ್ಟುದ್ದು, ಶತಾಯಗತಾಯ ಆ ಭಾಗದಲ್ಲಿ ವಿಜಯಪತಾಕೆ ಹಾರಿಸಲು ಸಜ್ಜಾಗಿದ್ದಾರೆ.” ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಪ್ರವಾಸ ಮಾಡುತ್ತಿದ್ದಾರೆ. ಇನ್ನು ರೆಡ್ಡಿ ಪಕ್ಷ ಮೂರು ಪ್ರಮುಖ ಪಕ್ಷಗಳಿಗೆ ಮಗ್ಗಲು ಮುಳ್ಳಾಗುವ ಸಾಧ್ಯತೆ ಇದ್ದು, ಅಧಿಕಾರದ ಗದ್ದುಗೆ ಹಿಡಿಯಲು ಜನಾರ್ದನನ ಮೊರೆ ಹೋಗಬೇಕಾಗಬಹುದು.”

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Mon, 3 April 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ