ನಾನು ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ನಾನು ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಸೋಮವಾರ ರಾತ್ರಿ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೆಂಗಳೂರು: ನಾನು ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಸೋಮವಾರ ರಾತ್ರಿ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ದೆಹಲಿಗೆ ಹೋಗಬೇಕಿತ್ತು. ಆದರೆ ಆರೋಗ್ಯ ಸರಿಯಿಲ್ಲ, ಹೀಗಾಗಿ ದೆಹಲಿಗೆ ಹೋಗಿಲ್ಲ. ನನ್ನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ನಾಳೆ ಶಿಮ್ಲಾದಿಂದ ದೆಹಲಿಗೆ ಸೋನಿಯಾ ಗಾಂಧಿ ಅವರು ವಾಪಸಾಗುತ್ತಾರೆ. ನಾನು ಸಹ ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಸೋನಿಯಾ ಗಾಂಧಿರವರು ಬರಲಿ ಅಂತಾ ನಾನು ಕಾಯುತ್ತಿದ್ದೆ ಎಂದು ಹೇಳಿದರು.
ಯಾರಿಗೆ ಶಾಸಕರ ಬೆಂಬಲ ಇದೆಯೆಂಬುದು ಮುಖ್ಯವಲ್ಲ. ನನ್ನ ಅಧ್ಯಕ್ಷತೆಯಲ್ಲಿ 135 ಶಾಸಕರು ಆಯ್ಕೆಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದೇವೆ. ನನ್ನ ಜೊತೆ ಯಾವ ಶಾಸಕರು ಇಲ್ಲ, ನನಗೆ ಯಾರ ಬೆಂಬಲ ಬೇಡ. ಯಾರು ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು.
ಇದನ್ನೂ ಓದಿ: ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದೀರಿ. ನನ್ನನ್ನು ಚಪ್ಪಡಿ ಬೇಕಾದರೂ ಮಾಡಿಕೊಳ್ಳಿ, ದಿಂಡು ಮಾಡಿಕೊಳ್ಳಿ. ಜಲ್ಲಿ ಬೇಕಾದರೂ ಮಾಡಿಕೊಳ್ಳಿ. ಸದ್ಯ ಆರೋಗ್ಯ ಸಮಸ್ಯೆಯಾಗಿದೆ, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದರು.
ಹೆಲ್ತ್ ಚೆಕಪ್ ಬಳಿಕ ವೈದ್ಯ ಡಾ. ಶಂಕರ್ ಗುಹಾ ಹೇಳಿದಿಷ್ಟು
ಸದಾಶಿವನಗರದ ನಿವಾಸದಲ್ಲಿ ಡಿಕೆ ಶಿವಕುಮಾರ್ ಹೆಲ್ತ್ ಚೆಕಪ್ ಬಳಿಕ ವೈದ್ಯ ಡಾ. ಶಂಕರ್ ಗುಹಾ ಹೇಳಿಕೆ ನೀಡಿದ್ದು, ಬಿಪಿ ಚೆಕ್ ಮಾಡಲಾಗಿದೆ, ಬೇಸಿಕ್ ಮೆಡಿಸನ್ ನೀಡಲಾಗಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ಸತತವಾಗಿ ಓಡಾಡಿದ್ದಾರೆ. ಮೂರು ಗಂಟೆ ವಿಶ್ರಾಂತಿ ಪಡೆದುಕೊಳ್ಳಲು ಸಲಹೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಪ್ರಯಾಣ ಬೇಡವೆಂದು ಸಲಹೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಒಕ್ಕಲಿಗ, ಕುರುಬ, ದಲಿತರ ಬೇಡಿಕೆ ಆಯ್ತು; ಲಿಂಗಾಯತ ಸ್ವಾಮೀಜಿಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ
ಹೊಟ್ಟೆಯಲ್ಲಿ ಸೋಂಕಿನಿಂದ ಲೂಸ್ ಮೋಷನ್ ರೀತಿ ಆಗಿದೆ. ಪ್ರಯಾಣ ಎಷ್ಟು ಮುಖ್ಯವೋ ಆರೋಗ್ಯ ಸಹ ಅಷ್ಟೇ ಮುಖ್ಯ. ನಾಳೆ ಮುಂಜಾನೆ ಸಹ ಬಂದು ತಪಾಸಣೆ ಮಾಡಲಾಗುತ್ತದೆ.
ಕಗ್ಗಂಟಾದ ಸಿಎಂ ಆಯ್ಕೆ
ರಾಜ್ಯ ವಿಧಾನಸಭೆ ಫಲಿತಾಂಶ ಬಂದು ಎರಡು ದಿನವಾದ್ರೂ ಮುಖ್ಯಮಂತ್ರಿ ಆಯ್ಕೆ ಮಾತ್ರ ಕಗ್ಗಂಟಾಗೇ ಉಳಿದಿದೆ. ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲೇ ಸುದೀರ್ಘ ಸಭೆ ನಡೆಸಿದ್ದ ಎಐಸಿಸಿ ವೀಕ್ಷಕರು ಕಾಂಗ್ರೆಸ್‌ನ 135 ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು. ಅಷ್ಟೇ ಅಲ್ಲದೇ ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಕೆಲ ಶಾಸಕರೊಂದಿಗೆ ದೆಹಲಿಗೆ ಹಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ