ಪೇಟೆಯಂ, ಗೂಗಲ್ ಪೇ, ಯುಪಿಐ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು: ಚುನಾವಣಾ ಅಕ್ರಮ ತಡೆಗಟ್ಟಲು ಕ್ರಮ

|

Updated on: May 05, 2023 | 7:08 AM

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಎಲೆಕ್ಷನ್ ಟೈಮ್​ನಲ್ಲಿ ಅಭ್ಯರ್ಥಿಗಳು, ಜನರಿಗೆ ಹಣ ಸೇರಿದಂತೆ ಯಾವುದೇ ರೀತಿಯಲ್ಲಾದರೂ ಲಂಚ ನೀಡಿ ಮತಗಳನ್ನು ಸೆಳೆಯಲು ಯತ್ನಿಸುವುದು ಸಾಮಾನ್ಯ. ಅದರಲ್ಲೂ ಅತ್ಯಾಧುನಿಕ ತಂತ್ರಜ್ಞಾನಗಳಾದ ಪೋನ್ ಪೇ ಗೂಗಲ್ ಪೇ, ಯುಪಿಐ ಮೂಲಕ ಹಣ ರವಾನೆ ಮಾಡೋದು ಸುಲಭ. ಜೊತೆಗೆ ಇದು ಯಾರ ಗಮನಕ್ಕೂ ಬರೋದಿಲ್ಲ ಅಂದ್ಕೊಂಡಿದ್ರೆ ಹುಷಾರ್, ಚುನಾವಣಾ ಆಯೋಗ ಆ್ಯಪ್‌ಗಳ ಮೂಲಕ ನಡೆಯುವ ಹಣ ವರ್ಗಾವಣೆ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಪೇಟೆಯಂ, ಗೂಗಲ್ ಪೇ, ಯುಪಿಐ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು: ಚುನಾವಣಾ ಅಕ್ರಮ ತಡೆಗಟ್ಟಲು ಕ್ರಮ
ಚುನಾವಣಾ ಆಯೋಗ
Follow us on

ಬೆಂಗಳೂರು: ರಾಜ್ಯದಲ್ಲಿ ಮತದಾನಕ್ಕೆ ಕೌಂಟ್ ಡೌನ್ ಶುರುವಾಗಿದೆ. ಅಭ್ಯರ್ಥಿಗಳು ಸೈಲೆಂಟ್ ಆಗಿ ಜನರಿಗೆ ಹಣ ಹಂಚಿ, ಓಟ್(Vote) ಪಕ್ಕಾ ಮಾಡಿಕೊಳ್ಳಲು ಇದು ರೈಟ್ ಟೈಮ್ ಎಂದುಕೊಂಡರೆ. ಚುನಾವಣಾ ಆಯೋಗ(Election Commission) ಇದರ ಮೇಲೂ ಕಣ್ಣಿಟ್ಟಿದೆ. ಚುನಾವಣೆ ವೇಳೆ ಮತದಾರರಿಗೆ ಆನ್‌ಲೈನ್ ಮೂಲಕ ಹಣ ರವಾನೆ ಮಾಡಿ ಅವರ ಮತಗಳನ್ನು ಸೆಳೆಯುವ ರಾಜಕಾರಣಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಯಾವುದೇ ರೀತಿಯ ಯುಪಿಐ ಆಪ್‌ಗಳ ಮೂಲಕ ರವಾನೆಯಾಗುವ ಹಣಕಾಸು ವಹಿವಾಟಿನ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಿದೆ.

ಮತದಾರರಿಗೆ ಯಾವುದೇ ಸ್ವರೂಪದಲ್ಲಿ ಆಮಿಷ ಒಡ್ಡಿ ಮತಗಳನ್ನು ಸೆಳೆಯಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಇಷ್ಟಾದರೂ ಕೂಡ ಕೆಲವು ರಾಜಕಾರಣಿಗಳು ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಹಣ ರವಾನೆ ಮಾಡುತ್ತಿದ್ದಾರೆ. ಅದರಲ್ಲೂ ತಾಂತ್ರಿಕವಾಗಿ ಸಾಕಷ್ಟು ಜ್ಞಾನ ಸಂಪಾದಿಸಿರುವ ಬೆಂಗಳೂರು ಜನೆತೆಗೆ ವಿನೂತನ ತಂತ್ರಜ್ಞಾನದ ಮೂಲಕ ಹಣ ರವಾನಿಸುವುದು ಕಷ್ಟವೇನಲ್ಲ. ಹೀಗಾಗಿ, ಚುನಾವಣಾ ಆಯೋಗ ಇದಕ್ಕಾಗಿ ಪ್ರತ್ಯೇಕ ತಂಡವನ್ನೇ ರಚನೆ ಮಾಡಿ ನಿಗಾ ವಹಿಸಿದೆ.

ಇದನ್ನೂ ಓದಿ:Karnataka Assembly Election Live: ರಾಜ್ಯದಲ್ಲಿ ಕೈ-ಕಮಲ ನಾಯಕರ ಅಬ್ಬರದ ಚುನಾವಣಾ ಪ್ರಚಾರ, ಈ ಕುರಿತಾದ ಲೇಟೆಸ್ಟ್​​ ಅಪ್ಡೇಟ್ಸ್​​

ಅಷ್ಟೇ ಅಲ್ಲದೇ ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಪೇನ್ ಪೇ , ಗೂಗಲ್ ಪೇ ಹಾಗೂ ಪೆಟಿಎಂ ಸಂಸ್ಥೆಗಳ ಜೊತೆ ಸಭೆ ಮಾಡಿ ಚರ್ಚಿಸಿ ಪ್ರತಿ ದಿನದ ವಹಿವಾಟು, ಯಾವುದೇ ವ್ಯಕ್ತಿಯಿಂದ ನಿರ್ದಿಷ್ಟ ಮೊತ್ತದ ಹಣ ಹೆಚ್ಚಿನ ಸಂಖ್ಯೆಯ ಜನರಿಗೆ ರವಾನೆ ಮಾಡುತ್ತಿದ್ರೆ, ಅಂಥವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲು ಮುಂದಾಗಿದ್ದು. ಪ್ರತಿದಿನದ ಯುಪಿಐ ಡಿಜಿಟಲ್ ಹಣದ ವಹಿವಾಟಿನ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ. ಇನ್ನು ಚುನಾವಣಾ ಸಮಿಪಿಸುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಸುರಕ್ಷಿತ ಕ್ರಮಗಳ ಬಗ್ಗೆ ಹಾಗೂ ಅಕ್ರಮ ಚಟುವಟಿಕೆ ಮೇಲೆ ಕಡಿವಾಣ ಹಾಕಲು ಪೂರ್ವ ಸಿದ್ಧತೆಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಮತದಾರರನ್ನು ಓಲೈಕೆ ಮಾಡಲು ಪೋನ್ ಪೇ ಗೂಗಲ್ ಪೇ ಯುಪಿಐ ತಂತ್ರಜ್ಞಾನದ ನೆರವಿನೊಂದಿಗೆ ಆದಷ್ಟು ಬೇಗ ಬಹುತೇಕ ಜನರಿಗೆ ಹಣ ಕಳಸಬಹುದು, ಯಾರಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ ಎಂಬ ಭ್ರಮೆ ಇದ್ದರೆ ಬಿಟ್ಟು ಬಿಡಿ, ಆಯೋಗ ಪ್ರತಿಯೊಂದು ಡಿಜಿಟಲ್ ವಹಿವಾಟಿನ ಮೇಲೂ ಹದ್ದೀನ ಕಣ್ಣಿಟ್ಟಿದ್ದು, ಅನುಮಾನ ಬಂದ್ ಅಕೌಂಟ್ ಗಳ ಮೇಲೆ ತನಿಖೆ ನಡೆಸಲು ಕೂಡ ಪ್ಲಾನ್ ಮಾಡಿಕೊಂಡಿದೆ. ಅದೇ ಏನೇ ಇರಲಿ ಜನರು ಯಾವುದೇ ಅಮೀಷಕ್ಕೆ ಬಲಿಯಾಗದೆ ಮತದಾನ ಮಾಡಿ ಪ್ರಜಾಪ್ರಭುತ್ವದ ಗೆಲುವಿಗೆ ಕಾರಣವಾಗಬೇಕು ಎನ್ನುವುದೇ ನಮ್ಮ ಕಳಕಳಿ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ