ಮತದಾನ ದಿನ ಮತಗಟ್ಟೆಗೆ ಕರೆದುಕೊಂಡು ಹೋಗಲು ಮನೆಗೆ ಬರುತ್ತೆ ಕ್ಯಾಬ್​​: ನೋಂದಣಿ ಕಡ್ಡಾಯ, ಪ್ರಕ್ರಿಯೆ ಇಲ್ಲಿದೆ

ರಾಜ್ಯಾದ್ಯಂತ ಮತದಾನದ ಪ್ರಮಾಣ ಏರಿಕೆಗಾಗಿ ವಯೋವೃದ್ಧರು ಮತ್ತು ಅಂಗವಿಕಲರಿಗೆ ಚುನಾವಣಾ ಆಯೋಗ ಓಲಾ, ಉಬರ್ ಕ್ಯಾಬ್ ಸೌಲಭ್ಯ ನೀಡುತ್ತಿದೆ.

ಮತದಾನ ದಿನ ಮತಗಟ್ಟೆಗೆ ಕರೆದುಕೊಂಡು ಹೋಗಲು ಮನೆಗೆ ಬರುತ್ತೆ ಕ್ಯಾಬ್​​: ನೋಂದಣಿ ಕಡ್ಡಾಯ, ಪ್ರಕ್ರಿಯೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:May 05, 2023 | 3:14 PM

ಬೆಂಗಳೂರು: ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲೂ (Election) ಮತದಾನ (Voting) ಪ್ರಮಾಣ ಹೆಚ್ಚಲೆಂದು ಚುನಾವಣಾ ಆಯೋಗ (Election Commission) ಒಂದಲ್ಲಾ ಒಂದು ಹೊಸ ಪ್ಲಾನ್​​ಗಳನ್ನು ಮಾಡುತ್ತದೆ. ಈ ಹಿಂದೆ ಮಹಿಳೆಯರಿಗಾಗಿ ವಿಶೇಷ ಮತಗಟ್ಟೆ, ಚಿತ್ರನಟರ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಈ ಬಾರಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಆಯೋಗ ಮಾಡಿಕೊಟ್ಟಿದೆ. ಅದು ಕೇವಲ 80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ. ಇದಲ್ಲದೇ ಮತಗಟ್ಟೆಗಳನ್ನು ವಿಶೇಷವಾಗಿ ಆಕರ್ಷಕವಾಗಿ ಕಾಣುವಂತೆ ಶೃಂಗರಿಸಲಾಗುತ್ತಿದೆ. ಅದೇ ರೀತಿಯಾಗಿ ಈಗ ಮತ್ತೊಂದು ಹೊಸ ಪ್ಲಾನ್ ಮಾಡಿದೆ. ಮತದಾನದ ಪ್ರಮಾಣ ಏರಿಕೆಗಾಗಿ ವಯೋವೃದ್ಧರು ಮತ್ತು ಅಂಗವಿಕಲರಿಗೆ ಓಲಾ, ಉಬರ್, ಕ್ಯಾಬ್ ಸೌಲಭ್ಯ ನೀಡುತ್ತಿದೆ.

ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಇದು ಇನ್ನು 3-4 ದಿವಸ ಮುಂದುವರೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ವಯೋವೃದ್ಧರು ಹಾಗೂ ಅಂಗವಿಕಲರು ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಓಲಾ ಹಾಗೂ ಉಬರ್ ಕ್ಯಾಬ್ ಸಂಸ್ಥೆಗಳ ಜೊತೆ ಚುನಾವಣಾ ಆಯೋಗ ಒಡಂಬಡಿಕೆ ಮಾಡಿಕೊಂಡಿದೆ. ಓಲಾ, ಉಬರ್ ಕ್ಯಾಬ್ ಮೂಲಕ ಮನೆಯಿಂದ ಮತಗಟ್ಟೆಗೆ ಕರೆತಂದು ವೋಟ್ ಮಾಡಿಸಿ ಮನೆಗೆ ಮರಳಿ ಡ್ರಾಫ್ ಮಾಡಲಾಗುತ್ತದೆ.

ಈ ಓಲಾ, ಉಬರ್ ಕ್ಯಾಬ್​ ವ್ಯವಸ್ಥೆ ಪಡೆಯುವುದು ಹೇಗೆ

ಮತದಾನದ ದಿನ ಚುನಾವಣಾ ಆ್ಯಪ್​ನಲ್ಲಿ ನೊಂದಾಯಿಸಿಕೊಂಡ ವೃದ್ದರು ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗ ಕ್ಯಾಬ್ ಸೇವೆ ನೀಡಲಿದೆ.

ನೊಂದಣಿ ಪ್ರಕ್ರಿಯೆ

  1. ಚುನಾವಣಾ ಆ್ಯಪ್​​ ಇನ್​ಸ್ಟಾಲ್​ ಮಾಡಿಕೊಳ್ಳಿ
  2. ವಾಹನ ಸೇವೆಗಳು ಎಂಬ ಅಂಶದ ಮೇಲೆ ಕ್ಲಿಕ್ ಮಾಡಿ
  3. ನಿಮ್ಮ ಜಿಲ್ಲೆ ಆಯ್ಕೆ ಮಾಡಿ
  4. ಬಳಿಕ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ
  5. ನಂತರ ನಿಮ್ಮ ಮತಗಟ್ಟೆ ಆಯ್ಕೆ ಮಾಡಿ
  6. ವೋಟರ್​ ಐಡಿ ನಂಬರ್​​, ಹೆಸರು, ಇಮೇಲ್ ನಮೂದಿಸಿ
  7. ನೀವು ವಯೋವೃದ್ದರೋ ಅಥವಾ ಅಂಗವಿಕಲರೋ ಎಂಬ ಆಯ್ಕೆನ್ನು ಗುರುತು ಮಾಡಿ
  8. ಕೊನೆದಾಗಿ ಪಿಕಪ್​ ಮತ್ತು ಡ್ರಾಪ್ ಆಯ್ಕೆನ್ನು ಗುರುತು ಮಾಡಿ ಸಬ್​ಮಿಟ್​ ಕೊಡಿ. ಈ ನೊಂದಣಿಗೆ ಮೇ.08 ಕೊನೆಯ ದಿನಾಂಕವಾಗಿದೆ.

ಈ ಕುರಿತು ಚುನಾವಣಾ ಅಧಿಕಾರಿ ಜಡಿಯಪ್ಪ ಅವರು ಮಾಹಿತಿ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Fri, 5 May 23

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ