Karnataka Polls 2023: ಬೆಂಗಳೂರಿನಲ್ಲಿ ಚುನಾವಣಾಧಿಕಾರಿಗಳ ಹದ್ದಿನ ಕಣ್ಣು: 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ
ಬೆಂಗಳೂರಿನ 28 ವಿಧಾನಸಭೆ ಚುನಾವಣೆ ಮೇಲೆ ನಿಗಾ ವಹಿಸಲು ವೀಕ್ಷಕರನ್ನು ನೇಮಿಸಲಾಗಿದೆ. ಹಾಗಾದ್ರೆ, ಯಾವ ಕ್ಷೇತ್ರಕ್ಕೆ ಯಾರು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ರಂಗೇರಿದ್ದು, ಇದೇ ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಸಹ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ವಿಶೇಷವಾಗಿ ಬೆಂಗಳೂರಿನ 28 ಕ್ಷೇತ್ರಗಳ ಮೇಲೆ ಚುನಾವಣಾಧಿಕಾರಿಗಳು ನಿಗಾ ವಹಿಸಿದ್ದು, 28 ಕ್ಷೇತ್ರಗಳಿಗೆ ವೀಕ್ಷಕರನ್ನು(observers) ನೇಮಿಸಲಾಗಿದೆ. 14 ಸಾಮಾನ್ಯ ವೀಕ್ಷಕರು, ನಾಲ್ವರು ಪೊಲೀಸ್ ವೀಕ್ಷಕರು, 24 ಮಂದಿ ಖರ್ಚು ವೆಚ್ಚಗಳ ವೀಕ್ಷಕರನ್ನು ನೇಮಕ ಮಾಡಿ ಬೆಂಗಳೂರು ಚುನಾವಣಾಧಿಕಾರಿ ಇಂದು(ಏಪ್ರಿಲ್ 23) ಆದೇಶ ಹೊರಡಿಸಿದ್ದಾರೆ.
ಚುನಾವಣೆ ವೇಳೆ ನಡೆಯುವ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಹೆಚ್ಚು ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಐಎಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ನಾಲ್ವರನ್ನು ಪೊಲೀಸರ ಕಾರ್ಯ ವೈಖರಿ ಬಗ್ಗೆ ನಿಗಾವಹಿಸಲಿದ್ದಾರೆ. ಇನ್ನು 24 ವೀಕ್ಷಕರು ಕ್ಷೇತ್ರಗಳ ವಿವಿಧ ಪಕ್ಷಗಳ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರು?
- ಮಹದೇವಪುರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರ- ಡಾ. ನಾರಾಯಣಸ್ವಾಮಿ( ಐಎಎಸ್)
- ಯಶವಂತಪುರ ಹಾಗೂ ದಾಸರಹಳ್ಳಿ- ಕಾಮಿನಿ ಚೌಹಾಣ್ ರತನ್(ಐಎಎಸ್ )
- ಆರ್ ಆರ್ ನಗರ ಹಾಗೂ ಶಿವಾಜಿನಗರ- ಅಹಮದ್ ನದೀಮ್
- ಗೋವಿಂದರಾಜನಗರ ಹಾಗೂ ಚಿಕ್ಕಪೇಟೆ-ಲೋಚನ್ ಸೆಹ್ರಾ
- ಜಯನಗರ ಹಾಗೂ ಬೊಮ್ಮನಹಳ್ಳಿ- ಸಮೀರ್ ವರ್ಮಾ
- ವಿಜಯನಗರ ಹಾಗೂ ಬಸವನಗುಡಿ- ಬಿ. ಬಾಲಮಯ ದೇವಿ
- ಯಲಹಂಕ ಹಾಗೂ ಬ್ಯಾಟರಾಯನಪುರ-ಡಾ.ಪ್ರತಿಭಾ ಸಿಂಗ್
- ಕೆ ಆರ್ ಪುರ ಹಾಗೂ ಆನೇಕಲ್-ಕೆ. ವೀರರಾಘವ ರಾವ್
- ಮಲ್ಲೇಶ್ವರಂ ಹಾಗೂ ಹೆಬ್ಬಾಳ-ದೀಪಕ್ ಆನಂದ್
- ಸರ್ವಜ್ಞನಗರ ಹಾಗೂ ಸಿ ವಿ ರಾಮನ್ ನಗರ-ಡಾ.ಕೆ ವಾಸುಕಿ
- ರಾಜಾಜಿನಗರ ಹಾಗೂ ಚಾಮರಾಜಪೇಟೆ-ಸುಶೀಲ್ ಕುಮಾರ್ ಪಟೇಲ್
- ಮಹಾಲಕ್ಷ್ಮಿಲೇಔಟ್ ಹಾಗೂ ಪುಲಿಕೇಶಿನಗರ-ಹರಿಚಂದನ ದಾಸರಿ
- ಶಾಂತಿನಗರ ಹಾಗೂ ಗಾಂಧಿನಗರ- ಅನಿಮೇಶ್ ಕುಮಾರ್ ಪರಶಾರ್
- ಪದ್ಮನಾಭನಗರ ಹಾಗೂ ಬಿಟಿಎಂ ಲೇಔಟ್-ಅವದೇಶ್ ಕುಮಾರ್ ತಿವಾರಿ
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ