Fact Check: ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರಾ ಮೋದಿ?; ವೈರಲ್ ವಿಡಿಯೊ ಎಡಿಟ್ ಮಾಡಿದ್ದು

|

Updated on: May 05, 2023 | 8:27 PM

ವೈರಲ್ ವಿಡಿಯೊ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಫ್ಯಾಕ್ಟ್ ಚೆಕ್ ನಡೆಸಿದೆ. ವೈರಲ್ ವಿಡಿಯೊದಲ್ಲಿ ಮೋದಿಯವರು ಕನ್ನಡದಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದಾಗ  ಅದು ಕರ್ನಾಟಕದ ಚುನಾವಣಾ ರ್ಯಾಲಿಯದ್ದೇ. ಆದರೆ ಎಲ್ಲಿ ನಡೆದ ರ್ಯಾಲಿಯದ್ದು ಎಂಬುದು ಪ್ರಶ್ನೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ವಾಕ್ಯವನ್ನೇ ಗೂಗಲ್ ಮಾಡಿದಾಗ 6 ದಿನಗಳ ಹಿಂದಿನ ಸುದ್ದಿ ಸಿಕ್ಕಿದೆ.

Fact Check: ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರಾ ಮೋದಿ?; ವೈರಲ್ ವಿಡಿಯೊ ಎಡಿಟ್ ಮಾಡಿದ್ದು
ನರೇಂದ್ರ ಮೋದಿ
Follow us on

‘ಈ ಬಾರಿಯ ನಿರ್ಧಾರ ಬಹುಮತದ ಕಾಂಗ್ರೆಸ್ ಸರ್ಕಾರ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳುತ್ತಿರುವ ಭಾಷಣದ ತುಣುಕೊಂದು ವಾಟ್ಸಾಪ್​​ನಲ್ಲಿ ಹರಿದಾಡುತ್ತಿದೆ. ಮೋದಿ ಕನ್ನಡದಲ್ಲಿ ಮಾತನಾಡಿರುವುದರಿಂದ ಇದು ಕರ್ನಾಟಕದಲ್ಲಿನ ಪ್ರಚಾರ ಕಾರ್ಯಕ್ರಮದ್ದು ಎಂಬುದು ಸ್ಪಷ್ಟ. ಆದರೆ ಪ್ರಧಾನಿ ಮೋದಿಯವರು ಭಾಷಣದಲ್ಲಿ ಬಾಯ್ತಪ್ಪಿ ಬಿಜೆಪಿ (BJP) ಎಂದು ಹೇಳುವ ಬದಲು ಕಾಂಗ್ರೆಸ್ (Congress) ಎಂದು ಹೇಳಿದ್ದಾರಾ? ಖಂಡಿತಾ ಇಲ್ಲ. ಯಾಕೆಂದರೆ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಬಾರಿಯ ನಿರ್ಧಾರ ಬಹುಮತದ ಎಂದು ಹೇಳಿದ ನಂತರ ಕಾಂಗ್ರೆಸ್ ಎಂಬ ಪದದ ದನಿ ಬೇರೆಯೇ ಇದೆ. ನಂತರ ಸರ್ಕಾರ ಎಂಬುದು ಮೋದಿಯವರ ದನಿಯಲ್ಲೇ ಇದೆ. ದನಿ ವ್ಯತ್ಯಾಸದಲ್ಲಿಯೇ ಇದು ಎಡಿಟ್ ಮಾಡಿದ ವಿಡಿಯೊ ಎಂದು ಸುಲಭವಾಗಿ ಹೇಳಬಹುದು.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಫ್ಯಾಕ್ಟ್ ಚೆಕ್ ನಡೆಸಿದೆ. ವೈರಲ್ ವಿಡಿಯೊದಲ್ಲಿ ಮೋದಿಯವರು ಕನ್ನಡದಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದಾಗ  ಅದು ಕರ್ನಾಟಕದ ಚುನಾವಣಾ ರ್ಯಾಲಿಯದ್ದೇ. ಆದರೆ ಎಲ್ಲಿ ನಡೆದ ರ್ಯಾಲಿಯದ್ದು ಎಂಬುದು ಪ್ರಶ್ನೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂಬ ವಾಕ್ಯವನ್ನೇ ಗೂಗಲ್ ಮಾಡಿದಾಗ 6 ದಿನಗಳ ಹಿಂದಿನ ಸುದ್ದಿ ಸಿಕ್ಕಿದೆ. ಹಲವಾರು ಮಾಧ್ಯಮಗಳು ಇದೇ ವಾಕ್ಯವನ್ನು ತಮ್ಮ ಶೀರ್ಷಿಕೆಯಲ್ಲಿ ಬಳಸಿವೆ.

ಇದನ್ನೂ ಓದಿ: Fact Check: ಸೀರೆ ಹಂಚುವಾಗ ಹಿರಿಯ ಮಹಿಳೆ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ವೈರಲ್ ವಿಡಿಯೊ ಕರ್ನಾಟಕದ್ದಲ್ಲ

ಸುದ್ದಿಯಿಂದ ಗೊತ್ತಾಗಿದ್ದೇನೆಂದರೆ ಬೀದರ್​​ನ ಹುಮಾನಾಬಾದ್​​ನಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ಮೋದಿ ಈ ರೀತಿ ಹೇಳಿದ್ದಾರೆ. ಏಪ್ರಿಲ್ 29ರಂದು ಮೋದಿಯವರು ಬೀದರ್​​ನಿಂದ ಕರ್ನಾಟಕ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಆ ದಿನದ ಮೋದಿ ಭಾಷಣದ ವಿಡಿಯೊ ಇಲ್ಲಿದೆ.

ಈ ವಿಡಿಯೊದ 3.37ನೇ ನಿಮಿಷದ ನಂತರ ಮೋದಿಯವರು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳುತ್ತಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿರುವಂತೆ ಮೋದಿಯವರು ಬಿಜೆಪಿ ಬದಲು ಕಾಂಗ್ರೆಸ್ ಸರ್ಕಾರ ಎಂದು ಹೇಳಿಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:22 pm, Fri, 5 May 23