ಅಳಿಯನಿಗೆ ಟಿಕೆಟ್‌ ತಪ್ಪಿದಕ್ಕೆ ಮಾವ ರಾಜೀನಾಮೆ, ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡ ಹಿರಿಯ ನಾಯಕ

|

Updated on: Apr 07, 2023 | 1:53 PM

ಅಳಿಯನಿಗೆ ಟಿಕೆಟ್‌ ತಪ್ಪಿದಕ್ಕೆ ಮಾವ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡಿದ್ದಾರೆ.

ಅಳಿಯನಿಗೆ ಟಿಕೆಟ್‌ ತಪ್ಪಿದಕ್ಕೆ ಮಾವ ರಾಜೀನಾಮೆ, ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡ ಹಿರಿಯ ನಾಯಕ
ಕಾಂಗ್ರೆಸ್​ಗೆ ಷಫಿ ಅಹ್ಮದ್​ ರಾಜೀನಾಮೆ
Follow us on

ತುಮಕೂರು: ಕರ್ನಾಟಕ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಸ್ಫೋಟಗೊಂಡಿದೆ. 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿ ಬಿಜೆಪಿ, ಜೆಡಿಎಸ್ ವಿರುದ್ಧ ತೊಡೆತಟ್ಟಿದ್ದ ಕಾಂಗ್ರೆಸ್‌ಗೆ 2ನೇ ಪಟ್ಟಿಯಲ್ಲಿ ಬಂಡಾಯದ ಬೇಗುದಿ ಅಪ್ಪಳಿಸಿದೆ. ಟಿಕೆಟ್ ಸಿಗದ್ದಕ್ಕೆ ರೊಚ್ಚಿಗೆದ್ದಿರುವ ಕೈ ಕಲಿಗಳು ಕಿಚ್ಚು ಹೊತ್ತಿಸಿದ್ದಾರೆ. ಅಲ್ಲದೇ ಟಿಕೆಟ್​ ಕೈತಪ್ಪಿದ್ದಕ್ಕೆ ಒಬ್ಬೊಬ್ಬರೇ ಕಾಂಗ್ರೆಸ್​ಗೆ ಗುಡ್ ಬೈ ಹೇಳುತ್ತಿದ್ದಾರೆ. ತಮಕೂರು, ಚಿತ್ರದುರ್ಗ, ಗೋಕಾಕ್, ಕಲ್ಲಘಟಗಿ ಸೇರಿದಂತೆ ಇತರೆ ಕೆಲ ಕ್ಷೇತ್ರಗಳಲ್ಲಿ ಸಂಭ್ರಮವಿರಬೇಕಾದ ಕಾಂಗ್ರೆಸ್ ಮನೆಯಲ್ಲಿ ಸಮರವೇ ಶುರುವಾಗಿದೆ. ಅದರಂತೆ ತುಮಕೂರು​ ನಗರ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅಳಿಯ ಎಸ್.ರಫೀಕ್ ಅಹ್ಮದ್​ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಷಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಸಮರ್ಥ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕೈತಪ್ಪಿದ ಟಿಕೆಟ್​: ಬಹಿರಂಗ ಪತ್ರದ ಮೂಲಕ ಅಭಿಮಾನಿಗಳಿಗೊಂದು ಮನವಿ ಮಾಡಿದ ದತ್ತಾ

ಯುವ ಮುಖಂಡ ಇಕ್ಬಾಲ್ ಅಹ್ಮದ್​ಗೆ ಟಿಕೆಟ್ ನೀಡಿದ ಹೈ ಕಮಾಂಡ್ ನಿರ್ಧಾರವನ್ನು ಷಫಿ ಅಹ್ಮದ್ ವಿರೋಧಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅಲ್ಪಸಂಖ್ಯಾತರ ಕಾರಣಕ್ಕೆ ಮಾಜಿ ಶಾಸಕ ಷಫಿ ಅಹ್ಮದ್ ಅವರ ಕುಟುಂಬಕ್ಕೆ ಮಣೆ ಹಾಕಲಾಗಿತ್ತು. ಷಫಿ ಎರಡು ಬಾರಿ ಹಾಗೂ ಅವರ ಅಳಿಯ ರಫಿಕ್ ಅಹ್ಮದ್ ಒಂದು ಬಾರಿ ಶಾಸಕರಾಗಿದ್ದರು. ಇದೀಗ ಮೊದಲ ಬಾರಿ ಷಫಿ ಕುಟುಂಬದ ಹೊರಗಿನ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಷಫಿ ಅಹ್ಮದ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದು ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡಿದ್ದಾರೆ.

ರಘು ಆಚಾರ್​ ಜೆಡಿಎಸ್​ ಸೇರ್ಪಡೆ?

ಇನ್ನು ಚಿತ್ರದುರ್ಗದಲ್ಲಿ ನಟ ದೊಡ್ಡಣ್ಣ ಅಳಿಯ ಕೆ.ಸಿ ವೀರೇಂದ್ರಗೆ ಟಿಕೆಟ್‌ ನೀಡಲಾಗಿದೆ. ಇದೇ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿ ಸಿದ್ದರಾಮಯ್ಯ ಆಪ್ತ ರಘು ಆಚಾರ್‌ ಅವರಿಗೂ ಸಹ ಟಿಕೆಟ್ ಕೈತಪ್ಪಿದೆ. ಇದರಿಂದ ಕಾಂಗ್ರೆಸ್​ ವಿರುದ್ಧ ಸಿಡಿದೆದ್ದಿದ್ದು, ಬೆಂಬಲಿಗರ ಜತೆ ಜೆಡಿಎಸ್ ಸೇರಲು ಚಿಂತಿಸಿದ್ದಾರೆ. ಅಲ್ಲದೇ ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇನ್ನು ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೊಶಗೊಂಡಿರುವ ರಘು ಆಚಾರ್ ಅವರನ್ಹು ಸಮಾಧಾನಗೊಳಿಸಲು ಜಿಲ್ಲಾ ಕಾಂಗ್ರೆಸ್​ ನಾಯಕರು ಮುಂದಾಗಿದ್ದಾರೆ. ಆದ್ರೆ, ಸಫಲವಾಗಿಲ್ಲ. ಕಾಂಗ್ರೆಸ್ ಜಿಲ್ಲಾದ್ಯಕ್ಷ ಎಂ.ಕೆ.ತಾಜಪೀರ್ ಹಾಗೂ ಕಾಂಗ್ರೆಸ್​ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಸೇರಿದಂತೆ ಹಲವು ಮುಖಂಡರು ರಘ ಆಚಾರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದ್ರೆ, ಅದ್ಯಾವುದಕ್ಕೂ ಬಗ್ಗದ ರಘು ಆಚಾರ್​ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಜಿದ್ದಿಗೆ ಬಿದ್ದಿದ್ದಾರೆ.

ಕಾಂಗ್ರೆಸ್ ಮುಖಂಡರ‌ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಘು ಆಚಾರ್, ಸ್ನೇಹಿತನಾಗಿ ಕೆ.ಸಿ.ವಿರೇಂದ್ರ ಪಪ್ಪಿಗೆ ಶುಭ ಹಾರೈಸಿದ್ದೇನೆ. ಸ್ನೇಹ ಸಂಬಂಧ ಬೇರೆ, ರಾಜಕೀಯ ಬೇರೆ. ಎ.17ಕ್ಕೆ ನಾನು ನಾಮಿನೇಷನ್ ಮಾಡುತ್ತೇನೆ. ರಾಜಕೀಯವಾಗಿ ಕೆ.ಸಿ.ವಿರೇಂದ್ರ ಜತೆ ಜಿದ್ದಾಜಿದ್ದಿಯಿದೆ. ಪಟಾಲಂ ಬಿಟ್ಟು ಪ್ರಚಾರ ಮಾಡುವಂತೆ ವಿರೇಂದ್ರಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಜತೆ ಚರ್ಚೆ ಇಲ್ಲ, ಬೆಂಬಲಿಗರ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತೇನೆ. ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಯ ಒಂದು ಕಡೆ ಸ್ಪರ್ಧಿಸುತ್ತೇನೆ. ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿಕೆಶಿ ಮೇಲೆ ಯಾವುದೇ ಕೋಪವಿಲ್ಲ ಎಂದರು.

ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:48 pm, Fri, 7 April 23