Gadag: ದುಷ್ಕರ್ಮಿಗಳಿಂದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ಕಲ್ಲುತೂರಾಟ

|

Updated on: Apr 17, 2023 | 4:53 PM

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ ಮಾಡಿದ್ದಾರೆ. ಅನಿಲ್ ಮೆಣಸಿನಕಾಯಿ ಅವರು ಗದಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲುತೂರಾಟ ಮಾಡಿದ್ದಾರೆ.

Gadag: ದುಷ್ಕರ್ಮಿಗಳಿಂದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ಕಲ್ಲುತೂರಾಟ
ಅನಿಲ್ ಮೆಣಸಿನಕಾಯಿ ಕಾರಿನ ಮೇಲೆ ಕಲ್ಲುತೂರಾಟ
Follow us on

ಗದಗ: ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ (Anil Menasinakai) ಕಾರಿನ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ ಮಾಡಿದ್ದಾರೆ. ಅನಿಲ್ ಮೆಣಸಿನಕಾಯಿ ಅವರು ಗದಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ನಾಮಪತ್ರ (Nomination) ಸಲ್ಲಿಸಿ ಹೊರ ಬರುತ್ತಿದ್ದ ವೇಳೆ ಕಾರಿನ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ರೋಡ್​ ಶೋ ಮೂಲಕ H.K.ಪಾಟೀಲ್​ ಕೂಡ ನಾಮಪತ್ರ ಸಲ್ಲಿಕೆಗೆ ಬಂದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಅನಿಲ್‌‌‌‌ ಜೊತೆಗೆ ಮಾತಿನ ಚಕಮಕಿ ಉಂಟಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಗದಗ ಪೊಲೀಸರು ಪರದಾಟ ನಡೆಸಿದರು.

ಗದಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೆಚ್​​.ಕೆ.ಪಾಟೀಲ್ ನಾಮಪತ್ರ

ಗದಗ ಕ್ಷೇತ್ರಕ್ಕೆ ಶಾಸಕ ಹೆಚ್​. ಕೆ ಪಾಟೀಲ್ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು. ಗದಗ ರಿಟರ್ನಿಂಗ್ ಆಫಿಸರ್ ಅನ್ನಪೂರ್ಣ ಅವರಿಗೆ ಹೆಚ್​.ಕೆ ಪಾಟೀಲ್​ ನಾಮಪತ್ರ ಸಲ್ಲಿಸಿದ್ದಾರೆ. ಸಹೋದರ ಡಿ.ಆರ್ ಪಾಟೀಲ್​ ಸಾಥ್​ ನೀಡಿದರು. ನಾಮಪತ್ರ ಸಲ್ಲಿಸಿದ ಬಳಿಕ ಹೆಚ್​.ಕೆ ಪಾಟೀಲ್ ಶಕ್ತಿ ಪ್ರದರ್ಶನ ಮಾಡಿದ್ದು, ಗದಗ ನಗರದ ಕಾಟನ್ ಸೇಲ್ ಸೋಸೈಟಿಯಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಸಂಪ್ರದಾಯಿಕ ಉಡುಪು ತೊಟ್ಟು ಮೆರವಣಿಗೆಯಲ್ಲಿ ಲಂಬಾಣಿ ಮಹಿಳೆರು ಭಾಗಿಯಾಗಿದ್ದು, ಸಾವಿರು ಕಾರ್ಯಕರ್ತರು ಭಾಗಿ ಆಗಿದ್ದರು.

ಇದನ್ನೂ ಓದಿ: ಡಾ: ಚಂದ್ರು ಲಮಾಣಿಗೆ ತೊಡಕಾದ ಸರ್ಕಾರಿ ವೈದ್ಯಕೀಯ ವೃತ್ತಿ: ಇಂದೇ ರಾಜೀನಾಮೆ ಅಂಗೀಕಾರ ಪತ್ರ ಸಲ್ಲಿಸಲು‌ ಬಿಜೆಪಿ ಗಡುವು

ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ

ದಕ್ಷಿಣ ಕನ್ನಡ: ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದೆ. ಹರೀಶ್ ಪೂಂಜಾ ನಾಮಪತ್ರ ಬಳಿಕ ಕಾರ್ಯಕರ್ತರು ತೆರಳುತ್ತಿದ್ದರು. ಈ ವೇಳೆ ರೋಡ್ ಶೋ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಆಗಮಿಸಿದ್ದಾಗ ಗಲಾಟೆ ನಡೆದಿದೆ. ಗಲಾಟೆ ವೇಳೆ ಬಿಜೆಪಿ ಕಾರ್ಯಕರ್ತನ ಕಾರಿನ ಗಾಜು ಪುಡಿ ಪುಡಿಯಾಗಿದೆ. ಸ್ಥಳೀಯ ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ಮಾಡಿದ್ದು, ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.

ಇದನ್ನೂ ಓದಿ: ನನ್ನನ್ನು ಸೋಲಿಸಲು ರಾಮನಗರದಲ್ಲಿ ಬಿಜೆಪಿ ಕಾಂಗ್ರೆಸ್ ಒಳಒಪ್ಪಂದ: ಕುಮಾರಸ್ವಾಮಿ ಆರೋಪ

ಅಕ್ರಮವಾಗಿ ಸಾಗಿಸುತ್ತಿದ್ದ 34 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ 34 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರೋ ರಾತ್ರಿ ಅಕ್ರಮವಾಗಿ ಗದಗ ತಾಲೂಕಿನ ಮುಳಗುಂದ ಪಟ್ಟಣದಿಂದ ಕುರ್ತಕೋಟಿ ಗ್ರಾಮಕ್ಕೆ ಸಾಗಿಸುವಾಗ ಅಬಕಾರಿ ಪೊಲೀಸರ್ ದಾಳಿ ಮಾಡಿದ್ದಾರೆ. 34 ಸಾವಿರ ರೂಪಾಯಿ ಮೌಲ್ಯದ 88.200 ಲೀಟರ್ ಮದ್ಯ, ಮಂಜುನಾಥ ಗಣಚಾರಿ ಹಾಗೂ ಮಂಜುನಾಥ ನೀಲಗುಂದ ಎಂಬುವವರನ್ನು ವಶಕ್ಕೆ ಪಡೆದು ಅಬಕಾರಿ ಪೊಲೀಸರಿಂದ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ.

ಇನ್ನಷ್ಟು ಕರ್ನಾಟಕ ವಿಧಾನಸಭಾ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ