ಹಾಸನ: ಕೋಮುವಾದಿಗಳನ್ನು ದೂರವಿಟ್ಟು ಜನ ಕಾಂಗ್ರೆಸ್ಗೆ (Congress) ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್ ಒಳ್ಳೆಯ ಆಡಳಿತ ನೀಡಿ, ಗ್ಯಾರಂಟಿಗಳನ್ನು ಈಡೇರಿಸಲಿ. ನಮ್ಮ ಪಕ್ಷದ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇವೆ. 2 ರಾಷ್ಟ್ರೀಯ ಪಕ್ಷಗಳನ್ನು ಜೆಡಿಎಸ್ (JDS) ಮುಗಿಸಲು ಪ್ರಯತ್ನಿಸಿದವು. ಆದರೆ ಜನರು ನಮ್ಮ ಪಕ್ಷವನ್ನು ಉಳಿಸಿಕೊಂಡಿದ್ದಾರೆ. ಹಾಸನ (Hassan) ಜಿಲ್ಲೆಯಲ್ಲಿ ನಮ್ಮ ಪಕ್ಷದ ನಾಲ್ವರು ಗೆದ್ದಿದ್ದೇವೆ, ಮೂವರು ಸೋತಿದ್ದಾರೆ. ನಮಗೆ ಮತ ನೀಡಿದ ಎಲ್ಲರಿಗು ಧನ್ಯವಾದ. ರಾಷ್ಟ್ರೀಯ ಪಕ್ಷಗಳ ಮುಖಂಡರೇ ಸೊತಿರುವಾಗ ನಮ್ಮದೇನಿದೆ. ಕೆಲ ನಾಯಕರು ನಮ್ಮನ್ನು ಮುಗಿಸಬೇಕು ಎಂದು ನಾಲ್ಕು ವರ್ಷರಿಂದ ಹೋರಾಟ ಮಾಡಿದರು ಎಂದು ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಮೊದಲ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನರು ನಮ್ಮನ್ನ ಜನ ಉಳಿಸಿಕೊಂಡಿದ್ದಾರೆ. ನಾವು ಸೋಲು ಗೆಲುವು ಎರಡನ್ನು ನೋಡಿದ್ದೇವೆ. ಒಂದು ಕ್ಷೇತ್ರದಲ್ಲಿ ನಾವು ಅಲ್ಪ ಮತದಿಂದ ಸೋತಿದ್ದೇವೆ. ಮಂಡ್ಯದಲ್ಲಿ ಕೂಡ ಜೆಡಿಎಸ್ ತೆಗಿಬೇಕು ಎಂದು ಪ್ರಯತ್ನ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರೇ ಹಾಸನ ಮತ್ತು ಮಂಡ್ಯಕ್ಕೆ ಬಂದು ಹೋದರು. ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಬಂದು ಹೋಗಿದ್ದರೂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಗೆಲ್ಲಲಿಲ್ಲವೇ ? ಇನ್ನೂ ನಮಗೆ ಐದು ವರ್ಷ ಸಮಯ ಇದೆ ಎಲ್ಲವನ್ನು ಸರಿ ಮಾಡಿಕೊಳ್ತೇವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬಂದಿದ್ದರೂ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಚಿವ ರಮಾನಾಥ್ ರೈ
ಬೇಲೂರಿನಲ್ಲಿ ಜೆಡಿಎಸ್ ಅನ್ನು ಸೋಲಿಸಲೇ ಬೇಕು ಅಂತ ಪ್ರಧಾನಿಯವರು ಬಂದರೇ ಏನ ಮಾಡೋಕೆ ಆಗುತ್ತೆ. ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಏನೂ ಪರಿಣಾಮ ಬೀರಲ್ಲ. ಕಾಲ ಇನ್ನೂ ಇದೆ ನೋಡ್ತಾ ಇರಿ, ದೇವೇಗೌಡರು ಸುಮ್ಮನೇ ಕೂರಲ್ಲ. ದೇವೇಗೌಡರಿಗೆ ಇನ್ನೂ ಶಕ್ತಿ ಇದೆ. ಕೂಡಲೆ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದರು.
ಹಾಸನದಲ್ಲಿ ಅಲ್ಪಸಂಖ್ಯಾತರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದು ಜೆಡಿಎಸ್. ಬಿಜೆಪಿ ಅವರು ಅಧಿಕಾರದಿಂದ ಕೆಳಗೆ ಇಳುಯುವಾಗ ಒಂದು ಶಾಕ್ ಕೊಟ್ಟಿದ್ದಾರೆ. ಒಂದು ಯುನಿಟ್ಗೆ 70 ಪೈಸೆ ಎರಿಸಿದ್ದಾರೆ, ಇದನ್ನು ಇಳಿಸಲಿ. ಕಾಂಗ್ರೆಸ್ನಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಲಿ ಒಳ್ಳೆ ಕೆಲಸ ಮಾಡಿಲಿ ಎಂದು ಹಾರೈಸಿದರು.
ಹಾಸನದಲ್ಲಿ ಶಾಸಕ ಸ್ವರೂಪ್ ಪ್ರಕಾಶ ಇದ್ದಾನೆ ಎಲ್ಲವನ್ನು ಮಾಡುತ್ತಾನೆ. ಅವನಿಗೆ ಶಕ್ತಿ ಇದೆ ಮಾಡುತ್ತಾನೆ. ಖಂಡಿತ ಹಾಸನ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡುತ್ತೇವೆ. ನಾವೇನು ಯಾರಿಗೂ ತೊಂದರೆ ಕೊಡುವುದಿಲ್ಲ. ಇನ್ನೊಬ್ಬರಿಗೆ ಕಿರುಕುಳ ಕೊಡುವುದಿಲ್ಲ ಎಂದು ಮಾತನಾಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ