ಹೆಬ್ಬಗೋಡಿ ಠಾಣೆ ಪೊಲೀಸರಿಂದ 4‌.75 ಕೋಟಿ ಹಣ ಜಪ್ತಿ: ಆರ್​ಬಿಐ ಗೈಡ್​ಲೈನ್ಸ್ ಮೀರಿ ಸಾಗಾಟ‌ ಹಿನ್ನೆಲೆ ಹಣ ವಶಕ್ಕೆ

|

Updated on: Apr 08, 2023 | 4:41 PM

ಕರ್ನಾಟಕ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ನೀತಿ ಸಂಹಿತೆ ಮೀರಿ ವರ್ಗಾವಣೆ ಮಾಡುತ್ತಿದ್ದ 4‌ ಕೋಟಿ 75 ಲಕ್ಷ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಸೀಜ್​ ಮಾಡಿದ್ದಾರೆ.

ಹೆಬ್ಬಗೋಡಿ ಠಾಣೆ ಪೊಲೀಸರಿಂದ 4‌.75 ಕೋಟಿ ಹಣ ಜಪ್ತಿ: ಆರ್​ಬಿಐ ಗೈಡ್​ಲೈನ್ಸ್ ಮೀರಿ ಸಾಗಾಟ‌ ಹಿನ್ನೆಲೆ ಹಣ ವಶಕ್ಕೆ
4‌.75 ಕೋಟಿ ಹಣ ಜಪ್ತಿ
Follow us on

ಆನೇಕಲ್​: ಕರ್ನಾಟಕ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ನೀತಿ ಸಂಹಿತೆ (Code of Conduct) ಮೀರಿ ವರ್ಗಾವಣೆ ಮಾಡುತ್ತಿದ್ದ 4‌ ಕೋಟಿ 75 ಲಕ್ಷ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಸೀಜ್​ ಮಾಡಿದ್ದಾರೆ. ಎಟಿಎಂ‌ ವಾಹನಗಳ ಜತೆ ಕೋಟ್ಯಾಂತರ ಹಣ, ರೈಟರ್ಸ್ ಕಂಪನಿಯ ಮೂರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಾಟ‌ ಹಿನ್ನೆಲೆ‌ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್​ಬಿಐ ಪ್ರಕಾರ ಪ್ರೋಟೊಕಾಲ್ ಉಲ್ಲಂಘನೆ ಮಾಡಿದ್ದು, ಈ ಹಿನ್ನಲೆ‌ ಚುನಾವಣಾ ನೀತಿ ಸಂಹಿತೆ ಪ್ರಕಾರ ಉಳಿದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿರುವ ಹೆಬ್ಬಗೋಡಿ ಪೊಲೀಸರು, ಸೀಜ್ ಆದ 4‌ ಕೋಟಿ ಹಣ‌ ಠಾಣೆಯಲ್ಲಿಯೇ ಇದ್ದ ಕಾರಣ ನಿನ್ನೆ ಇಡೀ ರಾತ್ರಿ ಇನ್ಸ್ಪೆಕ್ಟರ್ ಬಿಐ ರೆಡ್ಡಿ ಠಾಣೆಯಲ್ಲಿಯೇ ಮಲಗಿದ್ದರು.

ಅಕ್ರಮವಾಗಿ ಸಾಗಿಸುತ್ತಿದ್ದ 7500 ಟನ್ ತೂಕದ ಅಕ್ಕಿ ಜಪ್ತಿ

ತುಮಕೂರು: ಅಕ್ರಮವಾಗಿ ಸಾಗಿಸುತ್ತಿದ್ದ 7500 ಟನ್ ತೂಕದ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಬಳಿ ಅಕ್ಕಿ ಸಾಗಿಸುತ್ತಿದ್ದ ಕ್ಯಾಂಟರ್, ಬೊಲೆರೋ ವಶಕ್ಕೆ ಪಡೆಯಲಾಗಿದೆ. ಯಾವುದೇ ದಾಖಲೆ ಇಲ್ಲದೇ 390 ಚೀಲ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿದ್ದು, ಚಾಲಕ, ಇಬ್ಬರು ಕ್ಲೀನರ್​​ಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಚುನಾವಣಾ ಆಯೋಗದ ಕಣ್ತಪ್ಪಿಸಲು ಹೀಗೂ ಮಾಡ್ತಾರೆ; ಎಟಿಎಂಗೆ ಹಣ ಕೊಂಡೊಯ್ಯುವ ವಾಹನದಲ್ಲೇ ಮತದಾರರಿಗೆ ಹಂಚಲು ನಗದು ಸಾಗಣೆ

1.57 ಕೋಟಿ ಮೌಲ್ಯದ ತವಾ, ಕುಕ್ಕರ್ ಜಪ್ತಿ ಮಾಡಿದ ಅಧಿಕಾರಿಗಳು

ಬೆಂಗಳೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕುಕ್ಕರ್​ ಹಾಗೂ ತವಾವನ್ನು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾಧಿಕಾರಿಗಳ ದಾಳಿ ವೇಳೆ 4,533 ಕುಕ್ಕರ್, 10,964 ತವಾ ಪತ್ತೆಯಾಗಿದ್ದು, ಸುಮಾರು 1.57 ಕೋಟಿ ಮೌಲ್ಯದ ತವಾ, ಕುಕ್ಕರ್​ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಅಕ್ರಮಕ್ಕೆ ಹಲವು ದಾರಿ

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಚೆಕ್ ಪೋಸ್ಟ್​​ನಲ್ಲಿ ಎರಡು ದಿನಗಳ ಹಿಂದಷ್ಟೇ ಖಾಸಗಿ ಬಸ್​​ನಲ್ಲಿದ್ದ ಪ್ರಯಾಣಿಕರೊಬ್ಬರ ಬ್ಯಾಗ್​ನಲ್ಲಿ 2 ಕೋಟಿ ರೂ. ನಗದು ದೊರೆತಿತ್ತು. ಸಾರ್ವಜನಿಕ ಸಾರಿಗೆಗಳ ಮೂಲಕವೂ ಕೋಟ್ಯಂತರ ರೂ. ನಗದು ಸಾಗಾಟ ಮಾಡುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ನಟಿ ಶ್ರುತಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್​​​​​​

ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​ನಲ್ಲಿ ಬೈಕ್ ತಡೆದ ಪೊಲೀಸರು ಸವಾರನನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೊಂಟದಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿವೆ.

ಅಫಜಲಪುರದಲ್ಲಿ 3.2 ಲಕ್ಷ ರೂ. ನಗದು ವಶ

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆಯಿಲ್ಲದ 3.2 ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ಬೈಕ್​ನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ಶ್ರೀಕಾಂತ್ ಮ್ಯಾಳೇಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಫಜಲಪುರದಿಂದ ಬೈಕ್​ನಲ್ಲಿ ಮಹಾರಾಷ್ಟ್ರದ ನಾಗಣಸೂರ್‌ಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 4:41 pm, Sat, 8 April 23