BJP Manifesto: ಉಚಿತ ಗ್ಯಾಸ್, ನಂದಿನಿ ಹಾಲು ಸೇರಿದಂತೆ ಬಿಜೆಪಿ ಪ್ರಜಾ ಪ್ರಣಾಳಿಕೆ ಮುಖ್ಯಾಂಶಗಳು ಇಲ್ಲಿವೆ
Karnataka BJP Manifesto Download PDF: ಆಡಳಿತಾರೂಢ ಬಿಜೆಪಿಯು ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಗಳನ್ಉ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಗ್ಯಾರಂಟಿಗಳಿಗೆ ಗೆಡ್ಡು ಹೊಡೆದಿದೆ. ಹಾಗಾದ್ರೆ, ಬಿಜೆಪಿ ಪ್ರಜಾ ಪ್ರಣಾಳಿಕೆಯಲ್ಲಿ ಏನೆಲ್ಲ ಭರವಸೆಗಳನ್ನು ನೀಡಲಾಗಿದೆ ಎನ್ನುವ ಮುಖ್ಯಾಂಶಗಳು ಇಲ್ಲಿವೆ ನೋಡಿ.
ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮತದಾನಕ್ಕೆ 9 ದಿನ ಮಾತ್ರ ಬಾಕಿಯಿದೆ. ಇದರ ನಡುವೆಯೇ ಇಂದು (ಸೋಮವಾರ) ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು(BJP Manifesto) ಬಿಡುಗಡೆ ಮಾಡಿದೆ. ಪ್ರಜಾ ಪ್ರಣಾಳಿಕೆ ಹೆಸರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಡುಗಡೆ ಮಾಡಿದರು. ವಿವಿಧ ಕ್ಷೇತ್ರಗಳ ಗಣ್ಯರ ಸಲಹೆ ಪಡೆದು ಈ ಪ್ರಣಾಳಿಕೆ ತಯಾರು ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿರುವ ಬಿಜೆಪಿಯು ಇದೀಗ ಮತದಾರರನ್ನು ಓಲೈಸಲು ಭರಪೂರ ಯೋಜನೆಗಳನ್ನು ಘೋಷಿಸಿದೆ. ಇನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ಏನೆಲ್ಲ ಭರವಸೆಗಳನ್ನು ನೀಡಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
- ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್ ಗ್ಯಾಸ್ ವಿತರಣೆ (ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ)
- ಪ್ರತಿ ವಾರ್ಡ್‌ಗಳಲ್ಲಿ ಅಟಲ್ ಆಹಾರ ಕೇಂದ್ರ
- ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಉಚಿತ ಹಾಲು, ಪ್ರತಿ ತಿಂಗಳು 5 ಕೆಜಿ ಸಿರಿ ಅನ್ನ, ಸಿರಿ ಧಾನ್ಯ ವಿತರಣೆ
- ಏಕರೂಪ ನಾಗರಿಕ ಸಹಿತೆ ಜಾರಿಯ ಭರವಸೆ
- ‘ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ನಿವೇಶನ ಹಂಚಿಕೆ
- ಒನಕೆ ಓಬವ್ವ ಸಾಮಾಜಿಕ ನ್ಯಾಯನಿಧಿ ಯೋಜನೆ
- ವಿಶ್ವೇಶ್ವರಯ್ಯ ವಿದ್ಯಾ ಯೋಜನೆ – ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೇಲ್ದರ್ಜೆ
- ಸಮನ್ವಯ ಯೋಜನೆ -ಎಸ್‌ಎಂಇ ಮತ್ತು ಐಟಿಐ ನಡುವೆ ಸಮನ್ವಯ
- ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಕ್ಕಾಗಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಧನಸಹಾಯ
- ಮಿಷನ್ ಸ್ವಾಸ್ತ್ಯ ಕರ್ನಾಟಕದ ಅಡಿಯಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿ
- ಹಿರಿಯ ನಾಗರೀಕರಿಗೆ ವಾರ್ಷಿಕ ಉಚಿತ ಮಾಸ್ಟರ್ ಹೆಲ್ತ್ ಚೆಕಪ್
- ಮುಂದಿನ ತಲೆಮಾರಿಗೆ ಬೆಂಗಳೂರಿನ ಅಭಿವೃದ್ಧಿ
- ವಿದ್ಯುನ್ಮಾನ ವಾಹನಗಳ ಹಬ್ ಆಗಿ ಕರ್ನಾಟಕ ಪರಿವರ್ತನೆ
- 30 ಸಾವಿರ ಕೋಟಿ ರೂ. ಕೆ ಅಗ್ರಿ ಫಂಡ್ ಸ್ಥಾಪನೆ
- ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್, ಕಾವೇರಿ ಸರ್ಕ್ಯೂಟ್, ಗಂಗಾಪುರ ಕಾರಿಡಾರ್ ನಿರ್ಮಾಣಕ್ಕೆ 1500 ಕೋಟಿ ರೂ.
- ಬೆಂಗಳೂರು ಹೊರತು ಪಡಿಸಿ 10 ಲಕ್ಷ ಉದ್ಯೋಗಗಳ ಸೃಷ್ಟಿ
- ಅಪಾರ್ಟ್‌ಮೆಂಟ್ ಓನರ್‌ಶಿಫ್ಟ್ ಆಕ್ಟ್ ತಿದ್ದುಪಡಿಯ ಭರವಸೆ
- ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೇವೆ. ಪೂರಕವಾಗಿ, ಚಾಜಿರ್ಂಗ್ ಸ್ಟೇಷನ್‍ಗಳ ಸ್ಥಾಪನೆ, 1,000 ಸ್ಟಾರ್ಟ್ ಅಪ್‍ಗಳಿಗೆ ಪ್ರೋತ್ಸಾಹ, ಹಾಲಿ ಇರುವ ಬಿಎಂಟಿಸಿ ಬಸ್‍ಗಳನ್ನು ಎಲೆಕ್ಟ್ರಿಕ್ ಬಸ್‍ಗಳಾಗಿ ಪರಿವರ್ತಿಸುತ್ತೇವೆ. ಜತೆಗೆ ಬೆಂಗಳೂರಿನ ಹೊರವಲಯದಲ್ಲಿ ಇಬಿ ಸಿಟಿ ಅಭಿವೃದ್ಧಿಗೊಳಿಸುವುದು.
- ಮುಂದಿನ 5 ವರ್ಷಗಳಲ್ಲಿ 200 ಮೀನು ಕೃಷಿ ಉತ್ಪಾದನಾ ಕೇಂದ್ರ ಸೇರಿದಂತೆ ಒಂದು ಸಾವಿರ ಕೃಷಿ ಉತ್ಪಾದನೆ ಕೇಂದ್ರಗಳ ಸ್ಥಾಪನೆ
- ಭಗೀರಥ ಶಪಥ ಯೋಜನೆಯಡಿ ಸಮಗ್ರ ನೀರಾವರಿ ವ್ಯವಸ್ಥೆ
- ಪ್ರತಿ ಲೀಟರ್ ಹಾಲಿಗೆ 5ರಿಂದ 7 ರೂ. ಪ್ರೋತ್ಸಾಹಧನ ಹೆಚ್ಚಳ
- ಪ್ರತಿ ತಾಲೂಕಿನಲ್ಲಿ ಮೊಬೈಲ್ ಪಶು ಆರೋಗ್ಯ ಕ್ಲಿನಿಕ್ ಆರಂಭ
- ಉತ್ಪನ್ನ ಸಾಗಿಸುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ
- ಸೋಲಾರ್ ಪಂಪ್ಸೆಟ್ಗಳನ್ನು ಬಳಸುವ ರೈತರಿಗೆ 80% ಸಬ್ಸಿಡಿ
- 500 ಕೋಟಿ ರೂ. ಮೊತ್ತದ ‘ಸಾವಯವ ಕೃಷಿ ಮಿಷನ್’ ಜಾರಿ
- ಪ್ರತಿ ಜಿಲ್ಲೆಯಲ್ಲಿ ಆಹಾರ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ
- ಒಂದು ಸಾವಿರ ಕೋಟಿ ಮೊತ್ತದ ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ
- ನೇಕಾರ ಸಮ್ಮಾನ ಯೋಜನೆಯಡಿ 1.5 ಲಕ್ಷ ನೇಕಾರರಿಗೆ ನೆರವು
- ನೇಕಾರರಿಗೆ ನೀಡುವ ಧನಸಹಾಯ 2 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ
- ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್
- ಮೈಸೂರಿನಲ್ಲಿ ಅತಿದೊಡ್ಡ ಪುನೀತ್ ರಾಜ್ಕುಮಾರ್ ಫಿಲ್ಮ್ಸಿಟಿ ಸ್ಥಾಪನೆ
- ವಿಧವೆಯರ ಮಾಸಿಕ ಪಿಂಚಣಿ 800 ರೂ.ರಿಂದ 2 ಸಾವಿರಕ್ಕೆ ಹೆಚ್ಚಳ
- ಎಲ್ಲಾ ತಾಲೂಕು ಕೇಂದ್ರಗಳಲ್ಲಿ ‘ಸ್ವದೇಶಿ ಕ್ರೀಡೆ’ ಕಬಡ್ಡಿ ತರಬೇತಿ ಕೇಂದ್ರ
- ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶೀತಲೀಕರಣ ಸೌಲಭ್ಯಗಳು ಮತ್ತು ಕೃಷಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು 30,000 ಕೋಟಿ ಮೊತ್ತದ ಕೆ-ಅಗ್ರಿ ಫಂಡ್ ಸ್ಥಾಪಿಸುತ್ತೇವೆ. ಎಪಿಎಂಸಿಗಳ ಆಧುನೀಕರಣ ಮತ್ತು ಡಿಜಿಟಲೀಕರಣ ಮಾಡುತ್ತೇವೆ. ಕೃಷಿ ಯಾಂತ್ರೀಕರಣಕ್ಕೆ ಒತ್ತು ನೀಡುತ್ತೇವೆ. ಜತೆಗೆ, 5 ಹೊಸ ಕೃಷಿ ಆಧಾರಿತ ಕೈಗಾರಿಕಾ ಕ್ಲಸ್ಟರ್‍ಗಳು ಮತ್ತು 3 ಹೊಸ ಆಹಾರ ಸಂಸ್ಕರಣಾ ಪಾರ್ಕ್‍ಗಳನ್ನು ಸ್ಥಾಪಿಸುತ್ತೇವೆ.
Published On - 11:39 am, Mon, 1 May 23