‘ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಿದ ನಟ ಉಪೇಂದ್ರ
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ. 110 ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಮೇ 10ರಂದ ಮತದಾನ ನಡೆಯಲಿದ್ದು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Actor Upendra) ಸುದ್ದಿಗೋಷ್ಠಿ ನಡೆಸಿದ್ದಾರೆ. 110 ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ(Uttama Prajakeeya Party) ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’ ಎಂಬ ಘೋಷಣೆ ಮೂಲಕ ‘ಬುದ್ಧಿವಂತ’ ಉಪೇಂದ್ರ ಹೊಸ ಪೊಲಿಟಿಕಲ್ ತಂತ್ರ ಹೆಣೆದಿದ್ದಾರೆ. ಹಾಗೂ ಸುದ್ದಿಗೋಷ್ಠಿಯಲ್ಲಿ ಪ್ರಜಾಕೀಯ app ಬಗ್ಗೆಯೂ ಉಪ್ಪಿ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಉಪೇಂದ್ರ, ಜನರ ಡಿಮ್ಯಾಂಡ್ ನಮಗೆ ಗೊತ್ತಿದೆ. ಪಾರದರ್ಶಕ ರಿಪೋರ್ಟ್ ಕೊಡ್ತೀವಿ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ. ಪ್ರಜಾಕೀಯ ಬರೀ ವೋಟ್ ಹಾಕಿ ಅಂತಿಲ್ಲ. ನಮ್ಮ ಜೊತೆ ನಿರಂತರವಾಗಿ ಕನೆಕ್ಟ್ ಆಗಬೇಕು ಎಂದು 110 ಜನ ಅಭ್ಯರ್ಥಿಗಳನ್ನ ಉಪೇಂದ್ರ ಪರಿಚಯಿಸಿದ್ದಾರೆ.
ಇದನ್ನೂ ಓದಿ: Karnataka Election: ಚುನಾವಣೆ ಜಾಗೃತಿಗೆ, ಪ್ರಜಾಕೀಯ ಪ್ರಚಾರಕ್ಕೆ ‘ಕಾಂತಾರ’ ದೈವದ ದೃಶ್ಯ ಬಳಕೆ; ವಿಡಿಯೋ ವೈರಲ್
150,00,00,00,00,000 ನಿಮ್ಮ 5 ವರ್ಷದ ತೆರಿಗೆ ಹಣ ಸುಮಾರು 15 ಲಕ್ಷ ಕೋಟಿ !
ಪಕ್ಷ 1. ನಿಮ್ಮ ದೇಶ ವನ್ನು ನಂ ೧ ಅಭಿವ್ರದ್ಧಿ ಮಾಡುತ್ತೇವೆ.
ಪಕ್ಷ 2 ನಿಮಗೆ ಇದು ಅದು ಉಚಿತ ನೀಡುತ್ತೇವೆ
ಪಕ್ಷ 3. ನಿಮ್ಮ ಜಾತಿ, ಧರ್ಮ ಕಾಪಾಡುತ್ತೇವೆ.
ಪಕ್ಷ 4. ನಿಮ್ಮ ಹಣ ನಿಮ್ಮ ಅಧಿಕಾರ ನಾವು ನೀವು ಹೇಳಿದಂತೆ ಕೆಲಸ ಮಾಡುತ್ತೇವೆ.
ನಿಮ್ಮ ಅಯ್ಕೆ…
— Upendra (@nimmaupendra) April 30, 2023
ಇದು ವಿಚಾರಗಳ ಪ್ರಚಾರ. ಹಳ್ಳಿ ಹಳ್ಳಿಗೂ ಪ್ರಜಾಕೀಯ ತಲುಪಿದೆ. 110 ಕ್ಷೇತ್ರದಲ್ಲೂ ಪ್ರಜಾಕೀಯ ಬರುತ್ತೆ ಎಂಬ ನಂಬಿಕೆ ಇದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
#Prajaakeeya ? #UttamaPrajaakeeyaParty #UPP #UPPforKARNATAKA#SilentRevolution #UPPForTrueDemocracy #Upendra @priyankauppi ಇಷ್ಟೇ ಪ್ರಜಾಕೀಯ ? pic.twitter.com/mCWLVwaGZj
— Upendra (@nimmaupendra) April 30, 2023
ನಮ್ಮ ಪ್ರಣಾಳಿಕೆಯಂತಹ ಪ್ರಣಾಳಿಕೆ ಪ್ರಪಂಚದಲ್ಲಿ ಯಾರು ಕೊಟ್ಟಿಲ್ಲ. ಕುಕ್ಕರ್ ಕೊಡ್ತಾರೆ ಬಟ್, ಅವ್ರಿಗೆ ಸ್ಟವ್ ಬೇಕಾಗಿರುತ್ತೆ. ಅವರಿಗೆ ಬೇಜಾರಾಗಲ್ವಾ. ಸ್ಟಾರ್ಗಳು ನಮಗೆ ನಮ್ಮ ಅಭ್ಯರ್ಥಿಗಳು. ಮತದಾರರು ಸ್ಟಾರ್ಗಳು. ಟ್ಯಾಲೆಂಟ್ ಗಿಂತ ಕಲ್ಪನೆ ಬಹಳ ಮುಖ್ಯ ಅಂತೆ ಅಲ್ಬರ್ಟ್ ಐನ್‍ಸ್ಟೈನ್ ಹೇಳಿದ್ದಾರೆ. ಬದಲಾವಣೆ ಬೇಕು. ಕರೆಕ್ಟ್ ಅನ್ನಿಸುದ್ರೆ ಮಾಡಿ ಎಂದು ಉಪೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾಣೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ