ದೇಶದಲ್ಲಿ 18 ವರ್ಷ ವಯಸ್ಸು ಪೂರ್ಣಗೊಂಡವರು ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಮತದಾನಕ್ಕೆ (Voting) ಅರ್ಹರಾಗಿದ್ದಾರೆ. ಇಂಥವರು ತಮ್ಮ ರಾಜ್ಯ ಅಥವಾ ಪ್ರದೇಶದಲ್ಲಿ ಚುನಾವಣೆಯ (Election) ಸಮಯದಲ್ಲಿ ಮತ ಚಲಾಯಿಸಲು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು. ಮತದಾರರ ಗುರುತಿನ ಚೀಟಿಯು (Voter ID) ನಿಮ್ಮ ಮತವನ್ನು ಚಲಾಯಿಸುವ ಮೊದಲು ಪರಿಶೀಲಿಸಲಾಗುವ ಪ್ರಮುಖ ಗುರುತಿನ ದಾಖಲೆಯಾಗಿದೆ. ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್‌ಗೆ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಹೀಗೆ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ವಿವರಗಳಿಗೆ ಸಂಬಂಧಿಸಿದಂತೆ ಇಮೇಲ್ ಸಂದೇಶ ಕಳುಹಿಸುತ್ತದೆ. ಹೆಚ್ಚಿನ ವಿವರ ತಿಳಿಯುವುದಕ್ಕಾಗಿ ರೆಫರೆನ್ಸ್ ಐಡಿಯನ್ನು ನೆನಪು ಇಟ್ಟುಕೊಳ್ಳಬೇಕಾಗುತ್ತದೆ. ನೀವು ಅದನ್ನು ಆನ್‌ಲೈನ್‌ನಲ್ಲಿ, ದೂರವಾಣಿ ಕರೆ ಮೂಲಕ ಅಥವಾ ಎಸ್ಎಂಎಸ್ ಮೂಲಕ ಟ್ರ್ಯಾಕ್ ಮಾಡಬಹುದಾಗಿದೆ. ಇದು ಹೇಗೆಂಬ ಮಾಹಿತಿ ಇಲ್ಲಿದೆ.
ವೋಟರ್ ಐಡಿ ಕಾರ್ಡ್ ಯಶಸ್ವಿಯಾಗಿ ನೋಂದಾವಣೆಯಾದಾಗ ಚುನಾವಣಾ ಆಯೋಗವು ಸಾಮಾನ್ಯವಾಗಿ ಎಸ್ಎಂಎಸ್ ಸಂದೇಶ ಕಳುಹಿಸುತ್ತದೆ. ಅರ್ಜಿಯ ಸ್ಥಿತಿಯ ಬಗ್ಗೆಯೂ ಎಸ್ಎಂಎಸ್ ಕಳುಹಿಸುತ್ತದೆ. ಆದರೆ, ಈ ಸೇವೆ ಕೆಲವು ರಾಜ್ಯಗಳಲ್ಲಿ ಮಾತ್ರ ಸದ್ಯ ಲಭ್ಯವಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 3 May 23