Election Ink: ನಮ್ಮ ಕರ್ನಾಟಕದಲ್ಲೇ ತಯಾರಾಗುತ್ತೆ ಮತದಾರರ ಬೆರಳಿಗೆ ಹಚ್ಚುವ ಶಾಯಿ, ಯಾವ ಕಾರ್ಖಾನೆ? ಯಾರು ಶುರು ಮಾಡಿದ್ರು?
Voting Ink: ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಗೆ ದೇಶ ವಿದೇಶಗಳಲ್ಲಿ ಖ್ಯಾತಿ ಇದೆ. ಉತ್ತಮ ಗುಣಮಟ್ಟದ ಅಳಿಸಲಾರದ ಶಾಯಿ ತಯಾರಿಸುವುದರಲ್ಲಿ ಇದು ಎತ್ತಿದ ಕೈ. 1937 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಕಾರ್ಖಾನೆ ಆರಂಭಿಸಿದ್ದರು.
ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ(Karnataka Assembly Elections 2023) ಮತದಾನಕ್ಕೆ ದಿನಗಣನೆ ಶುರುವಾಗಿದ್ದು ಮೇ 10ರಂದು ಮತದಾನ ನಡೆಯಲಿದೆ. ಹೀಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಮೈಸೂರಿನಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಎಲ್ಲೇ ಚುನಾವಣೆಗಳು ನಡೆದ್ರೂ ಮೈಸೂರಿನ ಹೆಸರು ಕೇಳಿ ಬಂದೇ ಬರುತ್ತದೆ. ಚುನಾವಣೆಗೆ ಬಳಸುವ ಅಳಿಸಲಾರದ ಶಾಯಿ ಪೂರೈಕೆ ಮಾಡುವುದೇ ಮೈಸೂರಿನ ಹಿರಿಮೆ. ಮೇ 10ರಂದು ನಡೆಯಲಿರುವ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮೈಸೂರಿನ ಕಪ್ಪು ಶಾಯಿ ರವಾನೆಯಾಗಿದೆ. ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ಬಾಟಲ್ ಪೂರೈಕೆ ಮಾಡಲಾಗಿದೆ.
ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಗೆ ದೇಶ ವಿದೇಶಗಳಲ್ಲಿ ಖ್ಯಾತಿ ಇದೆ. ಉತ್ತಮ ಗುಣಮಟ್ಟದ ಅಳಿಸಲಾರದ ಶಾಯಿ ತಯಾರಿಸುವುದರಲ್ಲಿ ಇದು ಎತ್ತಿದ ಕೈ. 1937 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಕಾರ್ಖಾನೆ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೂ ಇಲ್ಲಿದಂಲೇ ಶಾಯಿ ಪೂರೈಕೆಯಾಗುತ್ತಿದೆ. ವಿಶ್ವದ ಎಲ್ಲೆ ಚುನಾವಣೆ ನಡೆದರು ಇಲ್ಲಿ ತಯಾರಾಗುವ ಕಪ್ಪು ಶಾಯಿಯೆ ಇಲ್ಲಿಂದ ಪೂರೈಕೆ ಮಾಡಲಾಗುತ್ತೆ. ಮೇ 10ರಂದು ನಡೆಯಲಿರುವ ರಾಜ್ಯ ಚುನಾವಣೆಗೆ ಇಲ್ಲಿಂದಲೆ ಬಾಟಲ್ ಶಾಯಿ ರವಾನಿಸಲಾಗಿದೆ.
ಇದನ್ನೂ ಓದಿ: Karnataka Polls: ವಿನೂತನ ಥೀಮ್ ಬೇಸ್ಡ್ ಮತಗಟ್ಟೆಗಳ ಸ್ಥಾಪನೆ, ಇನ್ನು ಕೆಲವು ಚುನಾವಣಾ ಸ್ವಾರಸ್ಯಕರ ಮಾಹಿತಿ
ಈ ಕಪ್ಪು ಮಸಿ ಕನಿಷ್ಟ 48 ಗಂಟೆಗಳಿಂದ 30 ದಿನಗಳವರೆಗೆ ಅಳಿಸಲಾರದು. ಒಂದು ಬಾಟಲ್ ಶಾಯಿಯಿಂದ ಸುಮಾರು 800 ಮಂದಿ ಮತದಾರರ ಬೆರಳಿಗೆ ಗುರುತು ಹಾಕಬಹುದು. ಈ ಕಪ್ಪು ಶಾಯಿ ದೇಶದ ಚುನಾವಣೆಗಳಿಗಷ್ಟೇ ಅಲ್ಲದೆ ಮಲೇಶಿಯಾ, ಕಾಂಬೋಡಿಯಾ, ಸಿಂಗಪೂರ್, ದಕ್ಷಿಣ ಆಫ್ರೀಕ, ಸೇರಿ 25 ದೇಶದ ಚುನಾವಣೆಗೂ ಇಲ್ಲಿಂದಲೆ ಶಾಯಿ ಪೂರೈಕೆಯಾಗುತ್ತಿರುವುದು ಮೈಸೂರು ಅರಗು ಕಾರ್ಖಾನೆಯ ಮತ್ತೊಂದು ಗಿರಿಮೆ. ದೇಶದ ಪ್ರಮುಖ ಪ್ರಕ್ರಿಯೆಯಾದ ಚುನಾವಣಾ ಪ್ರಕ್ರಿಯೆಗೆ ಮೈಸೂರಿನ ಈ ಕಾರ್ಖಾನೆ ಕಳೆದ 50 ವರ್ಷಗಳಿಂದ ನಿರಂತರವಾಗಿ ತನ್ನ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಮೊದಲು ದೇಶದ ಆಂತರಿಕ ಅಗತ್ಯ ಪೂರೈಕೆ ಮಾಡಿ ಆನಂತರ ರಫ್ತು ಮಾಡುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:40 am, Tue, 9 May 23