ಜಗದೀಶ್ ಶೆಟ್ಟರ್ ಕೊರಳಲ್ಲಿ ಕಾಂಗ್ರೆಸ್ ಶಾಲು ನೋಡಿ ಗಳಗಳನೆ ಅತ್ತ ಪತ್ನಿ ಶಿಲ್ಪಾ ಶೆಟ್ಟರ್
ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷದಿಂದ ಹೊರನಡೆದ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇತ್ತ ತನ್ನ ಪತಿಯ ಕೊರಳಲ್ಲಿ ಕಾಂಗ್ರೆಸ್ ಶಾಲು ನೋಡಿದ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿ: ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷದಿಂದ ಹೊರನಡೆದ ಜಗದೀಶ್ ಶೆಟ್ಟರ್ (Jagadish Shettar) ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇತ್ತ ತನ್ನ ಪತಿಯ ಕೊರಳಲ್ಲಿ ಕಾಂಗ್ರೆಸ್ ಶಾಲು ನೋಡಿದ ಪತ್ನಿ ಶಿಲ್ಪಾ ಶೆಟ್ಟರ್ (Shilpa Shettar) ಕಣ್ಣೀರು ಹಾಕಿದ್ದಾರೆ. ಶೆಟ್ಟರ್ ಕಾಂಗ್ರೆಸ್ (Congress) ಸೇರ್ಪಡೆಗೊಂಡ ಬಗ್ಗೆ ಮಾತನಾಡಿದ ಶಿಲ್ಪಾ ಶೆಟ್ಟರ್, ಶೆಟ್ಟರ್ ಕೊರಳಲ್ಲಿ ಕಾಂಗ್ರೆಸ್ ಬಾವುಟ ನೋಡಿ ನನಗೆ ನೋವಾಯಿತು. ಜೀವನದಲ್ಲಿ ಶಾಲು ಬದಲಾಗತ್ತದೆ ಅನ್ನೋ ಕನಸೆ ಕಂಡಿರಲಿಲ್ಲ. ಕಾಂಗ್ರೆಸ್ ಶಾಲು ಹಾಕಿದ್ದು ನೋಡಿ ಬಹಳ ನೋವಾಯಿತು. ಅದನ್ನು ನೋಡಿ ಕಣ್ಣೀರು ಬಂತು ಎಂದಿದ್ದಾರೆ.
ಜಗದೀಶ್ ಶೆಟ್ಟರ್ ಅವರೇ ಎಲ್ಲ ಜನರಿಗೆ ಟಿಕೆಟ್ ಕೊಡುತ್ತಿದ್ದರು. ನಮ್ಮ ಯಜಮಾನರಿಗೆ ಏನಾಯ್ತು? ಮೊದಲ ಲಿಸ್ಟ್ನಲ್ಲೇ ಪತಿಯ ಹೆಸರು ಬಂದಿಲ್ಲ. ಮನೆಗೆ ರಾಷ್ಟ್ರೀಯ ನಾಯಕರು ಬಂದಾಗ ಸೊಸೆಗೆ ನನಗೆ ಟಿಕೆಟ್ ಕೊಡುತ್ತೇವೆ ಎಂದು ಮಾತಾಡಿದ್ದರು, ನನಗೆ ಕೊಡುತ್ತೇನೆ ಅಂದಿದ್ದರು, ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ ಶಿಲ್ಪಾ ಶೆಟ್ಟರ್, ನಾನು ಚುನಾಚಣೆಗೆ ಸ್ಪರ್ಧೆ ಮಾಡಿದರೆ ನಾನು ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಂತೆ ಆಗತ್ತದೆ. ಅವರ ಟಿಕೆಟ್ನಲ್ಲಿ ಅವರ ನೋವಿದೆ. ಹೀಗಾಗಿ ನಾನು ಟಿಕೆಟ್ ನಿರಾಕರಿಸಿದ್ದೇನೆ ಎಂದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿಜೆಪಿ ಅಲರ್ಟ್, ಹುಬ್ಬಳ್ಳಿ ಅಖಾಡಕ್ಕೆ ನಡ್ಡಾ ಎಂಟ್ರಿ
ಚುನಾವಣೆ ಕಮೀಟಿ ಯಾಕೆ ಟಿಕೆಟ್ ತಪ್ಪಿಸಿತು? ಶೆಟ್ಟರ್ ಏನು ಭ್ರಷ್ಟರಾ? ಸಿಡಿ ಇದೆನಾ? ಎಂದು ಪ್ರಶ್ನಿಸಿದ ಶಿಲ್ಪಾ ಶೆಟ್ಟರ್, ಮನೆ ಕಟ್ಟಿ ಹೊರಗೆ ಹೋಗಬೇಕಾಯಿತು. ಅಂಗಲಾಚಿ ಟಿಕೆಟ್ ಕೇಳುವ ಪರಸ್ಥಿತಿ ಬಂತು. ಅದಕ್ಕೆ ನಾನು ಭಾವುಕನಾದೆ. ದೇವರು ನಮಗೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ. ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸೇರ್ಪಡೆ ನಂತರ ಶೆಟ್ಟರ್ ಹೇಳಿದ್ದೇನು?
ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ ವರಿಷ್ಠರಿಗೆ ಕೇಳಿದ್ದೆ. ನಿಮಗೆ ಟಿಕೆಟ್ ಕೊಡಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೇಳಿದ್ದರು. ನೀವೇ ಚುನಾವಣೆಗೆ ಆಸಕ್ತಿಯಿಲ್ಲವೆಂದು ಹೇಳಿಬಿಡಿ ಸಹ ಎಂದು ಹೇಳಿದ್ದರು. ಒಂದು ಪತ್ರ ಕಳುಹಿಸುತ್ತೇವೆಂದು ಸಹಿ ಮಾಡಿ ಕಳಿಸಿ ಎಂದಿದ್ದರು. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮಾತು ಕೇಳಿ ಆಘಾತವಾಯ್ತು. ಸೌಹಾರ್ದಯುತವಾಗಿ ಕರೆದು ಮಾತಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಬಿಜೆಪಿಯವರು ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸರ ತಂದಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಕೆಲವೊಬ್ಬರಿಗೆ ಬಿಜೆಪಿ ಅಧಿಕಾರಕ್ಕೆ ಬರೋದು ಬೇಡ ಅನಿಸುತ್ತಿದೆ. ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ. ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ 1 ವರ್ಷದಿಂದ ಷಡ್ಯಂತ್ರ ಮಾಡಿಕೊಂಡು ಬಂದಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಹಾನಿ ಆಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರಿಂದ ಪ್ಯಾಚ್ ಅಪ್ ಮಾಡಲಾಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Mon, 17 April 23