ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ: ಭವಿಷ್ಯ ನುಡಿದ KRPP ಅಧ್ಯಕ್ಷ ಜನಾರ್ದನ ರೆಡ್ಡಿ

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಕೆಆರ್​​ಪಿಪಿ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ: ಭವಿಷ್ಯ ನುಡಿದ KRPP ಅಧ್ಯಕ್ಷ ಜನಾರ್ದನ ರೆಡ್ಡಿ
ಜಿ. ಜನಾರ್ದನ ರೆಡ್ಡಿ
Follow us
ಗಂಗಾಧರ​ ಬ. ಸಾಬೋಜಿ
|

Updated on:May 07, 2023 | 9:08 PM

ಕಲಬುರಗಿ: ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಕೆಆರ್​​ಪಿಪಿ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನ ರೆಡ್ಡಿ (Janardhana Reddy) ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೂಡ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಪಕ್ಷ ಕಟ್ಟಿದ್ದೇನೆ. ದಿಢೀರನೆ ಮುಖ್ಯಮಂತ್ರಿ ಆಗಲು ಪಕ್ಷ ಕಟ್ಟಿಲ್ಲ ಎಂದರು. ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿರುವ ಬಿಜೆಪಿ ಸಂಪೂರ್ಣ ಮಣ್ಣುಪಾಲಾಗುತ್ತದೆ. ಯಡಿಯೂರಪ್ಪರನ್ನು ಮೊದಲು ಸಿಎಂ ಮಾಡಿದ್ದು ಜನಾರ್ದನ ರೆಡ್ಡಿ. 2018 ರಲ್ಲಿಯೇ ನಾನು ಪಕ್ಷ ಕಟ್ಟಬೇಕಿತ್ತು. ಆದರೆ ಯಡಿಯೂರಪ್ಪ ಮತ್ತೆ ಸಿಎಂ ಆಗೋದನ್ನು ತಪ್ಪಿಸಬಾರದು ಅಂತ ಸುಮ್ಮನಿದ್ದೆ ಎಂದು ಹೇಳಿದರು.

ಬಿಜೆಪಿ ಶ್ರೀರಾಮುಲು ಅವರನ್ನು ಮೂಲೆಗುಂಪು ಮಾಡಿದೆ: ಜಿ. ಜನಾರ್ದನ ರೆಡ್ಡಿ   

ಇದೀಗ ಶ್ರೀರಾಮುಲು ಅವರನ್ನು ಬಿಜೆಪಿಯವರು ಮೂಲೆಗುಂಪು ಮಾಡಿದ್ದಾರೆ. ಅವರನ್ನು ಪ್ರಚಾರಕ್ಕೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹಣೆಬರ ಚೆನ್ನಾಗಿದ್ದರೆ ಮಣ್ಣು ಮುಟ್ಟಿದರೂ ಬಂಗಾರವಾಗುತ್ತೆ ಅಂತಾರೆ. ನಾನು ಮುಟ್ಟಿದ್ದ ಮಣ್ಣು ಬಂಗಾರ ಆಯಿತು. ನಾನು ಯಾವುದೇ ಗುಡ್ಡಗಳನ್ನು ನುಂಗಿಲ್ಲ. ನಾನು ಜೈಲಿಗೆ ಹೋಗಿ ಬಂದಿದ್ದೇನೆ ಅಂತ ಹೇಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.

ಇದನ್ನೂ ಓದಿ: ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ವಿಷಯ ಪ್ರಸಾರಕ್ಕೆ ತಡೆ: ಆಯೋಗ ಆದೇಶ

ಯಡಿಯೂರಪ್ಪರನ್ನು ಕೂಡ ಜೈಲಿಗೆ ಕಳುಹಿಸಿದ್ದರು. ಬಿಜೆಪಿ ರಾಜ್ಯದಲ್ಲಿ ಜಾತಿ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗುವುದು ಗ್ಯಾರಂಟಿ ಎಂದು ಹೇಳಿದರು.

ಮಹಿಳಾ‌ ಸಮಾವೇಶದಲ್ಲಿ ಸೆರಗೊಡ್ಡಿ ಮತಯಾಚನೆ ಮಾಡಿದ ಲಕ್ಷ್ಮೀ ಅರುಣಾ 

ಇತ್ತ ಬಳ್ಳಾರಿಯಲ್ಲಿ KRPP ಪಕ್ಷದಿಂದ ಬೃಹತ್​ ಮಹಿಳಾ‌ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ KRPP ಅಭ್ಯರ್ಥಿ ಲಕ್ಷ್ಮೀ ಅರುಣಾ, ನಾನು ರಾಜಕೀಯ ಮನೆತನದಿಂದ ಬಡ ಕುಟುಂಬದಿಂದ ಬೆಳೆದು ಬಂದಿದ್ದೇನೆ. ರಾಜಕೀಯ ಕುತಂತ್ರವನ್ನ ಹತ್ತಿರದಿಂದ ನೋಡಿದ್ದೇನೆ. ಜನಾರ್ದನ ರೆಡ್ಡಿ ರಾಜಕೀಯವಾಗಿ ಎಲ್ಲರನ್ನೂ ಬೆಳೆಸಿದ್ದಾರೆ. ನಂಬಿದವರು, ಬೆಳಸಿದರವರು ಜೊತೆಗೆ ಇದ್ದವರು ನಮ್ಮನ್ನ ನಡು ನೀರಿನಲ್ಲಿ ಬಿಟ್ಟು ಹೋದರು ಎಂದು ಕಿಡಿಕಾರಿದರು.

ಒಂದು ಕಡೆ ನಾನು ಮಕ್ಕಳನ್ನ ಲಾಲನೆ ಪಾಲನೆ ಮಾಡಬೇಕು. ಇನ್ನೊಂದೆಡೆ ಕೇಸಗಳ ವಿಚಾರವನ್ನ ನೋಡಬೇಕು. ಜನಾರ್ದನ ರೆಡ್ಡಿ ಬಂಧನವಾದ ವೇಳೆ ದೀಪಾವಳಿಯ ವೇಳೆ ಮನೆಯಲ್ಲಿ ಕತ್ತಲು ಆವರಿಸಿತ್ತು. ಶಾಲೆಯಲ್ಲಿ ನನ್ನ ಮಕ್ಕಳಿಗೆ ಯಾರು ಎನೋ ಹೇಳ್ತಾರೋ ಅಂದು ಭಯಪಡುತ್ತಿದ್ದರು.

ಇದನ್ನೂ ಓದಿ: ನನ್ನ ನೋಡಿ ಮತ ಹಾಕಿ ಎನ್ನುವವರು ಆ ಪಕ್ಷ ಬಿಟ್ಟು ಬರ್ತಾರಾ? ಜಗದೀಶ್ ಶೆಟ್ಟರ್ ಹೇಳಿಕೆ ಪ್ರಲ್ಹಾದ್​​ ಜೋಶಿ ಟಾಂಗ್

ರಾಜಕೀಯ ಅಂದರೆ ಮೋಸ. ಮಹಾಭಾರತ ಶಕುನಿ ರೀತಿ ಮೋಸ ಮಾಡಿದರು. ರೆಡ್ಡಿ ಬಿಜೆಪಿಯನ್ನ ಅಧಿಕಾರಕ್ಕೆ ತಂದರು. ಆದರೆ ಅವರು ಮಾತ್ರ ಕಷ್ಟದಲ್ಲಿ ಸಿಲುಕಿಕೊಂಡಿದ್ದರು. ರೆಡ್ಡಿ ಒಂದು ಪಕ್ಷವನ್ನ ಅಧಿಕಾರಕ್ಕೆ ತಂದಿದ್ದರು. ಅದಕ್ಕಾಗಿ ವಿರೋಧ ಪಕ್ಷದವರು ಕೆಂಡದಂತಹ ಸಿಟ್ಟು ಹೊಂದಿದ್ದರು.

ನಮ್ಮನ್ನ ಕಷ್ಟಕ್ಕೆ ದುಕಿದವರು ಮತ್ತು ರಾಜಕೀಯ ನಾಯಕರು ನಮ್ಮನ್ನ ದೂರ ಮಾಡಿದ ಬಳಿಕ ಏನಾದರು ಸಾಧಿಸಬೇಕು ಅಂತಾ ಪಕ್ಷ ಸ್ಥಾಪನೆ ಮಾಡಿದ್ದೇವೆ ಎಂದು ಮಹಿಳಾ‌ ಸಮಾವೇಶದಲ್ಲಿ ಸೆರಗೊಡ್ಡಿ ಮತಯಾಚನೆ ಮಾಡಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Sun, 7 May 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್