Janardhana Reddy Manifesto : ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ರೈತರಿಗೆ ಮೊದಲ ಆದ್ಯತೆ

| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2023 | 7:58 PM

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಮೂಲಕ ಗಣಿಧಣಿ ಜನಾರ್ದನ ರೆಡ್ಡಿ, ರಾಜಕೀಯದ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, ಇಂದು ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

Janardhana Reddy Manifesto : ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ರೈತರಿಗೆ ಮೊದಲ ಆದ್ಯತೆ
ಜನಾರ್ದನ ರೆಡ್ಡಿ
Follow us on

ರಾಯಚೂರು: ಹೊಸ ಪಕ್ಷ ಕಟ್ಟಿದ ಬಳಿಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy ), ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬಿಡುವು ಇಲ್ಲದೆ ಪ್ರಚಾರ ಕಾರ್ಯ ಶುರುಮಾಡಿದ್ದಾರೆ..ಇಂದು ರಾಯಚೂರಿನಲ್ಲಿ ಪತ್ನಿ ಜೊತೆಗೆ ಮೊದಲ ಬಾರಿಗೆ ಪಾದಯಾತ್ರೆ ನಡೆಸಿ ಹಲ್ ಚಲ್‌ ಸೃಷ್ಟಿಸಿದ್ದಾರೆ. ಕೊಪ್ಪಳ, ಬಳ್ಳಾರಿ ಮೇಲೆ ಕಣ್ಣಿಟ್ಟಿರುವ ರೆಡ್ಡಿ ಇಂದು ಸಿಂಧನೂರು ಕ್ಷೇತ್ರದಲ್ಲಿ ಪತ್ನಿ ಅರುಣಾಲಕ್ಷ್ಮೀ ಜತೆ ಪಾದಯಾತ್ರೆ ನಡೆಸಿದರು. ಸುಮಾರು 15 ಕಿಲೋ ಮೀಟರ್​ ಹೆಜ್ಜೆ ಹಾಕಿದ ಜನಾರ್ದನ ರೆಡ್ಡಿ, ಬಳಿಕ ರೈತ ದಂಪತಿಗಳ ಪಾದಪೂಜೆ ಮಾಡಿ ಗಮನಸೆಳೆದರು. ಅಲ್ಲದೇ ಸುಕ್ಷೇತ್ರ ಅಂಬಾಮಠದಲ್ಲಿ ಪ್ರಣಾಳಿಕೆ (manifesto)ಬಿಡುಗಡೆ ಮಾಡಿದರು.

ಇದನ್ನೂ ಓದಿ: Janardhana Reddy: ಈ ಹಿಂದೆ ಸಿಬಿಐ ಬಂಧಿಸಿದ್ದ ರಹಸ್ಯ ಬಿಚ್ಚಿಟ್ಟ ಜನಾರ್ದನ ರೆಡ್ಡಿ, ಚುನಾವಣೆ ಹೊತ್ತಲ್ಲಿ ಹೊಸ ಬಾಂಬ್ ಸಿಡಿಸಿದ ಗಣಿ ಧಣಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷ ರೈತನ ಅಕೌಂಟ್‌ಗೆ 15 ಸಾವಿರ ರೂ. ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದು, ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಅಂಬಾಮಠದಲ್ಲಿ ಮಾತನಾಡಿದ ರೆಡ್ಡಿ, ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿರುವ ಕೆಲ ಅಂಶಗಳನ್ನು ತಿಳಿಸಿದರು. ಕೆಆರ್​ಪಿಪಿ ಅಧಿಕಾರಕ್ಕೆ ಬಂದರೇ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರತಿ ವರ್ಷ ರೈತರ ಖಾತೆಗೆ 15 ಸಾವಿರ ಹಣ ಜಮೆ ಮಾಡುತ್ತೇವೆ. ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ. ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಪ್ರತಿ ವರ್ಷ ಪ್ರತಿ ರೈತನ ಅಕೌಂಟ್ ಗೆ 15 ಸಾವಿರ ಹಣ ಜಮೆ. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೇ ನೀರಾವರಿ ಯೋಜನೆ ಸದೃಢಗೊಳಿಸಲಾಗುತ್ತೆ. ಸಕಾಲಕ್ಕೆ ರಸ ಗೊಬ್ಬರಗಳನ್ನ ರೈತರಿಗೆ ನೀಡಲಾಗುವುದು ಎಂದು ಘೋಷಿಸಿದರು.