ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿದ್ದಾರೆ, ಸೋಮಶೇಖರ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ

|

Updated on: Apr 09, 2023 | 5:01 PM

ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿ ಹೋಗಿದ್ದಾರೆ ಎಂದು ಸೋಮಶೇಖರ ರೆಡ್ಡಿ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ ಮಾಡಿದರು.

ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿದ್ದಾರೆ, ಸೋಮಶೇಖರ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ
ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ
Follow us on

ಬಳ್ಳಾರಿ: ಜನಾರ್ದನರೆಡ್ಡಿ (Janardhana Reddy) ಅನುಭವಿಸಿದ ಕಷ್ಟ ಯಾವ ಶತ್ರುಗೂ ಬರೋದು ಬೇಡ ಎಂದು ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ, ಪತ್ನಿ ಲಕ್ಷ್ಮೀ ಅರುಣಾ ಹೇಳಿದರು. ಕೆಆರ್​ಪಿಪಿ ಪಕ್ಷ ಸೇರ್ಪಡೆ ಸಮಾರಂಭ ಮಾತನಾಡಿದ ಅವರು, ನನ್ನ ಪತಿ ಗಾಲಿ ಜನಾರ್ದನ ರೆಡ್ಡಿ ಹಲವು ನಾಯಕರನ್ನು ಬೆಳೆಸಿದ್ದಾರೆ. ಗ್ರಾ.ಪಂ. ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ಮಾಡಿದ್ದಾರೆ. ರೆಡ್ಡಿ ಹೇಳಿದಂತೆ ರಾಜಕೀಯ ಅಂದ್ರೆ ಮೋಸ, ತಂತ್ರ, ಕುತಂತ್ರ. ರಾಜಕೀಯದಲ್ಲಿ ಸ್ನೇಹ ಸಂಬಂಧ ಲೆಕ್ಕಕ್ಕೇ ಬರಲ್ಲ ಅಂತಾ ಹೇಳುತ್ತಾರೆ. ರೆಡ್ಡಿಯಿಂದ ಬೆಳೆದವರೇ ಇಂದು ಅವರನ್ನ ದೂರಮಾಡಿ ಹೋಗಿದ್ದಾರೆ ಎಂದು ಸೋಮಶೇಖರ ರೆಡ್ಡಿ, ಶ್ರೀರಾಮುಲು ವಿರುದ್ಧ ಲಕ್ಷ್ಮೀ ಪರೋಕ್ಷ ವಾಗ್ದಾಳಿ ಮಾಡಿದರು. ರೆಡ್ಡಿ ಒಡಹುಟ್ಟಿದ ಸಹೋದರರು, ಸ್ನೇಹಿತರು ದೂರ ಸರಿದಿದ್ದಾರೆ. ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸ್ತಿದ್ದೇನೆ. ನಮ್ಮ ಕುಟುಂಬದ ಜೊತೆ ಬಳ್ಳಾರಿ ಜಿಲ್ಲೆಯ ಜನರು ಇದ್ದಾರೆ. ರೆಡ್ಡಿ ಅವಧಿಯಲ್ಲಿ ಮಾಡಿದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಸಿದ್ಧ. ಜನಾರ್ದನ ರೆಡ್ಡಿ ಮರಳಿ ಬಳ್ಳಾರಿಗೆ ಬರಬೇಕಿದೆ ಎಂದರು.

ಕೆಆರ್​ಪಿಪಿ ಪಕ್ಷಕ್ಕೆ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು  

ಜನಾರ್ದನ ರೆಡ್ಡಿ ಬಳ್ಳಾರಿಯಲ್ಲೂ ಆಪರೇಷನ್ ಕಾಂಗ್ರೆಸ್ ಶುರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಕೆಆರ್​ಪಿಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಾಲಿಕೆಯ ಮಾಜಿ ಮೇಯರ್​ ರ್ಗುರ್ರಂ ವೆಂಕಟರಮಣ, ಮಾಜಿ ಸದಸ್ಯೆ ಪರ್ವಿನ್ ಬಾನು, ಕಾಂಗ್ರೆಸ್ ಮುಖಂಡರಾದ ಶಾಸಾಬ್, ವಿ.ಎಸ್. ಮರಿದೇವಯ್ಯ, ರಾಮುಡು ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಕೆಆರ್​ಪಿಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ: ಇಂದು ರಾತ್ರಿಯೇ ಬಿಜೆಪಿ ಪಟ್ಟಿ ಬಿಡುಗಡೆಯಾಗಬಹುದು ಎಂದ ಜಗದೀಶ್ ಶೆಟ್ಟರ್

ಮುಸ್ಲಿಂ ಮತಗಳನ್ನ ಸೆಳೆಯಲು ರೆಡ್ಡಿ ಮಾಸ್ಟರ್ ಪ್ಲ್ಯಾನ್

ಜನಾರ್ದನ ರೆಡ್ಡಿ ಮುಸ್ಲಿಂ ಮತಗಳನ್ನ ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಕೆಆರ್​ಪಿಪಿ ಕಣ್ಣಿಟ್ಟಿದೆ. ಈ ಹಿಂದೆ ರೆಡ್ಡಿ ಅಮೀರ್ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಸಲ್ಲಿಕೆ ಮಾಡಿದ್ದರು. ಗಂಗಾವತಿ ಕ್ಷೇತ್ರದ ಖಾಲಿದ್ ಅಲಿ ಬಾಬಾ ದರ್ಗಾಗೂ ಸಹಾಯ ಮಾಡಿದ್ದರು. ಈ ಮೂಲಕ ಮುಸ್ಲಿಂ ಸಮುದಾಯದ ಮನವೊಲಿಕೆಗೆ ರೆಡ್ಡಿ ರಣತಂತ್ರ ರೂಪಿಸಿದ್ದು, ಕಾಂಗ್ರೆಸ್​ ಪಕ್ಷದ ವೋಟ್ ಬ್ಯಾಂಕ್ ಕಬಳಿಸಲು ಸಭೆಗಳ ಮೇಲೆ ಸಭೆ ಮಾಡಿದ್ದರು. ಬಳ್ಳಾರಿ ನಗರದ 40ಕ್ಕೂ ಹೆಚ್ಚು ಮಸೀದಿಗಳ ಮೌಲ್ವಿಗಳ ಜೊತೆ ಲಕ್ಷ್ಮೀ ಅರುಣಾ ಸಭೆ ನಡೆಸಿದ್ದರು.

ಇದನ್ನೂ ಓದಿ: ಅಥಣಿ ಟಿಕೆಟ್ ಫೈಟ್: ಯಾಕಿಷ್ಟು ಚಡಪಡಿಸುತ್ತಿದ್ದೀಯಾ ಲಕ್ಷ್ಮಣ್ ಅಣ್ಣ, ಆರಾಮವಾಗಿರು ಎಂದ ರಮೇಶ್ ಜಾರಕಿಹೊಳಿ

ಮೌಲ್ವಿಗಳು ಮತ್ತು ಹಾಫೀಜ್​ಗಳ ಮೂಲಕ ಸಮುದಾಯವನ್ನು ತಮ್ಮತ್ತ ಸೆಳೆಯಲು ಯತ್ನಿಸಿದ್ದರು. ಮೌಲ್ವಿಗಳು ಲಕ್ಷ್ಮೀ ಅರುಣಾ ದುವಾ ಮಾಡಿ ಬೆಂಬಲಿಸಿದ್ದರು. ಲಕ್ಷ್ಮೀ ಅರುಣಾ ಪರವಾಗಿ ಮೌಲ್ವಿಗಳು ಪ್ರಾರ್ಥನೆ ಸಲ್ಲಿಸಿ ಹಾರೈಸಿದ್ದರು. ರೆಡ್ಡಿ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬೆಂಬಲ ಸಿಕ್ಕರೇ ಕಾಂಗ್ರೆಸ್​-ಬಿಜೆಪಿಗೆ ಏಟು ಬೀಳಲಿದೆ. ಕಲ್ಯಾಣ ಕರ್ನಾಟಕದ 42 ವಿಧಾನಸಭಾ ಕ್ಷೇತ್ರಗಳಲ್ಲಿದೆ ಮುಸ್ಲಿಂ ಮತ ಬ್ಯಾಂಕ್ ಚೆನ್ನಾಗಿದೆ. ಹೀಗಾಗಿ ಜನಾರ್ದನ ರೆಡ್ಡಿ ರಣತಂತ್ರದಿಂದ ಕಾಂಗ್ರೆಸ್​-ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Sun, 9 April 23