ನಿಖಿಲ್‌ ಕುಮಾರಸ್ವಾಮಿ ಆಸ್ತಿ ಮೌಲ್ಯ 77 ಕೋಟಿ, ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳ ಒಡೆಯ; ಇನ್ನೂ ಏನೆಲ್ಲ ಇವೆ? ಇಲ್ಲಿದೆ ವಿವರ

|

Updated on: Apr 18, 2023 | 2:22 PM

ರಾಜ್ಯ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿರುವ ನಿಖಿಲ್ ಕುಮಾರಸ್ವಾಮಿ, ತಾವು ಹೊಂದಿರುವ ಆಸ್ತಿ ಹಾಗೂ ಸ್ವತ್ತುಗಳ ವಿವರ ಬಹಿರಂಗಪಡಿಸಿದ್ದಾರೆ. ವಿವರ ಇಲ್ಲಿದೆ.

ನಿಖಿಲ್‌ ಕುಮಾರಸ್ವಾಮಿ ಆಸ್ತಿ ಮೌಲ್ಯ 77 ಕೋಟಿ, ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳ ಒಡೆಯ; ಇನ್ನೂ ಏನೆಲ್ಲ ಇವೆ? ಇಲ್ಲಿದೆ ವಿವರ
ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ
Follow us on

ರಾಮನಗರ: ರಾಜ್ಯ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ತಾವು ಹೊಂದಿರುವ ಆಸ್ತಿ ಹಾಗೂ ಸ್ವತ್ತುಗಳ ವಿವರ ಬಹಿರಂಗಪಡಿಸಿದ್ದಾರೆ. ತಮ್ಮ ಕುಟುಂಬವು 77 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದು ಅವರು ಅಫಿಡವಿಟ್​​ನಲ್ಲಿ ಉಲ್ಲೇಖಿಸಿದ್ದು, 38.94 ಕೋಟಿ ರೂ. ರೂ ಸಾಲದ ಹೊರೆ ಇದೆ. ಲ್ಯಾಂಬೊರ್ಗಿನಿ ಸಹಿತ ಐದು ಕಾರುಗಳು ಇವೆ ಎಂದು ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದರು. ಇದೀಗ ರಾಮನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆಲ್ಲುವ ತವಕದಲ್ಲಿದ್ದಾರೆ.

  • ನಿಖಿಲ್ ಕುಮಾರಸ್ವಾಮಿ ಬಳಿ 46.81 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
  • ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
  • ನಿಖಿಲ್‌ ಕುಮಾರಸ್ವಾಮಿ ಬಳಿ 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
  • ರೇವತಿ ಬಳಿ 28 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
  • 2019ರ ಲೋಕಸಭೆ ಚುನಾವಣೆ ವೇಳೆ ನಿಖಿಲ್‌ 74 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.

ನಿಖಿಲ್ ಬಳಿ ಇರುವ ಚರಾಸ್ತಿ ಯಾವುದೆಲ್ಲ?

ನಿಖಿಲ್ ಕುಮಾರಸ್ವಾಮಿ ಬಳಿ 1.01 ಲಕ್ಷ ರೂ. ನಗದು ಹಾಗೂ ಪತ್ನಿ ಬಳಿ 3.53 ಲಕ್ಷ ರೂ. ನಗದು ಇದೆ. ನಿಖಿಲ್ ಬಳಿ 2.16 ಕೋಟಿ ರೂ. ಮೊತ್ತದ ರೇಂಜ್‌ ರೋವರ್, 2.9 ಕೋಟಿ ರೂ. ಮೊತ್ತದ ಲ್ಯಾಂಬೊರ್ಗಿನಿ ಸೇರಿದಂತೆ ಐದು ಕಾರುಗಳಿವೆ.

ಚಿನ್ನ, ಬೆಳ್ಳಿ ಎಷ್ಟಿದೆ?

1151 ಗ್ರಾಂ ತೂಕದ 64.45 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಹಾಗೂ 16 ಕೆಜಿ ತೂಕದ 11.08 ಲಕ್ಷ ರೂ. ಮೌಲ್ಯದ ಬೆಳ್ಳಿ ನಿಖಿಲ್ ಬಳಿ ಇದೆ. ಅವರ ಪತ್ನಿ ರೇವತಿ ಬಳಿ ಬಳಿ 36.35 ಲಕ್ಷ ರೂ. ಮೌಲ್ಯದ 641 ಗ್ರಾಂ ಚಿನ್ನ, 11.33 ಲಕ್ಷ ರೂ. ಮೌಲ್ಯದ 12.59 ಕ್ಯಾರೆಟ್‌ನಷ್ಟು ವಜ್ರ ಹಾಗೂ 23.20 ಲಕ್ಷ ರೂ. ಮೌಲ್ಯದ 33.5 ಕೆಜಿ ಬೆಳ್ಳಿ ಇದೆ

ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ನಿಖಿಲ್?

ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ ನಿಖಿಲ್‌ 76 ಲಕ್ಷ ರೂ, ಹೊರೈಜನ್‌ ರಿಯಾಲ್ಟಿ ಕಂಪನಿಯಲ್ಲಿ 6 ಕೋಟಿ ರೂ. ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿದ್ದಾರೆ. ತಂದೆ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಸಾಲ ನೀಡಿದ್ದಾರೆ

ಎಲ್ಲೆಲ್ಲಿವೆ ನಿಖಿಲ್ ಚರಾಸ್ತಿ?

ನಿಖಿಲ್‌ ಕುಮಾರಸ್ವಾಮಿ ಬೆಂಗಳೂರಿನ ರಿಚ್‌ಮಂಡ್‌ ಟೌನ್‌ನಲ್ಲಿ ಮೂರು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದು, ಇವುಗಳ ಸದ್ಯದ ಮಾರುಕಟ್ಟೆ ಮೌಲ್ಯ 28 ಕೋಟಿ ರೂ. ಇದೆ. ಸದ್ಯ ಯಾವುದೇ ಕೃಷಿ ಅಥವಾ ಕೃಷಿಯೇತರ ಭೂಮಿ ಹೊಂದಿಲ್ಲ. ಪತ್ನಿ ರೇವತಿ ಬೆಂಗಳೂರಿನ ಅತ್ತಿಗುಪ್ಪೆಯಲ್ಲಿ 28.36 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್‌ ಹೊಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಆದಾಯವೆಷ್ಟು?

ನಿಖಿಲ್ ಕುಮಾರಸ್ವಾಮಿ ವಾರ್ಷಿಕ 4.27 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. 2021-22ನೇ ಸಾಲಿನಲ್ಲಿ ನಿಖಿಲ್‌ ಕುಮಾರಸ್ವಾಮಿ ವಾರ್ಷಿಕ 4.27 ಕೋಟಿ ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದರು. 2017-18ರಲ್ಲಿ ಅವರ ವಾರ್ಷಿಕ ಆದಾಯ 71.42 ಲಕ್ಷ ರೂ. ಆಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Mon, 17 April 23