Raichur Election Results: ರಾಯಚೂರು ವಿಧಾನಸಭಾ ಕ್ಷೇತ್ರದ ರಿಸಲ್ಟ್: ಸತತ ಮೂರನೇ ಬಾರಿ ಗೆದ್ದು ಬೀಗಿದ ಬಿಜೆಪಿಯ ಡಾ ಶಿವರಾಜ್ ಪಾಟೀಲ್

Raichur Assembly Election Result 2023 Live Counting Updates: ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವಿನಯ್ ಕುಮಾರ್ ಈ, ಕಾಂಗ್ರೆಸ್ ನಿಂದ ಮೊಹಮ್ಮದ್ ಶಾಲಮ್ ಅವರನ್ನು ಹಿಂದಿಕ್ಕಿ ಬಿಜೆಪಿಯ ಡಾ ಶಿವರಾಜ್ ಪಾಟೀಲ್ ಸತತ 3ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ,

Raichur Election Results: ರಾಯಚೂರು ವಿಧಾನಸಭಾ ಕ್ಷೇತ್ರದ ರಿಸಲ್ಟ್: ಸತತ ಮೂರನೇ ಬಾರಿ ಗೆದ್ದು ಬೀಗಿದ ಬಿಜೆಪಿಯ ಡಾ ಶಿವರಾಜ್ ಪಾಟೀಲ್
ಡಾ ಶಿವರಾಜ್ ಪಾಟೀಲ್
Follow us
|

Updated on:May 13, 2023 | 1:53 PM

ರಾಯಚೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ವಿನಯ್ ಕುಮಾರ್ ಇ (Vinay Kumar E), ಕಾಂಗ್ರೆಸ್ ನಿಂದ ಮೊಹಮ್ಮದ್ ಶಾಲಮ್ (Mohammad Shalam), ಬಿಜೆಪಿಯಿಂದ ಡಾ ಶಿವರಾಜ್ ಪಾಟೀಲ್ (Dr Shivaraj Patil) ಹಾಗೂ ಅಪ್ ನಿಂದ ಡಿ ವೀರೇಶ್ ಕುಮಾರ್ ಯಾದವ್ ಸ್ಪರ್ಧಿಸಿದ್ದರು.  ಹಾಲಿ ಶಾಸಕ ಶಿವರಾಜ್ ಪಾಟೀಲ್ ಗೆಲುವು ಸಾಧಿಸಿದ್ದಾರೆ

2018 ರಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಶಾಸಕ ಬಿಜೆಪಿಯ ಶಿವರಾಜ್ ಪಾಟೀಲ್ ಕಾಂಗ್ರೆಸ್ ನ ಸಯ್ಯದ್ ಯಾಸಿನ್ ವಿರುದ್ಧ ಸುಮಾರು 11,000 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಹಾಂತೇಶ್ ಪಾಟೀಲ್ ಶೇಕಡ 6 ರಷ್ಟು ಮತ ಪಡೆಯಲು ಮಾತ್ರ ಸಫಲರಾಗಿದ್ದರು. ರಾಯಚೂರು ಮತಕ್ಷೇತ್ರದ ಒಂದು ವೈಶಿಷ್ಟ್ಯತೆಯಿದೆ. ಇಲ್ಲಿಂದ ಬಹಳಷ್ಟು ಸ್ಪರ್ಧಿಗಳು ಕಣಕ್ಕಿಳಿಯುತ್ತಾರೆ. 2018 ರಲ್ಲಿ 28 ಅಭ್ಯರ್ಥಿಗಳು ಕಣದಲ್ಲಿದ್ದರೆ, 2013 ರಲ್ಲಿ 21 ಸ್ಪರ್ಧಿಗಳಿದ್ದರು.

ಹಾಲಿ ಶಾಸಕ ಡಾ ಶಿವರಾಜ ಪಾಟೀಲ ಕ್ಷೇತ್ರದಲ್ಲಿ ಜನಪ್ರಿಯ ವ್ಯಕ್ತಿ ಅನ್ನೋದು ಈಗಾಗಲೇ ಸಾಬೀತಾಗಿರುವ ಅಂಶ, ಯಾಕೆಂದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ಅಗಲೂ ಅವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸೈಯದ್ ಯಾಸೀನ್ ಆಗಿದ್ದರು. ಮಾಜಿ ಕೇಂದ್ರ ಸಚಿವ ಜಾಫರ್ ಶರೀಫ್ ಅವರ ಅಳಿಯನಾಗಿರುವ ಸೈಯದ್ ಯಾಸೀನ್ ಅನಾರೋಗ್ಯದ ಕಾರಣ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದರು. ಅದರೆ ಹೈಕಮಾಂಡ್ ಅವರ ಮನವಿ ತಿರಸ್ಕರಿಸಿ ಮೊಹಮ್ಮದ್ ಶಾಲಂ ಅವರಿಗೆ ಟಿಕೆಟ್ ನೀಡಿತ್ತು. ಯಾಸೀನ್ 1999 ಮತ್ತು 2008ರಲ್ಲಿ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.

ಜೆಡಿಎಸ್ ಪಕ್ಷದ ವಿನಯ್ ಕುಮಾರ್ ಅವರಿಗೆ ಹೇಳಕೊಳ್ಳುವಂಥ ಜನಪ್ರಿಯತೆಯೇನೂ ಇರಲಿಲ್ಲ. ಆಮ್ ಆದ್ಮಿ ಪಾರ್ಟಿಯ ಡಿ ವೀರೇಶ್ ಕುಮಾರ್ ಕತೆಯೂ ಅದೇ. ಗಮನಿಸಬೇಕಾದ ಸಂಗತಿಯೇನೆಂದರೆ ರಾಯಚೂರು ಕ್ಷೇತ್ರದಲ್ಲಿ ಮುಸ್ಲಿಂ ಸಮಯದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗೇ ಕಾಂಗ್ರೆಸ್ ಮುಸಲ್ಮಾನ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 12:36 am, Sat, 13 May 23

ತಾಜಾ ಸುದ್ದಿ