Karnataka Breaking Kannada News: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಕ್ತಿ ಪ್ರದರ್ಶನ

| Updated By: Digi Tech Desk

Updated on: May 08, 2023 | 5:24 PM

Karnataka Election Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ಮತದಾನ ನಡೆಯಲಿದ್ದು, 13 ಮತೆಣಿಕೆ ಆರಂಭವಾಗಲಿದೆ. ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಅನೇಕ ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ...

Karnataka Breaking Kannada News: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಕ್ತಿ ಪ್ರದರ್ಶನ
ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ

Karnataka Breaking Kannada News Live Updates: ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಕಣಕ್ಕೆ ಧುಮುಕಿದ ಪ್ರಧಾನಿ ನರೇಂದ್ರ ಮೋದಿಯವರು, ಆಕ್ರಮಣಕಾರಿ ಶೈಲಿ ವಾಕ್ಚಾತುರ್ಯದ ಮೂಲಕ ಜನರ ನಾಡಿಮಿಡಿತವನ್ನು ಬಿಜೆಪಿಯತ್ತ ತಿರುಗಿಸಲು ಯತ್ನಿಸಿದರು. ರಾಜ್ಯದ ಬೀದರ್ ಜಿಲ್ಲೆಯಿಂದ ರಾಜಧಾನಿವರೆಗೆ ಜನಸಮೂಹವನ್ನು ಸೂಜಿಗಲ್ಲಿನಂತೆ ಸೆಳೆದು ಪಕ್ಷದ ಅಭ್ಯರ್ಥಿಗಳ ಪರವಾಗಿ ಶನಿವಾರ (ಏ.29) ಮತಬೇಟೆ ನಡೆಸಿದರು. ಡಬಲ್ ಇಂಜಿನ್‌ ಸರ್ಕಾರದ ಘೋಷಣೆ, ಕಾಂಗ್ರೆಸ್‌ ವಿರುದ್ಧ ಮಾತಿನ ಪ್ರಹಾರ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದರು. ಒಂದೆಡೆ ಪ್ರಧಾನಿ ಮೋದಿಯವ ಅಬ್ಬರದ ಪ್ರಚಾರ ನಡೆಯುತ್ತಿದ್ದರೇ, ಅತ್ತ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತಶಿಕಾರಿ ಜೋರಾಗಿ ನಡೆದಿತ್ತು. ಇನ್ನು ಕಾಂಗ್ರೆಸ್​ ಪಾಳಯದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಕಿತ್ತೂರು ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಬೃಹತ್​ ರೋಡ್​ ಶೋ ನಡೆಸಿದರು. ಒಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಕೇಂದ್ರ ನಾಯಕರು ಚುನಾವಣಾ ಅಖಾಡದಲ್ಲಿ ಭರ್ಜರಿ ಮತಶಿಕಾರಿ ನಡೆಸಿದ್ದಾರೆ.

LIVE NEWS & UPDATES

The liveblog has ended.
  • 30 Apr 2023 09:05 PM (IST)

    Karnataka Election Live: ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾ ಮಂತ್ರಿ ನಾಗೇಶ್: ಸಿದ್ದರಾಮಯ್ಯ

    ತುಮಕೂರು: ತಿಪಟೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಲ್ಲಿನ ಮಂತ್ರಿ ಬಿಸಿ ನಾಗೇಶ ಪಕ್ಕಾ ಆರ್​ಎಸ್​ಎಸ್​. ಸಮಾಜದಲ್ಲಿ‌ಇತಿಹಾಸ ತಿರುಚೋದು, ಸಮಾಜ ಹೊಡೆಯೋದು, ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟೊದು ಬಿಟ್ರೇ ಬೇರೆ ಏನ್ ಕೆಲಸ ಇಲ್ಲ. ಇಡೀ‌ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಮಕ್ಕಳಿಗೆ ನೈಜ ಚರಿತ್ರೆಯನ್ನ ತಿಳಿಸಬೇಕು. ಇತಿಹಾಸ ಮರೆಯುವವರು ಮುಂದೆ ಬರಲ್ಲಾ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಮನುಷ್ಯ ನಾಗೇಶ್ ಇದ್ದಾನಲ್ಲಾ ಇತಿಹಾಸವನ್ನೇ ತಿರುಚಿಬಿಡುತ್ತಾರೆ. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾ ಮಂತ್ರಿ ನಾಗೇಶ್ ಎಂದು ವಾಗ್ದಾಳಿ ನಡೆಸಿದರು.

  • 30 Apr 2023 08:33 PM (IST)

    Karnataka Election Live: ದೆಹಲಿಗೆ ತೆರಳಿದ ಪ್ರಧಾನಿ ಮೋದಿ

    ಮೈಸೂರು: ರಾಜ್ಯದಲ್ಲಿ 2 ದಿನ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅವರು ಇದೀಗ ದೆಹಲಿಗೆ ತೆರಳಿದ್ದಾರೆ. ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್​ನಿಂದ ವಾಯು ಸೇನಾ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಕೈಗೊಂಡಿದ್ದಾರೆ. ನಿನ್ನೆ ಹುಮ್ನಾಬಾದ್, ವಿಜಯಪುರ, ಕುಡಚಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಮೋದಿ, ಬೆಂಗಳೂರಿನಲ್ಲಿ ರೋಡ್​ಶೋ ನಡೆಸಿದ್ದರು. ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಇಂದು ಚುನಾವಣಾ ಪ್ರಚಾರ ಸಭೆ ನಡೆಸಿದ ಮೋದಿ, ಇಂದು ಮೈಸೂರಿನಲ್ಲಿ ರೋಡ್​ಶೋ ಮೂಲಕ ಮತಯಾಚಿಸಿ ದೆಹಲಿಗೆ ವಾಪಸ್ ಆಗಿದ್ದಾರೆ.


  • 30 Apr 2023 08:11 PM (IST)

    Karnataka Election Live: ರೋಡ್ ಶೋ ಮುಗಿಸಿ ಮಂಡಕಳ್ಳಿ ಏರ್​ಪೋರ್ಟ್​ಗೆ ಮೋದಿ ಪ್ರಯಾಣ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ​ಶೋ ಮುಗಿಸಿ ಕಾರು ಮೂಲಕ ಮಂಡಕಳ್ಳಿ ಏರ್​ಪೋರ್ಟ್​ಗೆ ತೆರಳಿದ್ದಾರೆ. ಹೈವೇ ವೃತ್ತದಿಂದ ಮಂಡಕಳ್ಳಿ ಏರ್​ಪೋರ್ಟ್​ಗೆ ತೆರಳಿದ ಮೋದಿ ಅಲ್ಲಿಂದ ಭಾರತೀಯ ವಾಯು ಸೇನೆ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.

  • 30 Apr 2023 08:06 PM (IST)

    Karnataka Election Live: ಹೈವೇ ಸರ್ಕಲ್ ಬಿಟ್ಟು ಮುಂದೆ ಸಾಗಿದ ಮೋದಿ ರೋಡ್ ಶೋ ರೋಡ್ ಶೋ

    ಮೈಸೂರು: ಪ್ರಧಾನಿ ಮೋದಿ ಅವರ ರೋಡ್ ಶೋ ಹೈವೇ ಸರ್ಕಲ್ ಬಿಟ್ಟು ಮುಂದೆ ಸಾಗಿದೆ. ಎಲ್​ಐಸಿ ಸರ್ಕಲ್ ಬಳಿ ಸಾಗಿದೆ. ಸಮಯದ ಅಭಾವ ಹಿನ್ನೆಲೆ ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್​ವರೆಗೆ ರೋಡ್ ಶೋ ಆಯೋಜಿಸಲಾಗಿತ್ತು. ಸದ್ಯ ಸರ್ಕಲ್ ದಾಟಿ ರೋಡ್ ಶೋ ಮುಂದೆ ಸಾಗಿದೆ.

  • 30 Apr 2023 08:02 PM (IST)

    Karnataka Election Live: ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಯಡಿಯೂರಪ್ಪ

    ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ: ಯಡಿಯೂರಪ್ಪ

    ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪ್ರಚಾರಾರ್ಥ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ. ನಾಳೆ ಈ ತೀರ್ಮಾನ ಪ್ರಕಟಿಸುತ್ತೇವೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ. ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಅನ್ನೋದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಆ ರಾಹುಲ್ ಗಾಂಧಿ, ಮೋದಿ ಮತ್ತು ಅಮಿತ್ ಶಾ  ಮುಂದೆ ನಿಲ್ಲುವುದಕ್ಕೆ ಸಾಧ್ಯ ಇದೆಯಾ ಎಂದು ಪ್ರಶ್ನಿಸಿದರು.

  • 30 Apr 2023 07:48 PM (IST)

    Karnataka Election Live: ಮೈಸೂರಿನಲ್ಲಿ ಪ್ರಧಾನಿ ಮೋದಿ ಶಕ್ತಿ ಪ್ರದರ್ಶನ, ರೋಡ್ ಶೋ ಅಂತ್ಯ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆಸುತ್ತಿದ್ದ ರೋಡ್ ಶೋ ಇದೀಗ ಅಂತ್ಯಗೊಂಡಿದೆ. ವಿದ್ಯಾಪೀಠ ವೃತ್ತದಿಂದ ಆರಂಭವಾದ ರೋಡ್ ಶೋ ಹೈವೇ ಸರ್ಕಲ್​ನಲ್ಲಿ ಅಂತ್ಯಗೊಂಡಿತು. ವಿಶ್ವ ಮೆಚ್ಚಿದ ನಾಯಕನನ್ನು ನೋಡಲು ದಾರಿಯುದ್ದಕ್ಕೂ ಸಾವಿರಾರರು ಜನರು ಜಮಾಯಿಸಿದ್ದರು.

  • 30 Apr 2023 07:28 PM (IST)

    Karnataka Election Live: ಮೋದಿ ರೋಡ್ ಶೋ ವೇಳೆ ಹೂವಿನೊಂದಿಗೆ ತೂರಿಬಂದ ಮೊಬೈಲ್

    ಮೈಸೂರು: ರೋಡ್ ಶೋದಲ್ಲಿ ಬರುತ್ತಿರುವ ಪ್ರಧಾನಿ ಮೋದಿ ಮೇಲೆ ಕಾರ್ಯಕರ್ತರು ಹೂವಿನ ಮಳೆಗರೆಯುತ್ತಿದ್ದಾರೆ. ಅದರಂತೆ ಚಿಕ್ಕಗಡಿಯಾರ ಬಳಿಯೂ ಹೂವು ಎಸೆಯಲಾಗಿದೆ. ಈ ವೇಳೆ ಮೋದಿ ಹಿಂಬದಿಯಿಂದ ಹೂವಿನ ರಾಶಿಯೊಂದಿಗೆ ಮೊಬೈಲ್ ಕೂಡ ಎಸೆದಿದ್ದು, ತೆರೆದ ವಾಹನದ ಮುಂಭಾಗಕ್ಕೆ ಬಿದ್ದಿದೆ.

  • 30 Apr 2023 06:59 PM (IST)

    Karnataka Election Live: ಮೋದಿ ನೋಡಲು 6 ತಿಂಗಳ ಮಗು ಜೊತೆ ಆಗಮಿಸಿದ ಬಾಣಂತಿ,

    ಮೋದಿ ರೋಡ್ ಶೋದಲ್ಲಿ ಮುಸ್ಲಿಂ ಮಹಿಳೆಯರು

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸುತ್ತಿದ್ದ, ಇವರನ್ನು ನೋಡಲ ಹೈವೆ ಸರ್ಕಲ್​ ಬಳಿ 6 ತಿಂಗಳ ಮಗು ಜೊತೆ ಬಾಣಂತಿ ಶೋಭಾ ಆಗಮಿಸಿದ್ದಾರೆ. ಇತ್ತ ಬುರ್ಕಾ ದರಿಸಿದ ಮುಸ್ಲಿಂ ಮಹಿಳೆಯರು ಕೂಡ ಮೋದಿ ನೋಡಲು ಕಾಯುತ್ತಿದ್ದಾರೆ.

  • 30 Apr 2023 06:56 PM (IST)

    Karnataka Election Live: ಮೈಸೂರು ಚುನಾವಣೆ ಹೇಗಿದೆ? ವೇದಾವತಿ ರೇಣುಕಾ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದ ಕೇಳಿದ ಮೋದಿ

    ಮೈಸೂರು: ಹೆಲಿಪ್ಯಾಡ್​ನಲ್ಲಿ ವೇದಾವತಿ ರೇಣುಕಾ ಶ್ರೀನಿವಾಸ್ ಅವರೊಂದಿಗೆ ಪ್ರಧಾನಿ ಮೋದಿ ಅವರು ಮಾತನಾಡಿದರು. ಮೈಸೂರು ಚುನಾವಣೆ ಹೇಗಿದೆ ? ಹೇಗೆ ಪ್ರಚಾರ ಮಾಡುತ್ತಿದ್ದೀರಾ ? ನಾನಿದ್ದಿನಿ ಅಂತಾ ಎಲ್ಲಾ ಗೆಲ್ಲುತ್ತೇವೆ ಅಂತಾ ಹೇಳಬೇಡಿ ? ಸರಿಯಾಗಿ ಹೇಳಿ ಅಂತಾ ಕೇಳಿದರು.

  • 30 Apr 2023 06:51 PM (IST)

    Karnataka Election Live: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭ

    ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭಗೊಂಡಿದೆ. ವಿದ್ಯಾಪೀಠ ವೃತ್ತದಿಂದ ರೋಡ್ ಶೋ ಆರಂಭಿಸಿದ್ದು, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎ.ರಾಮದಾಸ್ ಭಾಗಿಯಾಗಿದ್ದಾರೆ. ಹೈವೇ ಸರ್ಕಲ್​ವರೆಗೆ ಮಾತ್ರ ರೋಡ್ ​ಶೋ ನಡೆಯಲಿದೆ. ಬನ್ನಿಮಂಟಪದ LIC ವೃತ್ತದಲ್ಲಿ ರೋಡ್ ​ಶೋ ಅಂತ್ಯವಾಗಬೇಕಿತ್ತು. ಸಮಯದ ಅಭಾವದಿಂದ ಹೈವೇ ವೃತ್ತದ​ವರೆಗೆ ಮಾತ್ರ ರೋಡ್​ಶೋ ನಡೆಯಲಿದೆ.

  • 30 Apr 2023 05:40 PM (IST)

    Karnataka Election Live: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಕುಮಾರಸ್ವಾಮಿ ಎಂದ ದೇವೇಗೌಡ

    ರಾಮನಗರ: ಬಡವರ ಪರ ಇರೋದು ಒಬ್ಬರೇ ರಾಜಕಾರಣಿ ಅದು ಹೆಚ್​ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹೇಳಿದರು. ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚನ್ನಪಟ್ಟಣಕ್ಕೆ ಬರಲು ಆಗಿಲ್ಲ. ಅವರ ಪರವಾಗಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಮೇ 10ರಂದು ಕುಮಾರಸ್ವಾಮಿ ಗೆಲ್ಲಿಸಿ, 13ಕ್ಕೆ  ಅವರು ಮುಖ್ಯಮಂತ್ರಿ ಆಗುತ್ತಾರೆ. ಹಾಗಾಗಿ ಎಲ್ಲರೂ ಹೆಚ್​.ಡಿ.ಕುಮಾರಸ್ವಾಮಿ ಪರ ಕೆಲಸ ಮಾಡಿ ಎಂದರು.

  • 30 Apr 2023 05:06 PM (IST)

    Karnataka Election Live: ಮೇ 10ರಂದು ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ: ಮೋದಿ

    ಹಾಸನ: ಪ್ರತಿಭಾವಂತರನ್ನು ಬಿಜೆಪಿ ಸರ್ಕಾರ ಗೌರವಿಸುತ್ತದೆ ಎಂದು ಧಾನಿ ಮೋದಿ ಹೇಳಿದರು. ಕರ್ನಾಟಕದ ಭವ್ಯ ಸಂಸ್ಕೃತಿಯ ಬಗ್ಗೆ ಕಾಂಗ್ರೆಸ್​ಗೆ ಕಾಳಜಿ ಇಲ್ಲ. ಆದರೆ ಬಿಜೆಪಿ ಸರ್ಕಾರ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ. ಮೇ 10ರಂದು ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ. ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ ಎಂದರು.

  • 30 Apr 2023 04:53 PM (IST)

    Karnataka Election Live: ಕಾಂಗ್ರೆಸ್ ವಿರುದ್ಧ ನಮೋ ಗುಡುಗು

    ಹಾಸನ: ಬೇಲೂರು ತಾಲೂಕಿನ ಇಬ್ಬೀಡು ಬಳಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ​, ರಸಗೊಬ್ಬರದಲ್ಲೂ ಭ್ರಷ್ಟಾಚಾರ ಮಾಡಿ ರೈತರಿಗೆ ನಷ್ಟ ಮಾಡಿತ್ತು. ಆದರೆ ನಾವು ರೈತರ ಹಿತಾಸಕ್ತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯೂರಿಯಾ ಗೊಬ್ಬರ ಕೇವಲ 5-6 ರೂ.ಗೆ ಸಿಗುವಂತೆ ಮಾಡಿದ್ದೇವೆ. ನ್ಯಾನೋ ಯೂರಿಯಾ ಸದ್ಭಳಕೆಯಿಂದ ಹಣ ಉಳಿತಾಯ ಆಗುತ್ತದೆ ಎಂದರು. ಕರ್ನಾಟಕದಲ್ಲಿ ಆಧುನಿಕ ಮೂಲಸೌಕರ್ಯಗಳು ಹೆಚ್ಚಿಸಿದ್ದೇವೆ. ಡಬಲ್​ ಇಂಜಿನ್​ ಸರ್ಕಾರ ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ, ಕರ್ನಾಟಕವನ್ನು ನಂಬರ್ 1 ಮಾಡಲು ಬಿಜೆಪಿಗೆ ವೋಟ್ ನೀಡಿ. ಯುಪಿಎ ಅವಧಿಕ್ಕಿಂತ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದೇವೆ ಎಂದರು.

  • 30 Apr 2023 04:51 PM (IST)

    Karnataka Election Live: ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ: ಯತ್ನಾಳ್

    ಅವಕಾಶ ಕೊಟ್ಟರೆ ಯುಪಿ ಸರ್ಕಾರದ ಮಾದರಿ ಅಧಿಕಾರ ಮಾಡುತ್ತೇನೆ: ಯತ್ನಾಳ್

    ಬೆಳಗಾವಿ: ನನಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ, ಆದರೆ ಮುಖ್ಯಮಂತ್ರಿ ಮಾಡಿ ಅಂತ ಕೇಳಿ ಗೊಂದಲ ಮಾಡಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮಂತ್ರಿಯಾಗಬೇಕು ಅಂತಾ ಯಾವತ್ತೂ ಹೋರಾಟ ಮಾಡಿಲ್ಲ. ಸಿಎಂ ಮಾಡಿ ಅಂತಾ ಜನರ ಕಡೆಯಿಂದ ಲಾಬಿ ಮಾಡುವುದಿಲ್ಲ. ಅವಕಾಶ ಕೊಟ್ಟರೆ ಯುಪಿ ಸರ್ಕಾರದ ಮಾದರಿ ಅಧಿಕಾರ ಮಾಡುತ್ತೇನೆ. ಅಂತಿಮವಾಗಿ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತಾರೆ. ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ ಎಂದರು.

  • 30 Apr 2023 04:47 PM (IST)

    Karnataka Election Live: ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ವಂಚನೆ: ಪ್ರಧಾನಿ ಮೋದಿ

    ಹಾಸನ: ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ವಂಚನೆ, ತುಷ್ಟೀಕರಣ ಮಾಡಿಕೊಳ್ಳುತ್ತಾ ದೇಶದ ಜನರನ್ನು ಮೋಸ ಮಾಡಿದೆ ಎಂದು ಕಾಂಗ್ರೆಸ್​​ನ ತುಷ್ಟೀಕರಣ ರಾಜಕೀಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಆದರೆ ಬಿಜೆಪಿ ಸರ್ಕಾರ ಸಂತುಷ್ಟಿಗೊಳಿಸಿದೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಅಗಾಧ ಬದಲಾವಣೆ ತಂದಿದ್ದೇವೆ. ಕರ್ನಾಟಕದಲ್ಲಿ ಡಬಲ್​ ಇಂಜಿನ್​ ಸರ್ಕಾರದಿಂದ ಅಭಿವೃದ್ಧಿ ಆಗಿದೆ. ಹಾಸನದಲ್ಲೂ ಮೆಡಿಕಲ್ ಆಸ್ಪತ್ರೆ ಸ್ಥಾಪಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ಬಡ ಮಹಿಳೆಯರ ಕಲ್ಯಾಣ ಆಗಿದೆ. ಕರ್ನಾಟಕದಲ್ಲಿ 9 ಲಕ್ಷ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

  • 30 Apr 2023 04:45 PM (IST)

    Karnataka Election Live: ಕಾಂಗ್ರೆಸ್ ಜೆಡಿಎಸ್ ತೋರ್ಪಡಿಕೆ ಜಗಳ ಇದ್ದಿದ್ದೆ: ಪ್ರಧಾನಿ ಮೋದಿ

    ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷ ತೋರಿಕೆಗಾಗಿ ವಿರೋಧಿಗಳಂತೆ ನಾಟಕ ಮಾಡುತ್ತಾರೆ. ಹಿಂದಿನ ಚುನಾವಣೆಯಲ್ಲಿ ಅವರ ಭಾಷಣ ನೋಡಿದರೆ ಅದು ಗೊತ್ತಾಗುತ್ತದೆ. ಚುನಾವಣೆ ಮುಗಿದ ಕೂಡಲೆ ಅವರು ಕೈ ಕೈ ಜೋಡಿಸಿ ಒಂದಾದರು. ಅವರ ಈ ರೀತಿಯ ತೋರಿಕೆ ಜಗಳ ಇದ್ದದ್ದೆ. ಹಾಗಾಗಿ ನೀವು ಜೆಡಿಎಸ್​ಗೆ ನೀಡುವ ಮತ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತದೆ. ಕಾಂಗ್ರೆಸ್​ಗೆ ಮತ ನೀಡಿದರೆ ವಿಕಾಸಕ್ಕೆ ಹಿನ್ನಡೆಯಾದಂತೆ ಎಂದು ಟೀಕಿಸಿದರು.

  • 30 Apr 2023 04:41 PM (IST)

    Karnataka Election Live: ಜೆಡಿಎಸ್‌ ಪ್ರೈವೇಟ್ ಲಿಮಿಟೆಡ್ ಪಾರ್ಟಿ: ಪ್ರಧಾನಿ ಮೋದಿ

    ಹಾಸನ: ಜೆಡಿಎಸ್‌ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದರು. ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್​, ಜೆಡಿಎಸ್​​ ಕುಟುಂಬ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೆಹಲಿಯಲ್ಲಿ ನೆಲೆಸಿರುವ ಒಂದು ಕುಟುಂಬ (ಗಾಂಧಿ ಕುಟುಂಬ) ನಿರ್ಣಯ ಮಾಡುತ್ತಿದೆ. ಟಿಕೆಟ್ ಸೇರಿದಂತೆ ಎಲ್ಲವನ್ನೂ ಆ ಕುಟುಂಬ ತೀರ್ಮಾನಿಸುತ್ತಿದೆ. ದೆಹಲಿ ಕುಟುಂಬಕ್ಕೆ ವಿಧೇಯಕವಾದವರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ನವರು ಒಂದು ಕುಟುಂಬದ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ಬಿಜೆಪಿ ಸಾಮಾನ್ಯ ವ್ಯಕ್ತಿಯನ್ನೂ ನನ್ನ ಕುಟುಂಬ ಎಂದು ಭಾವಿಸುತ್ತದೆ. ದೇಶದಲ್ಲಿ ಕೊವಿಡ್ ಸಂದರ್ಭದಲ್ಲಿ ಬಿಜೆಪಿ ಉಚಿತ ವ್ಯಾಕ್ಸಿನ್ ನೀಡಿದೆ, ಅದೇ ಬಿಜೆಪಿ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ. ದೇಶದ ಕೋಟ್ಯಂತರ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ ಎಂದರು.

  • 30 Apr 2023 04:38 PM (IST)

    Karnataka Election Live: ಜೆಡಿಎಸ್ ಒಂದು ಕುಟುಂಬಕ್ಕಾಗಿ ಮಾತ್ರ ಇದೆ: ಪ್ರಧಾನಿ ಮೋದಿ

    ಹಾಸನ: ಬೇಲೂರು ಸಮೀಪದ ಇಬ್ಬೀಡು ಗ್ರಾಮದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕದ ಜೆಡಿಎಸ್ ಪಕ್ಷ ಕೇವಲ ಒಂದು ಕುಟುಂಬಕ್ಕಾಗಿ ಮಾತ್ರ ಇದೆ. ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂದು ಟೀಕಿಸಿದರು.

  • 30 Apr 2023 04:34 PM (IST)

    Karnataka Election Live: ಕಾಂಗ್ರೆಸ್​ಗೆ ವೋಟ್​ ಹಾಕಿದರೆ ರಾಜ್ಯದ ಅಭಿವೃದ್ಧಿಗೆ ಬ್ರೇಕ್ ಬೀಳುತ್ತದೆ: ಮೋದಿ

    ಹಾಸನ: ಕಾಂಗ್ರೆಸ್​ಗೆ ವೋಟ್​ ಹಾಕಿದರೆ ರಾಜ್ಯದ ಅಭಿವೃದ್ಧಿಗೆ ಬ್ರೇಕ್ ಬೀಳುತ್ತದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೇ 85% ಲೂಟಿ ಹೊಡೆಯುತ್ತಾರೆ. ಇದೆಲ್ಲಾ ತಡೆಯಲು ಡಬಲ್​ ಇಂಜಿನ್ ಸರ್ಕಾರಕ್ಕೆ ವೋಟ್ ಮಾಡಿ ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದರು.

  • 30 Apr 2023 04:32 PM (IST)

    Karnataka Election Live: ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತ: ಮೋದಿ

    ಹಾಸನ: ಕಾಂಗ್ರೆಸ್ ಸರ್ಕಾರ ಇರುವ ರಾಜಸ್ಥಾನ, ಛತ್ತೀಸ್​​ಗಢ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿವೆ. ಕಾಂಗ್ರೆಸ್​ ಆಡಳಿತವಿರುವ ರಾಜ್ಯಗಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಬೈಯ್ಯುತ್ತಿದ್ದರು. ಫಲಿತಾಂಶದ ನಂತರ ಜೆಡಿಎಸ್​, ಕಾಂಗ್ರೆಸ್​ನವರು ತಬ್ಬಿಕೊಂಡಿದ್ದರು. ಹೀಗಾಗಿ ಜೆಡಿಎಸ್​ಗೆ ನೀಡುವ ಪ್ರತಿ ವೋಟ್​ ಕಾಂಗ್ರೆಸ್​ಗೆ ಹೋಗುತ್ತದೆ. ಕಾಂಗ್ರೆಸ್​ ಕರ್ನಾಟಕವನ್ನು ರಿವರ್ಸ್​ ಗೇರ್​ನಲ್ಲಿ ಕೊಂಡೊಯ್ಯುತ್ತದೆ. ಕಾಂಗ್ರೆಸ್​, ಜೆಡಿಎಸ್​ನಿಂದ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

  • 30 Apr 2023 04:24 PM (IST)

    Karnataka Election Live: ಈ ಬಾರಿಯ ಕರ್ನಾಟಕದ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ: ಪ್ರಧಾನಿ ಮೋದಿ

    ಹಾಸನ: ಬಿಜೆಪಿ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕಲೆಗಳ ಬೀಡು ಬೇಲೂರಿನ ಸೋದರ, ಸೋದರಿಯರಿಗೆ ನಮಸ್ಕಾರ. ಕರ್ನಾಟಕದ ಮಠ ಪರಂಪರೆಯ ಎಲ್ಲ ಸ್ವಾಮೀಜಿಗಳಿಗೂ ನಮನ. ಕರ್ನಾಟಕದಲ್ಲಿ ಈಗ ಒಂದೇ ಘೋಷಣೆ ಕೇಳಿ ಬರುತ್ತಿದೆ. ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ, ಇಲ್ಲಿ ನಿಮ್ಮೆಲ್ಲರನ್ನೂ ನೋಡಿದಾಗ ಅದೇ ಉತ್ಸಾಹ ಕಂಡುಬರುತ್ತಿದೆ. ಈ ಬಾರಿ ಕರ್ನಾಟಕದ ಮತದಾರರು ನಿರ್ಧಾರ ಮಾಡಿಬಿಟ್ಟಿದ್ದಾರೆ. ಕಾಂಗ್ರೆಸ್​, ಜೆಡಿಎಸ್​ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಜೆಡಿಎಸ್​ ಪಕ್ಷ ಕಾಂಗ್ರೆಸ್ ಪಕ್ಷದ ಬಿ ಟೀಂ ಆಗಿದೆ ಎಂದರು.

  • 30 Apr 2023 04:16 PM (IST)

    Karnataka Election Live: ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಅನ್ನುತ್ತಾರೆ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

    ಶಿವಮೊಗ್ಗ: ನಗರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಖಜಾನೆ ತುಂಬಿದೆ. ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಉದೋ ಉದೋ ಅನ್ನುತ್ತಾರೆ. ಬಿಜೆಪಿಯಿಂದ ಕರ್ನಾಟಕಕ್ಕೆ ಕೊಡುಗೆ ಏನು? ಕರ್ನಾಟಕಕ್ಕೆ ಏನಾದರೂ ದೊಡ್ಡ ಕಾರ್ಖಾನೆ ಮಾಡಿಕೊಟ್ಟಿದ್ದೀರಾ? ದೊಡ್ಡ ಹೂಡಿಕೆ ಏನಾದರೂ ಮಾಡಿದ್ದೀರಾ? ಏನು ಮಾಡಿದ್ದರೂ ಕೂಡಾ ಮೈಸೂರು ಮಹಾರಾಜರ ಕಾಲದಲ್ಲಿ, ಜವಹರ್ ಲಾಲ್ ನೆಹರು ಕಾಲದಲ್ಲಿ ಆಗಿರುವುದು ಎಂದರು. ಪ್ರತಿಯೊಬ್ಬರಿಗೆ 10 ಕೆಜಿ ಸಣ್ಣ ಕ್ಕಿ ಕೊಡುತ್ತೇವೆ, 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ, ಉಚಿತ ಬಸ್ ಪಾಸ್ ಕೊಡುತ್ತೇವೆ, ಇದೆಲ್ಲಾ ನಮ್ಮ ಗ್ಯಾರೆಂಟಿ ಯೋಜನೆ. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ ಎಂದರು.

  • 30 Apr 2023 04:11 PM (IST)

    Karnataka Election Live: ಬಿಜೆಪಿ ಸಮಾವೇಶಕ್ಕೆ ಮೋದಿ ಎಂಟ್ರಿ

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಇಬ್ಬೀಡು ಬಳಿ ಆಯೋಜಿಸಿರುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ವೇದಿಕೆ ಮೇಲೆ ಆಗಮಿಸಿ ಕಾರ್ಯಕರ್ತರತ್ತ ಮೋದಿ ಕೈಬೀಸಿದರು. ಈ ವೇಳೆ ಜಯಘೋಷಗಳು ಮೊಳಗಿದವು. ನಂತರ ವೇದಿಕೆಯಲ್ಲಿರುವ ನಾಯಕರು, ಅಭ್ಯರ್ಥಿಗಳಿಗೆ ಮೋದಿ ನಮಸ್ಕರಿಸಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

  • 30 Apr 2023 04:08 PM (IST)

    Karnataka Election Live: ವಾಡಿ ಪಟ್ಟಣದಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರ

    ಕಲಬುರ್ಗಿ: ವಾಡಿ ಪಟ್ಟಣದಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ಮಾತಯಾಚನೆ ಮಾಡಿದರು. ಭಾಷಣ ಆರಂಭದಲ್ಲಿ ಚಿತ್ತಾಪುರದ ನಾಗವಿ ಯಲ್ಲಮ್ಮ, ಚಂದ್ರಲಾಪರಮೇಶ್ವರಿ, ಸೇವಾಲಾಲ್, ಶರಣಬಸವೇಶ್ವರ ಹಾಗೂ ಅಂಬೇಡ್ಕರ್ ಅವರನ್ನ ನೆನೆದರು. ಮಣಿಕಂಠ ರಾಠೋಡ್ ಅವರ ಪರ ನೀವು ಇಲ್ಲಿಗೆ ಬಂದಿದ್ದಕ್ಕೆ ನೀಮ್ಗೆ ಧನ್ಯವಾದಗಳು ಎಂದರು. ರೈತರು ತಲೆ ಎತ್ತಿ ನಡೆಯುವಂತೆ ಮೋದಿ ಅವರು ಮಾಡಿದ್ದಾರೆ. 20 ಕೋಟಿ ಜನರಿಗೆ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ಕೊಡುವ ಕೆಲಸ ಮೋದಿ ಅವರು ಮಾಡಿದ್ದಾರೆ. ನಾವು ತುಷ್ಠಿಕರಣದ ಮಾರ್ಗದಲ್ಲಿ ಅಲ್ಲ ಸಶಕ್ತಿಕರಣದ ಮಾರ್ಗದಲ್ಲಿ ನಡೆಯುತ್ತಿದ್ದೆವೆ‌‌. ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಅಭಿವೃದ್ಧಿ ಆಗುತ್ತಿದೆ ಎಂದರು.

  • 30 Apr 2023 04:03 PM (IST)

    Karnataka Election Live: ಚನ್ನಪಟ್ಟಣದಿಂದ ಹಾಸನಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ಹಾನಸ: ಚನ್ನಪಟ್ಟಣದಿಂದ ಹಾಸನದ ಬೇಲೂರು ತಾಲೂಕಿನ ಇಬ್ಬೀಡು ಹೆಲಿಪ್ಯಾಡ್​ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಬಿಜೆಪಿ ಮುಖಂಡರು ಸ್ವಾಗತ ಕೋರಿದರು. ಕೆಲವೇ ಕ್ಷಣಗಳಲ್ಲಿ ಮೋದಿ ಸಮಾವೇಶದ ವೇದಿಕೆಗೆ ಆಗಮಿಸಲಿದ್ದಾರೆ.

     

     

  • 30 Apr 2023 04:00 PM (IST)

    Karnataka Election Live: ಕಾಂಗ್ರೆಸ್​ ಅಪಪ್ರಚಾರವನ್ನ ವೀರಶೈವ ಲಿಂಗಾಯತರು ನಂಬಬಾರದು: ಯಡಿಯೂರಪ್ಪ

    ಬಾಗಲಕೋಟೆ: ಕಾಂಗ್ರೆಸ್​ ಅಪಪ್ರಚಾರವನ್ನ ವೀರಶೈವ ಲಿಂಗಾಯತರು ನಂಬಬಾರದು. ಏಕೆಂದರೆ ಲಿಂಗಾಯತ ನಾಯಕ ವೀರೇಂದ್ರ ಪಾಟಿಲ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್. ರಾಜೀವ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ನಿಂತು ವೀರೇಂದ್ರ ಪಾಟೀಲರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಈ ರೀತಿಯಾಗಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್​ ನಾಯಕರು ದ್ರೋಹ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ವೀರಶೈವರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.

  • 30 Apr 2023 03:56 PM (IST)

    Karnataka Election Live: ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು ಎಂದ ಬಿಎಸ್ ಯಡಿಯೂರಪ್ಪ

    ಬಾಗಲಕೋಟೆ: ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಜವಾಬ್ದಾರಿ ನನ್ನದು, ಬಾದಾಮಿಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

  • 30 Apr 2023 02:41 PM (IST)

    Karnataka Election Live: “ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ” ಘೋಷವಾಖ್ಯದೊಂದಿಗೆ ಮಾತು ಮುಗಿಸಿದ ಪ್ರಧಾನಿ ಮೋದಿ

    ರಾಮನಗರ: ಕಾಂಗ್ರೆಸ್​ ನನ್ನ ಬಗ್ಗೆ ಅವಹೇಳನ ಮಾಡುತ್ತಿದೆ. ಒಮ್ಮೆ ಘೋರಿ ತೆಗೆಯಲು ಬಯಸುತ್ತಾರೆ. ನನಗೆ ವಿಷಸರ್ಪ ಎನ್ನುತ್ತಾರೆ. ಹಾವು ಶಿವನ ಕೊರಳಲ್ಲಿ ಇರುತ್ತದೆ. ನನ್ನ ಪಾಲಿಗೆ ಶಿವ ನೀವು ಜನತಾ ಜನಾರ್ದನ.  ನಿಮಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬ ವ್ಯಕ್ತಿಗೂ ಭೇಟಿಯಾಗಿ ಡಬಲ್​ ಇಂಜಿನ್​ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಹೇಳಿ. ಈ ಬಾರಿಯ ನಿರ್ಧಾರ ಬಹುಮತದ ಬಿಜಪಿ ಸರ್ಕಾರ. ಮೇ 10 ರ ತನಕ ಯಾರ ಯಾರನ್ನು ಭೇಟಿಯಾಗುತ್ತಿರಿ ಅವರಿಗೆ ಹೇಳಿ ಪ್ರದಾನ ಸೇವಕ ದೆಹಲಿಯಿಂದ ಚನ್ನಪ್ಪಟ್ಟಣಕ್ಕೆ ಬಂದಿದ್ದರು, ನಿಮಗೆ ಪ್ರಮಾಣಗಳನ್ನು ತಿಳಿಸಲು ಹೇಳಿದ್ದಾರೆ ಎಂದು. ನಿಮ್ಮ ಆಶಿರ್ವಾದಿಂದ ನನಗೆ ಹೊಸ ಶಕ್ತಿ ಬಂದಂತಾಗುತ್ತದೆ. ನಮಸ್ಕಾರ

  • 30 Apr 2023 02:34 PM (IST)

    Karnataka Election Live: ಕರ್ನಾಟಕವನ್ನು ದೇಶದ ನಂಬರ್​ 1 ರಾಜ್ಯ ಮಾಡುವತ್ತ ನಾವು ಪರಿಶ್ರಮಿಸುತ್ತಿದ್ದೇವೆ

    ರಾಮನಗರ: ಡಬಲ್​ ಇಂಜಿನ್​ ಬಿಜೆಪಿ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ದೇಶದ ನಂಬರ್​ 1 ರಾಜ್ಯ ಮಾಡುವತ್ತ ನಾವು ಸಾಗುತ್ತಿದ್ದೇವೆ. ನಾವು ರಾಮನಗರದಲ್ಲಿ ಹೆಚ್ಚು ಉದ್ಯೋಗ ಸೃಷ್ಠಿ ಮಾಡುತ್ತೇವೆ. ರಾಮನಗರದ ಯುವಕರಿಗೆ ಹೆಚ್ಚು ಉದ್ಯೋಗ ನೀಡಲಿದ್ದೇವೆ.

  • 30 Apr 2023 02:32 PM (IST)

    Karnataka Election Live: ಕಾಂಗ್ರೆಸ್​ ಪರಂಪರಾಗತ ಗೊಂಬೆಗಳ ಉದ್ಯಮಗಳನ್ನು ನಾಶ ಮಾಡಿತ್ತು

    ರಾಮನಗರ: ಕಾಂಗ್ರೆಸ್​ ಪರಂಪರಾಗತ ಗೊಂಬೆಗಳ ಉದ್ಯಮಗಳನ್ನು ನಾಶ ಮಾಡಿತ್ತು. ಬೇರೆ ದೇಶದ ಗೊಂಬೆಗಳನ್ನು ನಮ್ಮ ದೇಶಕ್ಕೆ ಆಮದು ಮಾಡಿಕೊಂಡಿತ್ತು.ಚನ್ನಪಟ್ಟಣದ ಗೊಂಬೆಗಳ ಬಗ್ಗೆ ನಾನು ಮನ್​ ಕೀ ಬಾತ್​ನಲ್ಲಿ ಮಾತನಾಡಿದ್ದೆ. ಅಲ್ಲದೇ ದೇಶವಾಸಿಗಳಿಗೆ ಕರೆ ಕೊಟ್ಟದ್ದೆ ಚನ್ನಪಟ್ಟಣದ ಗೊಂಬೆಗಳನ್ನು ಖರೀದಿಸಿ ಎಂದು. ಶೇ 75ರಷ್ಟು ಗೊಂಬೆಗಳ ರಪ್ತು ಆಗುತ್ತಿದೆ. ಇದರಿಂದ ಸಾವಿರಾರು ಕೋಟಿ ಆದಾಯವಾಗುತ್ತಿದೆ.

  • 30 Apr 2023 02:29 PM (IST)

    Karnataka Election Live: ಬಿಜೆಪಿ ಯಾವಾಗಲೂ ಯುವಕರ ಹಿತ ಬಯಸುತ್ತದೆ

    ರಾಮನಗರ: ಬಿಜೆಪಿ ಯಾವಾಗಲೂ ಯುವಕರ ಹಿತ ಬಯಸುತ್ತದೆ. ಯುಕರಿಗೆ ಆದ್ಯತೆ ನೀಡಿದೆ. ಗ್ರಾಮಗಳಲ್ಲಿ ಯುವಕರು ಕೆಲಸ ಮಾಡಲು ಮುದ್ರಾ ಯೋಜನೆ ಜಾರಿಗೆ ತಂದಿದ್ದೇವೆ. ರಾಮನಗರದ ಯುವಕರಿಗೆ 3 ಸಾವಿರ ಕೋಟಿಗಿಂತಲೂ ಅಧಿಕ ಸಹಾಯ ನೀಡಿದ್ದೇವೆ.

  • 30 Apr 2023 02:28 PM (IST)

    Karnataka Election Live: ಕಾಂಗ್ರೆಸ್​ನ ಬಿ ಟೀಮ್​ ಜೆಡಿಎಸ್​

    ರಾಮನಗರ: ಕಾಂಗ್ರೆಸ್​ನ ವಾರಂಟಿ ಮುಗಿದಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ತನ್ನ ಗ್ಯಾರೆಂಟಿ ಆಶ್ವಾಸನೆಯನ್ನು ಮರೆತಿದೆ. ಅಧಿಕಾರಕ್ಕೆ ಬಂದಮೇಲೆ ಗ್ಯಾಂರೆಂಟಿಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಅಲ್ಲದೇ ಬಿಜೆಪಿ ಜಾರಿಗೆ ತಂದ ಯೋಜನೆಗಳನ್ನು ನಿಲ್ಲಿಸಿದೆ.  ಕಾಂಗ್ರೆಸ್​ನ ನೀತಿಗಳೇ ರಿವರ್ಸ್​ ಗೇರ್​ ಆಗಿವೆ. ಕಾಂಗ್ರೆಸ್​ನ ಮಾತುಗಳನ್ನು ಜೆಡಿಎಸ್​ ಒಪ್ಪುತ್ತದೆ. ಕಾಂಗ್ರೆಸ್​ನ ಬಿ ಟೀಮ್​ ಜೆಡಿಎಸ್​. ಹೀಗಾಗಿ ರಾಜ್ಯದಲ್ಲಿ ಡಬಲ್​ ಇಂಜಿನ್​ ಸರ್ಕಾರ ಅಧಿಕಾರಕ್ಕೆ ಬರಬೇಕು

  • 30 Apr 2023 02:23 PM (IST)

    Karnataka Election Live: ನಮ್ಮ ಸರ್ಕಾರ ರೇಷ್ಮೆ ರೈತರಿಗೆ ಅನೇಕ ಅನುಕೂಲ ಮಾಡಿದೆ

    ರಾಮನಗರ: ರೇಷ್ಮೆ ನಾಡಿನ ರೈತರಿಗೂ ಕೂಡ ಅನೇಕ ಅನುಕೂಲಗಳನ್ನು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ರೇಷ್ಮ ರೈತರಿಗೆ ಪ್ರತಿ ಟನ್​ಗೆ 10 ಸಾವಿರ ನೀಡುತ್ತೆ. ರೇಷ್ಮ ರಪ್ತು ಹೆಚ್ಚಾಗಿದೆ. ನಮ್ಮ ಸರ್ಕಾರ ರೇಷ್ಮೆ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ.

  • 30 Apr 2023 02:20 PM (IST)

    Karnataka Election Live: ಕಾಂಗ್ರೆಸ್​ ನಾಯಕರು ರಾಜ್ಯದಲ್ಲಿ ಸುಳ್ಳಿನ ಗ್ಯಾರೆಂಟಿಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ

    ರಾಮನಗರ: ಕಾಂಗ್ರೆಸ್​ ನಾಯಕರು ರಾಜ್ಯದಲ್ಲಿ ಸುಳ್ಳಿನ ಗ್ಯಾರೆಂಟಿಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಸಲಿ ಗ್ಯಾರೆಂಟಿ ಎಂದರೇ ಪಿಎಂ ಕಿಸಾನ್​​ ಯೋಜನೆ ಮೂಲಕ ಪ್ರತಿಯೊಬ್ಬ ರೈತರ ಖಾತೆಗೆ ಹಣ ತಲುಪಿದೆ. ಇಲ್ಲಿಯವರೆಗು ಸುಮಾರು ಎರಡುವರೆ ಲಕ್ಷ ಕೋಟಿ ರೂ ರೈತರ ಖಾತೆಗೆ ತಲುಪಿದೆ. ಕರ್ನಾಟಕಕ್ಕೆ 18 ಸಾವಿರ ಕೋಟಿ ನೀಡಲಾಗಿದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್​ ಯೋಜನೆಯಿಂದ ಅನೇಕರ ರೈತರಿಗೆ ಅನುಕೂಲವಾಗಿದೆ.

  • 30 Apr 2023 02:17 PM (IST)

    Karnataka Election Live: ವಿಶ್ವಾಸ ಘಾತಕ ಸರ್ಕಾರವೆಂದರೇ ಅದು ಕಾಂಗ್ರೆಸ್​ ಸರ್ಕಾರ

    ರಾಮನಗರ: ವಿಶ್ವಾಸ ಘಾತಕ ಸರ್ಕಾರವೆಂದರೇ ಅದು ಕಾಂಗ್ರೆಸ್​ ಸರ್ಕಾರ. ದೇಶದ ರೈತರಿಗೆ ವಿಶ್ವಾಸ್​ ಘಾತಕ ಮಾಡಿದೆ. ರೈತರನ್ನು ಸಾಲದ ಹೊರೆಯಲ್ಲಿ ಮುಳಗಿಸಿದೆ. ಕಾಂಗ್ರೆಸ್​ 2008ರಲ್ಲಿ ಸಾಲಮನ್ನಾದ ಸುಳ್ಳು ಘೋಷಣೆ ಮಾಡಿತು. ಕಾಂಗ್ರೆಸ್​ನ ಸಾಲಮನ್ನಾದ ಹಣ ರೈತರಿಗೆ ತಲುಪುವುದಿಲ್ಲ. ಶೇ 100ರಲ್ಲಿ 10 ರೈತರಿಗೂ ಹಣ ತಲುಪುವುದಿಲ್ಲ. ಕಾಂಗ್ರೆಸ್​ನ ಪ್ರತಿಯೊಂದು ಯೋಜನೆ ಸುಳ್ಳಿನ ಗ್ಯಾರೆಂಟಿ.

  • 30 Apr 2023 02:14 PM (IST)

    Karnataka Election Live: ಡಬಲ್​ ಇಂಜಿನ್​ ಸರ್ಕಾರ ಬಡವರ ಸೇವೆ ಮಾಡುತ್ತದೆ

    ರಾಮನಗರ: ಡಬಲ್​ ಇಂಜಿನ್ ಸರ್ಕಾರದಿಂದ ಬಡವರಿಗೆ ಉಚಿತ ರೇಷನ್ ಸಿಗುತ್ತೆ. ರಾಮನಗರ ಜಿಲ್ಲೆಯಲ್ಲಿ 3 ಲಕ್ಷ ಬಡವರಿಗೆ ಖಾತೆ ತೆರೆಯಲಾಗಿದೆ. ಡಬಲ್​ ಇಂಜಿನ್​ ಸರ್ಕಾರ ಬಡವರ ಸೇವೆ ಮಾಡುತ್ತದೆ. ಡಬಲ್​ ಇಂಜಿನ್​ ಸರ್ಕಾರದಿಂದ ವ್ಯಾಕ್ಸಿನ್​ ಸಿಗುತ್ತದೆ. ಡಬಲ್​ ಇಂಜಿನ್​ ಸರ್ಕಾರ ಅಭಿವೃದ್ಧಿಯಾಗುತ್ತದೆ.

  • 30 Apr 2023 02:11 PM (IST)

    Karnataka Election Live: ಕಾಂಗ್ರೆಸ್​, ಜೆಡಿಎಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ರಾಮನಗರ: ರಾಜ್ಯ ಬಹಳ ಕಾಲದಿಂದ ಅಸ್ತಿರ ಸರ್ಕಾರಗಳನ್ನು ನೋಡಿದೆ. ಇದರಿಂದ ಲೂಟಿಯಾಗುತ್ತದೆ. ಹೊರತು ಅಭಿವೃದ್ಧಿಯಾಗುವುದಿಲ್ಲ. ಕಾಂಗ್ರೆಸ್​ ಮತ್ತು ಜೆಡಿಎಸ್​ ಹೊರಗಿಂದ ನೋಡಲು ಮಾತ್ರ ಬೇರೆ ಬೇರೆ ಆದರೆ ಆಂತರಿಕವಾಗಿ ಒಂದೇ. ಜೆಡಿಎಸ್​ ಹೇಳುತ್ತೆ 15 ಸೀಟ್​ ಬಂದರೇ ನಾವೇ ಕಿಂಗ್​ ಮೇಕರ್ ಅಂತ. ಈ  ಸ್ವಾರ್ಥದಿಂದ ಒಂದು ಕುಟುಂಬಕ್ಕಷ್ಟೇ ಲಾಭವಾಗುತ್ತದೆ. ಆದರೆ ರಾಜ್ಯದ ಅನೇಕ ಕುಟುಂಬಕ್ಕೆ ನಷ್ಟವಾಗುತ್ತದೆ. ಜೆಡಿಎಸ್​ಗೆ ಹಾಕುವ ಪ್ರತಿಯೊಂದು ಮತವು ಕಾಂಗ್ರೆಸ್​ಗೆ ಹೋಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ.

  • 30 Apr 2023 02:06 PM (IST)

    Karnataka Election Live: ಕಾಂಗ್ರೆಸ್​ ಮತ್ತು ಜೆಡಿಎಸ್​ ದೃಷ್ಟಿಯಲ್ಲಿ ಕರ್ನಾಟಕ ಎಟಿಎಂ: ಪ್ರಧಾನಿ ಮೋದಿ

    ರಾಮನಗರ: ಕರ್ನಾಟಕದ ಈ ಬಾರಿ ಚುನಾವಣೆ ಬಹಳ ಮಹತ್ವದಾಗಿದೆ. ಈ ಚುನಾವಣೆ ರಾಜ್ಯವನ್ನು ನಂಬರ್​ 1 ಮಾಡುವ ಚುನಾವಣೆಯಾಗಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ದೃಷ್ಟಿಯಲ್ಲಿ ಕರ್ನಾಟಕ ಎಟಿಎಂ ಆಗಿದೆ.

  • 30 Apr 2023 02:04 PM (IST)

    Karnataka Election Live: ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ

    ರಾಮನಗರ: ಶ್ರೀರಾಮ ಆಶಿರ್ವದಿಸಿದ ರಾಮನಗರಕ್ಕೆ ನನ್ನ ಪ್ರಣಾಮಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

  • 30 Apr 2023 01:52 PM (IST)

    Karnataka Election Live: ಮಹತ್ವದ ಭರವಸೆ ಘೋಷಿಸಿದ ಪ್ರಿಯಾಂಕಾ ಗಾಂಧಿ

    ಬೆಳಗಾವಿ:ಅಂಗನವಾಡಿ, ಮಿನಿ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡುವುದಾಗಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಬರವಸೆ ನೀಡಿದ್ದಾರೆ. ಜಿಲ್ಲೆಯ ಖಾನಾಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ  ಅಂಗನವಾಡಿ, ಆಶಾ, ಮಧ್ಯಾಹ್ನ ಬಿಸಿಯೂಟ ಕಾರ್ಯಕರ್ತರೆಯರಿಗೆ ಹೊಸ ಗ್ಯಾರಂಟಿ ಘೋಷಣೆ ಮಾಡಿದರು. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಅಂಗನವಾಡಿ ಸೋದರಿಯರಿಗೆ 15 ಸಾವಿರ ರೂ. ವೇತನ ಏರಿಕೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ರೂ. ವೇತನ, ಕೊರೊನಾ ವೇಳೆ ಆಶಾ ಕಾರ್ಯಕರ್ತೆಯರು ಬಹಳ ಕಷ್ಟಪಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ.‌ ವೇತನ ಏರಿಕೆ ಮಾಡುತ್ತೇವೆ. ಮಧ್ಯಾಹ್ನ ಬಿಸಿಯೂಟ ಕಾರ್ಯಕರ್ತೆಯರಿಗೆ 5 ಸಾವಿರ ರೂ. ವೇತನ ಏರಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಜೀವನವಿಡಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಅಥವಾ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ 3 ಲಕ್ಷ ರೂ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2ಲಕ್ಷ ರೂ. ವಿಶೇಷ ಪರಿಹಾರ ಧನ ನೀಡುವ ಭರವಸೆ ನೀಡಿದ್ದಾರೆ.

  • 30 Apr 2023 12:52 PM (IST)

    Karnataka Election Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಘೋಷವಾಕ್ಯದೊಂದಿಗೆ ಮಾತು ಮುಗಿಸಿದ ಪ್ರಧಾನಿ ಮೋದಿ

    ಕೋಲಾರ: ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ.  ಮೇ 10 ರಂದು ನಮಗೆ ಮತ ಹಾಕಿ ಆಶಿರ್ವದಿಸಿ. ಕರ್ನಾಟಕದ ಜನತೆ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ ನೀಡಿ ಎಂದು ಮನವಿ ಮಾಡಿ ಭಾಷಣ ಮುಗಿಸಿದರು.

  • 30 Apr 2023 12:47 PM (IST)

    Karnataka Election Live: ಮಲ್ಲಿಕಾರ್ಜುನ್​ ಖರ್ಗೆ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

    ಕೋಲಾರ: ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇದರಿಂದ ಹೆಚ್ಚು ತೊಂದರೆ =ಗೆ ಒಳಗಾದವರು, ನೊಂದಿರುವವರು ಕಾಂಗ್ರೆಸ್​ನವರು. ಇದನ್ನು ಅವರಿಗೆ ಸಹಿಸೋಕೆ ಆಗತಿಲ್ಲ. ಹೀಗಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಇವರು ಅಭಿವೃದ್ದಿ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಹಾವಿನ ಬಗ್ಗೆ, ಹಾವಿನ ವಿಷದ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ನನಗೆ ಬೇಸರವಿಲ್ಲ. ಶಿವನ ಕೊರಳಿಗೆ ಶೋಭಾಯ ಮಾನವಾಗಿರುವುದು ಹಾವು. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ  ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ. ಆದರೆ ಇವರ ಮತ್ತು ಇಂತಹ ಮಾತುಗಳಿಂದ ದೂರವಿಡಲು ಮೇ 10 ರಂದು ನಮಗೆ ಮತ ಹಾಕಿ  ಆಶಿರ್ವಾದ ಮಾಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.

  • 30 Apr 2023 12:40 PM (IST)

    Karnataka Election Live: ಕಾಂಗ್ರೆಸ್​ನವರು ಭಷ್ಟಾಚಾರ ವಿರುದ್ಧ ಯಾವುದೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ

    ಕೋಲಾರ: ಕಾಂಗ್ರೆಸ್​ನವರು ಭಷ್ಟಾಚಾರ ವಿರುದ್ಧ ಯಾವುದೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ. ಯಾಕೆಂದರೆ ಕಾಂಗ್ರೆಸ್​ನ ಪ್ರತಿಯೊಂದು ಯೋಜನೆಯಲ್ಲಿ ಭ್ರಷ್ಟಾಚಾರ ಇದೆ. ಆ ರಾಜಪರಿವಾರ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಜೈಲಿಗೆ ಹೋಗಬೇಕಾದವರು ಬೇಲ್​ನಲ್ಲಿದ್ದಾರೆ. ಕಾಂಗ್ರೆಸ್​ನ ಸಾಕಷ್ಟು ನಾಯಕರು ಭ್ರಷ್ಟಾಚಾರದ ಆರೋಪದ ಮೇಲೆ ಬೇಲ್​​ನಲ್ಲಿದದ್ದಾರೆ.  ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರಿಗಳಿಂದ ವಸೂಲಿ ಮಾಡಿದ ಹಣ 1 ಲಕ್ಷ ಕೋಟಿ ರೂ. ನಾವು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಂಡಿದ್ದೇವೆ.

  • 30 Apr 2023 12:36 PM (IST)

    Karnataka Election Live: ಕಾಂಗ್ರೆಸ್ ಸರ್ಕಾರ ಎಸ್​ಟಿ, ಎಸ್​ಸಿ, ಮಹಿಳೆಯಗೆ ಅನ್ಯಾಯ ಮಾಡಿದೆ

    ಕೋಲಾರ: ಕಾಂಗ್ರೆಸ್ ಸರ್ಕಾರ ಬಡವರು, ಎಸ್​ಟಿ, ಎಸ್​ಸಿ, ಮಹಿಳೆಯರೊಂದಿಗೆ ಅನ್ಯಾಯ ಮಾಡಿದೆ. ಇವರೊಂದಿಗೆ ಘೋಷಣೆ ನಡೆದಿದೆ. ಆದ್ರೆ ಬಿಜೆಪಿ ಬಂದ ನಂತರ ಕೋಟ್ಯಾಂತ ಮನೆಗಳನ್ನು ನಾವು ಹಿಂದುಳಿದ ವರ್ಗದವರಿಗೆ ನೋಡಿದ್ದೇವೆ. 10 ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಾಲ್ಯ ನೀಡಿದ್ದೇವೆ. 9 ಕೋಟಿ ಮಂದಿಗೆ ಅನಿಲ ಗ್ಯಾಸ್ ನೀಡಿದ್ದೇವೆ. ಎರಡೂವರೆ ಕೋಟಿ ಮನೆಗಳಿಗೆ ವಿದ್ಉತ್ ಪೂರೈಸಿದೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮ ಆ ಒಂದು ವೋಟಿನಿಂದ. ನೀವು ಒಂದೇ ಒಂದು ವೋಟಿನಿಂದ ನ್ಯಾಯ ಸಿಕ್ಕಿದೆ.

  • 30 Apr 2023 12:29 PM (IST)

    Karnataka Election Live: ಕಾಂಗ್ರೆಸ್​ನ ರಾಜಪರಿವಾರ ಜನರ ವಿಶ್ವಾಸವನ್ನು ಭಂಗ ಮಾಡಿದೆ

    ಕೋಲಾರ: ಕಾಂಗ್ರೆಸ್​ನ ರಾಜಪರಿವಾರ ಜನರ ವಿಶ್ವಾಸವನ್ನು ಭಂಗ ಮಾಡುತ್ತಾ ಬಂದಿದ್ದಾರೆ. ರೈತರಿಗೆ ದೊರೆಯಬೇಕಾಗಿದ್ದ ಶೇ80 ರಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಇದನ್ನು ಸ್ವತಃ ಕಾಂಗ್ರೆಸ್​ನ ಪ್ರಧಾನಿ ಹೇಳಿದ್ದಾರೆ. ಇಂತಹ ಕಾಂಗ್ರೆಸ್​ ಸರ್ಕಾರ ಕರ್ನಾಟಕದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ.

  • 30 Apr 2023 12:27 PM (IST)

    Karnataka Election Live: ಕಾಂಗ್ರೆಸ್​ ಬಗ್ಗೆ ರೈತರನ್ನು ನಿರ್ಲಕ್ಷ್ಯ ಮಾಡಿತು

    ಕೋಲಾರ: ಕಾಂಗ್ರೆಸ್​ನವರು ರೈತರ ಬಗ್ಗೆ ಯಾವತ್ತು ಯೋಚನೆ ಮಾಡಲಿಲ್ಲ. ನಾವು ರೈತರು ಬಿತ್ತುವ ಬೀಜದಿಂದ ವ್ಯಾಪಾರದವರೆಗೆ ಯೋಚನೆ ಮಾಡುತ್ತೇವೆ. ಪಿಎಂ ಕಿಸಾನ್​ ಸಮ್ಮಾನ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ತಲುಪಿಸುತ್ತಿದ್ದೇವೆ.

  • 30 Apr 2023 12:23 PM (IST)

    Karnataka Election Live: ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಕೋಲಾರ: ಕಾಂಗ್ರೆಸ್​ನವರು 2004ರಲ್ಲಿ ಹೊರಡಿಸಿದ ಪ್ರಣಾಳಿಕೆಯಂತೆ ನಡೆಯಲಿಲ್ಲ. ಇದು ಜನರಿಗೆ ಮಾಡಿದ ಮೋಸ. ಅವರು ಪ್ರಣಾಳಿಕೆಯಲ್ಲಿ ಹೇಳಿದ ಅನೇಕ ಯೋಜನೆಗಳನ್ನು ಜಾರಿಗೆ ತಂದಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಕಿಸಾನ್​ ಸಮ್ಮಾನ್​ ಯೋಜನೆ ಜಾರಿಗೆ ತಂದೆವು. ಇದರಿಂದ ಅನೇಕ ರೈತರಿಗೆ ಅನುಕೂಲವಾಗಿದೆ.

  • 30 Apr 2023 12:17 PM (IST)

    Karnataka Election Live: ಕಾಂಗ್ರೆಸ್​ ದೇಶದ ಜನಕ್ಕೆ ಮೋಸ ಮಾಡಿದೆ: ಪ್ರಧಾನಿ ಮೋದಿ

    ಕೋಲಾರ: ಡಬಲ್​ ಇಂಜಿನ್​ ಸರ್ಕಾರದ ಮೂಲಕ ಕೋಲಾರಕ್ಕೆ ಅನೇಕ ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್​ನ ಸುಳ್ಳು ಗ್ಯಾಂರೆಂಟಿ ಯೋಜನೆ ಜಾರಿಗೆ ಬರುವುದಿಲ್ಲ. 2005 ರಿಂದ 2014ರವರೆಗು 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಕಾಂಗ್ರೆಸ್​ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ನೀಡುತ್ತೇವೆ ಎಂದು ಆಶ್ವಾಸನೆ  ನೀಡಿತ್ತು. ಆದರೆ ಅನೇಕ ಹಳ್ಳಿಗಳು ವಿದ್ಯುತ್​ ಇಲ್ಲದೆ ಕತ್ತಲಿನಲ್ಲಿ ಇದ್ದವು. ಕಾಂಗ್ರೆಸ್​ ದೇಶದ ಜನಕ್ಕೆ ಮೋಸ ಮಾಡಿದೆ. ನಂತರ ನಾವು ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ಪೂರೈಸಿದ್ದೇವೆ ಎಂದು ತಿಳಿಸಿದರು.

  • 30 Apr 2023 12:10 PM (IST)

    Karnataka Election Live: ಕಾಂಗ್ರೆಸ್​ನಂತಹ ಗುಜರಿ ಇಂಜಿನ್​​ನಿಂದ ಅಭಿವೃದ್ದಿಯಾಗುವುದಿಲ್ಲ

    ಕೋಲಾರ: ಡಬಲ್​ ಇಂಜಿನ್​ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ದಿಯಾಗುತ್ತದೆ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್​ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್​ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್​ನಂತಹ ಗುಜರಿ ಇಂಜಿನ್​​ನಿಂದ ಅಭಿವೃದ್ದಿಯಾಗುವುದಿಲ್ಲ ಎಂದು ವಾಗ್ದಾಳಿ ಮಾಡಿದರು.

  • 30 Apr 2023 12:06 PM (IST)

    Karnataka Election Live: ಕೇಂದ್ರದಲ್ಲಿರುವ ಬಹುಮತದ ಬಿಜೆಪಿ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿತಯಾಗಿದೆ: ಪ್ರಧಾನಿ ಮೋದಿ

    ಕೋಲಾರ: ದಶಕದಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆಯಾಗುತ್ತದೆ. ಬಹುಮತದ ಒಂದು ಸರ್ಕಾರ ಅಧಿಕಾರಕ್ಕೆ ಬಂದರೇ ಸಾಕಷ್ಟು ಬದಲಾವಣೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದೆ. ಕೊರೋನಾ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ನಮ್ಮ ವ್ಯಾಕ್ಸಿನೇಷನ್​ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ ಎಂದರು.

  • 30 Apr 2023 12:02 PM (IST)

    Karnataka Election Live: ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳನ್ನು ಅಧಿಕಾರದಿಂದ ದೂರವಿಡೋಣ

    ಕೋಲಾರ: ಈ ಚುನಾವಣೆ ಬಾರಿಯ ಚುನಾವಣೆ ಬರೀ ಶಾಸಕರ ಆಯ್ಕೆ, ಮುಖ್ಯಮಂತ್ರಿ ಮಾಡಲು ಚುನಾವಣೆಯಲ್ಲ.  ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಅಸ್ತಿರ ಸರ್ಕಾರವಿದ್ದರೇ ಲಾಭಕ್ಕಿಂತ ನಷ್ಟ ಜಾಸ್ತಿಯಾಗುತ್ತದೆ. ಅಸ್ತಿರ ಸರ್ಕಾರದಿಂದ ಭ್ರಷ್ಟಾಚಾರ ಜಾಸ್ತಿಯಾಗುತ್ತದೆ. ಹೀಗಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳನ್ನು ಅಧಿಕಾರದಿಂದ ದೂರವಿಡೋಣ ಎಂದು ಪ್ರಧಾನಿ ಮೋದಿಯವರು ಹೇಳಿದರು.

  • 30 Apr 2023 11:58 AM (IST)

    Karnataka Election Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

    ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಜನರ ಸೇರಿದ್ದು ನೋಡಿ ಕಾಂಗ್ರೆಸ್​ ಮತ್ತು ಜೆಡಿಎಸ್​ ನಿದ್ದೆಗೆಡಿಸುತ್ತದೆ. ಅಲ್ಲದೇ ಈ ಎರಡು ಪಕ್ಷಗಳನ್ನ ಕರ್ನಾಟಕದ ಜನತೆ ಕ್ಲೀಕ್​ ಬೋರ್ಡ್​ ಮಾಡುತ್ತಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ಮೋದಿ ಹೇಳಿದರು.

  • 30 Apr 2023 11:55 AM (IST)

    Karnataka Election Live: ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ

    ಕೋಲಾರ: ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ

  • 30 Apr 2023 11:42 AM (IST)

    Mann Ki Baat: ಮನ್​​ ಕೀ ಬಾತ್​ಗಾಗಿ ಕಾರ್ಯನಿರ್ವಹಿಸಿದ ಪ್ರಸಾರ ಭಾರತಿ ತಂಡಕ್ಕೆ ಧನ್ಯವಾದ

    ನವದೆಹಲಿ: ಮನ್​ ಕೀ ಬಾತ್​ಗಾಗಿ ತೆರೆ ಹಿಂದೆ ಕಾರ್ಯ ನಿರ್ವಹಿಸಿದ ಪ್ರಸಾರ ಭಾರತಿ ತಂತ್ರಜ್ಞ ತಂಡಕ್ಕೆ ಮತ್ತು ಬೇರೆ ಬೇರೆ ಭಾಷೆಗಳಿಗೆ ಅನುವಾದ ಮಾಡಿದ ಅನುವಾದಕರಿಗೆ ಧನ್ಯವಾದಗಳು. ಮತ್ತು ಮನ್​​ ಕೀ ಬಾತ್​ ಅನ್ನು ಆಲಿಸಿದ ಶೋತೃಗಳಿಗೆ ಧನ್ಯವಾದಗಳು. ಮತ್ತೆ ಮುಂದಿನ ತಿಂಗಳು ಮನ್​​ ಕೀ ಬಾತ್​ನಲ್ಲಿ ಸಿಗೋಣ ನಮಸ್ಕಾರ.

  • 30 Apr 2023 11:33 AM (IST)

    Mann Ki Baat: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿ ನವಭಾರತ ನಿರ್ಮಾಣ ಮಾಡೋಣ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

    ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ, ಜಿ20 ಅಧ್ಯಕ್ಷತೆವಹಿಸಿದ ಸುಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ದೇಶದ ಅಭಿವೃದ್ದಿಯತ್ತ ಸಾಗೋಣ ಮತ್ತು ನವಭಾರತ ನಿರ್ಮಾಣ ಮಾಡೋಣ ಎಂದು ದೇಶದ ಜನತೆಗೆ ಕರೆ ನೀಡಿದರು.

  • 30 Apr 2023 11:28 AM (IST)

    Mann Ki Baat: ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಯುನೆಸ್ಕೋ ಡಿಜಿ

    ನವದೆಹಲಿ: ಯುನೆಸ್ಕೋ ಡಿಜಿ ಮನ್​​ ಕೀ ಬಾತ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಶಿಕ್ಷಣ ಮತ್ತು ಸಂಸ್ಕೃತಿ ಬಗ್ಗೆ ಧ್ವನಿ ಎತ್ತಿದರು. ಪ್ರಧಾನಿ ಮೋದಿಯವರ ಮನ್​ ಕೀ ಬಾತ್​ ಪ್ರೇಣಾದಾಯಕವಾಗಿದೆ ಎಂದು ಹೇಳಿದರು.

  • 30 Apr 2023 11:25 AM (IST)

    Mann Ki Baat: ಮನ್​ ಕೀ ಬಾತ್​ ಮೂಲಕ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು: ಪ್ರಧಾನಿ ಮೋದಿ

    ನವದೆಹಲಿ: ಮನ್​ ಕೀ ಬಾತ್​ ಮೂಲಕ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಮನ್​ ಕೀ ಬಾತ್​ನಿಂದ ಬೇರೆಯವರಿಂದ ಕಲಿಯಲು ಅನುಕೂಲವಾಯಿತು. ಮನ್​ ಕೀ​ ಬಾತ್​​ ಕಾರ್ಯಕ್ರಮ ಸಮಾಜಕ್ಕೆ ಪ್ರೇರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತಷ್ಟು ಗಟ್ಟಿಯಾಗಿದೆ.

  • 30 Apr 2023 11:23 AM (IST)

    Mann Ki Baat: ಮನ್​ ಕೀ ಬಾತ್​ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ

    ನವದೆಹಲಿ: ಮನ್​ ಕೀ ಬಾತ್​ ಮೂಲಕ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡಲಾಯಿತು. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಸ್ವಚ್ಛ ಭಾರತಕ್ಕೆ ಮೈಲಿಗಲ್ಲು ದೊರೆಯಿತು.

  • 30 Apr 2023 11:19 AM (IST)

    Mann Ki Baat: ಮನ್​ ಕೀ ಬಾತ್​ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ

    ನವದೆಹಲಿ: ಮನ್​ ಕೀ ಬಾತ್​ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಯಿತು. ಆತ್ಮನಿರ್ಭರ್​ ಯೋಜನೆ ಕುರಿತು ದೇಶದ ಯುವಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು.

  • 30 Apr 2023 11:17 AM (IST)

    Mann Ki Baat: ಮನ್​ ಕೀ ಬಾತ್​ ಮೂಲಕ ಬೇಟಿ ಬಚಾವೋ ಬೇಟಿ ಪಡಾವೋ​​ ಕಾರ್ಯಕ್ರಮಕ್ಕೆ ಉತ್ತೇಜನ

    ನವದೆಹಲಿ: ಮನ್​ ಕೀ ಬಾತ್​ ಮೂಲಕ ಬೇಟಿ ಬಚಾವೋ ಬೇಟಿ ಪಡಾವೋ​​ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣಾವಾಯಿತು. ಹರಿಯಾಣದ ಸುನಿಲ್​ ಅವರ “ಸೆಲ್ಫಿ ವಿತ್​​​ ಬೇಟಿ” ಅಭಿಯಾನವನ್ನು ನೆನೆಯಬೇಕು. ಇವರ ಈ ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ಪಡೆಯಿತು.

  • 30 Apr 2023 11:12 AM (IST)

    Mann Ki Baat: ಸಾಮಾಜದ ಅನೇಕ ರಿಯಲ್​ ಹೀರೋಗಳನ್ನು ನೆನೆಯಲು ಮನ್​​ ಕೀ ಬಾತ್​​ ಒಂದು ಉತ್ತಮ ಕಾರ್ಯಕ್ರಮ

    ನವದೆಹಲಿ: ಇಂದು ನಾವು 100ನೇ ಪ್ರಸಾರಕ್ಕೆ ತಲುಪಿದ್ದೇವೆ. ಈ ಮನ್​​ ಕೀ ಬಾತ್​ನಲ್ಲಿ ನಾನು ಮಾತನಾಡುವಾಗ ಸಾಕಷ್ಟು ಬಾರಿ ಬಾವುಕನಾಗಿದ್ದೇನೆ. ಸಾಮಾಜದ ಅನೇಕ ರಿಯಲ್​ ಹೀರೋಗಳನ್ನು ನೆನೆಯಲು ಮನ್​​ ಕೀ ಬಾತ್​​ ಒಂದು ಉತ್ತಮ ಕಾರ್ಯಕ್ರಮವಾಗಿದೆ.

  • 30 Apr 2023 11:09 AM (IST)

    Mann Ki Baat: ಮನ್​ ಕೀ ಬಾತ್​ ನನಗೆ ಒಂದು ಕ್ರಾರ್ಯಕ್ರಮವಲ್ಲ ಪೂಜೆ: ಪ್ರಧಾನಿ ಮೋದಿ

    ನವದೆಹಲಿ: ಮನ್​ ಕೀ ಬಾತ್​ ನನಗೆ ಒಂದು ಕ್ರಾರ್ಯಕ್ರಮವಲ್ಲ, ಆಸ್ತಾ, ವೃತ, ಪೂಜೆ ಇದ್ದ ಹಾಗೆ. ನನಗೆ ಮನ್​ ಕೀ ಬಾತ್​ ಈಶ್ವರಿ ರೂಪವಾದ ಜನರ ಪೂಜೆಯಾಗಿದೆ.

  • 30 Apr 2023 11:06 AM (IST)

    Mann ki Baat: ಕೋಟ್ಯಂತರ ಜನರ ಮನಗೆದ್ದ ಮನ್​ ಕೀ ಬಾತ್​​​

    ನವದೆಹಲಿ: ಮನ್​ ಕೀ ಬಾತ್​​ ಭಾಷಣಕ್ಕೆ ಶತಕದ ಸಂಭ್ರಮ. ಮನ್​​ ಕೀ ಬಾತ್​ ಕಾರ್ಯಕ್ರಮ ಕೋಟ್ಯಂತರ ಜನರ ಮನಗೆದ್ದಿದೆ. 2014ರ ಅ.4ರಂದು ಮನ್ ಕೀ ಬಾತ್ ಆರಂಭವಾಯಿತು.

  • 30 Apr 2023 11:00 AM (IST)

    Karnataka Election Live: ಹೊನ್ನಾಳಿ ರೇಣುಕಾಚಾರ್ಯ ನಿವಾಸಕ್ಕೆ  ಭೇಟಿ ನೀಡಿದ ಜೆಪಿ‌ ನಡ್ಡಾ

    ದಾವಣಗೆರೆ: ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಪರ ಮತಯಾಚನೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೊನ್ನಾಳಿಗೆ ತೆರಳಿದ್ದಾರೆ. ಹೊನ್ನಾಳಿ ರೇಣುಕಾಚಾರ್ಯ ನಿವಾಸಕ್ಕೆ  ಭೇಟಿ ನೀಡಿದ ಜೆಪಿ‌ ನಡ್ಡಾ ಭೇಟಿ ನೀಡಿದ್ದು,
    ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಕೇಳಲಿದ್ದಾರೆ.

  • 30 Apr 2023 10:54 AM (IST)

    Karnataka Election Live: ಪ್ರಧಾನಿ ಮೋದಿಗೆ ಹೊಯ್ಸಳ ಲಾಂಛನ ಗಿಫ್ಟ್​​

    ಹಾಸನ: ಹಾಸನ ಶಿಲ್ಪಕಲೆಗಳ ತವರು ಹಾಸನಕ್ಕೆ ಆಗಮಿಸುವ ಪ್ರದಾನಿ ಮೊದಿಯವರಿಗೆ ಹೊಯ್ಸಳ ಲಾಂಛನವನ್ನು ಉಡುಗೊರೆಯಾಗಿ ನೀಡು ಜಿಲ್ಲಾ ಬಿಜೆಪಿ ಘಟಕ ಸಿದ್ದವಾಗಿದೆ. ಸುಮಾರು ಒಂದುವರೆ ಅಡಿ ಉದ್ದದ ನಾಲ್ಕು ಕೆಜಿ ತೂಕದ ಹಸಿರಿ ಕಲ್ಲಿನ ಉಡುಗೊರೆ ನೀಡಲಿದೆ. ಸಳ ಹುಲಿಯನ್ನು ಕೊಂದು ಹೊಯ್ಸಳ ಸಾಮ್ರಾಜ್ಯ ಸ್ಥಾಪಿಸಿದ ಸಂಕೇತವಾಗಿ ಹೊಯ್ಸಳ ಲಾಂಛನವನ್ನು ನೀಡಲಾಗುತ್ತಿದೆ. ಈ ಗಿಫ್ಟ್​​ನ್ನು ಬೇಲೂರಿನ ಸ್ಥಳೀಯ ಶಿಲ್ಪಿಗಳು ತಯಾರಿಸಿದ್ದಾರೆ.

  • 30 Apr 2023 09:35 AM (IST)

    Karnataka Election Live: 50 ಅಭ್ಯರ್ಥಿಗಳು, ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ ಸಾಧ್ಯತೆ ಇದೆ: ಲಕ್ಷ್ಮೀ ಹೆಬ್ಬಾಳ್ಕರ್​​

    ಬೆಳಗಾವಿ: ಕರ್ನಾಟಕ ಸಾರ್ವತ್ರಿಕ ಚುನಾವಣೆಗೆ 10 ದಿನ ಉಳಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರೋದು ಜನರ ಭಾವನೆಯಿಂದ ಗೊತ್ತಾಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರ ತರಲು ಬಯಸಿದ್ದಾರೆ ಅನಿಸುತ್ತೆ. ಬೆಳಗಾವಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪರ ಒಳ್ಳೆಯ ವಾತಾವರಣ ಇದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಿದ ಸಂದರ್ಭದಲ್ಲಿ ನವಚೈತನ್ಯ ತರಬೇಕೆಂದು ಕಾಂಗ್ರೆಸ್‌ ಗ್ಯಾರಂಟಿ ಘೋಷಿಸಿದೆ. ಇವು ಜನಪ್ರಿಯ ಯೋಜನೆಗಳು ಆಗುವ ಎಲ್ಲಾ ಲಕ್ಷಣಗಳಿವೆ. ಬಿಜೆಪಿಯವರು ಹತಾಶರಾಗಿ ಕರ್ನಾಟಕದಲ್ಲಿ ವಾಮಮಾರ್ಗ ಹಿಡಿಯುವ ಸುದ್ದಿ ತಲುಪಿದೆ. 50 ಅಭ್ಯರ್ಥಿಗಳು, ಅವರ ಸಂಬಂಧಿಕರ ಮೇಲೆ ಲೋಕಾಯುಕ್ತ ದಾಳಿ ಸಾಧ್ಯತೆ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನು ಒಂದೆರಡು ದಿನಗಳಲ್ಲಿ ಮಾಡುವ ಮುನ್ಸೂಚನೆ ಸಿಕ್ಕಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಈ ರೀತಿ ವಿಪಕ್ಷಗಳನ್ನ ಹೆದರಿಸೋದು ಸರ್ವೇಸಾಮಾನ್ಯ. ಅವರು ಏನು ಮಾಡುತ್ತಿದ್ದಾರೆ ಅದೇ ಅವರಿಗೆ ತಿರುಗು ಬಾಣ ಆಗುತ್ತೆ ಎಂದು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

  • 30 Apr 2023 09:31 AM (IST)

    Karnataka Election Live: ದೆಹಲಿಗೆ ತೆರಳಿದ ಅಮಿತ್​ ಶಾ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ (ಏ.29) ರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದ, ಕೇಂದ್ರ ಗೃಹ ಸಚಿವ ಅಮಿತ್ ಅವರು ಮಂಗಳೂರಲ್ಲೇ ವಾಸ್ತವ್ಯ ಹೂಡಿದ್ದರು. ಇಂದು (ಏ.30) ಬೆಳಿಗ್ಗೆ ಮಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ.

  • 30 Apr 2023 08:51 AM (IST)

    Karnataka Election Live: ಮೇ.1 ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ

    ಬೆಂಗಳೂರು: ಸಚಿವ ಡಾ. ಕೆ ಸುದಾಕರ್ ಅವರ ನೇತೃತ್ವದಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಿದ್ದವಾಗಿದ್ದು, ನಾಳೆ (ಮೇ.1) ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ  ನಡ್ಡಾ ಬಿಡುಗಡೆ ಮಾಡಲಿದ್ದಾರೆ.

  • 30 Apr 2023 08:23 AM (IST)

    Karnataka Election Live: ಇಂದು ಹೊನ್ನಾಳಿಗೆ ಜೆಪಿ ನಡ್ಡಾ ಭೇಟಿ

    ದಾವಣಗೆರೆ:  ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಚಾರ ಮಾಡಲಿದ್ದಾರೆ. ಹೊನ್ನಾಳಿ ಪಟ್ಟಣದಲ್ಲಿ‌ ಬೆಳಗ್ಗೆ 11ಕ್ಕೆ ಅಭ್ಯರ್ಥಿ ರೇಣುಕಾಚಾರ್ಯ ಪರ ಜೆ.ಪಿ.ನಡ್ಡಾ ಮತಯಾಚನೆ ಮಾಡಲಿದ್ದಾರೆ.

  • 30 Apr 2023 08:02 AM (IST)

    Karnataka Election Live: ಚಿತ್ರದುರ್ಗಕ್ಕೆ ಪಂಜಾಬ್​ ಸಿಎಂ ಭಗವಂತ್ ಮಾನ್ ಭೇಟಿ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​​​ ಸಿಂಸಿಂಗ್ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಅಬ್ಯರ್ಥಿಗಳ ಪರ ಪ್ರಚಾರ​​ ಮಾಡಲಿದ್ದಾರೆ. ಬೆಳಗ್ಗೆ 10:30ಕ್ಕೆ ಭೀಮಸಮುದ್ರ ಗ್ರಾಮದ ಹೆಲಿಪ್ಯಾಡ್​ಗೆ ಆಗಮಿಸುವ ಭಗವಂತ್ ಮಾನ್, ಭೀಮಸಮುದ್ರ ಗ್ರಾಮದಿಂದ ಕಾರ್ ಮೂಲಕ ಚಿತ್ರದುರ್ಗಕ್ಕೆ ತೆರಳಲಿದ್ದಾರೆ. 11 ಗಂಟೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಪ್ರಚಾರ ಸಮಿತಿ ಅದ್ಯಕ್ಷ ಮುಖ್ಯಮಂತ್ರಿ ಚಂದ್ರು ಸಾಥ್ ನೀಡಲಿದ್ದಾರೆ.

  • 30 Apr 2023 07:41 AM (IST)

    Karnataka Election Live: ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ​ದಢೀರ್​ ಸುದ್ದಿಗೋಷ್ಠಿ

    ಬೆಳಗಾವಿ: ಇಂದು (ಏ.30) ಬೆಳಗ್ಗೆ 8.30ಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗಾವಿಯ ಕುವೆಂಪು‌ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

  • 30 Apr 2023 07:38 AM (IST)

    Karnataka Election Live: ಹನನುಮನ ನಾಡಿನಲ್ಲಿ ಯೋಗಿ ಆದಿತ್ಯನಾಥ್​ ಪ್ರಚಾರ

    ಕೊಪ್ಪಳ: ಹನುಮನ ಜನ್ಮ ಭೂಮಿ ಗಂಗಾವತಿಯಲ್ಲಿ ಇಂದು (ಏ.30) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘರ್ಜಿಸಲಿದ್ದಾರೆ. ಇಂದು ಗಂಗಾವತಿಗೆ ಹಿಂದೂ ಪೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಅವರು ಆಗಮಿಸುತ್ತಿದ್ದಾರೆ. ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಮತಯಾಚಿಸಲಿದ್ದಾರೆ. ಇಂದು ಬೆಳಿಗ್ಗೆ 10.50 ಕ್ಕೆ ಗಂಗಾವತಿಗೆ ಆಗಮಿಸಲಿರುವ ಯೋಗಿ ಆದಿತ್ಯನಾಥ್ ಅವರು 11 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಸಭೆಯಲ್ಲಿ ಪರಣ್ಣ ಮುನವಳ್ಳಿ ಪರ ಮತಯಾಚನೆ ಮಾಡಲಿದ್ದಾರೆ.

     

  • 30 Apr 2023 07:09 AM (IST)

    Karnataka Election Live: ಭಾನುವಾರದ ಪ್ರಧಾನಿ ಮೋದಿ ವೇಳಾಪಟ್ಟಿ ಇಲ್ಲಿದೆ

    ಬೆಂಗಳೂರು: ಶನಿವಾರ (ಏ.29) ಬೀದರ್​ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹುಮ್ನಾಬಾದ್​, ವಿಜಯಪುರ, ಕುಡಚಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿ, ಮಾಗಡಿ ರಸ್ತೆಯ ನೈಸ್​ ಜಂಕ್ಷನ್​ನಿಂದ ಸುಮನಹಳ್ಳಿವರೆಗೆ ಬೃಹತ್​ ರೋಡ್​ ಶೋ ನಡೆಸಿದ್ದರು. ರಾತ್ರಿ ರಾಜಭವನದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಿದ್ದ ಅವರು, ಇಂದು (ಏ.30) ಬೆಳಗ್ಗೆ 10.35ಕ್ಕೆ ರಾಜಭವನದಿಂದ ಹೆಲಿಪ್ಯಾಡ್​ಗೆ ತೆರಳುತ್ತಾರೆ. ಬಳಿಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುತ್ತಾರೆ. ಸಂಜೆ ಮೈಸೂರಿನಲ್ಲಿ ರೋಡ್​ ಶೋ ನಡೆಸಲಿದ್ದಾರೆ.

    ಭಾನುವಾರದ ಪ್ರಧಾನಿ ಮೋದಿ ವೇಳಾಪಟ್ಟಿ

    • ಬೆಳಗ್ಗೆ 10.45ಕ್ಕೆ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ
    • ಬೆಳಗ್ಗೆ 10.50ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಕೋಲಾರದತ್ತ ಪ್ರಯಾಣ
    • ಬೆಳಗ್ಗೆ 11.20ಕ್ಕೆ ಕೋಲಾರ​​ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
    • ಬೆಳಗ್ಗೆ 11.25ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದತ್ತ ಪ್ರಧಾನಿ ಪ್ರಯಾಣ
    • ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ
    • ಬೆಳಗ್ಗೆ 11.30ರಿಂದ ಮಧ್ಯಾಹ್ನ 12.15ರವರೆಗೆ ಸಮಾವೇಶದಲ್ಲಿ ಭಾಗಿ
    • ಮಧ್ಯಾಹ್ನ 12.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
    • ಮಧ್ಯಾಹ್ನ 12.25ಕ್ಕೆ ಹೆಲಿಪ್ಯಾಡ್​​ ತಲುಪಲಿರುವ ಪ್ರಧಾನಿ ನರೇಂದ್ರಮೋದಿ
    • ಮಧ್ಯಾಹ್ನ 12.30ಕ್ಕೆ MI-17 ಕಾಪ್ಟರ್​​ನಲ್ಲಿ ಚನ್ನಪಟ್ಟಣದತ್ತ ಪ್ರಯಾಣ
    • ಮಧ್ಯಾಹ್ನ 1.15ಕ್ಕೆ ಚನ್ನಪಟ್ಟಣ ಹೆಲಿಪ್ಯಾಡ್​ಗೆ ಬಂದಿಳಿಯಲಿರುವ ಮೋದಿ
    • ಮಧ್ಯಾಹ್ನ 1.20ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
    • ಮಧ್ಯಾಹ್ನ 1.25ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
    • ಮಧ್ಯಾಹ್ನ 1.30ರಿಂದ 2.15ರವರೆಗೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಭಾಗಿ
    • ಮಧ್ಯಾಹ್ನ 2.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
    • ಮಧ್ಯಾಹ್ನ 2.25ಕ್ಕೆ ಹೆಲಿಪ್ಯಾಡ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ
    • ಮಧ್ಯಾಹ್ನ 2.30ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಬೇಲೂರಿನತ್ತ ಪ್ರಯಾಣ
    • ಮಧ್ಯಾಹ್ನ 3.30ಕ್ಕೆ ಬೇಲೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
    • ಮಧ್ಯಾಹ್ನ 3.35ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
    • ಮಧ್ಯಾಹ್ನ 3.40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
    • ಮಧ್ಯಾಹ್ನ 3.45ರಿಂದ ಸಂಜೆ 4.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
    •  ಸಂಜೆ 4.35ಕ್ಕೆ ಸಮಾವೇಶದ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
    • ಸಂಜೆ 4.40ಕ್ಕೆ ಬೇಲೂರು ಹೆಲಿಪ್ಯಾಡ್​ಗೆ​​ ತಲುಪಲಿರುವ ಪ್ರಧಾನಿ ಮೋದಿ
    • ಸಂಜೆ 4.45ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಮೈಸೂರಿನತ್ತ ಮೋದಿ ಪ್ರಯಾಣ
    • ಸಂಜೆ 5.35ಕ್ಕೆ ಮೈಸೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
    • ಸಂಜೆ 5.40ಕ್ಕೆ ಹೆಲಿಪ್ಯಾಡ್​​ನಿಂದ ವಿದ್ಯಾಪೀಠ ವೃತ್ತದತ್ತ ಮೋದಿ ಪ್ರಯಾಣ
    • ಸಂಜೆ 5.45ಕ್ಕೆ ಮೈಸೂರು ವಿದ್ಯಾಪೀಠ ವೃತ್ತ ತಲುಪಲಿರುವ ಪ್ರಧಾನಿ ಮೋದಿ
    • ಸಂಜೆ 5.45ರಿಂದ ಸಂಜೆ 6.30ರವರೆಗೆ ರೋಡ್​ ಶೋ ನಡೆಸಲಿರುವ ಪ್ರಧಾನಿ
    • ಸಂಜೆ 6.35ಕ್ಕೆ ಬನ್ನಿಮಂಟಪದ LIC ವೃತ್ತದಿಂದ ಏರ್​ಪೋರ್ಟ್​​ನತ್ತ ಮೋದಿ
    • ಸಂಜೆ 6.55ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿ
    • ಸಂಜೆ 7 ಗಂಟೆಗೆ ಸೇನಾ ವಿಮಾನದಲ್ಲಿ ದೆಹಲಿಯತ್ತ ಪ್ರಧಾನಿ ಮೋದಿ ಪ್ರಯಾಣ

Published On - 7:02 am, Sun, 30 April 23

Follow us on