Karnataka Election Highlights: ರಾಜ್ಯ ರಾಜಕಾರಣದ ಇಂದಿನ ಸಮಗ್ರ ಅಪ್​ಡೇಟ್ ಇಲ್ಲಿದೆ ನೋಡಿ

| Updated By: Ganapathi Sharma

Updated on: Apr 12, 2023 | 10:08 PM

Karnataka Assembly Election Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಹೆಚ್ಚುತ್ತಿದ್ದು, ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟವಿ9 ಡಿಜಿಟಲ್​​ನಲ್ಲಿ

Karnataka Election Highlights: ರಾಜ್ಯ ರಾಜಕಾರಣದ ಇಂದಿನ ಸಮಗ್ರ ಅಪ್​ಡೇಟ್ ಇಲ್ಲಿದೆ ನೋಡಿ
ಕರ್ನಾಟಕ ವಿಧಾಸಭೆ ಚುನಾವಣೆ

ರಾಜ್ಯ ವಿಧಾನಸಭೆ ಚುನಾವಣೆಯ ಅಸಲಿ ಅಖಾಡ ಈಗ ಸಿದ್ದವಾಗಿದ್ದು, ಮೂರು ರಾಜಕೀಯ ಪಕ್ಷಗಳು ಭಾಗಶಃ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಬಿಜೆಪಿ ಮತ್ತು ಜೆಡಿಎಸ್​ ತಲಾ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಜೆಪಿ ಕಳೆದ 1 ವಾರಗಳ ಅಳೆದು ತೂಗಿ 189 ಕ್ಷೇತ್ರಗಳಿಗೆ ಟಿಕೆಟ್​ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 52 ಜನ ಹೊಸಬರಿಗೆ ಮಣೆ ಹಾಕಲಾಗಿದೆ. 32 ಕ್ಷೇತ್ರಗಳಿಗೆ ಟಿಕೆಟ್​ ಇನ್ನೂ ಘೋಷಣೆ ಮಾಡಬೇಕಿದೆ. ಇಬ್ಬರು ನಾಯಕರಿಗೆ 2 ಕ್ಷೇತ್ರಗಳ ಟಿಕೆಟ್​ ನೀಡಿದೆ. ಇದು ಒಂದಡೆಯಾದರೇ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಾಲಿ ಶಾಸಕರು ಮತ್ತು ಬಿಜೆಪಿ ಮುಖಂಡರು ಟಿಕೆಟ್​ ಆಕಾಂಕ್ಷಿಗಳು ಟಿಕೆಟ್​ ವಂಚಿತರಾಗಿದ್ದು, ಬಂಡಾಯದ ಬಾವುಟ ಹಾರಿಸುವ ಸಾಧ್ಯತೆ ಇದೆ. ಇನ್ನು ಮಾಜಿ ಸಚಿವ ಕೆ. ಎಸ್​ ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೇಟ್ಟರ್​ ಅವರ​​ ಟಿಕೆಟ್​ ಸಸ್ಪೆನ್ಸ್​ ಆಗಿ ಉಳಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​​ ಅಪ್ಡೇಟ್ಸ್​​

LIVE NEWS & UPDATES

The liveblog has ended.
  • 12 Apr 2023 06:59 PM (IST)

    Karnataka Election Live: ನಾಳೆ ಹಲವೆಡೆ ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

    ನಾಳೆ ಹಲವು ಕಡೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಕಲಬುರ್ಗಿ, ಸೇಡಂ, ಅಳಂದ ಅಫಜಲಪುರದಲ್ಲಿ ನಾಮಪತ್ರ ಸಲ್ಲಿಕೆಯಾಘಲಿದ್ದು, ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ ಎಂದು ಹೆಚ್​ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

  • 12 Apr 2023 06:27 PM (IST)

    Karnataka Election Live: ಬಿ.ಎಸ್. ಯಡಿಯೂರಪ್ಪ ಭೇಟಿಯಾದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

    ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕಾವೇರಿ ನಿವಾಸದಲ್ಲಿ ಭೇಟಿಯಾದರು.


  • 12 Apr 2023 06:10 PM (IST)

    Karnataka Election Live: ಸೋಮಣ್ಣ ವಿರುದ್ಧ ಬಿಎಸ್​ವೈ ಆಪ್ತ ರುದ್ರೇಶ್ ವಾಗ್ದಾಳಿ

    ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಆಪ್ತ ರುದ್ರೇಶ್‌ ಪತ್ರಿಕಾಗೋಷ್ಠಿ ಮೂಲಕ ಅಸಮಾಧಾನ ಹೊರಹಾಕಿದ್ದು, ವಿ ಸೋಮಣ್ಣ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ. ಜತೆಗೆ, ನಾಳೆ ಕಾರ್ಯಕರ್ತರ ಜತೆ ಸಭೆ ನಡೆಸಿ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಬಾರಿ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಲಲು ಸೋಮಣ್ಣ ಕಾರಣ. ಈ ಬಾರಿಯೂ ಜಿಲ್ಲೆಯ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತಾರೆ
    ಸ್ವಂತ ತಾಲೂಕು ಕನಕಪುರದಲ್ಲಿ ಗ್ರಾ.ಪಂ ಸದಸ್ಯನನ್ನೂ ಗೆಲ್ಲಿಸಲಾಗಲ್ಲ. ರಾಮನಗರ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಯಾವುದೇ ಸಹಕಾರ ನೀಡಲಿಲ್ಲ. ಕನಕಪುರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಡಿಕೆಶಿರನ್ನು ಹೊಗಳಿದ್ದರು ಎಂದು ರುದ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 12 Apr 2023 05:13 PM (IST)

    Karnataka Election Live: ಲಕ್ಷ್ಮಣ ಸವದಿ ಮನವೊಲಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಸಿ ಪಾಟೀಲ್

    ಗದಗ: ಲಕ್ಷ್ಮಣ ಸವದಿ ಅವರನ್ನು ಮನವೊಲಿಸಲು ಎಲ್ಲಾ ಪ್ರಯತ್ನ ನಡೆದಿದೆ ಎಂದು ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಕ್ಷ್ಮಣ ಸವದಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ‌ ಆತ್ಮೀಯ ಸ್ನೇಹಿತರು. ಟಿಕೆಟ್ ಸಿಗದೆ ಇರುವುದರಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಣ ಸವದಿ ಮನವೊಲಿಸಲು ಸಿಎಂ ಬಸವರಾಜ್ ಬೊಮ್ಮಾಯಿ‌ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಲಕ್ಷ್ಮಣ ಸವದಿ ರೋಣ ಕ್ಷೇತ್ರಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ರೋಣಕ್ಕೆ ಸ್ಥಳೀಯರು ಯಾರು ಇಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ, ನನ್ನ ಎಡಕ್ಕೆ ಬಲಕ್ಕೆ ರೋಣ ಟಿಕೆಟ್ ಆಕಾಂಕ್ಷೆಗಳಿದ್ದಾರೆ ಎಂದು ಹಾಸ್ಯ ಮಾಡಿದರು. ಗದಗ, ಶಿರಹಟ್ಟಿ ಹಾಗೂ ರೋಣ ಕ್ಷೇತ್ರದಲ್ಲಿ ಬಂಡಾಯ ವಿಚಾರವಾಗಿ ಮಾತನಾಡಿ ಪಕ್ಷ ಎನ್ನುವದು ತಾಯಿ ಸಮಾನ, ಯಾರು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಒಬ್ಬರಿಗೆ ಸಿಗುವುದು. ಟಿಕೆಟ್ ಸಿಗದಿದಕ್ಕೆ ನಾಲ್ಕು ದಿನ ಅಸಮಾಧಾನ ಇರುತ್ತದೆ. ಟಿಕೆಟ್ ಸಿಕ್ಕವರು ಅವರನ್ನು ಮನವೊಲಿಸುತ್ತಾರೆ. ನಾನೂ ಕೂಡಾ ಗದಗ ಹಾಗೂ ಶಿರಹಟ್ಟಿ ಮುಖಂಡರೊಂದಿಗೆ ಮಾತನಾಡುತ್ತೇನೆ ಎಂದರು.

  • 12 Apr 2023 05:10 PM (IST)

    Karnataka Election Live: ನಮ್ಮ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜೀನಾಮೆ: ಆರ್​.ಶಂಕರ್

    ಯಾರ ಮೇಲೂ ನನಗೆ ಸಿಟ್ಟು ಇಲ್ಲ, ನನ್ನ ಮೇಲೆ ನನಗೆ ಸಿಟ್ಟು: ಶಂಕರ್

    ಬೆಂಗಳೂರು: ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.ಶಂಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದೇನೆ. ಯಾರ ಮೇಲೂ ನನಗೆ ಸಿಟ್ಟು ಇಲ್ಲ, ನನ್ನ ಮೇಲೆ ನನಗೆ ಸಿಟ್ಟು. ಒಳ್ಳೆಯದು ಮಾಡಲು ಹೋಗಿ ಈ ಪರಿಸ್ಥಿತಿ ಬಂತು ಎಂಬ ಬೇಸರವಿದೆ. ಎರಡ್ಮೂರು ದಿನಗಳಲ್ಲಿ ನನ್ನ ಅಂತಿಮ ನಿರ್ಧಾರವನ್ನು ತಿಳಿಸುತ್ತೇನೆ. ಪಕ್ಷೇತರ ಸ್ಪರ್ಧೆ ಮಾಡಬೇಕೋ ಅಥವಾ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಬೇಕೋ ಎಂಬುದನ್ನು ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಆದರೆ ಸ್ಪರ್ಧಿಸುವುದು ಖಚಿತ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ ನಾಯಕರು ಭೇಟಿ ಮಾಡಲು ನಿನ್ನೆಯವರೆಗೆ ಅವಕಾಶ ಇತ್ತು. ಬೆಳಗ್ಗೆವರೆಗೂ ಸಿಎಂ ಸೇರಿದಂತೆ ಯಾರೂ ನನ್ನ ಜತೆ ಮಾತಾಡಿಲ್ಲ ಎಂದರು.

  • 12 Apr 2023 05:06 PM (IST)

    Karnataka Election Live: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ನಿವಾಸಕ್ಕೆ ಶೆಟ್ಟರ್

    ನವದೆಹಲಿ: ಟಿಕೆಟ್ ಕೈತಪ್ಪುವ ಸಾಧ್ಯತೆ ಹಿನ್ನೆಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸಕ್ಕೆ ಶೆಟ್ಟರ್ ಆಗಮಿಸಿದ್ದಾರೆ.

  • 12 Apr 2023 03:41 PM (IST)

    Karnataka Election Live: ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್, ಸೂಟ್​ಕೇಸ್​ ಪರಿಶೀಲಿಸಿದ ಅಧಿಕಾರಿಗಳು

    ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಧಿಕಾರಿಗಳ ತಂಡ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್​ ಪರಿಶೀಲನೆ ನಡೆಸಿತು. ಸಿಎಂ ಹೆಲಿಕಾಪ್ಟರ್, ಸೂಟ್​ಕೇಸ್​ ಅನ್ನು ಅಧಿಕಾರಿಗಳು ಪರಿಶೀಲಿಸಿದರು.

  • 12 Apr 2023 03:39 PM (IST)

    Karnataka Election Live: ಸಿದ್ದರಾಮಯ್ಯ ತಂಡದಿಂದ ರಹಸ್ಯ ಸ್ಥಳದಲ್ಲಿ ಸಭೆ

    ವರುಣ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಸ್ಪರ್ಧೆ ಹಿನ್ನೆಲೆಯಲ್ಲಿ ಅಲರ್ಟ್ ಆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಂಡ
    ರಹಸ್ಯ ಸ್ಥಳದಲ್ಲಿ ಆಪ್ತರೊಂದಿಗೆ ಸಿತಂತ್ರಗಾರಿಕೆ ರೂಪಿಸಲು ಮುಂದಾಗಿದೆ. ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಹಲವರು ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೆಲವು ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಂಬಂಧ ಆಪ್ತರೊಂದಿಗೆ ಚರ್ಚೆ ನಡೆಸಲಾಗಿದೆ. ಈವರೆಗೆ ಸಿದ್ದರಾಮಯ್ಯ 2ನೇ ಕ್ಷೇತ್ರದ ಬಗ್ಗೆ ಘೋಷಣೆಯಾಗಿಲ್ಲ. 2ನೇ ಕ್ಷೇತ್ರ ಘೋಷಣೆಯಾಗದಿದ್ರೆ ಮುಂದಿನ ನಿರ್ಧಾರ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

  • 12 Apr 2023 03:37 PM (IST)

    Karnataka Election Live: ಟೆಂಪಲ್ ರನ್ ಆರಂಭಿಸಿದ ಸಿಎಂ ಬೊಮ್ಮಾಯಿ

    ಟಿಕೇಟ್ ಘೋಷಣೆ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೆಂಪಲ್ ರನ್ ಆರಂಭಿಸಿದ್ದಾರೆ. ಬೆಂಗಳೂರಿನಿಂದ ಹ್ಯಾಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ‌ ಆಗಮಿಸಿದ‌ ಸಿಎಂ ಬೊಮ್ಮಾಯಿ ಶ್ರೀ ಮಂಜುನಾಥ ನ ದರ್ಶನ ಪಡೆಯಲಿದ್ದಾರೆ.

  • 12 Apr 2023 03:36 PM (IST)

    Karnataka Election Live: ಬೆಳಗಾವಿ ಜಿಲ್ಲೆ 18 ಕ್ಷೇತ್ರಗಳಲ್ಲಿ ಅಸಮಾಧಾನ ಸ್ಫೋಟ

    ಬೆಳಗಾವಿ ಜಿಲ್ಲೆ 18 ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟವಾಗಿದೆ. ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದೆ. ಸಂಜಯ್ ಪಾಟೀಲ್‌ಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ಹುದ್ದೆಗೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾದ ಹಲವು ಪದಾಧಿಕಾರಿಗಳು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಬಳಿ ರಾಜೀನಾಮೆ ಪತ್ರದೊಂದಿಗೆ ಬಂದ ಪದಾಧಿಕಾರಿಗಳು.

  • 12 Apr 2023 03:17 PM (IST)

    Karnataka Election Live: ಭವಿಷ್ಯ ನುಡಿದ ರೇವಣ್ಣ 

    ಹಾಸನ: ದೇವೇಗೌಡರು ಪ್ರಧಾನಿ ಆದಾಗ ಮಾಡಿದ ಅಭಿವೃದ್ಧಿ ಈಗ ಗಾರ್ಮೆಂಟ್ಸ್​ಗಳಲ್ಲಿ 60 ಸಾವಿರ ಮಹಿಳೆಯರು ಕೆಲಸ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲೂ ಕೂಡ 15 ಸಾವಿರ ಮಹಿಳೆಯರಿಗೆ ಉದ್ಯೋಗ ಕೊಡುವ ಗಾರ್ಮೆಂಟ್ಸ್ ಮಾಡಿಸುತ್ತೇವೆ. ಈ ರಾಜ್ಯದಲ್ಲಿ ಜೆಡಿಎಸ್ ಬಿಟ್ಟು ಯಾರೂ ಸರ್ಕಾರ ಮಾಡೋಕೆ ಆಗಲ್ಲ. ನಮ್ಮದೇ 123 ಸ್ಥಾನ ಬರುತ್ತೆ ಇವತ್ತೇ ಬರೆದಿಟ್ಟುಕೊಳ್ಳಿ ಎಂದು ರೇವಣ್ಣ ಭವಿಷ್ಯ ನುಡಿದರು.

  • 12 Apr 2023 03:15 PM (IST)

    Karnataka Election Live: ದೇವೇಗೌಡರು ಮಾತ್ರ ನಮಗೆ ಸರ್ವೊಚ್ಛ ನಾಯಕರು

    ಹಾಸನ: ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲವಿಲ್ಲ. ಅದು ನನಗೆ ದೇವೇಗೌಡರಿಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಟಾಂಗ್​ ನೀಡಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರು ಮಾತ್ರ ನಮಗೆ ಸರ್ವೊಚ್ಛ ನಾಯಕರು. ನಾನು ಈಗಾಗಲೇ ಅವರ ಬಳಿ ಹೇಳಿದ್ದೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

  • 12 Apr 2023 02:01 PM (IST)

    Karnataka Assembly Election Live: ಬಿಜೆಪಿಗೆ ರಾಜಿನಾಮೆ ಕೊಡಲು ಸಿದ್ಧವಾದ ಬಿಎಸ್​ ಯಡಿಯೂರಪ್ಪ ಸಂಬಂಧಿಕ

    ಹುಬ್ಬಳ್ಳಿ: ನಾನು ಪಕ್ಷಕ್ಕೆ ರಾಜೀನಾಮೆ ಕೊಡಲು ತಯಾರಿದ್ದೇನೆ. ನಾನು ನಮ್ಮ ನಾಯಕರ ಗಮನಕ್ಕೆ ತಂದು ಹೆಜ್ಜೆ ಮುಂದಿಟ್ಟಿದ್ದೇನೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ಪತ್ರ ಬರೆದಿದ್ದೇನೆ. ಪತ್ರಕ್ಕೆ ಸಹಿ ಮಾಡಿಲ್ಲ, ನಮ್ಮ ನಾಯಕರನ್ನು ಭೇಟಿಯಾಗಿ ತೀರ್ಮಾನ ಮಾಡುತ್ತೇನೆ ಎಂದು ಎಸ್​. ಐ ಚಿಕ್ಕನಗೌಡರ ಅವರು ಹೇಳಿದ್ದಾರೆ.

    ದುಡ್ಡಿದ್ದವರು ಬಹಳ ಜನ ಇದ್ದಾರೆ, ದುಡ್ಡ ಇಸ್ಕೊಂಡು ಬುದ್ದಿ ಕಲಸಿ. ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ.
    ನಾನು 6 ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲ‌ ಪಕ್ಷದ ನಾಮಪತ್ರ ರೆಡಿ ಮಾಡಿಟ್ಟಿದ್ದೇನೆ.  ನಾನು ಪಕ್ಷಾತೀತವಾಗಿ ರಾಜಕೀಯ ಮಾಡಿದ್ದೇನೆ ಎಂದು ಹೇಳಿದರು.

  • 12 Apr 2023 01:35 PM (IST)

    Karnataka Assembly Election Live: ಜಗದೀಶ್​ ಶೆಟ್ಟರ್​ ಬೆಂಬಲಿಗರಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

    ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್​ ಕೈತಪ್ಪುವ ಭೀತಿ ಹಿನ್ನೆಲೆ ಹುಬ್ಬಳ್ಳಿಯ ಸರ್ವೋದಯ ವೃತ್ತದಲ್ಲಿ ಶೆಟ್ಟರ್ ಬೆಂಬಲಿಗರ ಪ್ರತಿಭಟನೆ ನಡೆಸಿದ್ದಾರೆ.  ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್​ ನೀಡಬೇಕೆಂದು ಬೆಂಬಲಿಗರು ಆಗ್ರಹಿಸಿದ್ದಾರೆ.

  • 12 Apr 2023 01:32 PM (IST)

    Karnataka Assembly Election Live: ಕನಕಪುರದಲ್ಲಿ ಆರ್​.ಅಶೋಕ್​ಗೆ ಒಳ್ಳೆಯ ಆತಿಥ್ಯ ಕೊಡೋಣ: ಡಿಕೆ ಶಿವಕುಮಾರ್​

    ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್​.ಅಶೋಕ್ ಸ್ಪರ್ಧೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ ಸಾಮ್ರಾಟನಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕನಕಪುರದಲ್ಲಿ ಆರ್​.ಅಶೋಕ್​ಗೆ ಒಳ್ಳೆಯ ಆತಿಥ್ಯ ಕೊಡೋಣ. ಕನಕಪುರದಲ್ಲಿ ಮಿಲಿಟರಿ ಹೊಟೇಲ್​​ಗಳು ಬಹಳಷ್ಟಿವೆ. ಒಳ್ಳೆಯ ಊಟ ಹಾಕಿಸಿ ಆತಿಥ್ಯ ಕೊಟ್ಟು ಕಳಿಸೋಣ. ನಾಮಪತ್ರ ದಿನ, ಮತ್ತೊಂದು ದಿನ ಕನಕಪುರಕ್ಕೆ ಹೋಗುತ್ತೇನೆ. ನನ್ನ, ಸಿದ್ದರಾಮಯ್ಯನವರನ್ನು ಬಿಜೆಪಿಯವರು ನಡುಗಿಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  • 12 Apr 2023 12:59 PM (IST)

    Karnataka Assembly Election Live: ರಾಜಕೀಯ ನಿವೃತ್ತಿ ಘೋಷಿಸಿದ ಎಸ್​.ಅಂಗಾರ

    ಬೆಂಗಳೂರು: ಸುಳ್ಯ ಕ್ಷೇತ್ರದ ಬಿಜೆಪಿ ಟಿಕೆಟ್​​ ಕೈತಪ್ಪಿದ ಬೆನ್ನಲ್ಲೇ ಸಕ್ರಿಯ ರಾಜಕಾರಣಕ್ಕೆ ಸಚಿವ ಎಸ್​.ಅಂಗಾರ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸುಳ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಹೈಕಮಾಂಡ್​ ಭಾಗೀರಥಿ ಮುರುಳ್ಯ ಅವರಿಗೆ ನೀಡಿದೆ.

  • 12 Apr 2023 12:56 PM (IST)

    Karnataka Assembly Election Live: ಇದು ನನ್ನ ಕೊನೆಯ ಚುನಾವಣೆ, ಮುಂಬರುವ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ: ಕಿಮ್ಮನೆ ರತ್ನಾಕರ್

    ಶಿವಮೊಗ್ಗ: ಇದು ನನ್ನ ಕೊನೆಯ ಚುನಾವಣೆ. ನಾನು ನೂರಕ್ಕೇ ನೂರು ಮುಂಬರುವ ಯಾವುದೇ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ. ಯಾವ ಚುನಾವಣೆಯ ಅಪೇಕ್ಷಿತನೂ ಅಲ್ಲ. ಯಾವುದೇ ಚುನಾವಣೆಯಲ್ಲೂ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಕಿಮ್ಮನೆ ರತ್ನಾಕರ್  ಹೇಳಿದ್ದಾರೆ.

  • 12 Apr 2023 12:46 PM (IST)

    Karnataka Assembly Election Live: ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಣೆ ಬೆನ್ನಲ್ಲೇ ಶಿವಮೊಗ್ಗ ಪಾಲಿಕೆ ಬಿಜೆಪಿಯ 19 ಸದಸ್ಯರು ರಾಜಿನಾಮೆ

    ಶಿವಮೊಗ್ಗ: ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆ ಬಿಜೆಪಿಯ 19  ಸದಸ್ಯರು ಸಾಮೂಹಿಕ‌ ರಾಜೀನಾಮೆ ನೀಡಿದ್ದಾರೆ. ಮೇಯರ್, ಉಪಮೇಯರ್ ಸೇರಿ 19 ಸದಸ್ಯರು ರಾಜೀನಾಮೆ ನೀಡಿದ್ದು, ಬೆಂಗಳೂರಿಗೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

  • 12 Apr 2023 12:35 PM (IST)

    Karnataka Assembly Election Live: ಲಕ್ಷ್ಮಣ ಸವದಿ ನೇತೃತ್ತದಲ್ಲಿಯೇ ನನ್ನ ಚುನಾವಣೆ ಎಂದ ಮಹೇಶ ಕುಮಟಳ್ಳಿ

    ಬೆಳಗಾವಿ: ಪಕ್ಷದ ಮೇಲೆ ‌ಮುನಿಸಿಕೊಂಡು ರಾಜೀನಾಮೆಗೆ ಲಕ್ಷ್ಮಣ ಸವದಿ ನಿರ್ಧರಿಸಿದ್ದಂತೆ ಇತ್ತ ಸವದಿ ನೇತೃತ್ತದಲ್ಲಿಯೇ ನನ್ನ ಚುನಾವಣೆ ಎಂದು ಮಹೇಶ ಕುಮಟಳ್ಳಿ ಹೇಳಿದ್ದಾರೆ.

  • 12 Apr 2023 12:21 PM (IST)

    Karnataka Assembly Election Live: ಲಕ್ಷ್ಮಣ ಸವದಿ ಪಕ್ಷದಲ್ಲೇ ಇರುತ್ತಾರೆ: ಅರುಣ ಸಿಂಗ್​

    ನವದೆಹಲಿ: ಬಿಜೆಪಿ ತೊರೆಯಲು ಎಂಎಲ್​ಸಿ ಲಕ್ಷ್ಮಣ ಸವದಿ ನಿರ್ಧಾರ ವಿಚಾರವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಮಾತನಾಡಿ ಲಕ್ಷ್ಮಣ ಸವದಿಯವರು ಬಿಜೆಪಿಯ ಹಿರಿಯ ನಾಯಕರು, ಅವರು ಪಕ್ಷದಲ್ಲೇ ಇರುತ್ತಾರೆ.
    ಪಕ್ಷದ ನಿಲುವಿನಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿಯಲ್ಲಿ ಟಿವಿ9ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಹೇಳಿದ್ದಾರೆ.

  • 12 Apr 2023 11:50 AM (IST)

    Karnataka Assembly Election Live: ತರಾತುರಿಯಲ್ಲಿ ಕನಕಪುರಕ್ಕೆ ತೆರಳಿದ ಸಂಸದ ಡಿ.ಕೆ.ಸುರೇಶ್

    ಬೆಂಗಳೂರು:  ರಾಮನಗರ ಜಿಲ್ಲೆಯ ಕನಕಪುರದಿಂದ ಆರ್​.ಅಶೋಕ್ ಸ್ಪರ್ಧೆ ಹಿನ್ನೆಲೆ ಸಂಸದ ಡಿ.ಕೆ.ಸುರೇಶ್ ಬೆಂಗಳೂರಿನಿಂದ ತರಾತುರಿಯಲ್ಲಿ ಕನಕಪುರಕ್ಕೆ ತೆರಳಿದ್ದಾರೆ. ಸದಾಶಿವನಗರದ ಡಿಕೆ ಶಿವಕುಮಾರ್​ ನಿವಾಸದಿಂದ ತೆರಳಿರುವ ಸಂಸದ ಡಿ.ಕೆ.ಸುರೇಶ್ ಕನಪುರದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಿದ್ದಾರೆ. ಆರ್.ಅಶೋಕ್ ಕನಕಪುರಕ್ಕೆ ಆಗಮಿಸುವ ಮೊದಲೇ ಸುರೇಶ್ ಸಭೆ ನಡೆಸಿ ಕನಕಪುರದಲ್ಲಿ ಹಿಡಿತ ಸಾಧಿಸಲು ಸಂಸದ ಡಿ.ಕೆ.ಸುರೇಶ್ ಪ್ರಯತ್ನಿಸುತ್ತಿದ್ದಾರೆ.

  • 12 Apr 2023 11:30 AM (IST)

    Karnataka Assembly Election Live: ಟಿಕೆಟ್ ನೀಡಿದ್ದಕ್ಕೆ ಪಕ್ಷದ ವರಿಷ್ಠರಿಗೆ ಚಿರಋಣಿ

    ಬೆಂಗಳೂರು: ಟಿಕೆಟ್ ನೀಡಿದ್ದಕ್ಕೆ ಪಕ್ಷದ ವರಿಷ್ಠರಿಗೆ ಚಿರಋಣಿ. ಬಿಜೆಪಿಯಲ್ಲಿ ಸಿದ್ಧಾಂತ, ರಾಷ್ಟ್ರೀಯತೆ ಇರುವುದರಿಂದ ಸೇರಿದ್ದೇನೆ. ಕಳೆದ 30 ವರ್ಷದಿಂದ ಚಾಮರಾಜಪೇಟೆಯಲ್ಲಿ ಬಿಜೆಪಿ ಗೆದ್ದಿಲ್ಲ. ಚಾಮರಾಜಪೇಟೆಗೆ ನಾನು ಹೊಸಬನಲ್ಲ, ನಾನು ಇಲ್ಲಿನ ನಿವಾಸಿ ಎಂದು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಹೇಳಿದ್ದಾರೆ.

  • 12 Apr 2023 11:09 AM (IST)

    Karnataka Assembly Election Live: ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಗೆ ಹೋಗಿದ್ದರು ಎಂಬ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಇದೆಲ್ಲ ಅಪ್ರಸ್ತುತ. ನಾನು ನನ್ನ ಮನೆಯಲ್ಲಿ ಕೂತಿದ್ದೆ. ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಅವಾಗ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರು, ದಿವಂಗತ ಮಾಜಿ ಸಂಸದ ಅನಂತ ಕುಮಾರ್ ನಮ್ಮ ಮನೆಗೆ ಬಂದಿದ್ದರು. ಸಿಸಿ ಪಾಟೀಲ್, ಲಕ್ಷ್ಮಣ ಸವದಿ ಬಂದಿದ್ದು ನಿಜ, ಆದರೆ ಕಾಂಗ್ರೆಸ್​ಗೆ ನಾನು ಹೋಗುತ್ತಿರಲಿಲ್ಲ.  ಜೊತೆಗೆ ಅವಾಗ ನನಗೆ ಆ ರೀತಿ. ದೊಡ್ಡ ಮಹತ್ವಾಕಾಂಕ್ಷೆಯ ಆಸೆಯೂ ಇರಲಿಲ್ಲ ಎಂದು ಹೇಳಿದ್ದಾರೆ.

  • 12 Apr 2023 10:42 AM (IST)

    Karnataka Assembly Election Live: ಕನಕಪುರ‌ ಕ್ಷೇತ್ರದಿಂದ ಆರ್.ಅಶೋಕ್ ಕಣಕ್ಕೆ; ಡಿಕೆ ಸಹೋದರರ ಪ್ರತ್ಯೇಕ ಚರ್ಚೆ ಶುರು

    ಬೆಂಗಳೂರು: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ಸಚಿವ ಆರ್​ ಅಶೋಕ್​ ಅವರನ್ನು ಕಣಕ್ಕೆ ಇಳಿಸಿದ್ದು, ಡಿಕೆ ಬ್ರದರ್ಸ್​​ಗೆ ಚಿಂತೆ ಶುರುವಾಗಿದೆ. ಈ ಹಿನ್ನೆಲೆ ಸಹೋದರರು ಸದಾಶಿವನಗರದ ತಮ್ಮ ನಿವಾಸದಲ್ಲಿ ಚರ್ಚಗೆ ಕೂತಿದ್ದಾರೆ.

  • 12 Apr 2023 10:37 AM (IST)

    Karnataka Assembly Election Live: ಜಗದಿಶ್​ ಶೆಟ್ಟರ್​ ಟಿಕೆಟ್​ ಸಸ್ಪೆನ್ಸ್​​: ದೆಹಲಿಗೆ ಪ್ರಯಾಣ ಬೆಳಸಿದ ಮಾಜಿ ಸಿಎಂ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ ಅವರಿಗೆ ಹುಬ್ಬಳ್ಳಿ ಸೆಂಟ್ರಲ್​ ಕ್ಷೇತ್ರದ ಟಿಕೆಟ್​ ಸಿಗದ ಹಿನ್ನೆಲೆ ಇಂದು ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದಾರೆ. ಈ ಸಂಬಂಧ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕೆಲವೆ ಕ್ಷಣದಲ್ಲಿ ದೆಹಲಿಗೆ ಹಾರಲಿದ್ದಾರೆ.

  • 12 Apr 2023 10:25 AM (IST)

    Karnataka Assembly Election Live: ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ: ಲಕ್ಷ್ಮಣ ಸವದಿ

    ಬೆಂಗಳೂರು: ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

  • 12 Apr 2023 09:36 AM (IST)

    Karnataka Assembly Election Live: 2 ಕಡೆ ಟಿಕೆಟ್​ ಸಿಗುತ್ತೆ ಅಂತ ನಿರೀಕ್ಷಿಸಿರಲಿಲ್ಲ- ವಿ ಸೋಮಣ್ಣ

    ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಹೈಕಮಾಂಡ ವರುಣ, ಚಾಮರಾಜನಗರ ಎರಡು ಕ್ಷೇತ್ರಗಳ ಟಿಕೆಟ್ ನೀಡಿದೆ. ಈ ವಿಚಾರವಾಗಿ ಮಾತನಾಡಿದ ವಿ. ಸೋಮಣ್ಣ ನೂರಕ್ಕೆ ನೂರರಷ್ಟು ವರಿಷ್ಠರ ತೀರ್ಮಾನವನ್ನು ಸ್ವಾಗತಿಸುತ್ತೇನೆ. ನನಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ಕಳೆದ 40 ವರ್ಷಗಳಿಂದ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಗರಪಾಲಿಕೆ ಸದಸ್ಯ, ಶಾಸಕ ಮತ್ತು ಸಚಿವನಾಗಿ ಕೆಲಸ ಮಾಡಿದ್ದೇನೆ. ಇಂತಹ ಸಂದರ್ಭ ಬರುತ್ತೆ ಅಂತಾ ಕನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ಯಾರೂ ಕೂಡ ಧೃತಿಗೆಡಬೇಕಿಲ್ಲ. ನಿರೀಕ್ಷೆ ಮಾಡಿರಲಿಲ್ಲ, ಎಲ್ಲವೂ ವಿಧಿ ನಿಯಮ. ಭಗವಂತ ಯಾರಿಗೆ ಏನು ಕೊಡಬೇಕು ಅದನ್ನು ಕೊಡುತ್ತಿದ್ದಾನೆ ಎಂದು ಹೇಳಿದರು.

  • 12 Apr 2023 09:31 AM (IST)

    Karnataka Assembly Election Live: ಕೈ ತಪ್ಪಿದ ಟಿಕೆಟ್​​, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ ವಿಶ್ವನಾಥ ಪಾಟೀಲ್

    ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಅತ್ಯಾಪ್ತ, ಡಾ. ವಿಶ್ವನಾಥ ಪಾಟೀಲ್ ಅವರಿಗೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

  • 12 Apr 2023 09:27 AM (IST)

    Karnataka Assembly Election Live: ಲಕ್ಷ್ಮಣ ಸವದಿಗೆ ಮನೆಗೆ, ಆಪ್ತ ಸ್ನೇಹಿತ, ಕೈ ಅಭ್ಯರ್ಥಿ ರಾಜು ಕಾಗೆ ಭೇಟಿ

    ಬೆಳಗಾವಿ: ಎಂಎಲ್​ಸಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್​​ ಕೈ ತಪ್ಪಿದ ಹಿನ್ನೆಲೆ ಸವದಿ ನಿವಾಸಕ್ಕೆ, ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಆಪ್ತ ಸ್ನೇಹಿತನ ಮೂಲಕ‌ ಲಕ್ಷ್ಮಣ್ ಸವದಿಯವರನ್ನು ಸೆಳೆಯಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

  • 12 Apr 2023 08:52 AM (IST)

    Karnataka Assembly Election Live: ಬಂಡಾಯವೆದ್ದ ಬೆಳಗಾವಿಯ 8 ಕ್ಷೇತ್ರದ ಟಿಕೆಟ್​​ ಆಕಾಂಕ್ಷಿಗಳು

    ಬೆಳಗಾವಿ: ಸಕ್ಕರೆನಾಡು ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಮೂರು ಪಕ್ಷಗಳು ಹವಣಿಸುತ್ತಿವೆ. ಸದ್ಯ ವಿಧಾನಸಭಾ ಚುನಾವಾಣೆ ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳು ಬೆಳಗಾವಿ ಮೇಲೆ ಹದ್ದಿನ ಕಣ್ಣಿರಿಸಿವೆ. ಬಿಜೆಪಿ ನಿನ್ನೆ (ಏ.11) ರಾತ್ರಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ 18 ಕ್ಷೇತ್ರಗಳಿಗೆ ಟಿಕೆಟ್​ ಹಂಚಿಕೆ ಮಾಡಿದೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್​ ತಪ್ಪಿದ್ದು, ಇವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • 12 Apr 2023 08:52 AM (IST)

    Karnataka Assembly Election Live: ಬಂಡಾಯವೆದ್ದ ಬೆಳಗಾವಿಯ 8 ಕ್ಷೇತ್ರದ ಟಿಕೆಟ್​​ ಆಕಾಂಕ್ಷಿಗಳು

    ಬೆಳಗಾವಿ: ಸಕ್ಕರೆನಾಡು ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಮುಖ ಮೂರು ಪಕ್ಷಗಳು ಹವಣಿಸುತ್ತಿವೆ. ಸದ್ಯ ವಿಧಾನಸಭಾ ಚುನಾವಾಣೆ ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳು ಬೆಳಗಾವಿ ಮೇಲೆ ಹದ್ದಿನ ಕಣ್ಣಿರಿಸಿವೆ. ಬಿಜೆಪಿ ನಿನ್ನೆ (ಏ.11) ರಾತ್ರಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯ 18 ಕ್ಷೇತ್ರಗಳಿಗೆ ಟಿಕೆಟ್​ ಹಂಚಿಕೆ ಮಾಡಿದೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್​ ತಪ್ಪಿದ್ದು, ಇವರು ಬಂಡಾಯ ಏಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Published On - 8:51 am, Wed, 12 April 23

Follow us on