
ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಎದುರು ಬೇಳೂರು ಗೋಪಾಲಕೃಷ್ಣ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪ್ರಭಾವದಿಂದ ರಾಜಕೀಯಕ್ಕೆ ಬಂದ ಬೇಳೂರು ಗೋಪಾಲಕೃಷ್ಣ ಸಾಗರದಲ್ಲಿ ಏಳು-ಬೀಳು ಕಂಡವರು. 2004ರ ಚುನಾವಣೆಯಲ್ಲಿ ಎಸ್. ಬಂಗಾರಪ್ಪ ಕಾಗೋಡು ತಿಮ್ಮಪ್ಪ ಸೋಲಿಸಲು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ಬೇಳೂರು ಗೋಪಾಲಕೃಷ್ಣರನ್ನು ಕರೆತಂದು ಅಭ್ಯರ್ಥಿ ಮಾಡಿದರು. ಮೊದಲ ಚುನಾವಣೆಯಲ್ಲಿಯೇ ಅವರು 15,173 ಮತಗಳನ್ನು ಪಡೆದು ಗೆಲುವು ಕಂಡರು.
1972ರಿಂದಲೂ ಅವರು ಕ್ಷೇತ್ರದಲ್ಲಿ ಸೋಲು-ಗೆಲುವು ಕಂಡಿದ್ದಾರೆ. ಆದರೆ 90 ವರ್ಷ ವಯಸ್ಸಿನ ಅವರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಸುದ್ದಿ ಇತ್ತು. ಒಂದು ವೇಳೆ ಕಾಗೋಡು ತಿಮ್ಮಪ್ಪಗೆ ಟಿಕೆಟ್ ನೀಡದಿದ್ದರೆ ಕಾಗೋಡು ತಿಮ್ಮಪ್ಪ ಪುತ್ರ ಡಾ. ರಾಜನಂದಿನಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕ್ಷೇತ್ರದ ಮಾಜಿ ಶಾಸಕ ಕಾಗೋಡು ತಿಮ್ಮಪ್ಪ ಸೋದರಳಿಯ ಬೇಳೂರು ಗೋಪಾಲಕೃಷ್ಣ ಪಾಲಾಗಿತ್ತು ಇದೀಗ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಗರ್ಹುಕುಂ ಹೋರಾಟದ ಕಿಚ್ಚನ್ನು ಹೊಂದಿರುವ ಸಾಗರ ವಿಧಾನಸಭಾ ಕ್ಷೇತ್ರವು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಮೇಲಾಟಕ್ಕೆ ದಶಕಗಳ ಇತಿಹಾಸ ಹೊಂದಿದೆ.
ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈ ಬಾರಿ ಕಣದಿಂದ ಹೊರಗುಳಿದಿದ್ದಾರೆ.
ಹಾಲಿ ಶಾಸಕ ಹರತಾಳ ಹಾಲಪ್ಪ ಅವರನ್ನು ಮಾಜಿ ಶಾಸಕ ಹಾಗೂ ಕಾಗೋಡು ತಿಮ್ಮಪ್ಪ ಅವರ ಅಳಿಯ ಬೇಳೂರು ಗೋಪಾಲಕೃಷ್ಣ ಎದುರಿಸುತ್ತಿದ್ದಾರೆ.
ವಿಚಿತ್ರವೆಂದರೆ ಈ ಮೊದಲು ಹಾಲಪ್ಪ ಕಾಂಗ್ರೆಸ್ನಲ್ಲೂ ಗೋಪಾಲಕೃಷ್ಣ ಬಿಜೆಪಿಯಲ್ಲೂ ಇದ್ದರು. ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಮಗಳು ಡಾ. ರಾಜನಂದಿನಿ ಬಿಜೆಪಿ ಸೇರಿದ್ದಾರೆ.
2018ರಲ್ಲಿ ಹರತಾಳ ಹಾಲಪ್ಪ ಸುಮಾರು 8 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಹರತಾಳ ಹಾಲಪ್ಪಗೆ ಸಾಗರದಿಂದ ಇದು ಎರಡನೇ ಚುನಾವಣೆಯಾಗಿದೆ.
ಈ ಹಿಂದೆ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಕೆ. ದಿವಾಕರ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರೆ, ಝಾಕೀರ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಕ್ಷೇತ್ರ ಮರುವಿಂಗಡಣೆಗೂ ಮೊದಲು ಹೊಸನಗರ ಬಳಿಕ ಸೊರಬದಿಂದ ಹಾಲಪ್ಪ ಗೆಲುವು ಸಾಧಿಸಿದ್ದರು. ಬೇಳೂರು ಗೋಪಾಲಕೃಷ್ಣ 2004 ಹಾಗೂ 2008ರಲ್ಲಿ ಸಾಗರದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು.
ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sat, 13 May 23