Mangalore North Election 2023 Winner; ಬಿಜೆಪಿಯಿಂದ ಭರತ್ ಶೆಟ್ಟಿ ಗೆಲುವು, ಎಲ್ಲ ಗೊಂದಲಕ್ಕೂ ತೆರೆ
ಈ ಬಾರಿಯ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಅವರ ಜಯಶಾಲಿಯಾಗಿದ್ದಾರೆ. ಒಂದು ರೀತಿಯಲ್ಲಿ ಇಲ್ಲಿ ಗೊಂದಲ ಇದ್ದರು ಈ ಬಾರಿ ಬಿಜೆಪಿಯೇ ಬಂದಿದೆ.

ಮಂಗಳೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ (Mangalore North South Assembly Constituency) ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹಳ ಪೈಪೋಟಿ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಗೆಲುವು ಸಾಧಿಸಿದೆ. ಭಾರೀ ಅಂತರದ ಮತದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಅವರ ಜಯಶಾಲಿಯಾಗಿದ್ದಾರೆ. ಒಂದು ರೀತಿಯಲ್ಲಿ ಇಲ್ಲಿ ಗೊಂದಲ ಇದ್ದರು ಈ ಬಾರಿ ಬಿಜೆಪಿಯೇ ಬಂದಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಮುಸ್ಲಿಂರ ಮತ ಇನಾಯತ್ ಆಲಿಗೆ ಹೋಗಿದೆ. ಇಲ್ಲಿ ಈ ಬಾರಿ ಗೆಲ್ಲುವುದು ಅಷ್ಟು ಸುಲಭ ಮಾತ ಅಲ್ಲ, ಆದರೆ ಈ ಬಾರಿ ಈ ಎಲ್ಲ ಗೊಂದಲಕ್ಕೆ ಭರತ್ ಶೆಟ್ಟಿ ಗೆಲುವಿನ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಭರತ್ ಶೆಟ್ಟಿಗೆ ಅವರಿಗೆ ಕಾಂಗ್ರೆಸ್ನಿಂದ ಇನಾಯತ್ ಆಲಿ ಪೈಪೋಟಿ ನೀಡಿದ್ದು ಸೋತಿದ್ದಾರೆ, ಇಲ್ಲಿ ಭರತ್ ಶೆಟ್ಟಿಗೆ ಹಿನ್ನಡೆಯಾಗಲು ಮುಸ್ಲಿಂ ಮತಗಳು ಕಾರಣವಾಗಬಹುದು ಎಂದು ಹೇಳಾಲಾಗಿತ್ತು. ಆದರೆ ಎಲ್ಲ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಇನ್ನೂ ಇಲ್ಲಿ ಜೆಡಿಎಸ್ನಿಂದ ಸುಮತಿ ಹೆಗ್ಡೆ ಸ್ಪರ್ಧಿಸುತ್ತಿದ್ದರು, ಅವರು ಕೂಡ ಹೀನಾಯ ಸೋಲು ಅನುಭವಿಸಿದ್ದಾರೆ.