Karnataka Assembly Elections 2023: ಚಿಕ್ಕಬಳ್ಳಾಪುರ – ರಾಜ್ಯದಲ್ಲಿ ಸದ್ಯದಲ್ಲೇ ಮೋದಿ ರೋಡ್ ಶೋ – 3 ಜಿಲ್ಲೆಗಳಿಂದ 8 ಸ್ಥಾನಗಳ ಮೇಲೆ ಕಣ್ಣು

|

Updated on: Apr 24, 2023 | 3:06 PM

ಬೆಂಗಳೂರಿನ ಯಲಹಂಕದಿಂದ ಬ್ಯಾಟರಾಯನಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿವರೆಗೂ ರೋಡ್ ಶೋ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.

Karnataka Assembly Elections 2023: ಚಿಕ್ಕಬಳ್ಳಾಪುರ - ರಾಜ್ಯದಲ್ಲಿ ಸದ್ಯದಲ್ಲೇ ಮೋದಿ ರೋಡ್ ಶೋ - 3 ಜಿಲ್ಲೆಗಳಿಂದ 8 ಸ್ಥಾನಗಳ ಮೇಲೆ ಕಣ್ಣು
ನರೇಂದ್ರ ಮೋದಿ
Follow us on

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Elections 2023) ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂದು ಬಿಜೆಪಿ(BJP) ವರಿಷ್ಠರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಬಿಜೆಪಿ ಪರ ಅಲೆ ಎಬ್ಬಿಸಲು ಮುಂದಾಗಿದ್ದಾರೆ. ಇನ್ನೂ ಬಿಜೆಪಿಗೆ ನೆಲೆ ಇಲ್ಲದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನ ಕರೆಸಿ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.

ಮೋದಿ ರೋಡ್ ಶೋಗೆ ಭರ್ಜರಿ ಸಿದ್ಧತೆ

ಬೆಂಗಳೂರಿನ ಯಲಹಂಕದಿಂದ ಬ್ಯಾಟರಾಯನಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿವರೆಗೂ ರೋಡ್ ಶೋ ನಡೆಸಲು ಮುಂದಾಗಿದ್ದಾರೆ.‌ ಇನ್ನು ಮೋದಿಯವರ ರೋಡ್ ಶೋ ಬಗ್ಗೆ ದಿನಾಂಕ ನಿಗಧಿಯಾಗಿಲ್ಲವಾದರೂ ರೋಡ್ ಶೋ ಮಾಡುವ ಬಗ್ಗೆ ಪೂರ್ವಸಿದ್ದತೆಗಳು ನಡೆದಿವೆ. ರಸ್ತೆಯುದ್ದಕ್ಕೂ ಕಾರ್ಯಕರ್ತರಿಗೆ ಕುಡಿಯುವ ನೀರು, ಮೂಲ ಸೌಕರ್ಯ, ಬ್ಯಾರಿಕೇಡ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಬಾವುಟ ವ್ಯವಸ್ಥೆಯನ್ನು ತಯಾರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ.

ಇದನ್ನೂ ಓದಿ: Karnataka Assembly Polls: ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ, ಅಭ್ಯರ್ಥಿ ನಿರಂಜನ್ ಕುಮಾರ್ ಪರ ಮತಯಾಚನೆ!

ಮೋದಿ ರೋಡ್ ಶೋನಿಂದ 3 ಜಿಲ್ಲೆಗಳಿಗೆ ಲಾಭ

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆಸಿ ರೋಡ್ ಶೋ ಮಾಡಿಸುತ್ತಿರುವ ರಾಜ್ಯ ಬಿಜೆಪಿ ಮುಖಂಡರು ಯಲಹಂಕದಿಂದ ಬಾಗೇಪಲ್ಲಿವರೆಗೂ ರೋಡ್ ಶೋ ಮಾಡಲು ಮನವಿ ಮಾಡಿದ್ದಾರೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆಂದು ಹೇಳಲಾಗಿದೆ.

3 ಜಿಲ್ಲೆಗಳಲ್ಲಿ ಕನಿಷ್ಠ 6 ಸ್ಥಾನ ಗೆಲ್ಲಲು ಟಾರ್ಗೆಟ್

ಹಳೇ ಮೈಸೂರು ಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಸ್ತುತ ಚಿಕ್ಕಬಳ್ಳಾಪುರ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿಗೆ ನೆಲೆಯೇ ಇಲ್ಲದ ಊರಿನಲ್ಲಿ ಈಗಾಗಲೇ ಬಿಜೆಪಿ ಹವಾ ಸೃಷ್ಠಿಯಾಗಿದೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಈ 3 ಜಿಲ್ಲೆಗಳಲ್ಲಿ ರೋಡ್ ಶೋ ನಡೆಸುವುದರಿಂದ ಕನಿಷ್ಟ 6 ರಿಂದ 8 ಸ್ಥಾನಗಳು ಬಿಜೆಪಿ ಗೆಲ್ಲಲಿದೆಯಂತೆ. ಇದರಿಂದ ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಮೋದಿ ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎನ್ನುವ ಮಾಹಿತಿ ಟಿವಿ-9ಗೆ ಲಭ್ಯವಾಗಿದೆ.

ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:06 pm, Mon, 24 April 23