ಶಾಸಕ ರಾಮದಾಸ್ಗೆ ಆತ್ಮೀಯ ಅಪ್ಪುಗೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮೈಸೂರಿಗೆ ಭೇಟಿ ನೀಡಿದ ವೇಳೆ, ಸ್ವಾಗತಿಸಲು ಆಗಮಿಸಿದ್ದ ಶಾಸಕ ರಾಮದಾಸ್ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದರು
ಮೈಸೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮೈಸೂರಿಗೆ (Mysore) ಭೇಟಿ ನೀಡಿದ ವೇಳೆ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ (Ramdas) ಗುದ್ದು ನೀಡಿದ್ದರು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಮೈಸೂರಿಗೆ ಭೇಟಿ ನೀಡಿದ್ದರು. ಸ್ವಾಗತಿಸಲು ಶಾಸಕ ರಾಮದಾಸ್ ಅವರು ತೆರಳಿದ್ದರು. ಈ ವೇಳೆ ಅಮಿತ್ ಶಾ ಅವರು ರಾಮದಾಸ್ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದರು.
Latest Videos