Karnataka Politics: ಕಾಂಗ್ರೆಸ್​​ನಿಂದ ರಾತ್ರಿ ಶಾಲೆ; ಆನ್​​ಲೈನ್​ ಪಾಠದ ಮೂಲಕ ಅಭ್ಯರ್ಥಿಗಳಿಗೆ ಖಡಕ್​ ಸೂಚನೆ ಕೊಟ್ಟ ನಾಯಕರು

|

Updated on: May 12, 2023 | 9:01 AM

ಸರ್ಕಾರ ರಚನೆಗೆ ಕಾಂಗ್ರೆಸ್ ನಾಯಕರು​​ ಸಿದ್ದವಾಗಿದ್ದು, ಸೂಟು-ಬೂಟು ಖರೀದಿಸಿದ್ದಾರೆ. ಇನ್ನೂ ಕೈ ಪಾಳಯ ಫಲಿತಾಂಶಕ್ಕೂ ಮುನ್ನ ಅಲರ್ಟ್ ಆಗಿದ್ದು, ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ. ಸರ್ಕಾರ ನಮ್ಮದೇ ಎಂಬ ಬಿಜೆಪಿ ಹೇಳಿಕೆ ನಿರ್ಲಕ್ಷ್ಯ ಮಾಡದ ಕಾಂಗ್ರೆಸ್, ರಾತ್ರಿ ಶಾಲೆ ತೆರೆದಿದೆ.

Karnataka Politics: ಕಾಂಗ್ರೆಸ್​​ನಿಂದ ರಾತ್ರಿ ಶಾಲೆ; ಆನ್​​ಲೈನ್​ ಪಾಠದ ಮೂಲಕ ಅಭ್ಯರ್ಥಿಗಳಿಗೆ ಖಡಕ್​ ಸೂಚನೆ ಕೊಟ್ಟ ನಾಯಕರು
ಕಾಂಗ್ರೆಸ್​ ನಾಯಕರು
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election 2023) ಮತದಾನ (Voting) ಮುಕ್ತಾಯವಾಗಿದ್ದು ಮೇ.13 ರಂದು ಮತ ಎಣಿಕೆ (Vote Counting) ಆರಂಭವಾಗಲಿದೆ. ಮೂರು ಪಕ್ಷಗಳು ನಾವು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸದಲ್ಲಿವೆ. ಈಗಾಗಲೆ ಎಕ್ಸಿಟ್​ ಪೋಲ್​​​ನಲ್ಲಿ (Exit Poll) ಕಾಂಗ್ರೆಸ್​​ಗೆ (Congress) ಪೂರ್ಣ ಬಹುಮತ ಸಿಗಲಿದೆ ಎಂದು ರಿಪೋರ್ಟ್​​ ಬಂದಿದೆ. ಇದರಿಂದ ಕಾಂಗ್ರೆಸ್​ ನಾಯಕರು ಹಿರಿ ಹಿರಿ ಹಿಗ್ಗಿದಂತೆ ಕಾಣುತ್ತಿದ್ದು, ಬಿಜೆಪಿ (BJP) ಪಾಳಯದಲ್ಲಿ ಬೇಸರದ ಛಾಯೆ ಕಾಣುತ್ತಿದೆ. ಸರ್ಕಾರ ರಚನೆಗೆ ಕಾಂಗ್ರೆಸ್ ನಾಯಕರು​​ ಸಿದ್ದವಾಗಿದ್ದು, ಸೂಟು-ಬೂಟು ಖರೀದಿಸಿದ್ದಾರೆ. ಇನ್ನೂ ಕೈ ಪಾಳಯ ಫಲಿತಾಂಶಕ್ಕೂ ಮುನ್ನ ಅಲರ್ಟ್ ಆಗಿದ್ದು, ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ.

ಸರ್ಕಾರ ನಮ್ಮದೇ ಎಂಬ ಬಿಜೆಪಿ ಹೇಳಿಕೆ ನಿರ್ಲಕ್ಷ್ಯ ಮಾಡದ ಕಾಂಗ್ರೆಸ್, ರಾತ್ರಿ ಶಾಲೆ ತೆರೆದಿದೆ. ಈ ಶಾಲೆಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ​ಅಭ್ಯರ್ಥಿಗಳಿಗೆ ಎರಡು ತಾಸು ವರ್ಚುವಲ್​ ಮೂಲಕ ಪಾಠ ಮಾಡಿದ್ದಾರೆ.

ಇದನ್ನೂ ಓದಿ: ‘ಮೈತ್ರಿಗೆ ನಾವು ಸಿದ್ಧ’ ಆದ್ರೆ ಕೆಲವು ಷರತ್ತುಗಳಿಗೆ ಒಪ್ಪಬೇಕು; ನಿಲುವು ಸ್ಪಷ್ಟಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ವರ್ಚೂವಲ್​ ಸಭೆಯಲ್ಲಿ ನಾಯಕರು, ಸ್ಟ್ರಾಂಗ್​ ರೂಂಗಳ ಮೇಲೆ ಗಮನ ಇಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಈ ಬಾರಿ ಕಾಂಗ್ರೆಸ್​​ ಪಕ್ಷಕ್ಕೆ ಸರ್ಕಾರ ರಚಿಸು​ವ ಅವಕಾಶ ಸಿಗಲಿದೆ. ಆಪರೇಷನ್​‌ಗೆ ಒಳಗಾಗಬೇಡಿ, ಅನ್ಯ ಪಕ್ಷಗಳ ಆಮಿಷಗಳಿಗೆ ಬಲಿಯಾಗಬೇಡಿ. ಲೀಡ್​ ಸಿಗುತ್ತಿದ್ದಂತೆ ಬೆಂಗಳೂರಿಗೆ ಬನ್ನಿ. ಸರ್ಕಾರ ರಚನೆಯಾಗುವವರೆಗೂ ನಾವು ಸೂಚಿಸಿದ ಸ್ಥಳದಲ್ಲಿ ಇರಬೇಕು ಎಂದು ಅಭ್ಯರ್ಥಿಗಳಿಗೆ ನಾಯಕರು ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ